ಇತ್ತ ಭಾರತ ತನ್ನ ಅಸಮರ್ಪಕ ಆಡಳಿತ ನೀತಿ, ಅಸಮರ್ಥ ಸೇನಾ ನೀತಿ ಹಾಗೂ ದುರ್ಬಲ ವಿದೇಶಾಂಗ ನೀತಿಗಳಿಂದ ಅಂತಾರಾಷ್ಟ್ರೀಯ ವಲಯದಲ್ಲಿ ನಗೆಪಾಟಲಿಗೀಡಾಗುತ್ತಿದ್ದರೆ ಅತ್ತ ಏಷ್ಯಾದ ಇನ್ನೊಂದು ಬಲಿಷ್ಟ ರಾಷ್ಟ್ರ ಚೀನಾ ದಿನದಿಂದ ದಿನಕ್ಕೆ ಜಗತ್ತಿನ ದೊಡ್ಡಣ್ಣನಾಗುವತ್ತ ದಾಪುಗಾಲು ಹಾಕುತ್ತಿದೆ. ಭಾರತದ ದುರ್ಬಲ ಆಡಳಿತ ನೀತಿಯಂತೂ ಅದಕ್ಕೆ ವರದಾನವಾಗಿ ಪರಿಣಮಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ತನ್ನ ಪಿಂಡಗಳನ್ನು ಭಾರತದಲ್ಲಿ ಬೆಳೆಸಿದ ಚೀನಾ ತನ್ಮೂಲಕ ಭಾರತಾದ್ಯಂತ ಆಂತರಿಕ ಗಲಭೆಗೆ ಮುನ್ನುಡಿಯಿಟ್ಟಿತು. ಇವತ್ತು ಕಮ್ಯೂನಿಷ್ಟ್ ಪಕ್ಷದ ಬಲ ಎಲ್ಲೆಡೆ ಇರದೇ ಇರಬಹುದು. ಮಾವೋವಾದಿ ನಕ್ಸಲರು ಭಾರತವಿಡೀ ಹಬ್ಬಿಲ್ಲದೇ ಇರಬಹುದು ಆದರೆ ಈ ದೇಶದ ಅಸ್ಮಿತೆಯನ್ನೇ ಪ್ರಶ್ಣಿಸಿ ಕಮ್ಯೂನಿಸಂ ವಾದವನ್ನು ಹರಡುತ್ತಿರುವ, ಬೆಳೆಸುತ್ತಿರುವ ಹಾಗೂ ಮುಂದಿನ ಪೀಳಿಗೆಗೆ ಈ ಹಾಲಹಲವನ್ನು ಉಣಿಸುತ್ತಿರುವ ಗೆದ್ದಲು ಹುಳುಗಳಿಗೇನೂ ಕಡಿಮೆಯಿಲ್ಲ.
ಶತಶತಮಾನಗಳಿಂದ ಮತಾಂಧ ಮುಸ್ಲಿಮರ ಲವ್ ಜಿಹಾದ್, ಭೂ ಜಿಹಾದ್, ವೈಣಿಕ ಜಿಹಾದ್, ಹೀಗೆ ಹತ್ತಾರು ಜಿಹಾದ್ಗಳಿಂದ ಹಾಗೂ ಕುತಂತ್ರಿ ಪಾದ್ರಿಗಳ ಮತಾಂತರ ಕಾರ್ಯಗಳಿಂದ ಬಸವಳಿದ ಭಾರತಕ್ಕೆ ಚೀನಿಯರ ಕಮ್ಯೂನಿಸಂ ಕೂಡಾ ಸೇರಿಕೊಂಡು ದೇಶವನ್ನು ಜರ್ಝರಿತವಾಗುವಂತೆ ಮಾಡಿತು. ಹೀಗೆ ಆಂತರಿಕ ಕ್ಷೋಭೆ ತನ್ನ ಕೆಲಸ ಆರಂಭಿಸಿದೊಡನೆ ಚೀನಾ ಭಾರತದ ಸುತ್ತ ತನ್ನ ಕಬಂಧ ಬಾಹುಗಳನ್ನು ಚಾಚಲಾರಂಭಿಸಿತು. ಇದಕ್ಕೆ ಈ ದೇಶದ ನೆಹರೂ ಮಾನಸಿಕತೆ ಕೂಡಾ ನೆರವಾಯಿತೆಂದರೆ ಅತಿಶಯೋಕ್ತಿಯಲ್ಲ. ಇದರ ಫಲವೇ ಇಂದು ಭಾರತದ ಎಲ್ಲಾ ನೆರೆಯ ರಾಷ್ಟ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಚೀನಾ ನೆಲೆ ನಿಂತಿರೋದು!
