ಪುಟಗಳು

ಗುರುವಾರ, ಸೆಪ್ಟೆಂಬರ್ 22, 2016

ಯಾರು ಮಹಾತ್ಮ? ಭಾಗ- ೫

ಯಾರು ಮಹಾತ್ಮ? 

ಭಾಗ- ೫


               1942ರ ಆಗಸ್ಟ್ 8ರಂದು ಮಧ್ಯರಾತ್ರಿ ಬಾಂಬೆ ಮೀಟಿಂಗ್ ಹಾಲಿನಲ್ಲಿ ಒಂದಷ್ಟು ಜನ ಒಟ್ಟು ಸೇರಿದ್ದರು. ಎಂದಿನ ಶೈಲಿಯಲ್ಲಿ ತುಂಡು ಬಟ್ಟೆ ತೊಟ್ಟು ಬಂದ ಫಕೀರನೊಬ್ಬ ಉದ್ರಿಕ್ತಗೊಂಡು ಭಾಷಣ ಮಾಡಲಾರಂಭಿಸಿದ. "ಈ ಕ್ಷಣವೇ ನನಗೆ ಸ್ವಾತಂತ್ರ್ಯ ಬೇಕು. ಇಂದೇ ಈ ರಾತ್ರಿಯೇ. ಸಾಧ್ಯವಾದರೆ ರಾತ್ರಿ ಕಳೆದು ಬೆಳಗಾಗುವುದರ ಒಳಗೆಯೇ" ಎಂದು ಘೋಷಣೆ ಮಾಡಿಬಿಟ್ಟ. ಬೆಂಬಲಿಗರು ಉಘೇ ಉಘೇ ಎಂದರು. "ಇಲ್ಲೊಂದು ಸಂಕ್ಷಿಪ್ತ ಮಂತ್ರವಿದೆ. ಮಾಡು ಇಲ್ಲವೇ ಮಡಿ. ನಾವು ಭಾರತವನ್ನು ಸ್ವತಂತ್ರಗೊಳಿಸಬೇಕು. ಇಲ್ಲವಾದಲ್ಲಿ ಈ ಪ್ರಯತ್ನದಲ್ಲಿ ಪ್ರಾಣಾರ್ಪಣೆ ಮಾಡಬೇಕು. ನಮ್ಮ ಗುಲಾಮಗಿರಿ ದೀರ್ಘಕಾಲದವರೆಗೆ ಮುಂದುವರಿಯುವುದನ್ನು ನೋಡಲು ನಾವು ಇರಬಾರದು." ಬೆಳಗಾಗುವುದರೊಳಗೆ ಆತ ಪಡೆದದ್ದು ಸ್ವಾತಂತ್ರ್ಯವಲ್ಲ ಬದಲಿಗೆ ಬ್ರಿಟಿಷ್ ಕಾರಾಗ್ರಹಕ್ಕೆ ಮತ್ತೊಂದು ಆಮಂತ್ರಣ! ಆತ ಬೇರಾರು ಅಲ್ಲ ಮೋಹನದಾಸ ಕರಮಚಂದ ಗಾಂಧಿ!


                 ಹೀಗೆ "ಮಾಡು ಇಲ್ಲವೇ ಮಡಿ" ಹೋರಾಟಕ್ಕೆ "ಮಾಡುವುದೇನು" ಎನ್ನುವುದರ ಸ್ಪಷ್ಟತೆಯೇ ಇರಲಿಲ್ಲ. ಈಗ ಪ್ರಚಾರಕ್ಕೋಸ್ಕರ ಕೆಲ ಸಂಘಟನೆಗಳು ಮಾಡುವ ಪ್ರತಿಭಟನೆ-ಮುಷ್ಕರಗಳಂತೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ! ಯಾರು, ಏನು, ಎಲ್ಲಿ, ಎತ್ತ ಎನ್ನುವ ಸಂಬಂಧವೇ ಇಲ್ಲದೇ ಮಾತು ಓತಪ್ರೋತವಾಗಿ ಹರಿದಿತ್ತು. ಜನ ಗುಂಪಿನಲ್ಲಿ ಗೋವಿಂದ ಎಂದಿದ್ದರು. ಯಾವುದೇ ರೂಪುರೇಷೆಗಳಿಲ್ಲದೆ ಪರಿಣಾಮದ ಸ್ಪಷ್ಟತೆಯೂ ಇಲ್ಲದೆ ಸುಸಜ್ಜಿತ ಸಂಘಟನೆಯೂ ಇಲ್ಲದೆ ಘೋಷಣೆ ಮಾಡಿಯಾಗಿತ್ತು. ಬ್ರಿಟಿಷರು ಎಗರಾಡಿದವರನ್ನು ಜೈಲಿಗೆ ತಳ್ಳಿ ಮೂರೇ ವಾರಗಳಲ್ಲಿ ಪರಿಸ್ಥಿತಿಯನ್ನು ತಮ್ಮ ಹತೋಟಿಗೆ ತಂದುಕೊಂಡರು. ಈ ನಡುವೆ ಗಾಂಧಿಯ ತಂತ್ರವನ್ನೇ ಉಪಯೋಗಿಸಿಕೊಂಡು ಆಟವಾಡಿದ ಮುಸ್ಲಿಂ ಲೀಗ್ ಮಹಾಯುದ್ಧದಲ್ಲಿ ಬ್ರಿಟಿಷರ ಜೊತೆ ಸೇರಿ ತನಗೆ ಬೇಕಾದುದನ್ನು ಪಡೆದುಕೊಂಡಿತು!


              "ಕೊಲ್ಲುವುದು ಹಿಂಸೆ, ಕೊಲ್ಲಲ್ಪಡುವುದು ಅಹಿಂಸೆ" ಇದೇ ಗಾಂಧಿಯ ಅಹಿಂಸಾ ಸಿದ್ಧಾಂತ. ಹಿಂದೂಗಳು ಮುಸ್ಲಿಮರನ್ನು ಕೊಲ್ಲುವುದು ಹಿಂಸೆ. ಅದೇ, ಹಿಂದೂಗಳು ಮುಸ್ಲಿಮರಿಂದ ಹತ್ಯೆಗೀಡಾದರೆ ಅದು ಅಹಿಂಸೆ. ಗಾಂಧಿ ಬಣ್ಣಿಸಿದ್ದೇ ಹಾಗೆ... "ಹಿಂದೂಗಳು ಪುಕ್ಕಲರು, ಮುಸ್ಲಿಮರು ಭಯಪಡಿಸುವವರು". ನಿಜವಾದ ಅಹಿಂಸೆಯನ್ನು ಸಾಧಿಸಿದವನ ಎದುರಲ್ಲಿ ಹುಲಿ ಮತ್ತು ಆಡು ಪರಸ್ಪರ ಸ್ನೇಹದಿಂದ ಬಾಳುತ್ತವೆ. ವಾಲ್ಮೀಕಿ ಮಹರ್ಷಿಯ ಆಶ್ರಮದಲ್ಲಿ ವ್ಯಾಘ್ರ-ಅಜಗಳೆರಡು ಪರಸ್ಪರರ ಜೊತೆ ಆಡುತ್ತಿದ್ದವಂತೆ. ಭಗವಾನ್ ರಮಣ ಮಹರ್ಷಿಗಳ ಆಶ್ರಮದಲ್ಲಿ ಹಾವು ಹೆಡೆಯೆತ್ತಿ ನರ್ತಿಸುವಾಗ ನವಿಲು ತನ್ನ ತುರಾಯಿ ಪ್ರದರ್ಶಿಸುತ್ತಾ ಆಡುತ್ತಿತ್ತು. ಅಹಿಂಸೆಯ ಶಕ್ತಿ ಅದು.  "ನಿಜವಾದ ಅಹಿಂಸಾ ಸಾಧಕನ ಶಕ್ತಿ ಅದು!" ಆದರೆ ಗಾಂಧಿ ತನ್ನವರಿಗೆ ಅಹಿಂಸೆಯನ್ನು ಬೋಧಿಸುತ್ತಾ ಇದ್ದಾಗಲೇ ಅವರ ಕಣ್ಣೆದುರೇ ಸಾವಿರಾರು ಹಿಂದೂಗಳು ಮುಸ್ಲಿಮರಿಂದ ಹತರಾದರು. ಅದನ್ನು ನೋಡಿಯೂ ಗಾಂಧಿ ತನ್ನ ಅರ್ಥಹೀನ ಅಹಿಂಸೆಯನ್ನು ಬೋಧಿಸುತ್ತಾ ಕುಳಿತರು. ಅಹಿಂಸಾ ವ್ಯಕ್ತಿಗಳ ಸಾನ್ನಿಧ್ಯದಲ್ಲಿ ಹಿಂಸೆ ಮರೆತು ಅಹಿಂಸೆಯೇ ನೆಲೆಯಾಗುತ್ತದೆ ಆದರೆ ಗಾಂಧಿ ಎನ್ನುವ ಅಹಿಂಸಾ ಸಾಧಕನ(?) ಎದುರು ಹಾಗಾಗಲಿಲ್ಲ. ಎರಡರಲ್ಲಿ ಒಂದು ಮಾತ್ರ ಸತ್ಯವಾಗಲು ಸಾಧ್ಯ. ಮೊದಲನೆಯದಕ್ಕೆ ಸಹಸ್ರ ಸಹಸ್ರ ನಿದರ್ಶನಗಳಿದ್ದು, ಅದನ್ನು ಜಗತ್ತೇ ಒಪ್ಪಿಕೊಂಡಿದೆ. ಹಾಗಾದರೆ ಗಾಂಧಿಯ ಅಹಿಂಸೆ ಎನ್ನುವುದರಲ್ಲೇ ಏನೋ ದೋಷವಿರಲೇಬೇಕು. ಗ್ ಈ ಎರಡು ರೀತಿಯ ಅಹಿಂಸೆಗಳಲ್ಲಿನ ವ್ಯತ್ಯಾಸವನ್ನು ಅರಿತವರಿಗೆ ಗಾಂಧಿಯ ಅಹಿಂಸೆ ಎಷ್ಟು ಟೊಳ್ಳು ಎನ್ನುವುದು ಅರ್ಥವಾದೀತು. ಹಾಗೆಯೇ ಗಾಂಧಿಯನ್ನು ಅಹಿಂಸಾಸಾಧಕ, ಅವರ ಅಹಿಂಸೆಯಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂದಿತೆಂದು ದೊಡ್ಡ ಗಂಟಲಲ್ಲಿ ಅರಚಾಡುವ ಪ್ರತಿಯೊಬ್ಬ ಗಾಂಧಿವಾದಿಯೂ ಅಹಿಂಸೆ ಎಂದರೇನೆಂದು ಪ್ರಥಮತಃ ಅರಿತುಕೊಳ್ಳುವುದು ಐತಿಹಾಸಿಕ-ಸಾಮಾಜಿಕ ದೃಷ್ಟಿಯಿಂದ ಬಹಳ ಒಳ್ಳೆಯದು. ಕಣ್ಣೆದುರಿನಲ್ಲೇ ಅಸಂಖ್ಯ ಹಿಂದೂಗಳು ಮುಸ್ಲಿಮರಿಂದ ಹತ್ಯೆಗೊಳಗಾದರು ಎನ್ನುವುದರಲ್ಲೇ ಗಾಂಧಿಯ ಅಹಿಂಸೆ ಕೇವಲ ಬಹಿರಂಗ ಪ್ರತಿಪಾದನೆಯಷ್ಟೇ, ಆಂತರಂಗಿಕವಾಗಿ ಅವರು ಆಚರಿಸಿದ್ದು ಹಿಂಸೆಯನ್ನೇ ಎನ್ನುವುದು ವೇದ್ಯವಾಗುತ್ತದೆ. ಮನಸ್ಸಿನಲ್ಲಿ ಹಿಂಸೆಯ ವಿಚಾರಗಳನ್ನು ತುಂಬಿಕೊಂಡು ಗಾಂಧಿ ಅಹಿಂಸೆಯನ್ನು ಮುಖವಾಡವಾಗಿ, ರಾಜಕೀಯ ತಂತ್ರಗಾರಿಕೆಯಾಗಿ, ಆಯುಧವಾಗಿ ಬಳಸಿದರು. ಹೀಗೆ ಅವರ ಅಹಿಂಸಾ ಪ್ರತಿಜ್ಞೆಯು ಮಿಥ್ಯೆಯ ಪ್ರಮಾಣವಾಗಿ, ಆಷಾಢಭೂತಿಯ ಸ್ಲೋಗನ್ ಆಗಿ, "ರಾಷ್ಟ್ರ"ಕ್ಕೆ ಮೋಸವಾಗಿ ಮತ್ತು ಸ್ವಯಂವಂಚನೆಯಾಗಿ ಮಾರ್ಪಟ್ಟಿತು. ಇಂತಹ ವ್ಯಕ್ತಿ ಮಹಾತ್ಮ ಹೇಗಾಗುತ್ತಾರೆ?

