"ಬೋಕೋ ಹರಾಮ್" ಎಂಬ ಹರಾಮ್ ಕೋರ್!
ಆಫ್ರಿಕಾ...
ಒಂದು ಕಾಲದಲ್ಲಿ ಅಗಾಧ ನೈಸರ್ಗಿಕ ಸಂಪತ್ತಿನಿಂದ, ತಮ್ಮದೇ ಆದ ಸಂಸ್ಕೃತಿಯನ್ನು ಪಾಲಿಸಿಕೊಂಡು ಪ್ರಕೃತಿಯೊಡನೆ ಒಂದಾಗಿ ಬದುಕುತ್ತಿದ್ದ ವಿವಿಧ ಬುಡಕಟ್ಟು ಜನಾಂಗಗಳಿಂದ ತುಂಬಿದ್ದ ಸಂಪದ್ಭರಿತ ಭೂಖಂಡ. ಅಂತಹ ಭೂಖಂಡದ ಮೇಲೆ ಸಾಮ್ರಾಜ್ಯಶಾಹಿಗಳ ದೃಷ್ಠಿ ಬಿತ್ತು. ಆಫ್ರಿಕಾದಲ್ಲಿ ಯಥೇಚ್ಛವಾಗಿ ದೊರೆಯುತ್ತಿದ್ದ ಚಿನ್ನ, ದಂತ, ವಜ್ರ ಮುಂತಾದ ಕಣ್ಣು ಕೋರೈಸುವ ಸಂಪತ್ತನ್ನು ದೋಚಲು ವ್ಯಾಪಾರದ ಸೋಗು ಹಾಕಿಕೊಂಡು ಈ ಭೂಖಂಡಕ್ಕೆ ಬಂದಿಳಿದ ಪೋರ್ಚುಗೀಸರು, ಡಚ್ಚರು, ಫ್ರೆಂಚರು, ಬ್ರಿಟಿಷರು, ಇಟಾಲಿಯನ್ನರು, ಬೆಲ್ಜಿಯನ್ನರು ಆಫ್ರಿಕಾದ ವಿವಿಧ ಜನಾಂಗ ಮತ್ತು ಬುಡಕಟ್ಟುಗಳ ನಡುವಿನ ವೈರುಧ್ಯ-ವೈಮನಸ್ಯಗಳನ್ನು ಬಳಸಿಕೊಂಡು ಸೈನಿಕ ಬಲದಿಂದ ತಮ್ಮ ಯಜಮಾನಿಕೆಯನ್ನು ಹೇರುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲ ಪ್ರಕೃತಿಯ ಆರಾಧಕರ ತಲೆಯೊಳಗೆ ತಮ್ಮದೇ ಮೌಢ್ಯದ ಮತವನ್ನು ತುಂಬಿ ಭೂಖಂಡದ ತುಂಬ ಅಶಾಂತಿ, ಮೌಢ್ಯ, ಬಡತನ, ಅರಾಜಕತೆಯನ್ನು ಹಬ್ಬಿಸಿದರು. ನೈಸರ್ಗಿಕ ಸಿರಿ ಸಂಪತ್ತು ಬರಿದಾಯಿತು. ಆಫ್ರಿಕಾ ಕಗ್ಗತ್ತಲ ಖಂಡವಾಗುಳಿಯಿತು. ಈಗ ಆಫ್ರಿಕಾದಲ್ಲಿ ದಕ್ಷಿಣ ಆಫ್ರಿಕಾ ಹೊರತುಪಡಿಸಿದರೆ ಆಫ್ರಿಕಾದ ದೇಶಗಳು ಸುದ್ದಿಯಾಗುವುದು ಕೆಟ್ಟ ಕಾರಣಗಳಿಗಾಗಿಯೇ. ದರೋಡೆಕೋರರ, ಹಡಗುಗಳ್ಳರ ತಾಣ ಸೋಮಾಲಿಯಾ, ಮಾದಕ ವಸ್ತುಗಳ ಸಾಗಾಣಿಕೆಗಾರ ನೈಜೀರಿಯಾ, ಸರ್ವಾಧಿಕಾರಿಗಳಿಂದಾಗಿ ಸರ್ವನಾಶಗೊಂಡ ಜಿಂಬಾಬ್ವೆ, ಲಿಬಿಯಾ, ಸದಾ ಕಲಹದ ಗೂಡಾಗಿರುವ ಈಜಿಪ್ಟ್, ಅಂತಃಕಲಹದಿಂದ ಜರ್ಝರಿತಗೊಂಡ ಲೈಬೀರಿಯಾ, ಘಾನಾ, ಜನಾಂಗೀಯ ಕಲಹದಲ್ಲಿ ಮುಳುಗಿ ಹೋದ ಅಂಗೋಲಾ ಮತ್ತು ಮೊಜಾಂಬಿಕ್, ಯುದ್ದ ಮತ್ತು ಕ್ಷಾಮಗಳಿಂದ ನಶಿಸುತ್ತಿರುವ ಸೂಡಾನ್...!