ಪಾಕಿಸ್ಥಾನದ ಗ್ವಾಡಾರ್ನಲ್ಲಿ ಚೀನಾ ನೌಕಾನೆಲೆಯೊಂದನ್ನು ನಿರ್ಮಿಸಿದೆ. ಬಾಂಗ್ಲಾದೇಶದ ಚಿತ್ತಗಾಂಗಿನಲ್ಲಿ ಆರ್ಥಿಕ ಹಾಗೂ ಸಮರ ಉದ್ದೇಶದ ಸವಲತ್ತುಗಳನ್ನು ಪಡೆದುಕೊಂಡಿದೆ. ಬ್ರಹ್ಮ ದೇಶ(ಮಯನ್ಮಾರ್)ದ ಸಿಟ್ವೇಯಲ್ಲಿ ಬಂದರೊಂದನ್ನು ನಿರ್ಮಿಸಿದೆ. ಬರ್ಮಾದ ಕೋಕೋ ದ್ವೀಪಗಳಲ್ಲಿ ಚೀನಾ ನೌಕಾನೆಲೆಯೊಂದನ್ನು ಸ್ಥಾಪಿಸಿದೆ. ಶ್ರೀಲಂಕಾದ ಹಂಬನ್ ತೋಟದಲ್ಲಿ ಬಂದರೊಂದನ್ನು ನಿರ್ಮಿಸುತ್ತಿದೆ ಚೀನಾ! ಹೀಗೆ ಭಾರತವನ್ನು ನಾಲ್ಕೂ ಕಡೆಗಳಿಂದ ಸುತ್ತುವರಿದಿದೆ ಚೀನಾ!
ಅತ್ತ ಚೀನಾವನ್ನು ರತ್ನಾಕರ(ಅರಬ್ಬಿ ಸಮುದ್ರ)ದೊಂದಿಗೆ ಹಾಗೂ ಬ್ರಹ್ಮ ದೇಶದ ಮೂಲಕ ಮಹೋದಧಿ(ಬಂಗಾಳ ಕೊಲ್ಲಿ)ಯೊಂದಿಗೆ ಜೋಡಿಸಲು ರೈಲು ಮಾರ್ಗ ನಿರ್ಮಿಸತೊಡಗಿದೆ. ಇದರಿಂದ ಸಿಟ್ವೇ ಬಂದರು ಹಾಗೂ ಕೋಕೋ ದ್ವೀಪಗಳಲ್ಲಿರುವ ತನ್ನ ನೆಲೆಗಳಿಗೆ ಸಮರ ಸಾಮಗ್ರಿಗಳನ್ನು ಹಾಗೂ ಸೈನಿಕರನ್ನು ಸಾಗಿಸಲು ಸುಲಭವಾಗುತ್ತದೆ. ಪಾಕಿಗೆ ನಮ್ಮ ಗಿಲ್ಗಿಟ್-ಬಾಲ್ಟಿಸ್ತಾನದ(ಪಾಕ್ ಆಕ್ರಮಿತ ಕಾಶ್ಮೀರ) ಮೂಲಕ ಈಗಾಗಲೇ ಹೆದ್ದಾರಿಯಿದ್ದು ಇದು ಸಮರ ಸರಂಜಾಮು ಸಾಗಣೆಗಾಗಿಯೇ ನಿರ್ಮಿತವಾಗಿದೆ. ಇದರ ಜೊತೆಗೆ ಹೈನಾನ್ ಹಾಗೂ ಪರಾಸೆಲ್ ದ್ವೀಪಗಳಲ್ಲಿ ಚೀನಾದ ನೌಕಾನೆಲೆ ಸದಾ ಸಮರೋತ್ಸಾಹಿಯಾಗಿ ಸಿದ್ಧವಿರುತ್ತದೆ.