               ಗಾಂಧಿ ಹಿಂದೂಗಳನ್ನು ದುರ್ಬಲಗೊಳಿಸುತ್ತಾ, ಮುಸ್ಲಿಮರು ನಮ್ಮವರನ್ನು ಕೊಲ್ಲುತ್ತಿದ್ದಾಗಲೂ ಸುಮ್ಮನೆ ಸಹಿಸಿಕೊಳ್ಳಿ ಎಂದು ಹೇಳಿದುದನ್ನೇ "ಅಹಿಂಸೆ" ಎಂದು ಈ ದೇಶದಲ್ಲಿ ಇಂದಿಗೂ ನಂಬಲಾಗುತ್ತದೆ. ಈ ದೇಶದಲ್ಲಿ ಸೆಕ್ಯುಲರ್ ಎನ್ನುವ ಪದ ಬಂದದ್ದೂ, ಈಗ ಬಳಕೆಯಾಗುತ್ತಿರುವುದೂ ಹಾಗೆಯೇ! ಪ್ರತಿಯೊಂದು ಭಯೋತ್ಪಾದನಾ ದಾಳಿ ನಡೆದಾಗಲೂ ಭಯೋತ್ಪಾದಕರಿಗೆ ಧರ್ಮವಿಲ್ಲ ಎನ್ನುವ ವ್ಯರ್ಥಾಲಾಪವೂ ಈ ಅರೆಬೆಂದ ಅಹಿಂಸೆಯ ಫಲವೇ! ಹಿಂಸೆಯನ್ನು ಅಹಿಂಸೆ ಎಂದು ಪ್ರತಿಪಾದಿಸುದುದರಲ್ಲೇ ಗಾಂಧಿಗೆ ಅಹಿಂಸೆಯ ಬಗ್ಗೆ ಇದ್ದ ಪ್ರಾಥಮಿಕ ತಿಳುವಳಿಕೆಯ ದೋಷ ಎದ್ದು ಕಾಣುತ್ತದೆ. ಯೋಗವಿದ್ಯಾಚಾರ್ಯ ಪಂಚಶಿಕು ಅಹಿಂಸೆಯನ್ನು ಹೀಗೆ ವ್ಯಾಖ್ಯಾನಿಸುತ್ತಾನೆ...
"ಯಥಾ ಯಥಾ ವ್ರತಾನಿ ಬಹೂನಿ ಸಮಾಧಿತ್ಸತೆ
ತಥಾ ತಥಾ ಕೃತಭ್ಯೋ ಹಿಂಸಾ ನಿದಾನೇಭ್ಯೋ ನಿವರ್ತಮಾನ
ಸ್ತಮೇವ ಅವದತರೂಪಾಂ ಅಹಿಂಸಾ ಕರೋತಿ"
- ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅನೇಕ ವ್ರತಗಳು/ಪ್ರಗತಿಯ ಒಂದೊಂದೇ ಹೆಜ್ಜೆಗಳನ್ನಿಡುತ್ತಾರೆ. ಆ ಆಚರಣೆಯ ಹಾದಿಯಲ್ಲಿ ಹಿಂಸೆಯ ಕಾರಣೋತ್ಪಾದಕ ಕೆಲಸಗಳನ್ನು ತ್ಯಜಿಸುತ್ತಾರೆ. ಮತ್ತು ಪರಿಪೂರ್ಣ ಅಹಿಂಸೆಯನ್ನು ಆಚರಿಸುತ್ತಾರೆ. ಅಹಿಂಸೆಯ ಆಚರಣೆ ಪ್ರತಿಯೊಬ್ಬನೂ ತನ್ನಲ್ಲೇ ತಾನು ಮಾಡಿಕೊಳ್ಳಬೇಕಾದ ಪರಿವರ್ತನೆ! ರಾಮಕೃಷ್ಣ ಪರಮಹಂಸರು ತಾನು ಇತರರಿಗೆ ಬೋಧಿಸುವ ಮುಂಚೆ ಅದೆಷ್ಟೇ ಸಣ್ಣ ವಿಷಯವಾಗಿರಲಿ ಅದನ್ನು ತಾನು ಮೊದಲು ಅಳವಡಿಸಿಳ್ಳುತ್ತಿದ್ದರು. ಮಹಾತ್ಮರೆಂದರೆ ಹಾಗೆ. ಆದರೆ ಗಾಂಧಿ ತಾನೇ ಸರಿಯಾಗಿ ಪಾಲಿಸದ ತನ್ನ ಅರೆಬೆಂದ ಅಹಿಂಸೆಯನ್ನು ಇತರರಿಗೆ ಮೊದಲು ಬೋಧಿಸುತ್ತಿದ್ದರು! ತನ್ನೆಲ್ಲೇ ಪರಿವರ್ತನೆ ಆಗದೆ ಇತರರಿಗೆ ಬೋಧನೆ! ಯಾವ ಸೀಮೆಯ ಮಹಾತ್ಮ? ಬ್ರಿಟಿಷರು ಭಾರತವನ್ನು ಯುಕ್ತಿಯಿಂದ ವಶಪಡಿಸಿಕೊಂಡು ಖಡ್ಗದ ಬಲದಿಂದ ಆಳಿದರು. ಅಂತಹವರನ್ನು ಅದೇ ಬಗೆಯ ಯುಕ್ತಿ-ಸಾಹಸಗಳಿಂದ ನಿವಾರಿಸಬೇಕಲ್ಲದೆ ಅಹಿಂಸೆಯ ಮೂರ್ಖವಿಚಾರದಿಂದಲೇ? ಹಿಂಸೆಯನ್ನೇ ಮೈಗೂಡಿಸಿಕೊಂಡ ನರಾಧಮರ ಎದುರು ಅಹಿಂಸೆ ಫಲಕಾರಿಯಾಗಬೇಕಾದರೆ ಆತ ಭಗವಾನ್ ರಮಣರಂತೆ, ಪ್ರಾಚೀನ ಋಷಿಮುನಿಗಳಂತೆ ನಿಜವಾದ ಅಹಿಂಸಾ ಸಾಧಕನಾಗಿರಬೇಕು.

              ಒಂದು ಗಣದ ಸೇನಾ ಮುಖ್ಯಸ್ಥನೊಬ್ಬ ಬುದ್ಧನ ಶಿಷ್ಯನಾಗಲು ದೀಕ್ಷೆ ಸ್ವೀಕರಿಸಬಯಸಿ ಬಂದ. ನೀನು ಯಾವ ಕಾರಣಕ್ಕೆ ನೀನು ಭಿಕ್ಷುವಾಗಲು ಬಯಸಿದ್ದೀಯೇ ಎಂದು ಬುದ್ಧ ಆತನನ್ನು ಪ್ರಶ್ನಿಸಿದ್ದ. ಆಗ ಆತ " ಶತ್ರುಗಳು ನಮ್ಮ ರಾಜ್ಯದ ಮೇಲೆ ದಂಡೆತ್ತಿ ಬಂದಿದ್ದಾರೆ. ನಾನೀಗ ನಮ್ಮ ಸೈನ್ಯವನ್ನು ಮುನ್ನಡೆಸಬೇಕಾಗಿದೆ. ಆದರೆ ಯುದ್ಧದಿಂದ ಎರಡೂ ಪಕ್ಷದಲ್ಲಿ ರಕ್ತಪಾತ ಮತ್ತು ಹಿಂಸೆ ಉಂಟಾಗುತ್ತದೆ. ಅದು ಪಾಪದ ಕೆಲಸ ಎಂದು ನನಗನಿಸುತ್ತದೆ. ಹೀಗಾಗಿ ನಾನು ನನ್ನ ಜವಾಬ್ದಾರಿ ತ್ಯಜಿಸಿ ನಿಮ್ಮ ರೀತಿ ಶಾಂತಿ-ಅಹಿಂಸೆಯ ಹಾದಿಯಲ್ಲಿ ಸಾಗಲು ಬಯಸಿ ಬಂದಿದ್ದೇನೆ" ಎಂದ. ಬುದ್ಧ ಆತನನ್ನು ಸಮಾಧಾನಪಡಿಸುತ್ತಾ ಹೇಳುತ್ತಾನೆ, "ನೀನು ಇಲ್ಲಿಗೆ ಬಂದೆ ಎನ್ನುವ ಕಾರಣಕ್ಕೆ ಶತ್ರುಗಳು ತಮ್ಮ ಆಕ್ರಮಣವನ್ನೇನೂ ನಿಲ್ಲಿಸುವುದಿಲ್ಲ. ಒಂದು ವೇಳೆ ಮುಗ್ಧ ಜನರನ್ನು ರಕ್ಷಿಸುವ ಹೊಣೆಗಾರಿಕೆಯನ್ನು ನೀನು ತ್ಯಜಿಸಿದ್ದೇ ಆದರೆ ಆ ಹಿಂಸೆಯ ಪಾಪವೆಲ್ಲಾ ನಿನ್ನ ತಲೆಗೇ ಸುತ್ತಿಕೊಳ್ಳುತ್ತದೆ. ಸಜ್ಜನರು ಹಾಗೂ ಪ್ರಾಮಾಣಿಕ ಜನರನ್ನು ಕಾಪಾಡುವುದೇ ಧರ್ಮ. ಹಾಗಾಗಿ ಹಿಂತಿರುಗಿ ಹೋಗಿ ನಿನ್ನ ಹೊಣೆಗಾರಿಕೆಯನ್ನು ನಿಭಾಯಿಸು". ಬುದ್ಧನ ಅಹಿಂಸೆ ಇದು! ಬುದ್ಧ ಇಲ್ಲಿ ಎರಡು ಅಂಶವನ್ನು ಎತ್ತಿ ಹಿಡಿಯುತ್ತಾನೆ. ಒಂದು ನಾಯಕನಾದವ ಹೇಗಿರಬೇಕು, ಅವನ ಕರ್ತವ್ಯಗಳೇನು ಎನ್ನುವುದು; ಎರಡನೆಯದ್ದು ನೈಜ ಅಹಿಂಸೆ ಎಂದರೆ ಹೇಗಿರಬೇಕು ಎನ್ನುವುದು. ಗಾಂಧಿಯ ಅಹಿಂಸೆಗೂ  ಬುದ್ಧನ ಅಹಿಂಸೆಗೂ ಅಜಗಜಾಂತರ!

