ನಿಜವಾದ ಅಸಹಿಷ್ಣುಗಳಾರು?
ದನ ಕಳ್ಳ ಅಖ್ಲಾಖನಿಗೆ ಬಡಿದಾಗ ಎದ್ದ ಅಸಹಿಷ್ಣುತೆ ಎಂಬ ಕೂಗು ಅಖ್ಲಾಖನ ಬಳಿ ಇದ್ದದ್ದು ದನದ ಮಾಂಸ ಎಂದು ಫೊರೆನ್ಸಿಕ್ ರಿಪೋರ್ಟ್ ಹೇಳಿದಾಗ ಮಕಾಡೆ ಮಲಗಿತ್ತು. ಸ್ವಾತಂತ್ರ್ಯೋತ್ತರದಲ್ಲಿ ದೇಶ ಕಂಡು ಕೇಳರಿಯದ ಅಭಿವೃದ್ಧಿಯನ್ನು ಕಳೆದ ಐದು ವರ್ಷಗಳಲ್ಲಿ ನಡೆಸಿದ ಸರಕಾರಕ್ಕೆ ಎಲ್ಲಾ ಪ್ರತಿಪಕ್ಷಗಳಿಂದ, ವಿರೋಧಿಗಳಿಂದ ಸಿಕ್ಕಿದ್ದೇನೆಂದರೆ "ಭಾರತದಲ್ಲಿ ಅಸಹಿಷ್ಣುತೆ ಇದೆ, ಮಾಬ್ ಲಿಂಚಿಂಗ್ ನಡೆಯುತ್ತಿದೆ, ಕೇಸರಿಕರಣ ನಡೆಯುತ್ತಿದೆ" ಎಂಬ ಸುಳ್ಳನ್ನು ಜಾಗತಿಕ ಮಟ್ಟದಲ್ಲಿ ಬೊಬ್ಬೆಯೆಬ್ಬಿಸಿ ಭಾರತದ ಮಾನವನ್ನು ಹೀನವಾಗಿಸಲು ನಡೆಸಿದ ಯತ್ನ!
ಆದರೆ ನಿಜವಾದ ಅಸಹಿಷ್ಣುತೆ, ಅಸಹನೆ ಯಾವ ಕಡೆಯಿಂದ ಇದೆ ಎನ್ನುವುದನ್ನು ಇತಿಹಾಸದ ಹಲವು ನಿದರ್ಶನಗಳೇ ನಮಗೆ ಪರಿಚಯಿಸುತ್ತವೆ. ಅಜ್ಮೀರದಲ್ಲೊಂದು ದರ್ಗಾ ಇದೆ. ಹಿಂದೂಗಳೂ ಚಾದರ ಸಮರ್ಪಿಸುವ ದರ್ಗಾ! 1191ರಲ್ಲಿ ಮಹಮ್ಮದ್ ಘೋರಿ, ಪೃಥ್ವೀರಾಜನ ರಾಜ್ಯದ ಮೇಲೆ ಆಕ್ರಮಣಕ್ಕೆ ಬಂದಿದ್ದಾಗ ಆತನ ಜೊತೆ ಬಂದವನೇ ಮೊಯಿನುದ್ದೀನ್ ಚಿಸ್ತಿ. ಪೃಥ್ವೀರಾಜನಿಂದ ಹೀನಾಯವಾಗಿ ಸೋಲಲ್ಪಟ್ಟ ಘೋರಿ ಹಿಂದಿರುಗಿದ. ಆದರೆ ಈ ಚಿಸ್ತಿ ಅಜ್ಮೀರದಲ್ಲೇ ನೆಲೆಯೂರಿದ. ಮರು ವರ್ಷ ಮತ್ತೆ ಆಕ್ರಮಣಕ್ಕೆ ಬಂದ ಘೋರಿಗೆ ಪೃಥ್ವೀರಾಜನನ್ನು ಗೆಲ್ಲಲು ವಂಚನೆಯ ಮಾರ್ಗವನ್ನು ಹೇಳಿಕೊಟ್ಟಾತ ಇದೇ ಚಿಸ್ತಿ. ಹೆಚ್ಚುಕಡಿಮೆ ಸೋಲುವ ಹಂತಕ್ಕೆ ಬಂದಿದ್ದ ಘೋರಿಗೆ ಪೃಥ್ವೀರಾಜ "ವಿನಾ ಕಾರಣ ನಮ್ಮ ಕೈಯಲ್ಲೇಕೆ ಸಾಯುತ್ತೀರಿ. ಹಿಂದಿರುಗಿ ಹೋಗಿ" ಎಂದು ಸಂದೇಶ ಕಳುಹಿಸಿ ಔದಾರ್ಯ ತೋರಿದ. "ಅಣ್ಣ ಘಿಯಾಸುದ್ದೀನ್ ಘೋರಿಯ ಆದೇಶದಂತೆ ಬಂದಿದ್ದೇನೆ, ಸ್ವ ಇಚ್ಛೆಯಿಂದಲ್ಲ. ಅಣ್ಣನನ್ನು ಕೇಳದೆ ನಾನು ನಿರ್ಣಯಿಸಲಾರೆ. ಹಾಗಾಗಿ ಅಣ್ಣನಿಂದ ಉತ್ತರ ಬರುವವರೆಗೆ ತಡೆಯಿರಿ" ಎಂದು ಕದನ ವಿರಾಮ ಘೋಷಿಸಿ ಪೃಥ್ವೀರಾಜನನ್ನು ನಂಬಿಸಿದ ಘೋರಿ ರಾತ್ರೋರಾತ್ರಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ಪೃಥ್ವೀರಾಜನನ್ನು ಕೊಲೆಗೈದ. ಎದುರಾಳಿಯೂ ಧರ್ಮಯುದ್ಧದಲ್ಲಿ ತೊಡಗುತ್ತಾನೆ ಎಂದು