ಪುಟಗಳು

ಶನಿವಾರ, ಆಗಸ್ಟ್ 31, 2013

ಮುನಿಸು ತರವೆ?


ಮಂದ ಮಾರುತ ಬೀಸೆ|
ನಿನ್ನ ನೋಡಿದೆ ಕೂಸೆ||
ಮಧುರ ಕಂಪದು ಸೋಕೆ|
ಶಶಿಯು ಮರೆವನು ಜೋಕೆ||

ಹುಸಿಯ ಮುನಿಸದು ಬೇಕೆ|
ಇನಿಯನ ನೆನಪದು ಸಾಕೆ||
ಇಳಿದಿದೆ ಕಂಬನಿ ಯಾಕೆ|
ನಗುತ ನಲಿಯೆಲೆ ಮಂಕೆ||

ಹಸುರು ಚೆಲ್ಲಿದೆ ನೋಡು|
ಕುಸುರು ಕೆತ್ತನೆ ಬೀಡು||
ನಾಡ ಹಿರಿಮೆಯ ಹಾಡು|
ಸೆಳೆವ ನಾಟ್ಯವ ಮಾಡು||

ಭೂಮಿ ನಿನ್ನದೆ ರಂಗ|
ಚೆಲುವು ಏರಿದೆ ಶೃಂಗ||
ಕನಸಿಗೇತರ ಭಂಗ|
ಮನವು ಬಯಸಿದೆ ಸಂಗ||

ಕವಿಯ ಕಲ್ಪನೆ ಮುದವು|
ಸುಖದಿ ತಲ್ಪದಿ ಒಲವು||
ನುಡಿವ ಮಾತಿದೆ ಹಲವು|
ಬಿಡೆಲೇ ಏತಕೀ ಛಲವು||

1 ಕಾಮೆಂಟ್‌:

 1. Dear Rajesh, Kavithe chennagide. Adre nimma bere kavithegalashtu manassige barlilla. Kaarana,..
  1. 'koose' annuva pada chitrakke hodtaa illa.
  2.' Manke' annuvudannu praasa hondislikke balavanthavagi haakidantide..
  4th,5th stanzagaku tumbaa chennagive...
  KEEP WRITING>>> :)

  ಪ್ರತ್ಯುತ್ತರಅಳಿಸಿ