ಪುಟಗಳು

ಶನಿವಾರ, ಆಗಸ್ಟ್ 3, 2013

ಯಾರವರು?ನಾವು ಗುಜರಾತಿನಲ್ಲಿ ಕೃಷಿ ಬೆಳವಣಿಗೆ 10-11% ಇದೆ ಎಂದಾಗ
ಅವರು 2002 ಗುಜರಾತ್ ಗಲಭೆಯ ಕಡೆ ಕೈ ತೋರಿಸುತ್ತಾರೆ!

ನಾವು ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ ಗುಜರಾತಿನಲ್ಲಿದ ಎಂದರೆ
ಅವರು ಮತ್ತೆ 2002 ಗುಜರಾತ್ ಗಲಭೆಯ ಕಡೆ ಕೈ ತೋರಿಸುತ್ತಾರೆ!

ನಾವು ಗುಜರಾತ್ ತನ್ನ ಎಲ್ಲ 18,000 ಹಳ್ಳಿಗಳಿಗೆ ದಿನದ 24 ತಾಸು ವಿದ್ಯುತ್ ಒದಗಿಸುವ ಭಾರತದ ಏಕೈಕ ರಾಜ್ಯವಾಗಿದೆ ಎಂದು ಹೇಳಿದರೆ ಅವರದು ಮತ್ತದೇ 2002 ಗುಜರಾತ್ ಗಲಭೆಯ ವರಾತ!

ನಾವು ಅವರಿಗೆ "ಗುಜರಾತ್ ರಸ್ತೆಗಳು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸಮನಾಗಿವೆ" ಎಂಬ ವಿಶ್ವ ಬ್ಯಾಂಕಿನ 2011 ಹೇಳಿಕೆಯನ್ನು ನೆನಪಿಸಿದರೆ ಅವರಿಗೇ 2002ರದ್ದೇ ಗುಂಗು!

ನಾವು ಗುಜರಾತ್ ತನ್ನ ಎಲ್ಲಾ 18,000 ಹಳ್ಳಿಗಳಲ್ಲಿ ವೇಗದ ನಿಸ್ತಂತು ಬ್ರಾಡ್ಬ್ಯಾಂಡ್ ಸೇವೆಯನ್ನು ಹೊಂದಿರುವ ದೇಶದ ಏಕೈಕ ರಾಜ್ಯ ಎಂದರೆ ಅವರದು ಮತ್ತದೇ 2002!


ಯಾವಾಗ 2010 ಫೋರ್ಬ್ಸ್ ನಿಯತಕಾಲಿಕೆ ಅಹಮದಾಬಾದ್ ಭಾರತದ ಒಂದನೇ ಮತ್ತು ವಿಶ್ವದಲ್ಲೇ 3ನೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂದರೆ ಅವರದು 2002 ಅದೇ ರಾಗ ಅದೇ ಹಾಡು!

ನಾವು ಗುಜರಾತ್ ಪ್ರವಾಸೋದ್ಯಮ ಹಿಂದೆಂದಿಗಿಂತ ವೇಗವಾಗಿ ಬೆಳೆಯುತ್ತಿದೆ ಎಂದಾಗ ಅವರ ಕಿವಿಗಳು ಮುಚ್ಚಿಯೇ ಇರುತ್ತವೆ!

ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯ ವರದಿಯ ಪ್ರಕಾರ ಗುಜರಾತ್ ದೇಶದಲ್ಲೇ ಅತ್ಯಂತ ಕಡಿಮೆ ನಿರುದ್ಯೋಗ ದರ ಇರುವ ರಾಜ್ಯ ಎಂದರೆ ಅವರು ಮತ್ತೆ 2002ರಲ್ಲೇ ಇರುತ್ತಾರೆ!

ಮೋದಿ ಮತ್ತೆ ಮತ್ತೆ ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಅತ್ಯುತ್ತಮ ಭಾರತೀಯ ನಾಯಕನಾಗಿ ಆಯ್ಕೆ ಆದಾಗ
ಅವರು 2002 ಕಡೆಗೇ ಕೈ ತೋರಿಸೋದು!

ಇಡೀ ವಿಶ್ವ ಮೋದಿ-ಅಭಿವೃದ್ಧಿ-ಮಾದರಿ ಬಗ್ಗೆ ಮಾತನಾಡುತ್ತಿರುವಾಗ, ವಿಶ್ವದ ನಂಬರ್ ವನ್ ನಿಯತಕಾಲಿಕೆ ಟೈಮ್ ಮ್ಯಾಗಝಿನ್ ಮೋದಿ ಬಗ್ಗೆ ಬರೆದಾಗ ಬುದ್ಧಿಹೀನ ಜೀವಿಗಳದ್ದು ಮತ್ತದೇ ಹಳಸಲು!

ನಾವು ಕಳೆದ ಹತ್ತು ವರ್ಷಗಳಲ್ಲಿ ಗುಜರಾತಿನಲ್ಲಿ ಒಂದೇ ಒಂದು ಕೋಮು ಗಲಭೆ ನಡೆದಿಲ್ಲ ಎಂದರೆ ಅವರು ನಿಂತ ನೀರಿನ ತರಹ ಮತ್ತೂ 2002ರಲ್ಲೇ ಇರುತ್ತಾರೆ ಹೊರತು ಮುಂದೆ ಬರೋದೆ ಇಲ್ಲ!

ಆದರೆ ನಾವು  1993, 2009 ಮುಂಬೈ ಗಲಭೆಗಳು, 2012 ಅಸ್ಸಾಂ ಗಲಭೆ, 1984 ಸಿಖ್ ನರಮೇಧ, 1947 ಬಂಗಾಳ ಗಲಭೆಗಳು, 1969 ಗುಜರಾತ್ ಗಲಭೆ, 1980 ಮೊರದಾಬಾದ್ ಗಲಭೆಗಳು, 1983 ಅಸ್ಸಾಂ ಗಲಭೆ, 1989 ಭಗಲ್ಪುರ್ ದಂಗೆ ಹಾಗೂ ಇಂತಹ 18ಕ್ಕೂ ಹೆಚ್ಚು ಗಲಭೆಗಳು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸಂಭವಿಸಿದ ಬಗ್ಗೆ ನೆನಪಿಸಿದಾಗ ಅವರದು ನಾಚಿಕೆ, ಮಾನ, ಮರ್ಯಾದೆ ಬಿಟ್ಟ ನೀರವ ಮೌನ!

ಆದರೆ ಎಷ್ಟು ಕಾಲ ಸತ್ಯ ಮುಚ್ಚಿಡಲು ಸಾಧ್ಯ? ಇವತ್ತಿನ ಕೋಲಾರದ ನಮೋ ಬ್ರಿಗೇಡ್ ಶುಭಾರಂಭದ ಚಿತ್ರ ಅವರ 2002 ವಿತಂಡವಾದ ಎಷ್ಟು ಹಳಸಲು ಅಂತ ಎತ್ತಿ ತೋರಿಸುತ್ತದೆಯಲ್ಲವೆ?ಚಿತ್ರ ಕೃಪೆ: ತೇಜಸ್ವಿ ಸೂರ್ಯ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