ನಂಬಿದ್ದ ಹಿಂದೂಗಳ ಮೃದುಲ ಮನಸ್ಥಿತಿಯೇ ಅವರಿಗೆ ಮುಳುವಾಯಿತು. ಶಿಬಿರದಲ್ಲಿ ದೀಪಗಳನ್ನು ಹಚ್ಚಿಟ್ಟು ತಾವು ಅಲ್ಲೇ ಇರುವಂತೆ ಭ್ರಮೆ ಹುಟ್ಟಿಸಿ ಕತ್ತಲಿನಲ್ಲಿ ಸ್ವಲ್ಪವೂ ಸಪ್ಪಳವಾಗದಂತೆ ಪೃಥ್ವೀರಾಜನ ಶಿಬಿರವನ್ನು ಸುತ್ತುವರೆದ. ಆ ವೇಳೆಗೆ ಇನ್ನೂ ಬೆಳಗಾಗಿರಲಿಲ್ಲ. ಹೆಚ್ಚಿನವರು ನಿದ್ರಾವಶವಾಗಿದ್ದರು. ಕೆಲವರು ಸ್ನಾನ-ಜಪ-ಪೂಜಾದಿಗಳಲ್ಲಿ ನಿರತರಾಗಿದ್ದರು. ಒಮ್ಮಿಂದೊಮ್ಮೆಲೇ ಮುಗಿಬಿದ್ದ ಶತ್ರುಪಾಳಯವನ್ನು ಕಂಡು ಬೆಚ್ಚಿಬಿದ್ದರೂ ಸಾವರಿಸಿಕೊಂಡು ಪೃಥ್ವೀರಾಜ ಪ್ರತ್ಯಾಕ್ರಮಣ ಮಾಡಿದ. ಆದರೆ ಘೋರಿ ಮೋಸದ ಯುದ್ಧಕ್ಕಿಳಿದ. ಇಡೀ ದಿನ ನಾಲ್ಕೂ ದಿಕ್ಕುಗಳಿಂದ ಸುತ್ತುವರಿದು, ಎದುರು ನಿಂತು ಹೋರಾಡದೆ ಅಶ್ವಾರೋಹಿಗಳಿಂದ ದಾಳಿ ಮಾಡಿದಂತೆ ತೋರಿಸುತ್ತಾ ಪಲಾಯನ ಮಾಡುತ್ತಾ ಪೃಥ್ವೀರಾಜನ ಸೇನೆಯನ್ನು ವೃಥಾ ಓಡುವಂತೆ ಮಾಡಿ ಸುಸ್ತುಪಡಿಸಿದ. ಹೀಗೆ ಹಿಂದಿನ ರಾತ್ರಿಯಿಂದ ಆಹಾರವಿಲ್ಲದೆ ಹಸಿವಿನಿಂದ ನರಳುತ್ತಾ ಹೋರಾಡುತ್ತಿದ್ದ ಹಿಂದೂ ಸೈನಿಕನ ಶಕ್ತಿ ನಶಿಸುವ ವೇಳೆಗೆ ಅಲ್ಲಿಯವರೆಗೂ ಕಾದಿರಿಸಿದ್ದ ತನ್ನ ಸೈನಿಕ ಪಡೆಗಳನ್ನು ಛೂ ಬಿಟ್ಟ. ಹೀಗೆ ಮೋಸ-ಕುತಂತ್ರಗಳಿಂದ ಕಾಫಿರರನ್ನು ಸಾಯಬಡಿದು ತರೈನಿನಲ್ಲಿ ತಮ್ಮ ಅರಸ ಸಾಧಿಸಿದ ವಿಜಯವನ್ನು ಫಿರಿಸ್ತಾ, ಮಹಮ್ಮದ್ ಉಫಿ, ಮಿನ್ಹಾಜುದ್ದೀನ್ ಸಿರಾಜ್ ರಂತಹ ಪರ್ಷಿಯನ್ ಇತಿಹಾಸಕಾರರು ಸವಿಸ್ತಾರವಾಗಿ ಹೇಳಿದ್ದಾರೆ. ಪೃಥ್ವೀರಾಜನನ್ನು ಕೊಂದ ಬಳಿಕ ಅಜ್ಮೀರದ ದೇವಾಲಯವನ್ನು ನಾಶ ಮಾಡಿದ. ಇದಕ್ಕೆ ಆ ಚಿಸ್ತಿಯ ಪ್ರೇರಣೆಯಿತ್ತು. ಹೀಗೆ ಭಾರತದ ಇತಿಹಾಸವನ್ನೇ ಬದಲಿಸಿದ ಈ ಘಟನೆ ನುಸುಳುಕೋರನೊಬ್ಬ ಆಶ್ರಯ ಕೊಟ್ಟವರ ವಿರುದ್ಧವೇ ಅಸಹನೆ ತೋರಿದ, ಭಾರತದ ಇತಿಹಾಸದಲ್ಲಿ ದಾಖಲಿಸಲ್ಪಟ್ಟ ಮೊದಲ ಘಟನೆಯೂ ಹೌದು. ನುಸುಳುಕೋರರು ಎಂದೆಂದಿಗೂ ದೇಶಕ್ಕೆ ಅಪಾಯಕಾರಿಗಳು ಎನ್ನುವುದನ್ನು ಸೂಚಿಸಿದ ಘಟನೆಯೂ ಹೌದು. ಇವತ್ತು ಅಜ್ಮೀರದಲ್ಲಿ ಸ್ವಾಭಿಮಾನ, ನಾಚಿಕೆಯಿಲ್ಲದೆ ಹಿಂದೂಗಳು ಕೂಡಾ ಅರ್ಚಿಸುವ ಗೋರಿಯಿದೆಯಲ್ಲ, ಅದು ಇದೇ ಚಿಸ್ತಿಯದ್ದು! ಈಗ ಹೇಳಿ ಅಸಹಿಷ್ಣುಗಳು ಯಾರು? ಅಸಹನೆ ಯಾರದ್ದು?