2011!
ಆಫ್ರಿಕಾ ಖಂಡದ ಉತ್ತರ ಭಾಗದ ಅವಸಾನಕ್ಕೆ ಮುನ್ನುಡಿ ಬರೆದ ವರ್ಷ!
ಪದೇ ಪದೇ ಅವಮಾನ-ಅನ್ಯಾಯಕ್ಕೊಳಕ್ಕಾಗುತ್ತಿದ್ದವರ ಸಹನೆಯ ಕಟ್ಟೆ ಒಡೆದು ಆರಂಭವಾದದ್ದು "ಅರಬ್ ಸ್ಪ್ರಿಂಗ್" ಕ್ರಾಂತಿ. 2010ರ ಡಿಸೆಂಬರಿನಲ್ಲಿ ಮೊಹಮ್ಮದ್ ಬುವಾಜಿಜಿ ಎಂಬ ಹಣ್ಣಿನ ವ್ಯಾಪಾರಿ ಪರವಾನಿಗೆ ಇಲ್ಲದೆ ವ್ಯಾಪಾರ ನಡೆಸುತ್ತಿದ್ದಾಗ ಪೊಲೀಸರು ಮಾರಾಟ ನಡೆಸದಂತೆ ತಡೆದರು. ಒಪ್ಪದಿದ್ದಾಗ ಕಪಾಳ ಮೋಕ್ಷವಾಯಿತು. ಅವಮಾನಗೊಂಡ ಆತ ಸರಕಾರೀ ಭವನದ ಎದುರು ತನ್ನನ್ನು ತಾನು ಸುಟ್ಟುಕೊಂಡಾಗ ಹಬ್ಬಿದ ಕಿಡಿ ಇಡೀ ಟ್ಯುನಿಷಿಯಾಕ್ಕೆ ಹಬ್ಬಿತು. ಎಸ್ರಾ ಅಬ್ಡೆಲ್ ಫತಾಹ್ ಎಂಬ ಸಾಮಾಜಿಕ ಕಾರ್ಯಕರ್ತೆಯೊಬ್ಬಳಿಂದ ಆರಂಭವಾದ ಪ್ರತಿಭಟನೆ ಕ್ರಾಂತಿಸ್ವರೂಪವಾಗಿ ಈಜಿಪ್ಟಿನ ಅಧ್ಯಕ್ಷ ಮುಬಾರಕ್ ತನ್ನ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಎರಡೂ ದೇಶಗಳಲ್ಲಿ ಸರಕಾರಗಳು ಬದಲಾದವು. ಈ ಕ್ರಾಂತಿ ಲಿಬಿಯಾ, ಯೆಮೆನ್, ಬಹ್ರೈನ್, ಸಿರಿಯಾ, ಅಲ್ಜೀರಿಯಾ, ಮೊರಾಕ್ಕೋ, ಸೂಡಾನ್ ಮುಂತಾದ ದೇಶಗಳಲ್ಲೂ ಅಲ್ಲೋಲಕಲ್ಲೋಲವನ್ನುಂಟು ಮಾಡಿ ಸರಕಾರಗಳ ಬದಲಾವಣೆಗೂ ಕಾರಣವಾಯಿತು. ಆದರೆ ಈ ಕ್ರಾಂತಿಯಿಂದ ಬದಲಾವಣೆಯೇನಾದರೂ ಆಯಿತೇ ಎಂದರೆ ಶೂನ್ಯ! "ಮುಬಾರಕ್ ಸರಕಾರ ಇದ್ದಾಗಿನ ಸ್ಥಿತಿಗೂ ಈಗಿನ ಈಜಿಪ್ಟಿನ ಸ್ಥಿತಿಗೂ ಯಾವುದೇ ಬದಲಾವಣೆಯಿಲ್ಲ" ಎನ್ನುತ್ತಾಳೆ ಕ್ರಾಂತಿಗೆ ಮುನ್ನುಡಿ ಬರೆದಿದ್ದ ಎಸ್ರಾ!
ಜನ ಬದಲಾವಣೆ ಬಯಸಿ ಕ್ರಾಂತಿ ನಡೆಸಿದರೂ ಬದುಕೇಕೆ ಬದಲಾಗಲಿಲ್ಲ? ಆ ದೇಶಗಳು ಅಭಿವೃದ್ಧಿಯ ಪಥವನ್ನೇಕೆ ತುಳಿಯಲಿಲ್ಲ? ಕಾರಣ ಒಂದೇ ಇಸ್ಲಾಂ! ಕ್ರಾಂತಿ ಜನಸಾಮಾನ್ಯರಿಂದ ಆರಂಭಗೊಂಡರೂ ಅದರ ಮೇಲೆ ಹತೋಟಿ ಸಾಧಿಸಿ ಮೆರೆದ ಮತಾಂಧ ಶಕ್ತಿಗಳು ತಮ್ಮ ಪ್ರಭುತ್ವವನ್ನು ಖಚಿತಪಡಿಸಿಕೊಂಡರು. ಈಜಿಪ್ಟಿನಲ್ಲಿ ನಡೆದ ಚುನಾವಣೆಯಲ್ಲಿ 2/3 ರಷ್ಟು ಸ್ಥಾನಗಳನ್ನು ಪಡೆದ ಮತೀಯವಾದಿಗಳು ಸ್ಪೀಕರ್ ಸ್ಥಾನದಲ್ಲಿ ಮುಸ್ಲಿಮನನ್ನೇ ಕೂರಿಸುವುದೆಂದು ನಿರ್ಣಯಿಸಿದ್ದಲ್ಲದೆ ಸಂವಿಧಾನವನ್ನು ತಮಗೆ ತಕ್ಕಂತೆ ಬದಲಾಯಿಸಿಕೊಂಡವು. ಯಾವೆಲ್ಲಾ ರಾಷ್ಟ್ರಗಳಲ್ಲಿ ಕ್ರಾಂತಿ ನಡೆದಿತ್ತೋ ಅಲ್ಲೆಲ್ಲಾ ಆಲ್ ಕೈದಾ ಅನಾಯಾಸವಾಗಿ ನುಸುಳಿ ಕಾರ್ಯಾಚರಣೆ ಆರಂಭಿಸಿತು. ಇದರೊಂದಿಗೆ ಜನರ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಯಿತು! ಆಲ್ ಕೈದಾದ ನೈಜೀರಿಯಾದ ರೂಪವೇ "ಬೋಕೋ ಹರಾಮ್"!
ಏನಿದು ಬೋಕೋ ಹರಾಮ್?
