ಪುಟಗಳು

ಗುರುವಾರ, ಮೇ 16, 2013

ಚೈತ್ರ ಸುಮ

ಚೈತ್ರ ಕಾಲದಲ್ಲಿ ಮೂಡಿದುದಲ್ಲ. ಯಕ್ಷಗಾನ ಪದವೊಂದರ ಮೊದಲ ಸಾಲನ್ನು ಗುನುಗುನಿಸುತ್ತಾ ಇದ್ದಂತೆ ಮೂಡಿದ ಕವನ ಇದು. ಅದೇ ಪದ್ಯದ ಮೊದಲ ಸಾಲನ್ನು ಬಳಸಿಕೊಂಡದ್ದಕ್ಕಾಗಿ ಆ ಅಜ್ಞಾತ ಕವಿಯಲ್ಲಿ ಕ್ಷಮೆ ಯಾಚಿಸುತ್ತಿದ್ದೇನೆ. ಈ ಕವನಕ್ಕೆ ಕಾರಣೀಭೂತನಾದ ಆ ಅಜ್ಞಾತ ಕವಿಗೆ ಪ್ರಣಾಮಗಳನ್ನರ್ಪಿಸುತ್ತ...ಒಂದು ಕಿರು ಕವನ!

ನೋಡು ನೋಡು ಗೆಳತಿ ಚೈತ್ರ ಕಾಲ ಬಂದಿದೆ
ಮೋಡಿ ಮಾಡಿ ಎನ್ನ ಮನದಿ ಹರುಷ ತುಂಬಿದೆ
ನೋಡು ನೋಡು ಗೆಳತಿ ನೋಡು ವನದ ಸೊಬಗನು
ಶ್ವೇತ ಧಾರೆ ಹಸುರ ಸೀರೆ ಸ್ವರ್ಗ ಸಿರಿಯನು||

ನಿನ್ನ ಕಾದಿರೆ ಸುಪ್ರಭಾತ ನದಿಯ ಕಲರವ
ಮನವ ಬಳಲಿಸಿ ತನುವ ಕೆಣಕುವ ಮಂದ ಮಾರುತ
ನಿನ್ನ ನೋಡೋ ಬಯಕೆ ಮೂಡಿ ಸುಮವು ಅರಳಿದೆ
ಸುಮ ಶೃಂಗ ಏರಿ ಪರಾಗ ಸ್ಪರ್ಷಿಸಿ ಭೃಂಗ ಹಾಡಿದೆ||


ಮರದ ಮೇಲೆ ಕುಳಿತು ಒರೆವ ಜೋಡಿ ಶುಕಗಳು
ಪ್ರೇಮ ಕಾವ್ಯ ಒರೆಯೆ ಹಾಡಿವೆ ಯುಗ್ಮ ಪಿಕಗಳು
ನವಿಲ ನಾಚಿಸೋ ನಿನ್ನ ನಾಟ್ಯ ಮನವು ಬಯಸಿರೆ
ನೋಡೆ ಮಾರ ಕೆಣಕುತಿಹನು ಒರೆಯಲೇನನು||

ಗುರುವಾರ, ಮೇ 2, 2013

ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ- ೪



ಅದು ದೇವರ ನಾಡೆಂದು ಕರೆಯಲ್ಪಡುತ್ತಿತ್ತು...ಆದರೆ ಅಂದಿನಿಂದ ದೆವ್ವಗಳ ನಾಡಾಗಿ ಬದಲಾಗುತ್ತಿದೆ...
ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ- :

ಮೋಪ್ಲಾಗಳ ಅತ್ಯಾಚಾರವೂ ಮಹಾ(ದುರಾ)ತ್ಮನ ಅನಾಚಾರವೂ:

               ಮೋಪ್ಲಾ ಬಂಡಾಯದ ಕುರಿತು ಆನಿಬೆಸೆಂಟ್, ಅಂಬೇಡ್ಕರ್, ಶಂಕರನ್ ನಾಯರ್ ಮುಂತಾದವರ ಭಾಷಣಗಳೂ, ಆರ್ಯಸಮಾಜ, ವೈಎಂಸಿಎ, ಸರ್ವೆಂಟ್ಸ್ ಆಫ್ ಇಂಡಿಯಾದ ವರದಿಗಳನ್ನು ಓದಿದರೆ ಎಂತಹವನಿಗಾದರೂ ರಕ್ತ ಕುದಿಯಲೇಬೇಕು.
>>ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಜಿ. ಕೆ ದೇವಧರ್, ಆರ್ಯ ಸಮಾಜದ ಋಷಿರಾಂ, ವೈಎಂಸಿಯ ಕೆಟಿ ಪಾಲ್ & ಎಚ್ ಪಾಪ್ಲೇ ಮೊದಲಾದವರು ಏರ್ಪಡಿಸಿದ ಸಂತ್ರಸ್ಥ ಸಹಾಯ ಶಿಬಿರಗಳಲ್ಲಿ ೨೬೦೦೦ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದರು. ಜಾಮೋರಿನ್ ದೊರೆಯ ಮನಕಾವು, ಕೊಟ್ಟಕ್ಕಲ್ ಅರಮನೆಗಳು, ಕೃಷ್ಣವರ್ಮ ರಾಜನ ಅರಮನೆಗಳಲ್ಲಿ ಸಾವಿರಾರು ಮಂದಿ ಆಸರೆ ಪಡೆದರು. ದಂಗೆ ನಡೆಯಲಿಲ್ಲವೆಂದಾದರೆ ಇಷ್ಟೊಂದು ಮಂದಿ ತಮ್ಮ ಮನೆಮಠ ತೊರೆದು ಹಲವು ತಿಂಗಳುಗಳ ಪರ್ಯಂತ  ಆಶ್ರಯ ಪಡೆದದ್ದು ಯಾಕೆ ಉಚಿತ ಊಟ ಸಿಗುತ್ತದೆಂದೇ?
             ನೀಲಂಬೂರು ರಾಣಿ ಅತ್ಯಾಚಾರಕ್ಕೊಳಗಾದ ಸಾವಿರ ಮಹಿಳೆಯರ ಪರವಾಗಿ ವೈಸ್ ರಾಯ್ ರೆಡಿಂಗನ ಪತ್ನಿಗೆ ಬರೆದ ಮನವಿ ಪತ್ರ ಕರುಣಾಸ್ಪದವಾಗಿದೆ.
" ಪ್ರಮಾಣದ ಬರ್ಬರತೆ ಎಲ್ಲಿಯೂ ನಡೆದದ್ದಿಲ್ಲ. ನಮ್ಮ ಬಂಧುಗಳ ಶವಗಳಿಂದ ಇಲ್ಲಿಯ ಕೆರೆಗಳು, ಬಾವಿಗಳು ತುಂಬಿ ಹೋಗಿವೆ. ದುರ್ನಾತ ಹರಡಿದೆ. ನಮ್ಮ ಒಂದೇ ಒಂದು ಅಪರಾಧವೆಂದರೆ ನಮ್ಮ ಮಾತೃ ಧರ್ಮವನ್ನು ತ್ಯಜಿಸಲು ನಾವು ಒಪ್ಪದೇ ಇದ್ದುದು. ಗರ್ಭಿಣಿಯರನ್ನೂ ನಿರ್ದಯವಾಗಿ ಕೊಲ್ಲಲಾಗಿದೆ. ನಮ್ಮ ಹಸುಳೆ ಮಕ್ಕಳನ್ನು ನಮ್ಮೆದುರಿನಲ್ಲಿಯೇ ತುಂಡು ತುಂಡು ಮಾಡಿದ್ದಾರೆ. ಮಕ್ಕಳ ಅಳು ನಮ್ಮ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಹಸುಗಳನ್ನು ಕೊಂದು ಅವುಗಳ ರಕ್ತಗಳನ್ನು ದೇವಾಲಯಗಳಲ್ಲಿ ಚೆಲ್ಲಾಡಿದ್ದಾರೆ. ತಲೆ ತಪ್ಪಿಸಿಕೊಂಡು ಅರಣ್ಯವಾಸಿಗಳಾಗಿರುವ ನಮಗೆ ಮೈ ಮುಚ್ಚುವಷ್ಟು ಬಟ್ಟೆಯೂ ಇಲ್ಲವಾಗಿದೆ. ಶ್ರೀಮಂತ ಮನೆತನದ ಮಹಿಳೆಯರನ್ನು ಬಲಾತ್ಕಾರವಾಗಿ ಮೋಪ್ಲಾ ಕೂಲಿಗಳಿಗೆ ಲಗ್ನ ಮಾಡಿಸಿದ್ದಾರೆ. ನಮ್ಮ ಅಕ್ಕ, ತಂಗಿಯರು, ಗೆಳತಿಯರನೇಕರು ದಾರುಣ ಅತ್ಯಾಚಾರಗಳಿಗೆ ಬಲಿಯಾಗಿದ್ದಾರೆ. ನಾವೀಗ ರಕ್ಷಣೆಗೆ ನಿಮ್ಮ ಸರಕಾರವನ್ನು ಮೊರೆ ಹೋಗದೇ ಬೇರೆ ದಾರಿಯೇ ಇಲ್ಲ."
                 ಪೊಲೀಸರಿಗೆ ಬಲಿಯಾದ ಮೋಪ್ಲಾನೊಬ್ಬ ಸಾಯುವ ಸಂದರ್ಭದಲ್ಲಿ ಹೇಳಿದ ಮಾತು ಕೇಳಿ-"ನಾನು ನೆಮ್ಮದಿಯಿಂದ ಸಾಯುತ್ತಿದ್ದೇನೆ. ಹದಿನಾಲ್ಕು ಮಂದಿಯನ್ನು ನಾನು ಸಾಯಿಸಿದ್ದೇನೆ. ಮಹಿಳೆಯರನ್ನು ಅತ್ಯಾಚಾರ ಮಾಡಿ, ಹತ್ತು ಜನರ ಮತಾಂತರ ಮಾಡಿರುವ ನನಗೆ ಸತ್ತ ಮೇಲೆ ಮಾನಿನಿಯರಿಂದ ಸ್ವರ್ಗ ಸುಖ ದೊರೆಯುತ್ತದೆ."
ಮಾಧವನ್ ನಾಯರ್ ಪ್ರತ್ಯಕ್ಷ ಕಂಡು ಕಳುಹಿಸಿದ ವರದಿ--"...A pregnant woman carrying 7 months was cut through the abdomen by a rebel and she was seen lying dead on the way with the dead child projecting out....Another baby of 6 months was snatched away from the breast of mother and cut into two pieces...."

                ಅಬುಲ್ ಕಲಾಮ್ ಆಜಾದ್, ಹಕೀಂ ಅಜ್ಮಲ್ ಖಾನ್ ಮೊದಲಾದವರ ಉದ್ರೇಕಕಾರಿ ಭಾಷಣಗಳೇ ದಂಗೆಗೆ ಬೀಜಾರೋಪ ಮಾಡಿದವು ಎಂದು ಪಿ.ಸಿ. ಬಮ್ ಪರ್ಡ್ ವರದಿ ಮಾಡಿದರೆ, ಕಾಂಗ್ರೆಸ್ಸಿನ ಖಿಲಾಫತ್ ಪ್ರಚಾರವೇ ಇಡೀ ದುರಂತದ ಮೂಲವೆಂದು ರಾಲಿನ್ ಸನ್ ವರದಿ ಮಾಡಿದ್ದ. 'ವಿಚಾರಣೆ'(!)ಗಾಗಿ ಕಾಂಗ್ರೆಸ್ ನೇಮಿಸಿದ್ದ 'ತೈಯಬ್ಜಿ' ಮಹಾಶಯ ಮಲಬಾರಿಗೆ ಕಾಲಿಡದೇ ಮದರಾಸಿನಲ್ಲೇ ಕುಳಿತು ತನ್ನ ವರದಿ ಬರೆದ! ಶೌಕತ್ ಆಲೀಯಂತು "ಸ್ವರಾಜ್ಯ ಆಂದೋಲನ ಹಿಂದೂ ರಾಜ್ಯಕ್ಕಾಗಿ ನಡೆದಿದೆ. ಹಾಗಾಗಿ ಮುಸಲ್ಮಾನರೆಲ್ಲಾ ಅದನ್ನು ತ್ಯಜಿಸಬೇಕು" ಎಂದು ಕರೆ ಕೊಟ್ಟ. ಇಷ್ಟೆಲ್ಲಾ ಆದರೂ ಗಾಂಧಿ ಹಿಂದೂಗಳಿಗೆ "ಅಹಿಂಸೆ ಪಾಲಿಸಿ" ಎಂದನೇ ಹೊರತು ಅನ್ಯಾಯದ ಬಗ್ಗೆ ತುಟಿಪಿಟಿಕ್ಕೆನ್ನಲಿಲ್ಲ. ಆತನದೇ ಹೇಳಿಕೆ ನೋಡಿ..
" Hindus will have to learn to die in the face of hewrest odds in order to convert musalman full into a respecting friend."