ಕೌಟಿಲ್ಯ ತನ್ನ ಲಬ್ಧಪ್ರಶಮನಂದಲ್ಲಿ
ಚೋರ ಪ್ರಕೃತೀನಾಂ ಮ್ಲೇಚ್ಛಜಾತೀನಾಂ
ಚ ಸ್ಥಾನವಿಪರ್ಯಾಸಂ ಅನೇಕಸ್ಥಂ ಕಾರಯೇತ್ ||
ಕಳ್ಳ ಸ್ವಭಾವದವರು, ಮ್ಲೇಚ್ಛ ಮುಂತಾದ ವಲಸಿಗರನ್ನು ಒಂದೇ ಜಾಗದಲ್ಲಿ ಒಟ್ಟುಗೂಡಿ ನಿಲ್ಲುವುದಕ್ಕೆ ಅವಕಾಶ ಕೊಡಬಾರದು. ಅವರನ್ನು ಒಂದು ಕಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸುತ್ತಿರಬೇಕು ಎಂದಿದ್ದಾನೆ. ನಮ್ಮ ರಾಜರುಗಳ ಔದಾರ್ಯಕ್ಕೆ ಕೊನೆಯೆಲ್ಲಿ? ರಾಜನಾದವನು ಉದಾರನಿರುವಂತೆ, ಕಠಿಣನೂ ಇರಬೇಕು ಎನ್ನುವುದನ್ನು ಮರೆತುಬಿಟ್ಟೇ ಇಂದಿಗೂ ವಲಸಿಗರ ಉಪಟಳ ತಾರಕಕ್ಕೇರಿರುವುದು! ಇದು ರಾಷ್ಟ್ರದಲ್ಲಿ ಅರಾಜಕತೆಯನ್ನು ಸೃಷ್ಟಿ ಮಾಡಲು ಹೊರಟಿರುವ, ತುರ್ತಾಗಿ ಕ್ರಮ ಕೈಗೊಳ್ಳಬೇಕಾದ ವಿಚಾರವೂ ಹೌದು; ಈ ವಲಸಿಗರು ಅಸಹಿಷ್ಣುಗಳೂ ಕೂಡಾ!
ಹುಮಾಯೂನ ರಜಪೂತರ ಮೇಲೆ ಆಕ್ರಮಣ ಮಾಡಿದ್ದ. ಆದರೆ ಮುಂದೆ ರಜಪೂತರು ಹುಮಾಯೂನ ತಮ್ಮ ಮೇಲೆ ಆಕ್ರಮಣ ಮಾಡಿದ್ದರೂ ತುಂಬುಗರ್ಭಿಣಿ ಮಡದಿಯೊಂದಿಗೆ ರಾಜ್ಯಭೃಷ್ಟನಾಗಿ ಶೇರ್ ಶಾನ ಭೀತಿಯಿಂದ ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಆತನಿಗೆ ಆಶ್ರಯ ನೀಡಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಟ್ಟರು! ಅಕ್ಬರ್ ಹುಟ್ಟಿದ್ದು ಹಿಂದೂ ಕೋಠಿಯೊಳಗೆ. ಬಾಣಂತನವೆಲ್ಲಾ ಮುಗಿದ ಬಳಿಕ ಹುಮಾಯೂನನ ಅಸಹಿಷ್ಣುತೆ ಭುಗಿಲೆದ್ದಿತು. ಆಶ್ರಯ ನೀಡಿದ ರಾಣಾಸಾಲನ ವಿರುದ್ದವೇ ಅವನು ಯುದ್ದಕ್ಕಿಳಿದ! ಹಿಂದೂಗಳ ಆಶ್ರಯದಲ್ಲಿ ಅದರಲ್ಲೂ ರಜಪೂತರ ಸೂರಿನಡಿಯಲ್ಲಿ ಜನಿಸಿದ ಅಕ್ಬರ್ ಮುಂದೆ ಅದೆಷ್ಟು ಹಿಂದೂಗಳ ಮಾರಣ ಹೋಮ ನಡೆಸಿದ! ಅದೆಷ್ಟು ದೇವಾಲಯಗಳನ್ನು ಭಗ್ನಗೊಳಿಸಿದ! ಚಿತ್ತೋಡಗಢದ ಮೇಲೆ ದಾಳಿ ಮಾಡಿದ ಅಕ್ಬರ್ ಊರೂರುಗಳನ್ನೇ ಸುಟ್ಟು ಕೋಟೆಗಳನ್ನು ಪುಡಿಗಟ್ಟಿದ. ಅಬುಲ್ ಫಜಲ್ ಹೇಳುವಂತೆ ಮೂವತ್ತು ಸಾವಿರ ಜನರನ್ನು