ಪುಟಗಳು

ಸೋಮವಾರ, ಫೆಬ್ರವರಿ 10, 2014

ಅವನು ನೋಟು ಕೊಟ್ಟ...ಇವರು ಓಟು ಕೊಟ್ಟು ಕೆಟ್ಟರು!

ಅವನು ನೋಟು ಕೊಟ್ಟ...ಇವರು ಓಟು ಕೊಟ್ಟು ಕೆಟ್ಟರು!
ಬೆಳ್ತಂಗಡಿ!
            ಈ ಹೆಸರು ಅಷ್ಟೇನೂ ಪರಿಚಿತವಲ್ಲ. ಹೆಚ್ಚಿನವರಿಗೆ ಧರ್ಮಸ್ಥಳ, ಉಜಿರೆಯ ಹೆಸರು ಗೊತ್ತಿರುತ್ತದೆ ವಿನಾ ಬೆಳ್ತಂಗಡಿಯದಲ್ಲ! ಯಾಕೆ ಹೀಗೆ? ಬಹಳ ಹಿಂದೆಯೂ "ಬೋಲ್ತೆರ್" ಎಂಬ ಹೆಸರಿನಿಂದ ಮಾರುಕಟ್ಟೆಯ ಅಗ್ರಗಣ್ಯ ತಾಣವಾಗಿದ್ದ ಬೆಳ್ತಂಗಡಿ ಈಗ ತಾಲೂಕು ಕೇಂದ್ರವಾಗಿದ್ದೂ ಹಿಂದುಳಿದ ಪ್ರದೇಶವಾಗಿದೆಯೆಂದರೆ ಅದಕ್ಕೆ ಇಲ್ಲಿ ಶಾಸಕರಾಗಿದ್ದು ಗೂಂಡಾಗಿರಿ ಮಾಡಿಕೊಂಡು ತಮ್ಮ ಹೊಟ್ಟೆ ಮಾತ್ರ ತುಂಬಿಸಿಕೊಂಡು ಬರೇ ಮಾತಿನಲ್ಲಿ ಜನರನ್ನು ಅಟ್ಟಕ್ಕೇರಿಸಿ ಬೇಸ್ತು ಬೀಳಿಸಿದವರೇ ಕಾರಣ! ಇಲ್ಲಿ ನಡೆಯುವುದು ಬರೇ ಜಾತಿ ರಾಜಕಾರಣ!
             ಇಂತಹ ಬೆಳ್ತಂಗಡಿ ನಕ್ಸಲರ ಆಶ್ರಯ ತಾಣವೂ ಹೌದು. ಹಿಂದೆ ಮಲೆಕುಡಿಯ ಜನಾಂಗಕ್ಕೆ ಮಧ್ಯ ಕುಡಿಸಿ ತಮ್ಮ ಸಂಘಟನೆ ವಿಸ್ತರಿಸಿಕೊಳ್ಳುತ್ತಿದ್ದ ಕಮ್ಯೂನಿಷ್ಟರಿಗೆ ಸಧ್ಯಕ್ಕೆ ಸಿಕ್ಕಿದ್ದು ಸೌಜನ್ಯ ವಿಷಯ. ಈ ವಿಷಯದಲ್ಲಿ ನ್ಯಾಯಕ್ಕಾಗಿ ಪ್ರಾಣಾಪಾಯವನ್ನೂ ಲೆಕ್ಕಿಸದೇ ಹೋರಾಡುವವರು ಯಾರೋ! ಆದರೆ ಈ ವಿಷಯವನ್ನು ಬಂಡವಾಳ ಮಾಡಿಕೊಂಡು ತಮ್ಮ ಸಂಘಟನೆ ವಿಸ್ತರಿಸಿಕೊಳ್ಳುತ್ತಾ ಹಿಂದೂಗಳಿಗೆ ಕಂಟಕಪ್ರಾಯರಾದ ನಕ್ಸಲ್ ವಾದಿಗಳು ಹಾಗೂ ದೇಶದ್ರೋಹಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇಂದು ಬೆಳ್ತಂಗಡಿಯ ಜನಜೀವನ ಅಸ್ತವ್ಯಸ್ತಗೊಳಿಸುತ್ತಿರುವುದನ್ನು ಹಿಂದೂಗಳು ಅರ್ಥ ಮಾಡಿಕೊಳ್ಳದೇ ಇರುವುದು ಬೇಸರದ ಸಂಗತಿ.
