ಪುಟಗಳು

ಭಾನುವಾರ, ಆಗಸ್ಟ್ 18, 2013

ನಮೋ ನಮೋ...

ನಮೋ ನಮೋ...


ನಿಶೆಯ ನಶೆಯಲಿ ಮುಳುಗಿದೆ ಭಾರತ|
ಮೂಕ ಮೋಹನ ವೈರಿಗೆ ಶರಣಾಗತ||
ಇಟಲಿ ಸಂಜಾತೆಯ ಕರದೊಳು ಆಡಳಿತ|
ಹೈರಾಣಾಗಿದೆ ಭವ್ಯ ಭಾರತ||೧||

ಜಿಹಾದಿ ನಕ್ಸಲ ಭೃಷ್ಟಾಚಾರ|
ಜೀವರಕ್ಷಣೆಗೆ ದೇಶದಿ ಹಾಹಾಕಾರ||
ಸುಳ್ಳೇ ಸತ್ಯವು ಅನ್ಯಾಯವೇ ನ್ಯಾಯವು|
ಧರ್ಮವು ಕುಸಿದಿದೆ ಸಂಸ್ಕೃತಿ ಅಳಿದಿದೆ||೨||

ಇರುಳು ಕಳೆಯುತಿದೆ ಬೆಳಕು ಹರಿಯುತಿದೆ|
ಪಶ್ಚಿಮ ಭಾರತದೊಳು ಅರುಣೋದಯ||
ಬೆಳಕು ಚದುರಿಹುದು ಕುರುಡು ಕಳೆದಿಹುದು|
ಜನತೆ ಬಯಸಿಹುದು ಭಾರತದ ಮೋದಿ ಮಯ||೩||

ಸೌರ ಶಕ್ತಿಯ ಮೂಲ ಚರಂಕಾ|
ಏಷ್ಯಾದಲ್ಲೇ ಮೊದಲನೇ ಅಂಕ||
ಹಳ್ಳಿ ಬೆಳಗಿದೆ ಹಸಿರು ಚಿಗುರಿದೆ|
ರೈತನ ಮೊಗದಿ ನಗುವು ಮಿನುಗಿದೆ||೪||

ನದಿಯ ಜೋಡಣೆ ರಾಷ್ಟ್ರ ಜೋಡಣೆ|
ವಾಜಪೇಯಿ ನೀತಿ||
ಅತ್ಯುತ್ತಮ ವಿಧಾನ ಸಮರ್ಪಕ ಅನುಷ್ಠಾನ|
ನರೇಂದ್ರ ಮೋದಿ ರೀತಿ||೫||

ಬತ್ತಿದ ನರ್ಮದೆ ಉಕ್ಕಿ ಹರಿದಳು|
ಗುಪ್ತ ಸರಸಿರೆ ಮತ್ತೆ ಒಲಿದಳು||
ಸಬರ್ಮತಿ ಹೊಳೆದಳು ಸರದಾರನ ಸರೋವರ|
ಬಳಲಿದ ಕೃಷಿಕಗೆ ಬರಡು ಭೂಮಿಗೆ ಮೋದಿಯ ವರ||೬||

ದಶ ವರುಷವು ಶಾಂತಿಯ ಹರುಷವು|
ಸಂಪೂರ್ಣ ಸಾಕ್ಷರತೆ ಉದ್ಯೋಗ ನೀತಿಯು||
ಅಬಲೆಯು ಸಬಲೆ ಮಗಳನು ಉಳಿಸಿ|
ವಿಶ್ವ ಮನ್ನಣೆ ಕೀರ್ತಿಯ ಗಳಿಸಿ||೭||

ಸರ್ವರೊಂದಿಗೆ ಸಮಗ್ರ ವಿಕಾಸ|
ನರೇಂದ್ರ ಮೋದಿಗೆ ಕೊಡಿ ಅವಕಾಶ||
ನಮೋ ನಮೋ ಅಭಿವೃದ್ಧಿಯ ಹರಿಕಾರ|
ಭವ್ಯ ಭಾರತದ ಕನಸಿಗೆ ಶ್ರೀಕಾರ||೮||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