ಕೊಂದು ಅವರ ತಲೆಗಳನ್ನು ಕುಯ್ಯಿಸಿ ಅವುಗಳಿಂದ ಒಂದು ಗೋಪುರ ಕಟ್ಟಿದ. ಅವನ ಅನುಯಾಯಿಗಳು ಒಡೆಯನ ಅನುಮತಿ ಪಡೆದು ವಿಜೃಂಭಿಸಿದರು. ಊರಿಗೇ ಊರೇ ಲೂಟಿಯಾಯಿತು. ಸ್ತ್ರೀಪುರುಷರನ್ನು ಕತ್ತರಿಸಿ ಎಸೆದರು. ನಡುಬೀದಿಯಲ್ಲಿ ಸಾಮೂಹಿಕವಾಗಿ ಮಾನಿನಿಯರ ಮಾನ ಹರಣ ಮಾಡಿದರು. ತಾಯಂದಿರ ಕಂಕುಳಲ್ಲಿ ಸುಖವಾಗಿ ನಿದ್ರಿಸುತ್ತಾ, ಮೊಲೆಯನ್ನುಣ್ಣುತ್ತಾ ದ್ವೇಷಾಸೂಯೆಗಳ ಪರಿವೆಯಿಲ್ಲದೆ ಜಗವ ನಗಿಸುತ್ತಿದ್ದ ಮುಗ್ಧ ಹಸುಳೆಗಳ ಕೊರಳ ಕೊಯ್ದರು. ಒಬ್ಬೊಬ್ಬರನ್ನೇ ಕೊಂದು ಬೇಸರವಾಗಿ ಉಳಿದವರನ್ನು, ಚಿತೆಗಳನ್ನು ನಿರ್ಮಿಸಿ ಅದಕ್ಕೆ ಎಸೆದುಬಿಟ್ಟರು. ಕೆಲವು ದಾಖಲೆಗಳ ಪ್ರಕಾರ ಸತ್ತವರ ಯಜ್ಞೋಪವೀತ ತೂಗಿದರೆ ಹತ್ತಾರು ಮಣಗಳಷ್ಟಿತ್ತಂತೆ! ಇನ್ನೂ ಕೆಲವು ದಾಖಲೆಗಳ ಪ್ರಕಾರ ಅದರ ತೂಕ 74ಮಣಗಳು(8 ಪೌಂಡುಗಳು)! ರಾಜರನ್ನೋ, ಸೈನಿಕರನ್ನೋ ಯುದ್ಧದಲ್ಲಿ ಕೊಲ್ಲುವುದೇನೋ ಒಂದು ಬಗೆಯಲ್ಲಿ ಒಪ್ಪಬಹುದು. ಆದರೆ ಜನಸಾಮಾನ್ಯರನ್ನು ಕೊಲ್ಲುವುದು, ಅವರನ್ನು ಮತಾಂತರಿಸುವುದು, ಮಾನಿನಿಯರ ಮಾನ ಹರಣಮಾಡುವುದು ಇವೆಲ್ಲಾ ಅಸಹಿಷ್ಣುತೆಯ ಪ್ರತೀಕಗಳಲ್ಲವೇ? ಭಾರತದ ಇತಿಹಾಸದಲ್ಲಿ ಮೊಘಲರು ಮಾಡಿದ್ದು ಇದನ್ನೇ. ಮೊಘಲರು ಅಸಹಿಷ್ಣುಗಳಲ್ಲದಿದ್ದರೆ ಯಾಕೆ ಅವರಲ್ಲಿ ಒಬ್ಬನೇ ಒಬ್ಬ ಶ್ರೀರಾಮಚಂದ್ರನೋ, ಪೃಥ್ವೀರಾಜನೋ, ಶಿವಾಜಿಯೋ ಹುಟ್ಟಲಿಲ್ಲ? ಘಜನಿ ಮಹಮ್ಮದ್, ಬಾಬರ ಟಾರ್ಟರರು; ಮಹಮ್ಮದ್ ಘೋರಿ, ನಾದಿರ್ ಶಹಾ, ಅಹಮದ್ ಶಹಾ ಅಬ್ದಾಲಿ ಅಫ್ಘನ್ನರು. ಅಫ್ಘನ್ನರು ಹಾಗೂ ಟಾರ್ಟರರು ತಮ್ಮೊಳಗೇ ಕಿತ್ತಾಡಿಕೊಂಡಿದ್ದರೂ ಹಿಂದೂಗಳನ್ನು ನಾಶ ಮಾಡುವ ಬಗ್ಗೆ ಅವರಲ್ಲಿ ಏಕಶೃದ್ಧೆಯಿತ್ತು ಏಕೆ? ಮೊಘಲ್ ಸಹಿತ ಎಲ್ಲಾ ಮುಸ್ಲಿಮ್ ರಾಜರು ಹಿಂದೂ ದೇವಾಲಯಗಳನ್ನು ನಾಶಗೊಳಿಸಿ ಅವುಗಳು ತಳಪಾಯವನ್ನೇ ಉಪಯೋಗಿಸಿಕೊಂಡು ಮಸೀದಿಯನ್ನು ನಿರ್ಮಿಸಿದರಲ್ಲಾ, ಅವೆಲ್ಲಾ ಅಸಹಿಷ್ಣುತೆಯಲ್ಲವೇ?