ಸೋಮವಾರ, ಸೆಪ್ಟೆಂಬರ್ 19, 2016

ಮಥನ

ಹಾಲ್ಗಡಲಲ್ಲಿರುವಾಗ ಹಾಲಾಹಲಕ್ಕೆ ತಾನು ವಿಷ ಎಂದು ತಿಳಿದಿರುವುದಿಲ್ಲ. ಅಮೃತಕ್ಕೂ ತಾನಾರೆಂಬುದರ ಅರಿವಿರುವುದಿಲ್ಲ. ಮಥನವಾದಾಗಲೇ ಅದು ಅಮೃತವೋ ವಿಷವೋ ತಿಳಿದು ಬರುವುದು!
ಅದಕ್ಕೇ ಏಕವಾಗಿದ್ದರೇನೆ ಒಳ್ಳೆಯದು.
ಅನೇಕವಾದಾಗ ಅಸ್ತಿತ್ವದ ಪ್ರಶ್ನೆ!
ಅಮೃತವಾಗಲು ಪ್ರಯತ್ನಿಸುವುದು ಲೋಕಕ್ಕೇ ಕ್ಷೇಮ!

ಜಗತ್ತಿನ ಸತ್ಯ

ರಾಮ, ಕೃಷ್ಣರು ಮಣ್ಣಿನಲ್ಲಿ ಆಡುತ್ತಿದ್ದರು.
ಮಣ್ಣನ್ನೇ ಸೃಷ್ಟಿಸಿದವನದ್ದು ಮಣ್ಣನ್ನೇ ಹೊತ್ತುಕೊಂಡಿರುವವನ ಜೊತೆ ಸೇರಿ ಮಣ್ಣಿನಲ್ಲೇ ಆಟ!
ಇಂದಿನ ಪೀಳಿಗೆಗೆ ಮಣ್ಣೆಂದರೇನೆಂದೇ ಗೊತ್ತಿಲ್ಲದ ಸ್ಥಿತಿ! ಇನ್ನು ಆಟವೆಲ್ಲಿಂದ ಬಂತು!
ಮಣ್ಣು ಶ್ಯಾಮನ ಬಾಯ ಸೇರಿತು.
ರಾಮ ಬಂದು ಅಮ್ಮನಲ್ಲಿ ದೂರಿದ. "ಅಮ್ಮಾ...ಕಣ್ಣ ಮಣ್ಣ ತಿಂದ".
ತಾಯಿ ಬಂದು ಗದರಿದಳು.
"ಇಲ್ಲಮ್ಮಾ...ಅಣ್ಣ ಸುಳ್ಳು ಹೇಳುತ್ತಿದ್ದಾನೆ"
"ಹೌದೇ ಸತ್ಯ ಏನೆಂದು ನಾನೇ ಕಾಣುತ್ತೇನೆ. ಎಲ್ಲಿ ಬಾಯಿ ತೆರೆ"
ಕೃಷ್ಣ ಬಾಯಿ ತೆರೆದ. ಅಷ್ಟೇ...ಯಶೋದೆಯ ತೆರೆದ ಬಾಯಿ ತೆರೆದಂತೆಯೇ ಇತ್ತು!
ಯಶೋದೆ ಕಂಡದ್ದೂ ಸತ್ಯವೇ...ಜಗತ್ತಿನ ಸತ್ಯ!

ಬುಧವಾರ, ಸೆಪ್ಟೆಂಬರ್ 14, 2016

ಯಾರು ಮಹಾತ್ಮ? ಭಾಗ- ೪

ಯಾರು ಮಹಾತ್ಮ? 
ಭಾಗ- ೪

                       ವಿಭಜನೆಗೆ ಹಲವಾರು ವರುಷಗಳ ಮುನ್ನವೇ ಪಾಕಿಸ್ತಾನ ಸ್ಥಾಪನೆಗೆ ತಳಹದಿಯಾಗಿತ್ತು. ಎಲ್ಲಿದ್ದರೂ ತಮ್ಮ ಪ್ರತ್ಯೇಕ ಅಸ್ತಿತ್ವದಿಂದ ಗುರುತಿಸಿಕೊಳ್ಳುವ ಮನೋಭಾವವಿರುವ ಮುಸಲರಿಗೆ ಈ ಕಾರ್ಯಕ್ಕೆ ಬೀಜರೂಪ ಒದಗಿದ್ದು ಸೈಯ್ಯದ್ ಮೊಹಮ್ಮದನ "ಮೊಹಮ್ಮದನ್ ಆಂಗ್ಲೋ ಯೂನಿವರ್ಸಿಟಿ". ಮುಸ್ಲಿಂ ಲೀಗಿನ ಸ್ಥಾಪನೆಗೆ ಬೀಜಾರೋಪವಾದದ್ದು ಮುಂದೆ ಅಲಿಗಢ ವಿವಿಯಾಗಿ ಬದಲಾದ ಈ ಮೊಹಮ್ಮದ್ ಆಂಗ್ಲೋ ಓರಿಯಂಟಲ್ ಕಾಲೇಜಿನಲ್ಲೇ! ಮಹಮ್ಮದ್ ಇಕ್ಬಾಲ್ ಮುಸ್ಲಿಂ ಲೀಗಿನ ಅಧ್ಯಕ್ಷನಾಗಿ 1930ರಲ್ಲಿ ನಡೆದ ಮುಸ್ಲಿಂ ಲೀಗಿನ ರಜತಸಂಭ್ರಮದಲ್ಲಿ ಪಂಜಾಬ್, ಸಿಂಧ್, ಬಲೂಚ್ ಗಳನ್ನೊಳಗೊಂಡ ಪ್ರತ್ಯೇಕ ಮುಸ್ಲಿಂ ರಾಷ್ಟ್ರದ ಕನಸನ್ನು ಬಿತ್ತಿದ. ಇದು ಮುಂದಕ್ಕೆ ಅಲಿಗಢ ಚಳುವಳಿಯಾಗಿ ಬೆಳೆಯಿತು. ರಹಮತ್ ಅಲಿ ಚೌಧರಿ "ಪಾಕಿಸ್ತಾನ್" ಎನ್ನುವ ಹೆಸರನ್ನೂ ಕೊಟ್ಟ. ಇಕ್ಬಾಲನ ಎಡೆಬಿಡದ ಪತ್ರಗಳು ಹಾಗೂ ತನ್ನ ರಾಷ್ಟ್ರೀಯವಾದಿ ಮನಸ್ಥಿತಿ & ಕಾರ್ಯದೆಡೆಗಿನ ಗಾಂಧೀ-ನೆಹರೂಗಳ ಅವಗಣನೆ ಜಿನ್ನಾನನ್ನು ಪ್ರತ್ಯೇಕತಾವಾದಿಯಾಗಿ ಮಾಡಿ ಇಕ್ಬಾಲನ ಕನಸನ್ನೂ ರಹಮತನ ಹೆಸರನ್ನೂ ಒಟ್ಟಿಗೆ ಸೇರಿಸಿತು. ಹೀಗೆ ಪ್ರತ್ಯೇಕತೆಯನ್ನೇ ಒಡಲಲ್ಲಿಟ್ಟುಕೊಂಡು ಬೆಳೆದಿದ್ದ, ಪ್ರತ್ಯೇಕತೆಯನ್ನೇ ಪ್ರತಿಪಾದಿಸುತ್ತಿದ್ದ, ಶಿಕ್ಷಣ-ರಾಜಕೀಯ-ಅಂತಾರಾಷ್ಟ್ರೀಯ ಸಂಗತಿಗಳೆಲ್ಲದರಲ್ಲೂ ಮುಸ್ಲಿಂ ಹಿತಾಸಕ್ತಿಯನ್ನೇ ಮುಂದುಮಾಡುತ್ತಿದ್ದ, ಬ್ರಿಟಿಷರ ಕುಟಿಲ ಕಾರ್ಯಕ್ರಮ "ವಂಗ ಭಂಗ"ವನ್ನು ಬೆಂಬಲಿಸಿ, ಸ್ವದೇಶಿ ವಸ್ತುಗಳ ಬಳಕೆ-ವಿದೇಶೀ ವಸ್ತುಗಳ ಬಹಿಷ್ಕಾರ ಚಳುವಳಿಯನ್ನು ವಿರೋಧಿಸಿದ್ದ, ಖಿಲಾಫತ್ ಚಳುವಳಿಯನ್ನು ಇಲ್ಲೂ ಹುಟ್ಟು ಹಾಕಿ ಮಲಬಾರಿನಿಂದ ಮುಲ್ತಾನಿನವರೆಗೆ ಹಿಂದೂಗಳ ಮೇಲೆ ಭೀಕರ ಅತ್ಯಾಚಾರವೆಸಗಿದ್ದ ಮುಸ್ಲಿಂ ಲೀಗ್ ಮೇಲೆ ನಂಬಿಕೆಯಿರಿಸಿದ್ದ; ಹಿಂದೂಗಳ ಕೊಲೆ-ಅತ್ಯಾಚಾರಕ್ಕೆ ಕಾರಣವಾಗಿದ್ದ ಖಿಲಾಫತ್ ಚಳುವಳಿಗೆ ಹಿಂದೂಗಳಿಂದಲೇ ಧನ ಸಂಗ್ರಹ ಮಾಡುತ್ತಾ, ಹಿಂದೂಗಳ ಕೊಲೆಯನ್ನು ನಿರ್ಲಕ್ಷ್ಯಿಸಿದ್ದ ಗಾಂಧಿ ಮಹಾತ್ಮ ಅಥವಾ ರಾಜಕೀಯ-ಸಾಮಾಜಿಕ ನಾಯಕ ಬಿಡಿ, ಯಾವ ಕೋನದಿಂದ "ಮನುಷ್ಯ"ನಾಗಿ ಕಾಣುತ್ತಾರೆ ಎನ್ನುವುದನ್ನು ಅವರ ಭಕ್ತರೇ ಹೇಳಬೇಕು.