            ಸಧ್ಯಕ್ಕೆ ಇಲ್ಲಿರುವುದು "ಕೈ" ಪ್ರಾಬಲ್ಯ. ಅದಕ್ಕೆಂದೇ ಇಲ್ಲಿ ನಡೆಯುವ ಗೋಕಳ್ಳತನ-ಹತ್ಯೆ, ಲವ್-ಲ್ಯಾಂಡ್-ವ್ಯಾಪಾರ ಜಿಹಾದ್ ಸುದ್ದಿಯಾಗೋದೇ ಇಲ್ಲ! ಇಲ್ಲೊಂದು ಸರಕಾರೀ ಪದವಿ ವಿದ್ಯಾಲಯವಿದೆ.  ಅಲ್ಲಿ ಯಾವಾಗ ನೋಡಿದರೂ ಶಿಕ್ಷಕರ ಕೊರತೆ. ಕಳೆದ ವರ್ಷವಂತೂ ವಿದ್ಯಾರ್ಥಿಗಳು ತಿಂಗಳ ಪರ್ಯಂತ ಪರದಾಡಬೇಕಾಯಿತು. ಈಗ ಕೆಲವು ಅತಿಥಿ ಉಪನ್ಯಾಸಕರಿಂದಾಗಿ ನಾಮಕೆವಾಸ್ತೆ ತರಗತಿಗಳು ನಡೆಯುತ್ತಿವೆ. ಕಳೆದ ವರ್ಷ ಪ್ರಾಂಶುಪಾಲರನ್ನು ಹೇಳದೇ ಕೇಳದೇ ವರ್ಗಾವಣೆ ಮಾಡಲಾಗಿತ್ತು. ನಂತರ ಈ ವರ್ಗಾವಣೆಯ ಹಿಂದಿದ್ದ "ಕೈ"ವಾಡ ಬೆಳಕಿಗೆ ಬಂತು! ಅದರ ಹಿಂದಿದ್ದದ್ದು NSUI! ಇದರ ವಿರುದ್ದ ಎಬಿವಿಪಿ ಪ್ರತಿಭಟನೆ ನಡೆಸಿತಾದರೂ ಅದನ್ನು ಹತ್ತಿಕ್ಕಲಾಯಿತು. ಸ್ಥಳಕ್ಕೆ ಬಂದ ಶಾಸಕ ವಸಂತ ಬಂಗೇರ "ನೀವು ಓದುವುದು ಬಿಟ್ಟು ಬರೇ ಪ್ರತಿಭಟನೆಗಳಲ್ಲಿ ತೊಡಗಿದ್ದೀರಿ. ಇದರ ಪರಿಣಾಮ ನೆಟ್ಟಗಾಗದು. ಇದು ನಾನು ಕಟ್ಟಿಸಿದ ವಿದ್ಯಾಲಯ" ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೈದು NSUI ಸಂಘಟನೆಯ ವಿದ್ಯಾರ್ಥಿಗಳಿಂದ ಚಪ್ಪಾಳೆಗಿಟ್ಟಿಸಿಕೊಂಡು ಹೋದದ್ದೂ ಆಯಿತು. ಆ ವಿಚಾರ ಮುಚ್ಚಿಯೂ ಹೋಯಿತು!
                 ತರಗತಿಗಳಿಗೆ ಬಾರದೆ ಉಳಿದ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೂರಲು ಬಿಡದ NSUI ಸಂಘಟನೆ ಇಲ್ಲಿ ಮಾಡುತ್ತಿರುವುದು ಗೂಂಡಾಗಿರಿ. ವಿದ್ಯಾಲಯದ ಚುನಾವಣೆಯಿಂದ ಹಿಡಿದು ಪ್ರತಿಯೊಂದು ಕಾರ್ಯಕ್ರಮದಲ್ಲೂ ಇವರದ್ದೇ ಆಟಾಟೋಪ! ಪ್ರತಿನಿತ್ಯ ಒಂದಿಲ್ಲೊಂದು ಕಿರಿಕಿರಿ. ಇವರಿಂದಾಗಿ ವಿದ್ಯಾಲಯದ ಚುಣಾವಣೆಯೂ ನಿಂತುಹೋಗಿತ್ತು. ಅದಕ್ಕೆ ಪೂರಕವಾಗಿ ವಿದ್ಯಾಲಯದ ಪಕ್ಕದಲ್ಲೊಂದು ಅನಧಿಕೃತ ಮಧ್ಯದಂಗಡಿ! ಕೆಲವು ದಿನಗಳ ಹಿಂದೆ ಮುಸಲ ವಿದ್ಯಾರ್ಥಿಯೊಬ್ಬ ಹಿಂದೂ ಹುಡುಗನಿಗೆ ಹೊಡೆದಿದ್ದ. ಹೊಡೆದದ್ದು "ಬಾಂಧವ"ನಲ್ಲವೇ? ಸುದ್ದಿಯಾಗಲೇ ಇಲ್ಲ. ನಮ್ಮವರ ಸಹಿಷ್ಣುತೆಗೆ ಬೆಂಕಿ ಹಾಕ!