ಗುರು ಗೋವಿಂದ ಸಿಂಗರನ್ನು ಪಠಾಣ ಶಿಷ್ಯರಿಂದಲೇ ಹೊಡೆಸಿ ಕೊಂದ ವಜೀರ ಖಾನನದ್ದು, ಗುರು ತೇಜ್ ಬಹಾದ್ದೂರರ ಶಿಷ್ಯ ಭಾಯಿ ಮತಿದಾಸನನ್ನು ಎರಡು ಹಲಗೆಗಳ ನಡುವೆ ಕಟ್ಟಿ ಕದಲದಂತೆ ನಿಲ್ಲಿಸಿ ತಲೆಯಿಂದ ಸೊಂಟದವರೆಗೆ ಗರಗಸದಿಂದ ಸೀಳಿ ದೇಹವನ್ನು ಛಿದ್ರಗೊಳಿಸಿದ; ಇನ್ನಿಬ್ಬರು ಶಿಷ್ಯರನ್ನು ಕುದಿಯುವ ನೀರಿಗೂ, ಉರಿಯುವ ಬೆಂಕಿಗೂ ಎತ್ತಿ ಒಗೆದ; ಹಾಡುಹಗಲೇ ತೇಜ್ ಬಹಾದೂರರ ತಲೆಯನ್ನು ಕತ್ತರಿಸಿ ಚೆಲ್ಲಿದ; ಮರಾಠ ವೀರ ಸಂಭಾಜಿಯ ಕಣ್ಣುಗಳನ್ನು ತಿವಿದು, ನಾಲಿಗೆ ಕತ್ತರಿಸಿ, ಶರೀರದ ಅಂಗಾಂಗಗಳನ್ನು ಒಂದೊಂದಾಗಿ ಕತ್ತರಿಸಿ ಆ ಮಾಂಸವನ್ನು ನಾಯಿಗಳಿಗೆ ಹಾಕಿ ಚಿತ್ರಹಿಂಸೆ ಕೊಟ್ಟು ಕೊಂದು, ಅವನ ರುಂಡದಲ್ಲಿ ಹುಲ್ಲುತುಂಬಿ ಡೋಲು ಬಾರಿಸುತ್ತಾ ಕಹಳೆ ಊದುತ್ತಾ ದಖ್ಖನಿನ ಮುಖ್ಯ ಪಟ್ಟಣಗಳಲ್ಲಿ ಪ್ರದರ್ಶಿಸಲು ಏರ್ಪಾಟು ಮಾಡಿದ; ಗೋಲ್ಕೊಂಡಾದ ಮಂತ್ರಿಗಳಾಗಿದ್ದ ಅಕ್ಕಣ್ಣ-ಮಾದಣ್ಣರನ್ನು ಕೊಲ್ಲಿಸಿ ಅವರ ತಲೆಗಳನ್ನು ತನಗೆ ತೃಪ್ತಿಯಾಗುವಷ್ಟು ಕಾಲ ಆನೆಗಳ ಕಾಲುಗಳ ಕೆಳಗೆ ಹಾಕಿ ನುಜ್ಜುಗುಜ್ಜು ಮಾಡಿಸಿದ; ಅಸಂಖ್ಯ ದೇವಾಲಯಗಳನ್ನು, ಮತಾಮತರಕ್ಕೆ ಒಪ್ಪದ ಹಿಂದೂಗಳನ್ನು ಸರ್ವನಾಶಗೈದ ಔರಂಗಜೇಬನದ್ದು ಅಸಹಿಷ್ಣುತೆಯಲ್ಲವೇ?