            ಗಾಂಧಿಯ ಇನ್ನೊಂದು ಮಾನಗೆಟ್ಟ ಕಾರ್ಯವೆಂದರೆ ಮೋಪ್ಲಾಗಳಿಗಾಗಿ ಹಿಂದೂಗಳಿಂದಲೇ "ಪರಿಹಾರ ನಿಧಿ" ಸಂಗ್ರಹ ಮಾಡಿದ್ದು. ಮಾತ್ರವಲ್ಲ ಇಂಥವರು ೧೦ರೂ. ಕಳಿಸಿದ್ದಾರೆ, ಒಂದು ರೂಪಾಯಿ ಕಳುಹಿಸಿದ್ದಾರೆ...ಎಂದು ದಾಖಲೆ ಮಾಡುತ್ತಾ ಹೋಗಿದ್ದು! ಅಂದರೆ ಇಂದಿನ ಕಾಂಗ್ರೆಸ್ ಮನಸ್ಥಿತಿಯ ಮೂಲಪುರುಷ ಗಾಂಧಿ ಎಂಬುದು ಎಂತಹಾ ಅಜ್ಞಾನಿಗೂ ಅರ್ಥವಾಗುವ ವಿಷಯವಲ್ಲವೇ? ಆದರೂ ಅವ ಮಹಾತ್ಮ! ಎಂತಹಾ ದುರವಸ್ಥೆ ದೇಶದ್ದು?

ಹಿಂದೂಗಳ ರಕ್ಷಣೆಗೆ ಬಂದವರ್ಯಾರು?
>>ಮತಾಂತರಿತರನ್ನು ಮರಳಿ ಮಾತೃ ಧರ್ಮಕ್ಕೆ ಕರೆತಂದ ಆರ್ಯಸಮಾಜ.
>> ನಿಷ್ಪಕ್ಷಪಾತ ವರದಿ ಪ್ರಕಟಿಸಿ, ಸಂತ್ರಸ್ಥರಿಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದ ಸರ್ವೆಂಟ್ಸ ಆಫ್ ಇಂಡಿಯಾ, ವೈಎಂಸಿಎ ಮೊದಲಾದ ತಂಡಗಳು.
>>ಜನರನ್ನು ನೇರ ಸಂದರ್ಶಿಸಿ ಮಾಹಿತಿ ಸಂಗ್ರಹಿಸಿ, ಸಹಾಯ ಹಸ್ತ ಚಾಚಿದ ಮಹಾರಾಷ್ಟ್ರದ ಶ್ರೀ ಬಾಲಕೃಷ್ಣ ಮೂಂಜೆ.
>> ಇವತ್ತಿಗೂ ಇತಿಹಾಸದ ಘಟನೆ ಇತಿಹಾಸದ ಪುಟಗಳಿಂದ ಮರೆ ಮಾಡುವ ಬುದ್ದಿ ಜೀವಿಗಳ ಪ್ರಯತ್ನವನ್ನು ವಿಫಲವಾಗಿಸಿದ ಬ್ರಿಟಿಷರ ಸಚಿತ್ರ ವರದಿಗಳು, ಆಧಾರ ಸಹಿತ ಸತ್ಯ ಚಿತ್ರಣ ನೀಡಿದ ಅಮೃತಸರ-ಸಹರಾನ್ ಪುರದ ಪುಸ್ತಕ ಕರ್ತೃಗಳು ಹಾಗೂ ಕಾದಂಬರಿ ರೂಪದಲ್ಲಿ "ಮೋಪ್ಳಾ ದಂಗೆ" ಯನ್ನು ಪ್ರಕಟಿಸಿದ ಆರಾಧ್ಯ ದೈವ ಸ್ವಾತಂತ್ರ್ಯ ವೀರ ಸಾವರ್ಕರ್.
>>ಯಾರ ವಿರುದ್ಧ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೆವೋ ಅವರು: ಅಂದರೆ ಬ್ರಿಟಿಷ್ ಸರಕಾರ ಹಾಗೂ ಸೈನಿಕ & ಪೊಲೀಸ್ ಪಡೆಗಳು

