ತಿಳಿಗೊಳದ ಶುಭ್ರಜಲದ ನಡುವೆ ರಾರಾಜಿಸುತಿಹಳು ಕುಮುದ| ಮಡುವ ನಡುವಿನಲಿ ನಡು ಬಳುಕುತಿಹುದದೇನು ವೈಯ್ಯಾರ|| ರವಿಯ ಮಂದಹಾಸದ ಕಿರಣಗಳವಳ ಸೋಕಲು ಮುನಿಸು ಕರಗಿದೆ| ಬೆಳಕು ವ್ಯಾಪಿಸೆ ಜಗದಿ ಹರುಷ ಹೊಮ್ಮಿತು ಮನದಿ ಮುದುಡಿದ ತಾವರೆ ಅರಳಿದೆ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