ಮತಾಂತರ ಹಾಗೂ ಜಿಹಾದನ್ನೇ ಮೂಲ ಧ್ಯೇಯವಾಗಿರಿಸಿಕೊಂಡು 2002ರಲ್ಲಿ ಮಹಮ್ಮದ್ ಯೂಸುಫ್ ಎಂಬಾತನಿಂದ ಆರಂಭವಾಯಿತು ಈ ಬೋಕೋ ಹರಾಮ್! "ಆಧುನಿಕ ಶಿಕ್ಷಣ ನಿಷಿದ್ದ" ಎನ್ನುವುದು ಬೋಕೋ ಹರಾಮಿನ ಅರ್ಥ. ದೇಶವನ್ನು ಸಂಪೂರ್ಣ ಇಸ್ಲಾಂಮಯಗೊಳಿಸಿ ಷರಿಯತ್ ಕಾನೂನನ್ನು ಜಾರಿಗೊಳಿಸುವುದೇ ಇದರ ಉದ್ದೇಶವಾಗಿತ್ತು. ಮುಸ್ಲಿಮನೊಬ್ಬ ದೇಶದ ಅಧ್ಯಕ್ಷನಾಗಿದ್ದರೂ ಈ ದೇಶ ಕಾಫಿರರಿಂದಲೇ ಆಳಲ್ಪಡುತ್ತಿದೆ ಎನ್ನುವ ಬೋಕೋ ಹರಾಮ್ ಸದಸ್ಯರು "ಯಾವುದೆಲ್ಲಾ ದೇಶಗಳು ಅಲ್ಲಾ ಹೇಳಿದ ರೀತಿಯ ಆಳ್ವಿಕೆಯಡಿಯಲ್ಲಿಲ್ಲವೋ ಅಂತಹ ದೇಶಗಳೆಲ್ಲವನ್ನೂ ಆಕ್ರಮಿಸಬಹುದು" ಎಂಬ ಕುರಾನಿನ ವಾಕ್ಯದಿಂದ ತಾವು ಪ್ರಭಾವಿಸಲ್ಪಟ್ಟಿದ್ದೇವೆ ಎನ್ನುತ್ತಾರೆ! ಮಾತ್ರವಲ್ಲ ಆಧುನಿಕವಾದ ಎಲ್ಲವನ್ನೂ ವಿರೋಧಿಸುತ್ತದೆ ಬೋಕೋ ಹರಾಮ್. ಚುನಾವಣೆಯಿಂದ ಹಿಡಿದು ಜನರು ಅಂಗಿ-ಪ್ಯಾಂಟ್ ಹಾಕುವುದನ್ನು ವಿರೋಧಿಸುತ್ತದೆಯೆಂದಾದರೆ ಅದರ ಮೂಲಭೂತವಾದ ಯಾವ ಮಟ್ಟದಲ್ಲಿರಬಹುದು!