                ಒಮ್ಮೆ ಯಾರೋ ಗಾಂಧಿಗೆ ಕೇಳಿದರು "ಹುಚ್ಚುನಾಯಿ ಬೇಕಾಬಿಟ್ಟಿ ವರ್ತಿಸಿದರೆ ಏನು ಮಾಡಬೇಕು?" ಆಗ ಗಾಂಧಿ "ಈ ಮಾತು ಅಕ್ಷರಶಃ ಹುಚ್ಚುನಾಯಿಯ ಕುರಿತಾಗಿದ್ದರೆ ಅದನ್ನು ಶೂಟ್ ಮಾಡಬೇಕು. ಅದು ಮುಸ್ಲಿಂ ದಂಗೆಕೋರರ ಕುರಿತಾಗಿದ್ದರೆ ಅದನ್ನು ಅನ್ವಯಿಸಲಾಗದು. ಒಬ್ಬಾತನ ವೈರಿ ಉನ್ಮಾದದಿಂದ ವರ್ತಿಸಿದರೆ ಅವನನ್ನು ಶೂಟ್ ಮಾಡಬಾರದು , ಬದಲಾಗಿ ಚಿಕಿತ್ಸೆಗೆ ಮಾನಸಿಕ ಆಸ್ಪತ್ರೆಗೆ ಕಳಿಸಬೇಕು." ಎಂದರು. ಈ ಮಾತುಕತೆಯಿಂದ ಒಂದು ಸ್ಪಷ್ಟವಾಗುತ್ತದೆ. ಗಾಂಧಿಯ ಬೆಂಬಲಿಗರೂ ಕ್ರುದ್ಧರಾಗುವಷ್ಟು ಅನಾಚಾರವನ್ನು ಮುಸಲರು ಎಸಗುತ್ತಿದ್ದರು. ಹಾಗೂ ಗಾಂಧಿ ಅವರ ತಪ್ಪನ್ನು ಮನ್ನಿಸುತ್ತಿದ್ದರು. ಗಾಂಧಿ ಇಲ್ಲಿ ಮರೆಮಾಚುವ ಸಂಗತಿ ಇನ್ನೊಂದಿದೆ. ಮುಸ್ಲಿಮರು ಉನ್ಮಾದರಾಗುವುದು ಮನದ ಹುಚ್ಚಿನಿಂದಲ್ಲ; ಮತದ ಹುಚ್ಚಿನಿಂದ! ಅದು ವಾಸಿಯಾಗುವ ಕಾಯಿಲೆಯಲ್ಲ!

                 ಅಹಿಂಸೆ ಅಹಿಂಸೆ ಎಂದು ಹೇಳುತ್ತಾ ಕ್ರಾಂತಿಕಾರಿಗಳನ್ನು ದಾರಿ ತಪ್ಪಿದ ದೇಶಭಕ್ತರು ಎಂದು ಕರೆಯುತ್ತಿದ್ದ ಗಾಂಧಿ 1947ರ ಜೂನ್ 16ರಂದು ಪ್ರಾರ್ಥನಾ ಸಭೆಯಲ್ಲಿ ಮಾತನಾಡುತ್ತಾ "ನಮ್ಮ ಬಳಿ ಅಣುಬಾಂಬ್ ಇದ್ದಿದ್ದರೆ ಅದನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸಬಹುದಿತ್ತು. ನಾವು ನಮ್ಮ ಅಸಹಾಯಕತೆಯಿಂದ ಅಹಿಂಸೆ ಎನ್ನುವ ಅಸ್ತ್ರವನ್ನು ಅದು ದೋಷಪೂರಿತವಾಗಿದ್ದರೂ, ದುರ್ಬಲವಾಗಿದ್ದರೂ ಅದನ್ನು ಅಳವಡಿಸಿಕೊಂಡಿದ್ದೇವೆ" ಎಂದರು. ಎಂತಹಾ ಎಡಬಿಡಂಗಿತನ! ಸಾವರ್ಕರ್ ಬಿಡುಗಡೆಗೆ ಭಾರತೀಯರು ಸಹಿ ಸಂಗ್ರಹಿಸುತ್ತಿದ್ದಾಗ ಅವರು ಕ್ರಾಂತಿಕಾರಿ ನಾಯಕ ಎನ್ನುವ ಏಕೈಕ ನೆಪವೊಡ್ಡಿ ಹಿಂದೊಮ್ಮೆ ಸಾವರ್ಕರ್ ಭಾಷಣ ಕೇಳಲೆಂದೇ ದಕ್ಷಿಣಾ ಆಫ್ರಿಕಾದಿಂದ ಇಂಗ್ಲೆಂಡಿಗೆ ತೆರಳಿದ್ದ ಗಾಂಧಿ ಸಹಿ ಹಾಕಿರಲಿಲ್ಲ. ಭಗತ್ ಸಿಂಗ್ ಗಲ್ಲು ಶಿಕ್ಷೆ ತಪ್ಪಿಸುವ ಸಹಿ ಸಂಗ್ರಹದಲ್ಲೂ ಇದನ್ನೇ ಅನುಸರಿಸಿದ ಗಾಂಧಿ ಎಲ್ಲಾ ಮುಗಿದ ಮೇಲೆ ಅಣು ಬಾಂಬು ಪ್ರಯೋಗದ ಮಾತನ್ನಾಡುತ್ತಿದ್ದಾರೆ! ಅಲ್ಲದೆ ಅವರು ಅಸಹಾಯಕತೆಯಿಂದ ಅಹಿಂಸೆಯನ್ನು ಅನುಸರಿಸಿದ್ದಂತೆ! ಅಸಹಾಯಕರು ಯಾರೂ ಇರಲಿಲ್ಲ; ಈ ಗಾಂಧಿ ಬೆಂಬಲಿಗ ಮಂದಗಾಮಿಗಳು ಕನಿಷ್ಟ ತೆಪ್ಪಗಿದ್ದರೆ ಸಾಕಿತ್ತು; ಕ್ರಾಂತಿಕಾರಿಗಳು ಭವ್ಯ ಭಾರತವನ್ನೇ ಸೃಷ್ಟಿಸುತ್ತಿದ್ದರು. ಭಾರತೀಯರ ಕ್ಷಾತ್ರವನ್ನು ಮರೆಸುವಂತಹ ಅವರೇ ಮನಗಂಡ ದೋಷಪೂರಿತ, ದುರ್ಬಲ ಅಹಿಂಸೆಯನ್ನು ತಾನು ಮಾತ್ರ ಅನುಸರಿಸಿ, ಉಳಿದ ಭಾರತೀಯರಿಗೆ ಬೋಧಿಸದೆ, ತನ್ನ ಪ್ರಯೋಗಗಳನ್ನು ಸಮಾಜದ ಮೇಲೆ ಹೇರದೆ ತನ್ನ ಕ್ರೈಸ್ತ ಪ್ರಣೀತ ಆಧ್ಯಾತ್ಮಿಕತೆಯನ್ನು ಸ್ವಾತಂತ್ರ್ಯ ಹೋರಾಟದೊಂದಿಗೆ ಬೆರೆಸದೆ ತೆಪ್ಪಗೆ ತನ್ನಷ್ಟಕ್ಕೆ ತಾನಿದ್ದರೆ ಸಾಕಿತ್ತು! ಭಾರತೀಯರು ಸಾವರ್ಕರ್, ವಿವೇಕಾನಂದರು, ಅರವಿಂದರಾದಿಯಾಗಿ ರಾಷ್ಟ್ರವೀರರು ಪ್ರತಿಪಾದಿಸಿದ್ದ, ಪುರಾತನ ಭಾರತ ಹೊಂದಿದ್ದ ಸ್ವಾತಂತ್ರ್ಯವನ್ನು ಪಡೆಯುತ್ತಿದ್ದರು!

                ಮುಸಲ್ಮಾನರಿಗೆ ಎಳ್ಳಷ್ಟು ನೋವಾಗಬಾರದು ಎನ್ನುವ ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧಿ ಆಶ್ರಮ(?)ದ ಜಾಗಕ್ಕೆ ದಾಂಗುಡಿಯಿಡುತ್ತಿದ್ದ ಮಂಗಗಳ ಮೇಲೆ ದಾಳಿ ಮಾಡಲು ಅನುಮತಿ ಕೊಟ್ಟರು! ಗಾಂಧಿಯ ದೃಷ್ಠಿಯಲ್ಲಿ ತನ್ನ ಆಹಾರಕ್ಕಾಗಿ ಬೆಳೆ ಹಾನಿ ಮಾಡುವ ವಾನರಗಳಿಗಿಂತ ಜೀವ ಹಾನಿ ಮಾಡುವ ಮತಾಂಧರು ಶ್ರೇಷ್ಠರು! "ಹಿಂಸೆ" ಎನ್ನುವ ನೆಪವೊಡ್ಡಿ ತಮ್ಮ ಪತ್ನಿ ಕಸ್ತೂರ್ ಬಾ ಅವರಿಗೆ ಪೆನ್ಸಿಲಿನ್ ಅನ್ನು ಚುಚ್ಚುಮದ್ದು ಮೂಲಕ ನೀಡುವುದಕ್ಕೆ ಅನುಮತಿ ಕೊಡದ ಗಾಂಧಿ ಮೊಮ್ಮಗಳು ಮನುವಿನ ಶಸ್ತ್ರಚಿಕಿತ್ಸೆಗೆ ಲಗುಬಗೆಯಿಂದ ಅನುಮತಿ ನೀಡಿದರು! ಕಸ್ತೂರ್ ಬಾ ಹೀಗೆ ಚಿಕಿತ್ಸೆ ಇಲ್ಲದೆ ಕೊನೆಯುಸಿರೆಳೆದರು. ಒಂದು ರೀತಿಯಲ್ಲಿ ಅವರ ಸಾವಿಗೆ ಗಾಂಧಿಯೇ ಕಾರಣ!