                ದಂಗೆಗಳು ಶಾಂತವಾದ ಮೇಲೆ ಪುನರ್ವಸತಿ, ಮನೆ ದುರಸ್ತಿ, ಎತ್ತು, ದನ, ನೇಗಿಲು ಖರೀದಿ ಮೊದಲಾದ ಜೀವನಾಗತ್ಯಗಳಿಗೆ ಸಾಲ ಪಡೆದವರ ಸಂಖ್ಯೆಯೇ ೧೩,೫೦೦. ಆರ್ಯ ಸಮಾಜದ ಮುಖಾಂತರ ಮಾತೃಧರ್ಮಕ್ಕೆ ಮರಳಿದವರ ಸಂಖ್ಯೆಯೇ ೧೭೭೬.

                 ಗಾಂಧಿ ಪ್ರಣೀತ ಖಿಲಾಫತ್ ಕೂಸಾದ ಮೋಪ್ಲಾ ಬಂಡಾಯ ಕೇವಲ ಕೇರಳಕ್ಕೆ ಸೀಮಿತವಾಗುಳಿಯಲಿಲ್ಲ. ೧೯೨೪ರಲ್ಲಿ ಕೊಹಟ್, ೧೯೨೫ರಲ್ಲಿ ದೆಹಲಿ & ನಾಗಪುರ, ಭಾಗಲ್ಪುರ, ಲಖ್ನೋ, ಲಾಹೋರ್, ಗುಲ್ಬರ್ಗಾ, ೧೯೨೬ರಲ್ಲಿ ಕಲ್ಕತ್ತಾ, ಉತ್ತರ ಪ್ರದೇಶ, ಮುಂಬೈ, ೧೯೨೭ರಲ್ಲಿ ಕಲ್ಕತ್ತಾದಿಂದ ಲಾಹೋರ್ ಮಧ್ಯದ ವಿವಿಧ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಮುಸ್ಲಿಮ್ ದೌರ್ಜನ್ಯ ನಡೆಯಿತು. ೧೯೩೦-೩೧ರಲ್ಲಿ ಬಂಗಾಳ, ವೆಲ್ಲೂರ್, ಜಬಲ್ಪುರ, ಷಿಕಾರ್ ಪುರ, ಮೊದಲಾದ ಕಡೆ ಜಿಹಾದ್ ನಡೆಯಿತು. ೧೯೨೨-೨೭ರ ವರ್ಷಗಳ ಅವಧಿಯಲ್ಲಿ ಬಂಗಾಳ ಪ್ರಾಂತವೊಂದರಲ್ಲೇ ೩೫ ಸಾವಿರ ಮಹಿಳೆಯರ ಅಪಹರಣ, ಮಾನಭಂಗಗಳಾದವು. ಅದರ ಮುಂದುವರಿದ ಭಾಗವೇ ಮೊನ್ನೆ ಮೊನ್ನೆ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂದೂಗಳ ಮನೆಗಳ ಅಗ್ನಿಗಾಹುತಿ ಹಾಗೂ ಲೂಟಿ!

                ಅಂದು ಕೇರಳದಲ್ಲಿ ಭಯಾನಕಗೊಂಡ ಜಿಹಾದ್ ಇಂದಿಗೂ ನಿಂತಿಲ್ಲ. ಅದು ಈಗ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ವೈಣಿಕ ಜಿಹಾದ್, ಬ್ಯಾಂಕ್ ಜಿಹಾದ್, ರಾಜಕೀಯ ಜಿಹಾದ್ ಮುಂತಾದ ಹಲವು ಸ್ವರೂಪಗಳೊಂದಿಗೆ ಹಿಂದೂ ಸಮಾಜವನ್ನು ಸುಡುತ್ತಾ ಬರುತ್ತಿದೆ. ಒಂದು ಕಾಲದಲ್ಲಿ ಹಿಂದೂಗಳಾಗಿದ್ದು ಮತಾಂತರಗೊಂಡವರೇ ಈಗ ಉಳಿದ ಹಿಂದೂಗಳನ್ನು ಮತಾಂತರಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಹಿಂದೂ ಸಮಾಜ ಜಾಗೃತವಾಗಬೇಕಾಗಿದೆ.


