ಪುಟಗಳು

ಶನಿವಾರ, ಜೂನ್ 7, 2014

ವಿಜಯ ನಗರ

ತಾಳವಿಲ್ಲದಲೆ,
ಬೇತಾಳನಂದದಿ ಕುಣಿವ
ಕಾಳನರ್ತಕನ ಕಾಲ್ಕೆಳಗೆ
ತೊತ್ತುಳಿಗೊಂಡು ಹಾಳಾಗಿ
ಹುಡಿಗೂಡಿ ಹೋದ
ಕನ್ನಡನಾಡಿಗಿದಿರಾಗಿ
ಬಂದು ನಿಂದು
ಹಾಳುಗಳ ಹೊರವೊಳಗೆ
ಹಾಳುಗಳ ಸಾಲುಗಳು
ಬೀಳುಗಳ ಬದಿಬದಿಗೆ
ಬೀಳುಗಳ ಬಾಳುಗಳು
ಕಾಳರಕ್ಕಸನ
ಕಡೆಕೂಳು ಬಾಳಕವಾದ
ನಾಡ ನಡುಮನೆಯ ಕಂಡೆ
-ದ.ರಾ ಬೇಂದ್ರೆ(ಆಕ್ರಮಣಕ್ಕೊಳಗಾಗುತ್ತಲೇ ಇರುವ ಭವ್ಯ ಹಂಪೆಯ ನೋಡಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