ಪುಟಗಳು

ಬುಧವಾರ, ಆಗಸ್ಟ್ 14, 2013

ಮಳೆ...ಕುಂಭದ್ರೋಣ ಮಳೆ!

ಬೆಳ್ತಂಗಡಿಯ ಬಸ್ ನಿಲ್ದಾಣದಲ್ಲಿ ರಾತ್ರಿ ಹನ್ನೊಂದು ಗಂಟೆಗೆ ಬಸ್ಸಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಸುರಿದ ಧಾರಾಕಾರ ಮಳೆಯಲ್ಲಿ ನೆನೆದು ಚಿಗುರಿ ನಳನಳಿಸುತ್ತಿರುವ ಸಾಲುಗಳು!

ಮಳೆ...ಕುಂಭದ್ರೋಣ ಮಳೆ!

ಇಳೆಯ ಕಳೆಯ ಅಳೆದು ತೊಳೆದು|
ಎಳೆಯ ಚಿಗುರು ಮನವ ಸೆಳೆದು||
ಜೀವ ತಳೆದ ನವ ತಳಿಯ ಸೆಳೆತ|
ಜೀವದುಗಮಕೆ ಪ್ರಕೃತಿಯ ತುಡಿತ||

ತೊರೆಯ ತೊರೆದು ನದಿಯು ಹರಿದು|
ಜಲಧಿ ಸೇರುವ ಭರದಿ ಛಲದಿ||
ಹಸಿರ ಸೀರೆ ಶುಭ್ರ ಧಾರೆ|
ಹರುಷ ತರುತಲಿಹುದು ಮನದಿ||

ತಾರೆಗಳು ಜಾರಿ ಧರೆಯ ಸೇರಿ|
ಹೊಳೆಯುತಿಹುದು ಶ್ವೇತ ಧಾರೆ||
ನಡುವ ಬಳುಕಿಸಿ ಮಡುವ ಸೇರಿ|
ಸಾರುತಿಹುದು ನೀಲ ಮೇಘ ಲೀಲೆ||




 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