ಇಂದಿಗೂ ಕೆಲವು ಸಮುದಾಯಗಳಿಗೆ ಮಾತೃ ಧರ್ಮವನ್ನು ಮರಳಿ ಸೇರುವ ಇಚ್ಛೆಯಿದೆ. ಆದರೆ ಅವರಿಗೆ ದಾರಿ ಕಾಣುತ್ತಿಲ್ಲ. ಆರ್ಯ ಸಮಾಜ ಬಿಟ್ಟರೆ ಶುದ್ಧೀಕರಣ ಮಾಡುವ ಸಂಸ್ಥೆಗಳಾವುವೂ ಕಾಣುತ್ತಿಲ್ಲ. ನಮ್ಮ ಸಹೋದರರನ್ನು ನಾವು ಸ್ವಾಗತಿಸಬೇಕಾಗಿದೆ. ಸ್ವಾಗತಿಸುವ ಮನಸ್ಸು ಮಾಡಬೇಕಾಗಿದೆ.


ವಂದೇ ಮಾತರಂ



ಸೋಮವಾರ, ಏಪ್ರಿಲ್ 29, 2013

ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ- ೩



ಅದು ದೇವರ ನಾಡೆಂದು ಕರೆಯಲ್ಪಡುತ್ತಿತ್ತು...ಆದರೆ ಅಂದಿನಿಂದ ದೆವ್ವಗಳ ನಾಡಾಗಿ ಬದಲಾಗುತ್ತಿದೆ...
ಮೋಪಳಾ ಭಯೋತ್ಪಾದನೆ--ರಕ್ತಬೀಜಾಸುರನ ಸಂತತಿ: ಭಾಗ- :


              ಕಲ್ಲಿಕೋಟೆಯ ಮುದುಮಣೆಯಿಲ್ಲಂ ಎಂಬೆಡೆಯ ದೇವಾಲಯದ ಗರ್ಭಗೃಹದಲ್ಲಿ ಬಂಡುಕೋರ ನಾಯಕನೊಬ್ಬ ಕುಳಿತು ದರ್ಬಾರ್ ನಡೆಸುತ್ತಿದ್ದ! ಸ್ಥಳೀಯರನ್ನು ಬಂಧಿಸಿ ಅವನ ಮುಂದೆ ಸಾಲಾಗಿ ಕರೆ ತರಲಾಗುತ್ತಿತ್ತು. ಅಲ್ಲಿ ಇಸ್ಲಾಮಿಗೆ ಪರಿವರ್ತಿತರಾಗಲು ಒಪ್ಪದವರನ್ನು ತಲೆ ಛೇದಿಸಿ ಪಕ್ಕದ ಬಾವಿಯೊಳಗೆ ಎಸೆಯಲಾಗುತ್ತಿತ್ತು. ಮಲಪ್ಪುರಂ ಉತ್ತರ ಭಾಗದಲ್ಲಿ ಇದ್ದ ತೂವೂರ್ ಎಂಬ ಬಾವಿಗೆ ಮೋಪ್ಲಾಗಳು ೨೭ ಮಂದಿ ಸ್ಥಳೀಯರ ತಲೆಗಳನ್ನು ಗರಗಸದಿಂದ ಕತ್ತರಿಸಿ ಎಸೆದರು.

              ಸ್ತ್ರೀಯರನ್ನು ಹಿಡಿದು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡುತ್ತಿದ್ದರು. ನಂತರ ಎಲ್ಲರ ಎದುರೇ ಅತ್ಯಾಚಾರ. ಗರ್ಭಿಣಿಯರ ಗರ್ಭ ಸೀಳಿ ಮಗುವನ್ನು ಕತ್ತರಿಸಿ ಎಸೆಯುತ್ತಿದ್ದರು. ಗರ್ಭಿಣಿ, ಹಸುಳೆ, ವೃದ್ಧೆ ಎನ್ನದೇ ಎಲ್ಲರನ್ನು ಮಾನಭಂಗಗೊಳಿಸುತ್ತಿದ್ದರು.

