ಪುಟಗಳು

ಬುಧವಾರ, ನವೆಂಬರ್ 25, 2015

ಮೊಳಕೆ

ಮೊಳಕೆ

ಸಿಡಿಲಾರ್ಭಟಕೆ ಬೆದರಿ ಮುರುಟಿ
ಭೂತ ಬಡಿದಂತೆ ನಿಂತು ನಿರುಕಿಸೆ||

ನಭೋ ಮಂಡಲದಿಂದ ಭೋರ್ಗರೆದಿಳಿದ
ಧಾರೆಗೆ ಧರೆಯು ಧನ್ಯವಾಯ್ತು||

ಅಡಿದಾವರೆ ಪಿಡಿದಾಗ ಬಡಿದ
ಮೊಗ್ಗುಗಳೆಲ್ಲಾ ಕರವಿಡಿದು ನಿಂತಿವೆ||

ಹಸಿಹಸಿರು ನಳನಳಿಸಿ ಹೊಸ ಚಿಗುರು ಮೇಳೈಸಿ
ಇಳೆಯ ಕಳೆ ಹೆಚ್ಚಿ ಸ್ವರ್ಗಕೆ ಹಚ್ಚಿ ಕಿಚ್ಚು||

ಹೊಳೆಯಿತದು ಹೊಸ ರಾಗ ಮೊಳೆಯಿತದು ಹೊಸ ಭಾವ
ಮನದ ಬೇಸರವೆಲ್ಲಾ ಕ್ಷಣದಿ ಮಾಯವಾಯ್ತು||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