                1947ರ ಹೊಸವರ್ಷದ ದಿನದಂದು ಶ್ರೀರಾಮ್ ಪುರದಲ್ಲಿ ಮುಸ್ಲಿಮ್ ಗೂಂಡಾಗಳು ಇದ್ದಕ್ಕಿದ್ದಂತೆ ಹಿಂದೂಗಳ ಮೇಲೆ ಮುಗಿಬಿದ್ದರು. ಹಲವರನ್ನು ಕತ್ತರಿಸಿದರು. ಹೆಂಗಳೆಯರ ಅತ್ಯಾಚಾರಗೈದರು. ಮನೆಗಳ ಸುಲಿಗೆ ಮಾಡಿ ಬೆಂಕಿ ಹಚ್ಚಿದರು. ಗೋಮಾಂಸ ತಿನ್ನುವಂತೆ ನೆರೆಯವರನ್ನು ಬಲಾತ್ಕರಿಸಿದರು. ಗಾಂಧಿಯ ಗುಡಿಸಲಿಗೂ ಬೆಂಕಿಬಿತ್ತು. ಗಾಂಧಿ ನಡೆಯುತ್ತಿದ್ದ ದಾರಿಗೂ! ಆದರೂ ಗಾಂಧಿ ಬದಲಾಗಲಿಲ್ಲ. ಅವರ ಮುಸ್ಲಿಂ ಪ್ರೇಮ ವಿಪರೀತಕ್ಕೇರಿತು!

              1924ರ ಸೆಪ್ಟೆಂಬರ್ 13ರ ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಗಾಂಧಿ ಬರೆಯುತ್ತಾರೆ "ಅನೇಕ ಬಾರಿ ವ್ಯಕ್ತಿಯೊಬ್ಬನ ಕ್ರಿಯೆಗಳು ಅಹಿಂಸೆಯ ಅರ್ಥದಲ್ಲಿ ವಿಶ್ಲೇಷಣೆಯನ್ನು ನಿರಾಕರಿಸುತ್ತವೆ. ಆ ಶಬ್ಧದ ಉನ್ನತ ನೆಲೆಯಲ್ಲಿ ವ್ಯಕ್ತಿಯೊಬ್ಬ ಪೂರ್ಣ ಅಹಿಂಸಾವಾದಿಯಾಗಿದ್ದರೆ ಹಲವು ಸಾರಿ ಆತನ ಕ್ರಿಯೆಗಳು ಹಿಂಸೆಯ ಚಹರೆಯನ್ನು ಧರಿಸಬಹುದು". ಇದು ವೇದಗಳು, ದೃಷ್ಟಾರರು, ಋಷಿಮುನಿಗಳು ಹೇಳಿದ ಅಹಿಂಸೆಯೂ ಅಲ್ಲ; ಸಾಮಾನ್ಯ ಜನರಿಗೆ ತಿಳಿದಿರಬಹುದಾದ ಅಹಿಂಸೆಯೂ ಅಲ್ಲ. ಅಷ್ಟರಮಟ್ಟಿಗೆ ಗಾಂಧಿ ಹೊಸತೊಂದು "ಅಹಿಂಸೆ"ಯನ್ನು ಕಂಡುಹಿಡಿದರು. ವ್ಯಕ್ತಿಯೊಬ್ಬನ ಕ್ರಿಯೆಗಳು ಹಿಂಸಾ ರೂಪ ತಾಳಿದುದೆವೆಂದರೆ ಆತ ಅಹಿಂಸಾವಾದಿ ಹೇಗಾಗುತ್ತಾನೆ? ಬಹುಷಃ ಗಾಂಧಿ ತಮ್ಮ ಉದಾಹರಣೆಯನ್ನೇ ಕೊಡಬಹುದು. ಅವರ ಅಹಿಂಸೆಯ ಕಾರಣದಿಂದ ಹಿಂದೂಗಳು ನಿರ್ವೀರ್ಯರಾಗಿ ಮುಸ್ಲಿಮರಿಂದ ದೌರ್ಜನ್ಯಕ್ಕೊಳಗಾದರಲ್ಲ. ಅಥವಾ ಗಾಂಧಿ ಆ ಮತಾಂಧ ಮುಸ್ಲಿಮರನ್ನೇ ಅಹಿಂಸಾವಾದಿಗಳೆನ್ನಬಹುದು. ತಮ್ಮ ಮತಕ್ಕಾಗಿ ಅವರು ದೌರ್ಜನ್ಯವೆಸಗುವುದರಿಂದ, ಕ್ರಿಯೆಯಲ್ಲಿ ಹಿಂಸೆ ಕಂಡರೂ ಅವರು ಅಹಿಂಸಾವಾದಿಗಳೇ ಎಂದು. ಈ ರೀತಿ ಗಾಂಧಿ ಹೇಳಿದ ಮಾತುಗಳೂ ಇಲ್ಲದಿಲ್ಲ(ಮುಸ್ಲಿಮರು ಹಿಂದೂಗಳನ್ನು ಖಿಲಾಫತ್, ಕಪ್ಪುದಿನಗಳ ಹೆಸರಲ್ಲಿ ಕೊಲ್ಲುತ್ತಿದ್ದಾಗ ಗಾಂಧಿಯಿಂದ ಇಂತಹ ಹಲವಾರು ಅಣಿಮುತ್ತುಗಳು ಹೊರಬಿದ್ದಿದ್ದವು). ಅಂದರೆ ಕೇವಲ ಶಬ್ಧಾರ್ಥದಲ್ಲಿ ಅಹಿಂಸೆ ಇದ್ದರಾಯಿತೇ? ಕ್ರಿಯೆಯಲ್ಲಿ ಆತ ಹಿಂಸೆ ಎಸಗಿದ್ದರೂ ಆತ ಅಹಿಂಸಾವಾದಿ! ಎಂತಹ ವಿಪರ್ಯಾಸ ಇಂತಹ ಗೊಂದಲ ಪುರುಷನಿಗೆ ಅಹಿಂಸಾವಾದಿಯ, ಮಹಾತ್ಮನ ಪಟ್ಟ ಕಟ್ಟಿದವರ ಬುದ್ಧಿಮಟ್ಟವೇ!

                 ಜನರಲ್ ಕಾರ್ಯಪ್ಪ ಭಾರತಕ್ಕೆ ಬೇಕಾದುದು ಅಹಿಂಸೆಯಲ್ಲ, ಬಲಿಷ್ಠ ಸೇನೆ ಎಂದಿದ್ದರು. ಅವರ ಈ ಮಾತನ್ನು ಕೇಳಿದ ಗಾಂಧಿ ತಮ್ಮ ಹರಿಜನ ಸಂಚಿಕೆಯಲ್ಲಿ ಈ ವಿಚಾರವಾಗಿ ಟೀಕಿಸುತ್ತಾ "ಕಾರ್ಯಪ್ಪನವರಿಗಿಂತ ಶ್ರೇಷ್ಠವಾದ ಜನರಲ್ ಗಳು ಕೂಡಾ ಮಹಾನ್ ಶಕ್ತಿಯಾದ ಅಹಿಂಸೆಯ ಸಾಧ್ಯತೆಗಳ ಬಗ್ಗೆ ಮಾತಾಡಲು ತಮಗೆ ಯಾವುದೇ ಹಕ್ಕಿಲ್ಲ ಎಂದು ವಿವೇಕ-ವಿನಮ್ರತೆಯಿಂದ ಒಪ್ಪಿಕೊಳ್ಳುತ್ತಾರೆ. ಇಂದಿನ ಅಣುಬಾಂಬುಯುಗದಲ್ಲಿ ಹಿಂಸೆಯು ಮುಂದೊಡ್ಡುವ ಎಲ್ಲಾ ಸವಾಲುಗಳನ್ನು ಎದುರಿಸುವ ಏಕೈಕ ಶಕ್ತಿ ಎಂದರೆ ಅಹಿಂಸೆ ಒಂದೇ ಎನ್ನುವುದನ್ನು ನಾನು ಧೈರ್ಯದಿಂದ ಘೋಷಿಸಬಲ್ಲೆ" ಎಂದು ಬರೆದರು. ಗಾಂಧಿಯ ಅಹಿಂಸೆಯನ್ನು ಯಾರಾದರೂ ಅನುಸರಿಸಿದ್ದರೆ ಇವತ್ತು ಜಗತ್ತಿಡೀ ಐಸಿಸ್ ಉಗ್ರರಿಂದ ತುಂಬಿ ಹೋಗಿರುತ್ತಿತ್ತು. ಹಾಗೆಯೇ ಗಾಂಧಿಯೇನಾದರೂ ಬದುಕಿದ್ದರೆ ಐಸಿಸ್ ಉಗ್ರರ "ಹಲಾಲ್ ಕಟ್"ಗೆ ಕೊರಳೊಡ್ಡಿ ಅಹಿಂಸೆಯನ್ನು ಪ್ರತಿಪಾದಿಸುತ್ತಾ ನಸುನಗುತ್ತಾ ಧೈರ್ಯದಿಂದ ಪ್ರಾಣವನ್ನು ಬಿಡುವಂತಹ ಸೌಭಾಗ್ಯವೂ ಸಿಗುತ್ತಿತ್ತು! ಈ ಟೀಕೆಗೆ ಜನರಲ್ ಕಾರ್ಯಪ್ಪ ತಲೆಕೆಡಿಸಿಕೊಳ್ಳಲಿಲ್ಲ. ಅವರು ಈ ಟೀಕೆಯನ್ನು  ಸೇನಾಭಾಷೆಯಂತೆ "ರಾಕೆಟ್" ಎಂದು ಬಣ್ಣಿಸಿದರು! ಗಾಂಧಿಯನ್ನು ಭೇಟಿಯಾಗಿ ಕೆಲ ಪ್ರಶ್ನೆಗಳನ್ನು ಕೇಳಿದರು. ಮೌನ ವ್ರತದಲ್ಲಿದ್ದ, ಚರಕದಲ್ಲಿ ವ್ಯಸ್ತರಾಗಿದ್ದ ಗಾಂಧಿ ಉತ್ತರಗಳನ್ನು ಗೀಚಿದರು. ಎರಡು ದಿನಗಳ ಬಳಿಕ "ಸೈನಿಕರ ಕರ್ತವ್ಯಪ್ರಜ್ಞೆಯ ಮೇಲೆ ಹಾನಿಮಾಡದೆ, ವೃತ್ತಿಪರರಾಗಿಯೇ ಕೆಲಸಮಾಡುವ ನಿಟ್ಟಿನಲ್ಲಿ ಸೇನೆಯಲ್ಲಿ ಅಹಿಂಸೆಯ ಪ್ರೇರಣೆ ತುಂಬುವುದು ಹೇಗೆ?" ಎಂದು ಪ್ರಶ್ನಿಸಿದರು. ಆಗ ಗಾಂಧಿ ಕೊಟ್ಟ ಉತ್ತರ :- "ಉತ್ತರಕ್ಕಾಗಿ ನಾನಿನ್ನೂ ಕತ್ತಲಲ್ಲಿ ತಡವರಿಸುತ್ತಿದ್ದೇನೆ!"