               ಕಲ್ಲಿಕೋಟೆಯಲ್ಲಿ ಜಾಮೋರಿನ್ ದೊರೆಯ ನೇತೃತ್ವದಲ್ಲಿ ನಡೆದ ಸಮಾವೇಶ ಎಲ್ಲಾ ಕೃತ್ಯಗಳನ್ನು ವಿವರವಾಗಿ ದಾಖಲೆ ಮಾಡಿತು. ಕೇರಳ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಕೆ.ಪಿ. ಕೇಶವ ಮೆನನ್, ೧೯೨೧ರ ಸೆಪ್ಟೆಂಬರ್ ೭ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರತ್ಯಕ್ಷದರ್ಶಿಯೊಬ್ಬರು ಬರೆದ ಪತ್ರ,...ಹೀಗೆ ಹತ್ತು ಹಲವು ವರದಿಗಳು ಮೋಪ್ಲಾಗಳ ಕೃತ್ಯಗಳನ್ನು ವರದಿ ಮಾಡಿದವು. ಆದಾಗ್ಯೂ ಗಾಂಧಿ ಪ್ರಣೀತ ಕಾಂಗ್ರೆಸ್ ಖಿಲಾಫತಿಗೆ ತನ್ನ ಬೆಂಬಲವನ್ನು ಹಿಂದೆ ತೆಗೆಯಲೇ ಇಲ್ಲ. ಸಂದರ್ಭದಲ್ಲಿ ಬ್ರಿಟಿಷ್ ರಕ್ಷಣಾ ಪಡೆಗಳು ಕಣಕ್ಕಿಳಿಯದಿದ್ದರೆ ಅದಾಗಲೇ ಕೇರಳ ಪಾಕಿಸ್ತಾನವಾಗಿ ಪರಿವರ್ತಿತವಾಗುತ್ತಿತ್ತು.
ಮೋಪ್ಲಾಗಳನ್ನು ಸಮರ್ಥಿಸಿದ ಗಾಂಧಿ:

              ಇಡೀ ದೇಶ ಮೋಪ್ಲಾ ಅತ್ಯಾಚಾರಕ್ಕೆ ಆತಂಕಗೊಂಡಿದ್ದರೆ, ಗಾಂಧಿ ಅದಾವುವೂ ತನಗೆ ತಿಳಿಯದೆಂದ. ಆಗ್ರಹಿಸಿ ಪ್ರಶ್ಣಿಸಿದಾಗ " ಮೋಪ್ಲಾಗಳು ತಮ್ಮ ಧಾರ್ಮಿಕಾದೇಶದಂತೆ ವರ್ತಿಸಿದ್ದಾರೆ" ಎಂದು ಅತ್ಯಾಚಾರಿಗಳನ್ನೇ ಸಮರ್ಥಿಸಿದ. ಆತನದೇ ಅಣಿಮುತ್ತುಗಳನ್ನು ಕೇಳಿ…
 "The brave and god fearing moplahs are fighting for the religion as understood by them by a method they feel their religion enjoins them to adopt"

"May be that all the sufferings of the hindus are the rewards of the in human sins they have committed for years."