ಸ್ವಾಮಿ ದಯಾನಂದ ಸರಸ್ವತಿಯವರಿಂದ ಪ್ರೇರಣೆ ಪಡೆದು ಸಂನ್ಯಾಸ ಸ್ವೀಕರಿಸಿದ್ದ ಸ್ವಾಮಿ ಶ್ರದ್ಧಾನಂದ ಓರ್ವ ಕ್ರಾಂತಿಕಾರಿ ಹಿಂದೂ ಸಂತ. ಗಾಂಧಿಯವರ ಅಸಹಕಾರ ಆಂದೋಲನದ ಮೂಲಕ ರಾಜಕೀಯ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದ್ದ ಈ ಸಂನ್ಯಾಸಿ ಜಾಮಾ ಮಸೀದಿಯ ವೇದಿಕೆಯಲ್ಲೂ ಪ್ರವಚನ ನೀಡಿದ್ದರು! ಗಾಂಧಿಯವರ ಗೊಂದಲದ ಮನಃಸ್ಥಿತಿ ಹಾಗೂ ನಿರಂಕುಶ ಸರ್ವಾಧಿಕಾರವನ್ನು ವಿರೋಧಿಸಿ ಕಾಂಗ್ರೆಸ್ಸಿನಿಂದ ಹೊರಬಂದ ಆತ ಶುದ್ಧಿ ಪ್ರಚಾರಕ್ಕೆ ಆರಂಭಿಸಿದರು. ಅವರ ಕರೆಗೆ ಓಗೊಟ್ಟು ಉತ್ತರಪ್ರದೇಶದಲ್ಲಿ ಆರು ತಿಂಗಳಲ್ಲೇ(1923) 18ಸಾವಿರ ಮತಾಂತರಿತರು ಮಾತೃಧರ್ಮಕ್ಕೆ ಮರಳಿದ್ದರು. ಇದರಂದ ಮುಸ್ಲಿಮರು ಅವರನ್ನು ಶತ್ರುವಿನಂತೆ ಕಾಣತೊಡಗಿದರು. ಕೊನೆಗೆ ಅಬ್ದುಲ್ ರಶೀದ್ ಎಂಬ ಮತಾಂಧ ನೀರು ಕೇಳುವ ನೆಪವೊಡ್ದಿ ಅವರನ್ನು ಗುಂಡಿಟ್ಟು ಕೊಂದ. ಬ್ರಿಟಿಷ್ ನ್ಯಾಯಾಲಯ ರಶೀದನನ್ನು ಗಲ್ಲಿಗೇರಿಸಿದಾಗ ಆತನಿಗೆ ಶೃದ್ಧಾಂಜಲಿ ಸಲ್ಲಿಸುವ ಮೆರವಣಿಗೆಯಲ್ಲಿ 50ಸಾವಿರಕ್ಕೂ ಹೆಚ್ಚು ಮುಸ್ಲಿಮರು ಸೇರಿದ್ದರು. ರಶೀದ್ ಹುತಾತ್ಮ ಎಂಬ ಕರಪತ್ರವನ್ನೂ ಹೊರಡಿಸಲಾಯಿತು! ಈಗ ಹೇಳಿ ಅಸಹಿಷ್ಣುಗಳು ಯಾರು?
ಈ ದೇಶದಲ್ಲಿ ಇಸ್ಲಾಮಿನ ನಿಜ ಮಾನಸಿಕತೆಯನ್ನು ಬಿಚ್ಚಿಡುವ ಎಲ್ಲಾ ಬರಹಗಳು ನಿಷೇಧಿಸಲ್ಪಡುತ್ತವೆ. ಮಹರ್ಷಿ ಅರವಿಂದರ "ದಿ ಕುರಾನ್ ಆಂಡ್ ದಿ ಕಾಫಿರ್" ನಿಷೇಧಿಸಲ್ಪಟ್ಟಿತು. ರಿಚರ್ಡ್ ಮ್ಯಾಕ್ಸ್ ವೆಲ್ರ "ಸೂಫಿಸ್ ಆಫ್ ಬಿಜಾಪುರ"ಕ್ಕೂ ಅದೇ ಗತಿಯಾಯಿತು. ಪಂಡಿತ ಚಂಪೂಪತಿ ಬರೆದ ರಂಗೀಲಾ ರಸೂಲ್, ಮ್ಯಾಕ್ಸ್ ವೈಲಿಯ ಹಿಂದೂ ಹೆವೆನ್, ಅರ್ಲಿ ಇಸ್ಲಾಮ್, ರಶ್ದಿಯ ಸಟಾನಿಕ್ ವರ್ಸಸ್, ರಾಮಸ್ವರೂಪರ "ಅಂಡರ್ಸ್ಟ್ಯಾಂಡಿಗ್ ಇಸ್ಲಾಮ್ ಥ್ರೋ ಹದೀಸ್", ದಿ ಟ್ರೂ ಫರ್ಕಾನ್, ಸತ್ಯಾರ್ಥ ಪ್ರಕಾಶ್(ಸಿಂಧ್ ನಲ್ಲಿ), ತಸ್ಲಿಮಾ ನಸ್ರೀನರ ದ್ವಿಖಂಡಿತೋ...ಇನ್ನೆಷ್ಟೋ ನಿಷೇಧಿಸಲ್ಪಡುವಾಗ ಅಸಹಿಷ್ಣುತೆ ಕಣ್ಣು ಮುಚ್ಚಿ ಕುಳಿತಿತ್ತೇ?ಅಸಹಿಷ್ಣುಗಳ ಕ್ರೌರ್ಯಕ್ಕೆ ಕಾಶ್ಮೀರ ಪಂಡಿತರು ಎಂಬ ಜನಾಂಗವೇ ಅಳಿಯುವಂತಹ ಸ್ಥಿತಿಗೆ ತಲುಪಿತು. ಇವೇ ಅಸಹಿಷ್ಣುಗಳು ಗೋಧ್ರಾದಲ್ಲಿ ಕರಸೇವಕರನ್ನು ಸುಟ್ಟು ಕೊಂದರು. 2013ರ ಮುಜಾಫುರ ನಗರ ದಂಗೆಗೆ ಕಾರಣವಾದದ್ದೂ ಈ ಅಸಹಿಷ್ಣುತೆಯೇ.