                ಗಾಂಧಿ ತಮ್ಮ ಪ್ರಾರ್ಥನಾ ಸಭೆಗಳಲ್ಲಿ ಕುರಾನ್ ಸಾಲುಗಳನ್ನೂ ಪಠಿಸುತ್ತಿದ್ದರು. ಅವರು ಅದನ್ನು ಮುಂದುವರೆಸಿದರೆ ಮನುವನ್ನು ಕೊಲೆಮಾಡುವ ಬೆದರಿಕೆ ಪತ್ರವೂ ಬಂದಿತ್ತು. ಅವರಿಗೆ ಬರುವ ಬಹುತೇಕ ಪತ್ರಗಳು ನಕರಾತ್ಮಕವಾಗಿ ಅವರನ್ನು ದೂಷಿಸಿಯೇ ಇರುತ್ತಿದ್ದವು. ಅವರು ಸ್ವೀಕರಿಸುತ್ತಿದ್ದ 95% ಪತ್ರಗಳಲ್ಲಿ ಬೈಗುಳ, ನಿಂದನೆಗಳೇ ತುಂಬಿರುತ್ತಿದ್ದವು. ಹಿಂದೂಗಳು ಅವರನ್ನು ಮುಸ್ಲಿಮರ ಪಕ್ಷಪಾತಿ ಎಂದು ಜರೆದರೆ, ಮುಸ್ಲಿಮರು ಆತನನ್ನು ತಮ್ಮ ಪರಮವೈರಿ ಎನ್ನುವಂತೆ ನೋಡುತ್ತಿದ್ದರು! ಹೀಗೆ ಆತ ಎಲ್ಲಿಯೂ ಸಲ್ಲಲಿಲ್ಲ! ಅವರಿಗೆ ಬರುತ್ತಿದ್ದ ಕೆಲ ಪತ್ರಗಳಲ್ಲಂತೂ "ಮಹಮ್ಮದ್ ಗಾಂಧಿ", "ಜಿನ್ನಾ ಸೇವಕ" ಎನ್ನುವ ಸಂಭೋದನೆಗಳಿರುತ್ತಿದ್ದವು. ಅವುಗಳಲ್ಲಿ ಕೆಲವೊಂದರ ಒಕ್ಕಣೆ ನೋಡಿ:
"ನಿಮ್ಮ ಅಹಿಂಸಾ ಪದ್ದತಿ ನಿಮ್ಮ ಮೂಗಿನ ಕೆಳಗೇ ದುರ್ವಾಸನೆ ಬೀರುತ್ತಿಲ್ಲವೆ?"
"ಕಳೆದು ಮೂವತ್ತು ವರ್ಷಗಳಿಂದ ನೀವು ಆಚರಿಸುತ್ತಿರುವ ಅಹಿಂಸಾ ಮಾರ್ಗ ಹಿಂಸೆಯ ಫಲಿತಾಂಶವನ್ನೇ ನೀಡಿದೆ. ಇದಕ್ಕಾಗಿ ನಿಮಗೆ ನಾಚಿಕೆಯಾಗುವುದಿಲ್ಲವೇ?"
ಪ್ರತಿದಿನ ಪ್ರಾರ್ಥನಾ ಸಭೆಯಲ್ಲಿ ಅವರು ಕುರಾನ್ ಪಠಿಸುತ್ತಿದ್ದಂತೆ ಕಡು ವಿರೋಧ ವ್ಯಕ್ತವಾಗುತ್ತಿತ್ತು. "ಅವರು ರಾಜಕೀಯದಿಂದ ಆದಷ್ಟು ಬೇಗ ನಿವೃತ್ತಿಯಾದರೆ ದೇಶಕ್ಕೇ ಒಳ್ಳೆಯದು" ಎನ್ನುವ ಮಾತುಗಳು ಅವರದ್ದೇ ಪ್ರಾರ್ಥನಾ ಸಭೆಯಲ್ಲಿ ಸಾಮಾನ್ಯವಾಗಿತ್ತು! 1947ರ ಸೆಪ್ಟೆಂಬರಿನಲ್ಲಿ ದೆಹಲಿಯ ಕಿಂಗ್ಸ್ ವೇ ಕ್ಯಾಂಪಿನಲ್ಲಿ ನಡೆದ ಪ್ರಾರ್ಥನಾ ಸಭೆಯಲ್ಲಿ ಗಾಂಧಿ ಕುರಾನ್ ಪಠಿಸುತ್ತಿದ್ದಂತೆ ಹಲವರು "ಈ ಶ್ಲೋಕಗಳ ಪಠಣದಿಂದ ನಮ್ಮ ತಾಯಂದಿರು, ಪ್ರೀತಿಪಾತ್ರರು ಕೊಲ್ಲಲ್ಪಟ್ಟರು. ಇಲ್ಲಿ ಅದರ ಪಠಣಕ್ಕೆ ಅವಕಾಶ ನೀಡುವುದಿಲ್ಲ" ಎಂದು ಘೋಷಣೆ ಕೂಗಿದರು. "ಗಾಂಧಿ ಮುರ್ದಾಬಾದ್" ಎನ್ನುವ ಘೋಷಣೆಯೂ ಮೊಳಗಿತು.  ಸಭೆಯನ್ನು ಮುಂದೂಡಲಾಯಿತು. ಗಾಂಧಿ ತೆರಳುತ್ತಿದ್ದಂತೆ ಅವರ ಕಾರಿನ ಮೇಲೆ ಕಲ್ಲು ತೂರಲಾಯಿತು. ಕೆಲ ನಿರಾಶ್ರಿತರು ಸೋಡಾ ಬಾಟಲಿಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು.(ಮಹಾತ್ಮ ಗಾಂಧಿ - ದಿ ಲಾಸ್ಟ್ ಫೇಸ್, ಸಂಪುಟ-೨, ಪ್ಯಾರೇಲಾಲ್)
ತುಂಡುಬಟ್ಟೆ ತೊಟ್ಟ ಸರಳತೆಯ ಮೂರ್ತಿ ಮಹಾತ್ಮ "ಕಾರಿನಲ್ಲಿ ಪಯಣಿಸುತ್ತಿದ್ದ"!
 

ಗುರುವಾರ, ಸೆಪ್ಟೆಂಬರ್ 8, 2016

ಯಾರು ಮಹಾತ್ಮ? ಭಾಗ- ೩

ಯಾರು ಮಹಾತ್ಮ? ಭಾಗ- ೩

                      ಅಹಿಂಸೆಯನ್ನು ಸಾಧಿಸಿದವನ ಎದುರಲ್ಲಿ ಯಾರಿಗೂ ಶತ್ರುತ್ವ ಭಾವನೆ ಉಂಟಾಗುವುದಿಲ್ಲ. "ಅಹಿಂಸಾ ಪ್ರತಿಷ್ಠಾಯಾಂ ತತಸನ್ನಿಧೌ ವ್ಯರ್ಥಗಃ" ಎನ್ನುತ್ತದೆ ಪತಂಜಲಿ ಯೋಗ ಸೂತ್ರ. “ಬೇರೆಯವರಿಗೆ ಕಿಂಚಿತ್ತೂ ಹಾನಿ ಮಾಡದ ವ್ಯಕ್ತಿಯ ಎದುರಲ್ಲಿ ಕ್ರೂರ ಪ್ರಾಣಿಗಳೂ ವಿನೀತವಾಗುತ್ತವೆ. ಯೋಗಿಯ ಎದುರಲ್ಲಿ ಹುಲಿ ಮತ್ತು ಕುರಿಯೂ ಒಟ್ಟಿಗೆ ಆಟವಾಡುತ್ತವೆ. ನೀವು ಆ ಸ್ಥಿತಿಗೆ ತಲುಪಿದಾಗ ನಿಮ್ಮಲ್ಲಿ ಅಹಿಂಸೆ ದೃಢಗೊಂಡಿದೆ ಎಂದರ್ಥ” - ವಿವೇಕಾನಂದರು. ಗಾಂಧಿಯ ಪ್ರಕಾರ ಅಹಿಂಸೆಯೆಂದರೆ - ಆಕ್ರಮಣಕಾರಿಯೊಬ್ಬ ತಮಗೆ ಹೊಡೆದರೂ ಅದನ್ನು ಪ್ರತಿರೋಧಿಸದೆ ಸುಮ್ಮನಿರುವುದು. ಅವರೇ ಒಂದು ಉದಾಹರಣೆ ಕೊಡುತ್ತಾರೆ- ಹಸುಗಳು ತಮ್ಮನ್ನು ಕೊಲ್ಲಲು ಹುಲಿಗೆ ತಾವಾಗೇ ಅವಕಾಶ ಕೊಡುತ್ತವೆ. ಅಷ್ಟೆಲ್ಲಾ ಗೋವುಗಳನ್ನು ಕೊಂದ ಹುಲಿ ಕೊನೆಗೊಮ್ಮೆ ಆಯಾಸಗೊಳ್ಳುತ್ತದೆ. ಅಹಿಂಸೆಯ ನಂಬಿಗಸ್ಥ ಅನುಯಾಯಿಯಾಗುತ್ತದೆ!" ಯಾವ ಮಗುವಿಗೆ ಬೇಕಾದರೂ ಈ ರೀತಿ ಹೇಳಿ ನೋಡಿ - ನಿಮ್ಮನ್ನು "ಒಂದು ಸುತ್ತು ಲೂಸ್" ಎನ್ನದಿದ್ದರೆ ಮತ್ತೆ ಕೇಳಿ! ಹಿಂದೂಗಳು ಹತ್ಯೆಗೀಡಾಗುತ್ತಿದ್ದರೂ ಕೊಲ್ಲುವ ಮುಸ್ಲಿಮರನ್ನು ಗೌರವ-ಔದಾರ್ಯದಿಂದ ನೋಡಬೇಕು; ಸುಹ್ರಾವರ್ದಿ ಗೂಂಡಾಗಳ ನಾಯಕನಾಗಿದ್ದರೂ ದೆಹಲಿಯಲ್ಲಿ ಮುಕ್ತವಾಗಿ-ಸುರಕ್ಷಿತವಾಗಿ ತಿರುಗಾಡಲು ಬಿಡಬೇಕು. ಇವು ಗಾಂಧಿ ತಮ್ಮ ಪ್ರಾರ್ಥನೆಯ ಸಮಯದಲ್ಲಿ ಪದೇ ಪದೇ ಮಾಡುತ್ತಿದ್ದ ವಕಾಲತ್ತುಗಳು!