             ಪ್ರಶ್ನೆ ಇರುವುದು ವಿದ್ಯಾರ್ಥಿಗಳ ಹಕ್ಕಿಗಾಗಿ ಹೋರಾಡಬೇಕಾದ ಸಂಘಟನೆ ಗೂಂಡಾಗಿರಿ ಮಾಡುವುದು, ಉಪನ್ಯಾಸಕರಿಗೇ ಬೆದರಿಕೆ ಹಾಕುವುದು ಎಷ್ಟು ಸರಿ? ವಿದ್ಯಾಲಯದ ಸಮೀಪದಲ್ಲಿ ಮಧ್ಯ, ಮಾದಕ ದೃವ್ಯ ಚಟುವಟಿಕೆಗಳಿಗೆ ಸರಕಾರ ಕಡಿವಾಣವೇಕೆ ಹಾಕುವುದಿಲ್ಲ? ಅನದಿಕೃತ ಮಧ್ಯದಂಗಡಿ ಬಗ್ಗೆ ಕಾನೂನು ಕ್ರಮ ಯಾಕೆ ತೆಗೆದುಕೊಂಡಿಲ್ಲ? ಶಾಸಕನಾದವ "ನನಗೆ ಆ ಕಾಲೇಜಿಗೆ ಹೋಗಲು ಇಷ್ಟವಿಲ್ಲ. ನಾನು ಕಟ್ಟಿಸಿದ ಕಾಲೇಜಿನಲ್ಲಿ ನನ್ನ ವಿರುದ್ದವೇ ಪ್ರತಿಭಟನೆ ಮಾಡುತ್ತಾರೆಂದು" ಇನ್ನೊಂದು ಕಾಲೇಜಿನಲ್ಲಿ ಭಾಷಣ ಬಿಗಿದದ್ದು ಯಾವ ಪುರುಷಾರ್ಥಕ್ಕೆ? ಶಾಲೆ ಇವ ಕಟ್ಟಿಸಲು ಸರಕಾರದ ದುಡ್ಡೇನು ಇವನ ಅಪ್ಪನ ಆಸ್ತಿಯೇ? ಏಳೆಂಟು ತಿಂಗಳಿಂದ ಗಬ್ಬೆದ್ದು ಹೋಗಿರುವ ನಾರಾವಿ-ಅಳದಂಗಡಿ-ಗುರುವಾಯನಕೆರೆ ಮೂಲಕ ಸಾಗುವ ರಾಜ್ಯ ಹೆದ್ದಾರಿಯನ್ನು ದುರಸ್ತಿ ಮಾಡದ ಈತ ಇದ್ದ ಜಾತ್ರೆಗಳಿಗೆ ಹೋಗಿ ಅಷ್ಟು ಲಕ್ಷ ಕೊಡುತ್ತೇನೆ, ಇಷ್ಟು ಲಕ್ಷ ಕೊಡುತ್ತೇನೆ ಎಂದು ಜನರನ್ನು ಮಂಗ ಮಾಡುವುದೇಕೆ? ಪ್ರಚಾರದ ಸಮಯದಲ್ಲಿ ಪಿಲಿ ಚಾಮುಂಡಿ ಕೊಳವನ್ನು ಸುನ್ನತ್ ಕೆರೆ ಮಾಡುತ್ತೇನೆಂದ  ಇವನಿಗೆ ಬ್ಯಾರಿಗಳೇನು ಸುನ್ನತ್ ಮಾಡಿಸಿದ್ದಾರೆಯೇ? ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅವಸ್ಥೆ ನೋಡಬೇಕು - ಸರಿಯಾದ ರಸ್ತೆಯಿಲ್ಲದ ಹಳ್ಳಿಗಳು, ಸೇತುವೆಗಳಿಲ್ಲದೆ ಮಳೆಗಾಲದಲ್ಲಿ ನದಿ ದಾಟಲು ಪರದಾಡುವ ಜನರು, ವಿದ್ಯುತ್ ಸಂಪರ್ಕವಿಲ್ಲದ ಹಳ್ಳಿಗಳು, ಮಲೆನಾಡ ತಪ್ಪಲಲ್ಲಿದ್ದರೂ ನೀರಿಗಾಗಿ ಪರದಾಟ! ಮಲೆಯಾಳಿಗಳಿಂದಾಗಿ ರಬ್ಬರ್ ಗುಡ್ದಗಳಾಗಿ ಮರುಭೂಮಿಗಳಾಗುತ್ತಿರುವ ಪಶ್ಚಿಮ ಘಟ್ಟದ ತಪ್ಪಲು, ಕುತಂತ್ರಿಗಳ ಮತಾಂತರ, ನಿರಂತರ ಗೋಹತ್ಯೆ, ಸುದ್ದಿಯೇ ಆಗದ ಲವ್ ಜಿಹಾದ್, ಲ್ಯಾಂಡ್ ಜಿಹಾದ್.....ಹಾಂ ಬೋಲ್ತೆರ್ ಮೇ ಬೋಲ್ ನೇ ವಾಲಾ ಕೋಯೀ ನಾಹೀ ಹೈ! ಇಂತಹ ಬೆಳ್ತಂಗಡಿಯನ್ನು ಸೋಮನಾಥನೇ ಕಾಪಾಡಬೇಕು!