ಹೀಗೆ ಒಂದು ಕಾಲದಲ್ಲಿ ಭಾರತದ ಸ್ನೇಹಿತರಾಗಿದ್ದ ರಾಷ್ಟ್ರಗಳೆಲ್ಲಾ ಈಗ ಭಾರತದ ಶತ್ರುಗಳಾಗುತ್ತಿವೆ. ಇದಕ್ಕೆ ಕೇವಲ ಚೀನಾ ಮಾತ್ರ ಕಾರಣವೇ?
ಅಲ್ಲ! ಭಾರತದ ಸರಕಾರಗಳ ಮತಬ್ಯಾಂಕ್ ರಾಜಕಾರಣವೇ ಭಾರತವನ್ನು ಈ ದುಃಸ್ಥಿತಿಗೆ ತಳ್ಳಿರೋದು!
ಅಂದು ಚೀನಾ ಟಿಬೆಟ್ ಮೇಲೆ ಆಕ್ರಮಣ ಮಾಡಿದಾಗ ಭಾರತವನ್ನು ಮಾತೃಸಮಾನವಾಗಿ ಕಾಣುವ ಟಿಬೆಟಿಯನ್ನರನ್ನು ರಕ್ಷಿಸುವ ಬದಲು ಹಿಂದಿ ಚೀನೀ ಭಾಯಿ ಭಾಯಿ ಎಂದಿತು ನಮ್ಮ ಷಂಡ ಸರಕಾರ! ವಿಶ್ವಾಸಘಾತುಕ ಪಾಕ್ ತಾನಾಗೇ ನಮ್ಮ ಮೇಲೆರಗಿದ್ದರೂ, ನಮ್ಮ ಭೂಪ್ರದೇಶ ಅನಾಯಾಸವಾಗಿ ನಮಗೆ ಸಿಗುತ್ತಿದ್ದರೂ ದ್ರೋಹಿ ಪಾಕಿಗೆ ಆ ಭೂಮಿಯನ್ನು ಉಡುಗೊರೆ ಕೊಟ್ಟು ಗೆದ್ದು ಸೋತಿತು ಭಾರತ! ರಾಜಕೀಯ ಚತುರಮತಿಗಳಾದ ಕೃಷ್ಣ, ಚಾಣಕ್ಯರ ನೀತಿಯನ್ನನುಸರಿಸಿದ್ದರೆ ಪಾಕಿನ ಪಾಪದ ಕೂಸು ಬಾಂಗ್ಲಾವನ್ನೇ ಪಾಕಿಸ್ತಾನವನ್ನು ಮಟ್ಟ ಹಾಕಲು ಬಳಸಬಹುದಿತ್ತು! ಸಮರ್ಥ ರಾಜನೀತಿಯನ್ನು ಉಪಯೋಗಿಸಿ ಬ್ರಹ್ಮದೇಶ, ನೇಪಾಳ, ಭೂತಾನಗಳನ್ನು ಮಿತ್ರರಾಗಿ ಉಳಿಸಿಕೊಳ್ಳಬಹುದಿತ್ತು. ಆದರೆ ನಮ್ಮ ರಾಜಕಾರಣಿಗಳಿಗೆ ದೇಶ ದೋಚುವುದೇ ಮುಖ್ಯವಾಯಿತೇ ಹೊರತು ದೇಶದ ಅಸ್ಮಿತೆಯ ಉಳಿಕೆಯಲ್ಲ!
ಅಲ್ಲಾ... ಶ್ರೀಲಂಕೆಯ ಸ್ನೇಹವನ್ನಾದರೂ ಉಳಿಸಿಕೊಳ್ಳಬಹುದಿತ್ತು. ಅಲ್ಲಿ ತಡೆದದ್ದು ತಮಿಳು ವೋಟ್ ಬ್ಯಾಂಕ್! ಆ ಪುಟ್ಟ ದೇಶದ ಎದೆಗಾರಿಕೆ ನೋಡಿ ದಶಕಗಳ ಪರ್ಯಂತ ಕಾಡುತ್ತಿದ್ದ ತಮಿಳು ದಂಗೆಯನ್ನು ಹೇಳಹೆಸರಿಲ್ಲದಂತೆ ನಾಶ ಮಾಡಿತು. ಆದರೆ ಭಾರತ???
ತನ್ನ ಶತ್ರುಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ ಭಾರತ!!!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