2002ರಲ್ಲಿ ಮಹಮ್ಮದ್ ಯೂಸುಫ್ ಮೈದುಗುರಿಯಲ್ಲಿ ಸಂಘಟನೆಯೊಂದಿಗೆ ಮಸೀದಿ ಹಾಗೂ ಮದರಸಾಗಳನ್ನು ಕೂಡಾ ಆರಂಭಿಸಿದ. ನೈಜೀರಿಯಾ ಮಾತ್ರವಲ್ಲದೆ ನೆರೆಯ ದೇಶಗಳ ಅನೇಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದರು. ಆದರೆ ಶಿಕ್ಷಣ ಆತನ ಉದ್ದೇಶವಾಗಿರಲಿಲ್ಲ. ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ಆತ ಶಾಲೆಯಲ್ಲಿ ಜಿಹಾದಿ ಶಿಕ್ಷಣ ನೀಡಲಾರಂಭಿಸಿದ. ಮುಂದೆ ಅದು ಬೋಕೋ ಹರಾಮಿನ ಭದ್ರ ನೆಲೆಯಾಗಿ ಜಿಹಾದಿ ನೇಮಕಾತಿಯ ತಾಣವಾಗಿ ಬದಲಾಯಿತು. 2009ರಲ್ಲಿ ಸಂಚಾರೀ ನಿಯಮಗಳನ್ನು ಉಲ್ಲಂಘಿಸುವಂತೆ ತನ್ನ ಅನುಯಾಯಿಗಳಿಗೆ ಕರೆ ನೀಡಿದ ಯೂಸುಫ್, ಬೋರ್ನೋ, ಯೋಬ್, ಕಾನೋ ರಾಜ್ಯಗಳಲ್ಲಿ ನಾಗರಿಕ ಜೀವನ ಅಸ್ತವ್ಯಸ್ತಗೊಳ್ಳಲು ಕಾರಣನಾದ. ಈ ದಂಗೆಯಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಯೂಸುಫನ ಬಳಿಕ ಅಬೂಬಕರ್ ಶೇಖ್ ಬೋಕೋ ಹರಾಮಿನ ನೇತೃತ್ವ ವಹಿಸಿದ. 2010ರಲ್ಲಿ ಆತ್ಮಾಹುತಿ ಬಾಂಬರುಗಳನ್ನು ಬಳಸಿಕೊಂಡು ಬೌಚಿಯಲ್ಲಿದ್ದ ಕಾರಾಗೃಹವನ್ನೇ ಛಿದ್ರಗೊಳಿಸಿ ತನ್ನ 700 ಸಂಗಡಿಗರನ್ನು ಬೋಕೋಹರಾಮ್ ಬಿಡುಗಡೆಗೊಳಿಸಿತು.
ಕಳೆದ ಏಪ್ರಿಲ್ ನಲ್ಲಿ 300 ಬಾಲಕಿಯರನ್ನು ಅಪಹರಿಸಿದ ಬೋಕೋಹರಾಮ್ ಬಂಧನದಲ್ಲಿರುವ ತನ್ನ ಸದಸ್ಯರ ಬಿಡುಗಡೆಗೆ ಆಗ್ರಹಿಸಿತು. ಆದರೆ ನೈಜೀರಿಯಾ ಸರಕಾರ ಮನ್ನಿಸಲಿಲ್ಲ. ಇದರ ಬಳಿಕ ನಡೆದದ್ದು ಸಾಲು ಸಾಲು ಅಪಹರಣಗಳು! ಜೂನ್ ತಿಂಗಳಲ್ಲಿ ಮತ್ತೆ ಐವತ್ತು ಜನರನ್ನು ಅಪಹರಿಸಿತು. ಅದರ ಮರುವಾರ ಇಪ್ಪತ್ತು ಮಹಿಳೆಯರ ಅಪಹರಣ ನಡೆಯಿತು. ಚರ್ಚುಗಳ ಮೇಲೆ, ಆಡಳಿತಾತ್ಮಕ ಕಛೇರಿಗಳ ಮೇಲೆ ಮಾರುಕಟ್ಟೆಗಳ ಮೇಲೆ ಬಾಂಬು ದಾಳಿ ನಡೆಸಿ ಸಾವಿರಾರು ಜನರ ಮಾರಣ ಹೋಮವನ್ನೂ ನಡೆಸಿದೆ. ಹಳ್ಳಿಗರನ್ನೂ ಬಿಡಲಿಲ್ಲ ಈ ಖೂಳರು. ಹಳ್ಳಿಗಳನ್ನೂ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾ ಸಾಗಿರುವ ಈ ಭಯೋತ್ಪಾದಕರು ಕಳೆದ ಹನ್ನೆರಡು ವರ್ಷಗಳಲ್ಲಿ ಕೇವಲ ನೈಜೀರಿಯಾ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳಾದ ಕ್ಯಾಮರೂನ್, ಚಾದ್, ನೈಜರ್ ಗಳಿಗೂ ತಮ್ಮ ಜಾಲವನ್ನು ವಿಸ್ತರಿಸಿದ್ದಾರೆ.