P.S:  ಇವತ್ತಿಗೂ ನಾನು ಊರಿಗೆ ಹೋಗುವಾಗ ಮನೆ ತಲುಪಬೇಕಾದರೆ ಮೂವತ್ತು ನಿಮಿಷ ಕಾಡುದಾರಿಯಲ್ಲಿ ಸಾಗಬೇಕು. ಬೆಳಗಿನ ಜಾವ ನಾಲ್ಕು ಗಂಟೆ ಹೊತ್ತಿಗೆಲ್ಲಾ ಮೊಬೈಲ್ ಮಿಣಿ ಮಿಣಿ ಬೆಳಕಿನಲ್ಲಿ ಸಾಗಿದ್ದಿದೆ. ಮಧ್ಯರಾತ್ರಿ ಸರಿಯಾದ ಟಾರ್ಚ್ ಲೈಟ್ ಇಲ್ಲದೆ ಪರದಾಡುತ್ತಾ ಸಾಗಿದ್ದಿದೆ. ಹಾಗೆ ಸಾಗುವಾಗ ಕಾಡುಹಂದಿಗಳ ಹಿಂಡು, ಹಾವುಗಳು, ಕಾಡುಕೋಣಗಳ ಹಿಂಡು ಸಾಮಾನ್ಯ. ಜೊತೆಗೆ ಚಿರತೆಯ ಹೆದರಿಕೆ ಬೇರೆ! ಮಾರ್ಗ ಮಧ್ಯದಲ್ಲೊಂದು ನದಿ ಅಡ್ದ ಬರುತ್ತೆ. ಮಳೆಗಾಲದಲ್ಲಿ ದಾಟುವ ಹಾಗಿಲ್ಲ. ಕಾರಣ ಸೇತುವೆಯೇ ಇಲ್ಲ. ಅದಕ್ಕೆ ಸೇತುವೆ ಮಾಡಿಸಿಕೊಡುತ್ತೇನೆಂದು ಜನರನ್ನು ಯಾಮಾರಿಸಿ ಗೆದ್ದ ಬಂಗೇರ ನಾಪತ್ತೆ! ಅವನು ನೋಟು ಕೊಟ್ಟ...ಇವರು ಓಟು ಕೊಟ್ಟು ಕೆಟ್ಟರು!
                 ಇಲ್ಲಿ ಹೇಳಲಾಗದೇ ಉಳಿದ ಭಯಾನಕತೆಗಳು ಇನ್ನೂ ಇವೆ. ಅದಕ್ಕೆ ಪೂರಕ ಸಂದರ್ಭಕ್ಕೆ ಕಾಯುತ್ತಿದ್ದೇನೆ. ಇದು ನನ್ನೊಬ್ಬನ ಕೂಗಲ್ಲ...ಭಾರತದ ಪ್ರತಿಯೊಂದು ಕಡೆ ಇರುವ ದುರವಸ್ಥೆ...ಇದನ್ನು ಸುವ್ಯವಸ್ಥೆಯಾಗಿ ಪರಿವರ್ತಿಸಬೇಕಾದರೆ #ನಮೋ ಎನ್ನಲೇ ಬೇಕು. ಮತ್ತದೇ ನಿಟ್ಟುಸಿರು..."ಹಿಂದೂಗಳೆಲ್ಲಾ ಒಂದಾದರೆ..."

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