ಇದೆಲ್ಲವೂ ಇತಿಹಾಸ. ಈಗ ಹಾಗೇನಾಗಿದೆ ಎಂದಿದ್ದರೆ ನಿಮ್ಮ ಊಹೆ ತಪ್ಪು. ಇವೇ ಅಸಹಿಷ್ಣುಗಳ ಉಪಟಳದಿಂದ ಕೈರಾನದಲ್ಲಿ ಹಿಂದೂಗಳು ಊರನ್ನೇ ತೊರೆದು ಹೊರಟರು(2016). ತಮ್ಮ ಮತಾಂತರ ಕಾರ್ಯಕ್ಕೆ ತಡೆಯೊಡ್ಡಿದ ಎಂಬ ಒಂದೇ ಕಾರಣಕ್ಕೆ ರಾಮಲಿಂಗಮರನ್ನು ಬಡಿದು ಕೊಂದರು(2019). ತನ್ನ ಮಗಳನ್ನು ಚುಡಾಯಿಸಿದ್ದನ್ನು ಆಕ್ಷೇಪಿಸಿದ ಧ್ರುವ ತ್ಯಾಗಿಯನ್ನು ಸಿಗಿದು ಹಾಕಿದರು(ಮೇ 2019). ಉತ್ತರಪ್ರದೇಶದ ಔರೈಯಾದಲ್ಲಿ ಗೋಹತ್ಯೆಯನ್ನು ವಿರೋಧಿಸಿದ ಮೂವರು ಸಾಧುಗಳ ಹಲಾಲ್ ಮಾಡಿ ಶಿವದೇಗುಲದ ಕಲ್ಯಾಣಿಗೆ ಎಸೆದರು(ಆಗಸ್ಟ್ 2018). ಚಾಂದನೀ ಚೌಕದಲ್ಲಿ ದೇವಾಲಯವನ್ನೇ ಕೆಡವಿದರು. ಆಳ್ವಾರ್ನಲ್ಲಿ ಗೋಹಂತಕರನ್ನು ಎದುರಿಸಿದ ರತನ್ ಸಿಂಗರನ್ನು ಹತ್ಯೆಗೈದರು. ಮುಸ್ಲಿಮ್ ಹುಡುಗಿಯನ್ನು ಮದುವೆಯಾದ ಕಾರಣಕ್ಕೆ ಸಂಜಯ್ ಕುಮಾರ್ ಕೊಲ್ಲಲ್ಪಟ್ಟ(2019). ಖಾಯಲಾದ ಪರಿವಾರ, ಮಹಾರಾಷ್ಟ್ರದಲ್ಲಿ ಕಾನ್ಸ್ಟೇಬಲ್, ದೆಹಲಿಯ ದಂತವೈದ್ಯ, ಖುರ್ಷಿದಾಪುರದ ರೈತ...ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇದೆಲ್ಲಕ್ಕೂ ಕಾರಣ ತಮ್ಮ ಅಕ್ರಮ ಚಟುವಟಿಕೆಗಳಾದ ಗೋಹತ್ಯೆ, ಮಾದಕದ್ರವ್ಯ ಮಾರಾಟ, ಅತ್ಯಾಚಾರ, ಮತಾಂತರಕ್ಕೆ ಅಡ್ಡಿಯಾದರು ಎಂಬ ಕಾರಣಗಳೇ ಆಗಿದ್ದರೂ ಮೂಲ ಕಾರಣ ಅಸಹಿಷ್ಣುತೆ, ಅಸಹನೆ, ಮತಾಂಧತೆಯೇ! ಇನ್ನೂ ಈ ವರ್ಷ ಕೇಳಿ ಬಂದ ಅತ್ಯಾಚಾರ, ಲವ್ ಜಿಹಾದ್ ಪ್ರಕರಣಗಳಂತೂ ದಂಗುಬಡಿಸುವಂತಹದ್ದು. ಸಾಲ ಕೊಟ್ಟ ಹತ್ತು ಸಾವಿರ ರೂಪಾಯಿಯನ್ನು ಮರಳಿಸುವಂತೆ ಕೇಳಿಕೊಂಡದ್ದಕ್ಕೆ ಮೂರು ವರ್ಷದ ಮಗಳ ಮೇಲೆ ಅತ್ಯಾಚಾರ, 71 ವರ್ಷದ ದಾದಿಯ ಮೇಲೆ ಅತ್ಯಾಚಾರ, ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ ಮದ್ರಸಾದಲ್ಲಿ ಅತ್ಯಾಚಾರ, ದಲಿತ ಹುಡುಗಿಯನ್ನು ಅಪಹರಣ ಮಾಡಿ ಮತಾಂತರಿಸಿ ಅತ್ಯಾಚಾರ...ಹೀಗೆ ಮುಗಿಯಲೊಲ್ಲದ ಘಟನೆಗಳು.