                 ಗಾಂಧಿಯ ಆಯ್ದ ಕೆಲವು ಅಣಿಮುತ್ತುಗಳನ್ನು ನೋಡೋಣ! “ಮುಸ್ಲಿಮರು ಹಿಂದೂಗಳ ಅಸ್ತಿತ್ವವನ್ನೇ ನಾಶ ಮಾಡಲು ಯೋಚಿಸಿದರೂ ಕೂಡಾ ಹಿಂದೂಗಳು ಎಂದಿಗೂ ಉದ್ರೇಕಗೊಳ್ಳಬಾರದು. ಕೋಪಿಸಿಕೊಳ್ಳಬಾರದು. ಅವರು ತಲವಾರ್ ತೋರಿಸಿದರೂ ನಾವು ಸಾವನ್ನು ಧೈರ್ಯದಿಂದ ಆಹ್ವಾನಿಸಬೇಕು. ಅವರು ಜಗತ್ತನ್ನೇ ಬೇಕಾದರೂ ಆಳಲಿ, ನಾವು ಅಲ್ಲಿ ವಾಸಿಸಬೇಕು. ಸಾವಿಗೆ ಅಂಜಬಾರದು. ಹುಟ್ಟು ಸಾವು ವಿಧಿಲಿಖಿತ. ಹೀಗಾಗಿ ಸಾವಿನ ಬಗ್ಗೆ ವಿಷಣ್ಣ ಭಾವ ತಾಳಬೇಕು. ನಾವೆಲ್ಲ ಕಿರುನಗೆಯನ್ನಿಟ್ಟುಕೊಂಡೇ ಸಾವನ್ನಪ್ಪಿದರೆ ನವ ಜೀವನವನ್ನು ಪ್ರವೇಶಿಸುತ್ತೇವೆ. ನಾವು ಹೊಸ ಹಿಂದೂಸ್ಥಾನವನ್ನು ನಿರ್ಮಿಸುತ್ತೇವೆ.”(1947 ಏಪ್ರಿಲ್ 6ರಂದು ಮಾಡಿದ ಭಾಷಣ) “ಒಂದು ವೇಳೆ ನಮ್ಮವರು ಕೊಲೆಯಾದರೂ ನಾವೇಕೆ ಕೊಲೆಗಾರರ ಮೇಲೆ ಕೋಪಮಾಡಿಕೊಳ್ಳಬೇಕು? ಅವರು ಕೊಲ್ಲಲ್ಪಟ್ಟರೂ ಸಹ ಉತ್ತಮ, ಸೂಕ್ತ ಅಂತ್ಯವನ್ನೇ ಕಂಡಿದ್ದಾರೆ ಎಂದು ಮನವರಿಕೆ ಮಾಡಿಕೊಳ್ಳಬೇಕು. ನಮಗೆಲ್ಲಾ ಇಂಥದೇ ಸ್ವರ್ಗ ಕಾದಿರಬಹುದು. ದೇವರು ನಮ್ಮನ್ನೂ ಇದೇ ಹಾದಿಯಲ್ಲೇ ಕಳುಹಿಸಬಹುದು. ನಾವು ಹೃದಯಪೂರ್ವಕವಾಗಿ ಮಾಡಬೇಕಾದ ಪ್ರಾರ್ಥನೆ ಇದೇ”(1947 ಸೆಪ್ಟೆಂಬರ್ 23ರಂದು ಮಾಡಿದ ಭಾಷಣ). “ಪಂಜಾಬಿನಲ್ಲಿ ಸತ್ತವರ್ಯಾರೂ ತಿರುಗಿ ಬರಲಾರರು. ಸಾವಿಗೀಡಾದವರು ಧೈರ್ಯದಿಂದ ಮರಣವನ್ನು ಎದುರಿಸಿದ್ದರೆ ಅವರು ಏನನ್ನೂ ಕಳೆದುಕೊಳ್ಳುವುದಿಲ್ಲ. ಬದಲಾಗಿ ಕೆಲವನ್ನು ಗಳಿಸುತ್ತಾರೆ. ನಾವೆಲ್ಲಾ ಆ ರೀತಿ ವರ್ತಿಸಿದರೆ ದೇವರೇ ಅವರ ಖಡ್ಗವನ್ನು ತುಂಡರಿಸುತ್ತಾನೆ.” (ಮಹಾತ್ಮಗಾಂಧಿ-ದಿ ಲಾಸ್ಟ್ ಫೇಸ್-೨, ಪ್ಯಾರೇಲಾಲ್). ಇವೆಲ್ಲವೂ ಹಿಂದೂಗಳನ್ನು ಮುಸ್ಲಿಮರು ಅಟ್ಟಾಡಿಸಿ ಕೊಲೆಗೈಯ್ಯುತ್ತಿದ್ದಾಗ, ನಮ್ಮ ಸ್ತ್ರೀಯರನ್ನು ಅತ್ಯಾಚಾರವೆಸಗುತ್ತಿದ್ದಾಗ, ಗರ್ಭಿಣಿಯರ ಗರ್ಭ ಸೀಳುತ್ತಿದ್ದಾಗ ಗಾಂಧಿ ನೀಡಿದ ಉಪದೇಶಗಳು. ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಶು ಕದಾಚನಾ ಎಂದ ಭಗವಾನ್ ಕೃಷ್ಣ ಇದನ್ನು ಕೇಳುತ್ತಿದ್ದರೆ ಗಾಬರಿಗೊಂಡು ಇಂತಹವನ್ನು ಖಂಡಿತ ಕೌರವ ಪಕ್ಷಕ್ಕೆ ಓಡಿಸುತ್ತಿದ್ದ!

               ಜುಲೈ 27, 1947ರ "ಹರಿಜನ"ದಲ್ಲಿ ಗಾಂಧಿ "ನನ್ನ ಹಿರಿಮಗ ಪ್ರತೀ ಬಾರಿ ಬಂದಾಗಲೂ "ನಾನು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗುತ್ತೇನೆ. ಇನ್ನು ಮುಂದೆ ವೈನ್ ಮುಟ್ಟುವುದಿಲ್ಲ" ಎಂದು ಹೇಳುತ್ತಿದ್ದ. ನಿನ್ನ ಮಾತಿನಲ್ಲಿ ವಿಶ್ವಾಸವಿಲ್ಲದಿದ್ದರೂ ನಿನಗೆ ಒಂದು ಅವಕಾಶ ನೀಡುತ್ತೇನೆ ಎನ್ನುತ್ತಿದ್ದೆ. ಆತನಿಂದ ಅದನ್ನು ಪಾಲಿಸಲು ಆಗುತ್ತಿರಲಿಲ್ಲ. ಅದು ನನಗೂ ತಿಳಿದಿತ್ತು. ಆದರೂ ನಾನು ಅವನು ಬದಲಾಗುತ್ತಾನೆ ಎಂದು ನಂಬಿದ್ದೆ. ಪ್ರತೀ ಬಾರಿ ಬಂದಾಗಲೂ ಇದೇ ರೀತಿ ನಡೆಯುತ್ತಿತ್ತು. ಇದೇ ರೀತಿ ನಾವು ಮುಸ್ಲಿಮರ ಮೇಲೆ ವಿಶ್ವಾಸವಿಡಬೇಕು" ಎಂದು ಬರೆದಿದ್ದರು. ಅಂದರೆ ಮುಸ್ಲಿಮನೊಬ್ಬ ಬದಲಾಗದಿದ್ದರೂ ಅವನ ಮೇಲೆ ವಿಶ್ವಾಸವಿಡಬೇಕು. ಅವನು ನಮ್ಮ ಮೇಲೆ ಹಲ್ಲೆ ಮಾಡಿದರೂ ಅವನ ಮೇಲೆ ವಿಶ್ವಾಸವಿಡಬೇಕು. ನಮ್ಮವರನ್ನು ಕೊಲೆಮಾಡಿದರೂ ಅವನನ್ನು ನಾವು ನಂಬಬೇಕು. ನಮ್ಮ ಸ್ತ್ರೀಯರ ಮೇಲೆ ಅತ್ಯಾಚಾರವೆಸಗಿದರೂ ಅವನ ಬಳಿ ಜೊಲ್ಲು ಸುರಿಸುತ್ತಾ ಬೇಡಬೇಕು! ಅಂದರೆ ಮುಸ್ಲಿಮನೊಬ್ಬ ಬದಲಾಗುವುದಿಲ್ಲವೆಂದು ಗಾಂಧಿಗೂ ತಿಳಿದಿತ್ತು. ಆದರೂ ತನ್ನದೇ ಆದ ಅಹಿಂಸಾ ನೀತಿಯನ್ನು ಬಡಪಾಯಿ ಹಿಂದೂಗಳ ಮೇಲೆ ಅನ್ಯಾಯವಾಗಿ ಹೇರಲೆತ್ನಿಸಿದರು. ಒಂದು ರೀತಿಯಲ್ಲಿ ಹಿಂದೂಗಳ ಕೊಲೆಗೆ ಗಾಂಧಿಯೇ ಕಾರಣಕರ್ತರಾದರು.