ಗಾಂಧಿ "ವ್ಯಾಪಕ ಮತಾಂತರ ನಡೆದಿಲ್ಲ. ಕೇವಲ ಒಂದೇ ಒಂದು ಪ್ರಕರಣ ನಡೆದಿದೆ. " ಎಂದು "ಯಂಗ್ ಇಂಡಿಯಾ" ದಲ್ಲಿ ಬರೆದ.
"Dr. mahamud tells me that have been grossly exaggerated...The one case that was reported to him was ...non proven" ಗಾಂಧಿಯ ಹೇಳಿಕೆ ಕಾಂಗ್ರೆಸ್ ನಾಯಕರನ್ನೇ ದಿಗ್ಭ್ರಮೆಗೊಳಿಸಿತು. ದೌರ್ಜನ್ಯಗಳ ವರದಿಗಳೆಲ್ಲ ಉತ್ಪ್ರೇಕ್ಷಿತ ಎಂದು ಅದನ್ನು ತಳ್ಳಿ ಹಾಕುವ, ಸಕಲ ಪ್ರಯತ್ನವನ್ನೂ ಗಾಂಧಿ ಮಾಡಿದ.
                 "ಇಂಥಾ ಬಾಲಿಶ ಹೇಳಿಕೆಗಳನ್ನು ಕೊಡಬೇಡಿ" ಎಂದು ಗಾಂಧಿಗೆ ಹೇಳಿದ ತಪ್ಪಿಗೆ ಕೆ.ಪಿ. ಕೇಶವ ಮೆನನರ(ಕಲ್ಲಿ ಕೋಟೆಯ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ) ಮನೆಯ ಮೇಲೇ ಕಾಂಗ್ರೆಸ್ಸಿಗರು ಕಲ್ಲು ತೂರಿದರು. ಕಾಂಗ್ರೆಸ್ ತನಗೂ ಮೋಪ್ಲಾ ಗಲಭೆಗೂ ಸಂಬಂಧವಿಲ್ಲವೆಂದೂ, ಉತ್ಪ್ರೇಕ್ಷಿತ ವರದಿಗಳಿಂದ ವಿಚಲಿತರಾಗಿ ಮೋಪ್ಲಾಗಳು ಹಿಂಸಾಚಾರಕ್ಕಿಳಿದರೆಂದೂ ನಿರ್ಣಯ ಮಾಡಿತು. ಮದರಾಸ್ ಸರಕಾರದ ಅಧಿಕೃತ ದಾಖಲೆಯಲ್ಲಿ ಹಲವು ಸಾವಿರ ಮತಾಂತರ ಪ್ರಕರಣಗಳ ಅಧಿಕೃತ ವರದಿಗಳು ಇದ್ದಾಗ್ಯೂ ಗಾಂಧಿ ವರೆಗೆ ಅಂತಹ ಕೇವಲ ಪ್ರಕರಣಗಳು ನಡೆದಿವೆ ಎಂದ(೧೯೨೨ ಜನವರಿ). ಕಾಂಗ್ರೆಸ್ ಮಗುಮ್ಮಾಗಿ ಬೆಂಬಲಿಸಿತು.
                 ಸರ್ವೆಂಟ್ಸ್ ಆಫ್ ಸೊಸೈಟಿಯ ವರದಿಯಂತೆ ಮೋಪ್ಲಾಗಳಿಂದ ೧೦೦೦ ಹಿಂದೂಗಳ ಕಗ್ಗೊಲೆ, ೨೦೦೦೦ ಬಲವಂತದ ಮತಾಂತರಗಳು, ಹಲವು ಸಾವಿರ ಮಹಿಳೆಯರ ಅತ್ಯಾಚಾರ, ಜನರಿಂದ ಕೋಟಿಗೂ ಮಿಕ್ಕಿದ ಹಣದ ಲೂಟಿ ಆಗಿತ್ತು. ಎಡಬಿಡಂಗಿ ಕಮ್ಯೂನಿಷ್ಟರು "ಮೋಪ್ಲಾಗಳು ೧೧೦೦ ದೇವಾಲಯಗಳ ಪೈಕಿ ೧೦೦ ದೇವಾಲಯಗಳನ್ನು ಮಾತ್ರ ಧ್ವಂಸ ಮಾಡಿದರು. ೫೦೦ ಮಂದಿ ಮಾತ್ರ ಕೊಲೆಯಾದರು. ೨೫೦೦ ಮಂದಿ ಮಾತ್ರ ಮತಾಂತರಗೊಂಡರು" ಎಂಬ ತನ್ನ ಎಂದಿನ ಹಿಂದೂ ವಿರೋಧಿ ಮನಸ್ಥಿತಿಯ ವರದಿಗಳನ್ನೇ ತಯ್ಯಾರು ಮಾಡಿದರು.
             ದಂಗೆಗಳನ್ನು ತಹಬಂದಿಗೆ ತರಲು ಪೊಲೀಸ್ ಪಡೆಗಳಿಗೆ ಸಾಧ್ಯವಾಗದೇ ಸೈನಿಕ ತುಕಡಿಗಳನ್ನೇ ಕರೆಸಿಕೊಳ್ಳಲಾಯಿತು. ಹಂತದಲ್ಲಿ ಗೆರಿಲ್ಲಾ ಯುದ್ಧ ತಂತ್ರಕ್ಕೆ ಶರಣು ಹೋದ ಮೋಪ್ಲಾಗಳನ್ನು ನಿಯಂತ್ರಿಸಲು ಒಂದು ವಿಶೇಷ ಅನುಭವಿ ಪಡೆಯನ್ನೇ ತರಬೇತುಗೊಳಿಸಿ ನೇಮಿಸಲಾಯಿತು. ಹೀಗೆ ಏಳೆಂಟು ತಿಂಗಳುಗಳ ಪರ್ಯಂತ ಮೋಪ್ಲಾಗಳೊಂದಿಗೆ ಕಾದಾಡಿದ ಪಡೆ ದಂಗೆಯನ್ನು ನಿಯಂತ್ರಿಸಿತು.