ಈ ಎಲ್ಲಾ ಘಟನೆಗಳು ನಿಜವಾದ ಅಸಹಿಷ್ಣುಗಳು ಯಾರು, ಅಸಹನೆ ಯಾವ ದಿಕ್ಕಿನಿಂದ ಇದೆ, ಮತಾಂಧತೆ ಯಾರದ್ದು, "ಮಾಬ್ ಲಿಂಚಿಂಗ್" ಮಾಡುವವರು ಯಾರು ಎನ್ನುವುದನ್ನು ಮಾತ್ರವಲ್ಲ ಜಾತ್ಯಾತೀತರ ಮಹಾಸುಳ್ಳುಗಳನ್ನೂ ಎತ್ತಿ ತೋರಿಸುತ್ತವೆ. ದೇಶದಲ್ಲಿ ಪದೇ ಪದೇ ಸಂಘ ಕಾರ್ಯಕರ್ತರ ಕೊಲೆಯಾಗುತ್ತಿದ್ದರೂ ಅಸಹಿಷ್ಣುತಾ ಬ್ರಿಗೇಡಿಗೆ ಆಗ ಅಸಹಿಷ್ಣುತೆಯ ನೆನಪಾಗುವುದಿಲ್ಲ. ಹೇಗೆ ಪೆಟಾ(PETA)ಕ್ಕೆ ಗೋವುಗಳು ಪ್ರಾಣಿಗಳು ಅಂತ ಅನ್ನಿಸುವುದಿಲ್ಲವೋ ಹಾಗೆಯೇ ಮಾನವ ಹಕ್ಕು ಆಯೋಗಕ್ಕೆ ಸಂಘದ ಕಾರ್ಯಕರ್ತರು ಮಾನವರೆಂದು ಅನ್ನಿಸುವುದೇ ಇಲ್ಲ! ಜಾತ್ಯಾತೀತರು ಎಂದು ಹೇಳಿಕೊಳ್ಳುವವರೆಲ್ಲಾ ಈ ಬಗೆಯ ಎಲ್ಲಾ ಘಟನೆಗಳು ನಡೆದಾಗ ಮುಗುಮ್ಮಾಗುಳಿಯುತ್ತಾರೆ. ಮತಾಂಧರ ಆಟಾಟೋಪಗಳಿಗೆ ಇವರದ್ದು ದಿವ್ಯ ಮೌನ. ಅದೇ ಹಿಂದೂಗಳ ತಪ್ಪಿರದಿದ್ದಾಗ್ಯೂ ಆ ಘಟನೆಯನ್ನು ವೈಭವೀಕರಿಸಿ ಅಸಹಿಷ್ಣುತೆ ಎಂದು ಬೊಬ್ಬಿರಿದು ದೇಶದ ಮಾನವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹರಾಜು ಹಾಕುತ್ತಾರೆ. ಹಿಂದೂಗಳನ್ನು ಸಹಿಸದ ಜಾತ್ಯಾತೀತರ ಈ ಮನಃಸ್ಥಿತಿಯೂ ಅಸಹಿಷ್ಣುತೆಯಡಿಯಲ್ಲಿ ಬರುವುದಿಲ್ಲವೇ? ಮೋದಿ ಸರಕಾರವಿದ್ದರೂ ಈ ಘಟನೆಗಳು ನಡೆದವೇ? ಅಪರಾಧಿಗಳಿಗೆ ಶಿಕ್ಷೆಯಾಗಲಿಲ್ಲವೇ? ಮೋದಿ ಸರಕಾರ ಕಾನೂನಿನಂತೆ ನಡೆದುಕೊಂಡಿದೆ. ಅಪರಾಧಿಗಳಿಗೆ ಶಿಕ್ಷೆಯೂ ಆಗಿದೆ. ಆದರೆ ಅಪರಾಧಗೈಯುವವರಿಗೆ ಕಾನೂನಿನ ಭಯ ಎಂಬುದಾದರೂ ಇರಬೇಕಲ್ಲವೇ? ಯಾಕಿಲ್ಲ? ನಮ್ಮ ನ್ಯಾಯಾಲಯಗಳು ಕೊಡುವ ತೀರ್ಪು ಅಂತಿದೆ! ಇಲ್ಲಿ ಮುಸ್ಲಿಮರ ಮತಾಂಧತೆಯನ್ನು ಎತ್ತಿ ತೋರಿಸಿದವರಿಗೇ ಶಿಕ್ಷೆ ವಿಧಿಸಿ, ಕುರಾನ್ ಹಂಚಿ ಎನ್ನುವ ತೀರ್ಪು ಕೊಡುವ ಮನಃಸ್ಥಿತಿಯ ನ್ಯಾಯಾಧೀಶರೇ ತುಂಬಿರುವಾಗ ಮತಾಂಧರಿಗೆ ಏತರ ಭಯ? ನ್ಯಾಯಾಲಯವೂ ಹಿಂದೂಗಳನ್ನು ಸಹಿಸುವುದಿಲ್ಲವೇ? ಅದಕ್ಕೂ ಅಸಹಿಷ್ಣುತೆಯ ಮನಃಸ್ಥಿತಿ ಅಂಟಿಕೊಂಡಿದೆಯೇ? ಏನೋ! ಈ ಜಾತ್ಯಾತೀತ ರೋಗಕ್ಕೂ ಅಸಹಿಷ್ಣು ಮನಃಸ್ಥಿತಿಗೂ ತುಂಬಾ ಹತ್ತಿರದ ಬಂಧುತ್ವವಂತೂ ಎದ್ದು ಕಾಣುತ್ತಿದೆ! ಕೃಣ್ವಂತೋ ವಿಶ್ವಮಾರ್ಯಮ್ ಎಂದ ಹಿಂದೂ ಎಂದಾದರೂ ಅಸಹಿಷ್ಣುವಾಗಲು ಸಾಧ್ಯವಿದೆಯೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