                   ಕೆಟ್ಟಕೆಲಸಗಳನ್ನು ಮಾಡುವವರನ್ನು ಶಿಕ್ಷಿಸಲು ಹಿಂದೂ ಧರ್ಮ ಅನುಮತಿ ನೀಡುವುದಿಲ್ಲವೇ? ಅವಕಾಶ ನೀಡುವುದಿಲ್ಲ ಎಂದಾದರೆ ಕೌರವರನ್ನು ಕೊಲ್ಲುವಂತೆ ಕೃಷ್ಣ ಭಗವದ್ಗೀತೆಯ ಎರಡನೆಯ ಅಧ್ಯಾಯದಲ್ಲಿ ಬೋಧಿಸಿರುವುದನ್ನು ಹೇಗೆ ವಿವರಿಸುತ್ತೀರಿ? ಎನ್ನುವ ಪ್ರಶ್ನೆಯನ್ನು ಸ್ವಲ್ಪ ಬೊಂಡಿದ್ದ ಗಾಂಧಿ ಭಕ್ತನೊಬ್ಬ ಕೇಳಿದ. ಆಗ ಗಾಂಧಿ "ಮೊದಲನೇ ಪ್ರಶ್ನೆಗೆ ಹೌದು ಅಥವಾ ಇಲ್ಲ ಎನ್ನುವ ಎರಡೂ ಉತ್ತರವನ್ನು ನೀಡಬೇಕಾಗುತ್ತದೆ. ಯಾರನ್ನಾದರೂ ಕೊಲ್ಲುವ ಪ್ರಶ್ನೆ ಉದ್ಭವಿಸುವಾಗ ಯಾರು ಅನಿಷ್ಟ ಕಾರ್ಯ ಮಾಡುವವರು ಎನ್ನುವುದನ್ನು ನಿರ್ಧರಿಸಲು ಒಬ್ಬಾತ ನಿಷ್ಪಕ್ಷಪಾತ ನ್ಯಾಯಾಧೀಶನಾಗಿರಬೇಕಾಗುತ್ತದೆ. ಯಾರಾದರೊಬ್ಬರಿಗೆ ಈ ಹಕ್ಕು ಸಿಗಲು ಆತ ಸಂಪೂರ್ಣವಾಗಿ ದೋಷರಹಿತನಾಗಿರಬೇಕಾಗುತ್ತದೆ. ತಾನೇ ಸ್ವತಃ ತಪ್ಪು ಮಾಡುವ ವ್ಯಕ್ತಿ ಇನ್ನೊಬ್ಬನ ದೋಷಗಳನ್ನು ನಿರ್ಣಯಿಸುವ ಅಥವಾ ಶಿಕ್ಷಿಸುವ ಹಕ್ಕು ತನಗಿದೆ ಎಂದು ಹೇಗೆ ಪ್ರತಿಪಾದಿಸಲು ಸಾಧ್ಯ? ಇನ್ನು ಗೀತೆಯಲ್ಲಿ ಹೇಳಿರುವಂತೆ ಅನಿಷ್ಟ ಕೆಲಸ ಮಾಡುವವನನ್ನು ಶಿಕ್ಷಿಸುವ ಹಕ್ಕು ಕುರಿತಾದ ಎರಡನೇ ಪ್ರಶ್ನೆ. ಇದನ್ನು ಸರ್ಕಾರ ಮಾತ್ರ ಸೂಕ್ತ ರೀತಿಯಲ್ಲಿ ಜಾರಿ ಮಾಡಬಹುದು" ಎಂದು ಪ್ರತಿಕ್ರಿಯಿಸಿದರು. ಎಷ್ಟೊಂದು ದ್ವಂದ್ವತೆ! ಅಂದರೆ ಮುಸ್ಲಿಮನೊಬ್ಬ ವಿನಾ ಕಾರಣ ಹಿಂದೂವೊಬ್ಬನ ಹತ್ಯೆ ಮಾಡಿದರೂ ಅವನನ್ನು ಕೊಲ್ಲುವ ಹಾಗಿಲ್ಲ. ಯಾಕೆಂದರೆ ಕೊಲ್ಲುವವ ಗಾಂಧಿಯಿಂದ "ದೋಷರಹಿತ ಸರ್ಟಿಫಿಕೇಟ್" ಪಡೆಯಬೇಕಾಗುತ್ತದೆ. ಕೆಲವೊಮ್ಮೆ ಅನ್ನಿಸುವುದಿದೆ ಬಹುಷಃ ಕೇಜ್ರಿವಾಲ್ ಗಾಂಧಿಯ ಪಳಿಯುಳಿಕೆಯೇನೋ! ಹಾಗೆಯೇ ಅನಿಷ್ಟ ಕೆಲಸ ಮಾಡುವವನನ್ನು ಸರ್ಕಾರ ಮಾತ್ರ ಶಿಕ್ಷಿಸಬಹುದು; ಗಾಂಧಿಗೆ ಆಳುವ ಬ್ರಿಟಿಷರ ಮೇಲೆ ಎಷ್ಟೊಂದು ನಂಬಿಕೆ! ಅವರೇನಾದ್ರೂ ಶಿಕ್ಷಿಸದಿದ್ದರೆ ಆತ ನಿರಪರಾಧಿ! ಅಲ್ಪಸಂಖ್ಯಾತರು ಏನು ಮಾಡಿದರೂ ಸುಮ್ಮನಿದ್ದು ಬಹುಸಂಖ್ಯಾತರನ್ನು ಸಾಯಬಡಿವ ಇಂದಿನ ರಾಜಕಾರಣಕ್ಕೆ ತಳಹದಿ ಹಾಕಿದ ಅಧ್ವರ್ಯು ಯಾರೆಂದು ಬೇರೆ ಹೇಳಬೇಕಿಲ್ಲ ತಾನೆ!

               ಗಾಂಧಿಯ ಅಹಿಂಸೆ ಹಿಂದೂಗಳಿಗೆ ಮಾತ್ರ! "ಎಲ್ಲಾ ಹಿಂದೂಗಳು ನನ್ನ ಮಾತು ಕೇಳಿದರೆ ಇಡೀ ಜಗತ್ತೇ ಅನುಸರಿಸಲು ಮುಂದಾಗುವಂತಹ ಮಾದರಿಯನ್ನು ನಾವು ಹಾಕಿಕೊಡಬಹುದು. ಈ ಮಾತನ್ನು ಮುಸ್ಲಿಮರಿಗೆ ಯಾಕೆ ಹೇಳಿಕೊಡುತ್ತಿಲ್ಲ ಎಂದರೆ ಅವರಿಂದು ನನ್ನನ್ನು ಶತ್ರುವೆಂದು ಪರಿಗಣಿಸಿದ್ದಾರೆ. ಹಿಂದೂಗಳು ನನ್ನನ್ನು ಶತ್ರು ಎಂದು ನೋಡುವುದಿಲ್ಲ. ಅದಕ್ಕಾಗಿ ತಮ್ಮ ಆಯುಧಗಳನ್ನು ಸಮುದ್ರಕ್ಕೆಸೆಯುವಂತೆ ಧೈರ್ಯತನದ ಅಹಿಂಸೆಯ ಅದ್ವಿತೀಯ ಸಾಮರ್ಥ್ಯ ಮನವರಿಕೆ ಮಾಡಿಕೊಳ್ಳುವಂತೆ ಅವರಿಗೆ ಹೇಳುತ್ತೇನೆ"(ಮಹಾತ್ಮಗಾಂಧಿ-ದಿ ಲಾಸ್ಟ್ ಫೇಸ್-೨, ಪ್ಯಾರೇಲಾಲ್). ಅಬ್ಬಾ ಈತನ ಪ್ರಲಾಪವೇ! ಹಿಂದೂಗಳು ನಾನು ಬಾವಿಗೆ ಹಾರಲು ಹೇಳಿದರೂ ಸಿದ್ಧರಿದ್ದಾರೆ ಎನ್ನುತ್ತಾ ಅವರಿಗೆ ಬಿಟ್ಟಿ ಉಪದೇಶ! ಮುಸ್ಲಿಮರು ಶತ್ರುವೆಂದು ಪರಿಗಣಿಸಿದ ಕಾರಣ ಅವರಿಗೆ ಅಹಿಂಸೆಯ ಉಪದೇಶ ಮಾಡುವುದಿಲ್ಲವೇ? ಅಹಿಂಸೆಯ ಅರ್ಥವೇ ಸತ್ತು ಹೋಯಿತು! ಶತ್ರುತ್ವ ಮರೆತು ಅಹಿಂಸೆಯನ್ನು ಪಾಲಿಸುವವನ ಎದುರಲ್ಲಿ ಪಶುಗಳೂ ಮಂಡಿಯೂರುತ್ತವೆ ಎಂದ ವಿವೇಕಾನಂದರ ಮಾತೂ ಕಸದ ಬುಟ್ಟಿ ಸೇರಿತು! ಅಥವಾ ಮುಸ್ಲಿಮರು ಪಶುಗಳಿಗಿಂತಲೂ ಕಡೆ! ವಿಪರ್ಯಾಸವೆಂದರೆ ಇಂದು ಜಗತ್ತಿನಲ್ಲಿ ಎರಡೂ ಸತ್ಯವಾಗಿರುವುದು. ಅಹಿಂಸೆಯೆಂದರೆ ಗಾಂಧಿಯದ್ದೇ ಎನ್ನುವ ಮೂರ್ಖ ಪ್ರಪಂಚ. ಪಶುಗಳಿಗಿಂತಲೂ ಕ್ರೂರವಾಗಿ ವರ್ತಿಸುವ ಮತಾಂಧ ಮುಸಲರು! ಈ ತುಂಡುಬಟ್ಟೆ ತೊಟ್ಟ ಮುದುಕನ ಮಾತು ಕೇಳಿ ಹಿಂದೂಗಳು ನಿರ್ವೀರ್ಯರಾದರು. ಮುಸಲ್ಮಾನರು ಸ್ತ್ರೀಯರ ಮೇಲೆ ಅತ್ಯಾಚಾರ ಮಾಡುತ್ತಿದ್ದಾಗಲೂ, ತಮ್ಮವರನ್ನು ಕೊಲ್ಲುತ್ತಿದ್ದಾಗಲೂ ಗಾಂಧಿಯ ಅಹಿಂಸೆಗೆ ಜೋತು ಬಿದ್ದರು.

                   ಒಬ್ಬ ಉನ್ಮತ್ತನ ಕೈಯಲ್ಲಿ ನಾವು ಹೆದರಿಕೆಯಿಲ್ಲದೆ ಉದ್ವೇಗವಿಲ್ಲದೆ ಕೋಪವಿಲ್ಲದೆ ಸಾವನ್ನಪ್ಪಿದರೆ ಅದು ಅವನ ಉನ್ಮಾದವನ್ನು ನಿವಾರಿಸುತ್ತದೆ ಎಂದರು ಮಹಾವೈದ್ಯ ಗಾಂಧಿ! ಹಿಂದೂಗಳನ್ನು ರಕ್ಷಿಸುವ ಭರದಲ್ಲಿ ಮುಸಲರಿಂದ ಮಾರಕ ಇರಿತಕ್ಕೊಳಗಾಗಿ ಸಾವನ್ನಪ್ಪಿದ ಸಚಿನ್ ಮಿತ್ರಾ ಹಾಗೂ ಸ್ಮೃತೀಶ ಬ್ಯಾನರ್ಜಿಯ ಸಾವಿಗೆ ಶೋಕ ವ್ಯಕ್ತಪಡಿಸಲೂ ನಿರಾಕರಿಸಿದರು. ಬದಲಾಗಿ ಸಚಿನ್ ಮಿತ್ರಾರ ಪತ್ನಿಗೆ ನೀವು ಶೋಕಿಸುವ ಬದಲು ಸೇವೆಯಲ್ಲಿ ತೊಡಗಿಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡಿದರು. ಪಂಜಾಬಿನಲ್ಲಿ ಅತ್ಯಾಚಾರದ ಬೆದರಿಕೆಗೆ ಒಳಗಾದ ಹುಡುಗಿಯರಿಗೆ "ನಿಮ್ಮ ನಾಲಗೆಯನ್ನು ಕಚ್ಚಿಕೊಳ್ಳಿ ಮತ್ತು ಸಾಯುವವರೆಗೆ ಉಸಿರನ್ನು ಬಿಗಿ ಹಿಡಿಯಿರಿ" ಎನ್ನುವ ಹಿತವಚನ ಕೊಟ್ಟರು. ಇದಕ್ಕೂ ಆತ್ಮಹತ್ಯೆಗೂ ಏನು ವ್ಯತ್ಯಾಸವಿದೆ. ಇದು ಮಾಡಲರಿಯದವನ ಪ್ರಲಾಪವೇ ಹೊರತು ಯಾವ ಆದರ್ಶವೂ ಅಲ್ಲ!