2002-2014ರ ನಡುವೆ ನೈಜೀರಿಯಾದಲ್ಲೇ ಸುಮಾರು 12,000ಕ್ಕೂ ಅಧಿಕ ಜನರನ್ನು ಆಪೋಶನ ತೆಗೆದುಕೊಂಡಿದೆ ಬೋಕೋ ಹರಾಮ್. ಸುಮಾರು 8,000ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 2013ರಲ್ಲಿ ಅಮೇರಿಕಾದಿಂದ ಭಯೋತ್ಪಾದಕ ಸಂಘಟನೆಯೆಂದು ಗುರುತಿಸಲ್ಪಟ್ಟ ಬೋಕೋ ಹರಾಮಿನಿಂದಾಗಿ ಮೂರು ಮಿಲಿಯಕ್ಕೂ ಹೆಚ್ಚು ಜನ ಘಾಸಿಗೊಂಡಿದ್ದಾರೆ. ನೈಜೀರಿಯಾದಲ್ಲೀಗ ಬಾಂಬುದಾಳಿ ದಿನನಿತ್ಯದ ಸುದ್ದಿ. ಪ್ರತಿದಿನ ಕನಿಷ್ಟ ಐವತ್ತು ಜನರನ್ನು ಕೊಲ್ಲುವ, ಸೈನಿಕ ನೆಲೆಗಳನ್ನು ನಾಶಪಡಿಸುವ ಬೋಕೋ ಹರಾಮ್ ದೇಶವನ್ನು ಸಂಪೂರ್ಣ ಇಸ್ಲಾಮೀಕರಣಗೊಳಿಸುವುದೇ ತನ್ನ ಉದ್ದೇಶವೆಂದು ಬಹಿರಂಗವಾಗಿ ಸಾರುತ್ತದೆ. ಈ ಭಯೋತ್ಪಾದಕ ಸಂಘಟನೆ ಯಾವ ರೀತಿ ಹಬ್ಬಿದೆಯೆಂದರೆ ಈಶಾನ್ಯ ನೈಜೀರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಒಂದು ವರ್ಷ ಕಳೆದರೂ ಬೋಕೋ ಹರಾಮ್ ಅನ್ನು ನಿಗ್ರಹಿಸಲು ನೈಜೀರಿಯಾ ಸರಕಾರಕ್ಕೆ ಸಾಧ್ಯವಾಗಿಲ್ಲ. ನೈಜೀರಿಯಾದ ಸೇನೆಯ ಕ್ಷಮತೆಯೂ ಅಷ್ಟಕಷ್ಟೇ! ಉತ್ತರ ಭಾಗದ ಜನರಂತೂ ಸೇನೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಮೇಲೆ ಬೋಕೋ ಹರಾಮ್ ಮತ್ತಷ್ಟು ಆಕ್ರಮಕವಾಗಿರುವುದು ಜನ ಪ್ರಾಣವನ್ನು ಕೈಯಲ್ಲಿ ಹಿಡಿದು ಜೀವಿಸುವಂತಾಗಿದೆ. ಒಂದುಕಾಲದಲ್ಲಿ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದ್ದ ನೈಜೀರಿಯಾದ ಸೇನೆ ಈಗ ತನ್ನ ಸತ್ವವನ್ನೇ ಕಳೆದುಕೊಂಡಿರುವುದು ವಿಷಾದನೀಯ.
ನೈಜೀರಿಯಾ 174 ಮಿಲಿಯನ್ ಜನಸಂಖ್ಯೆಯುಳ್ಳ, 250 ಭಾಷೆಗಳನ್ನು ಮಾತನಾಡುವ ಸುಮಾರು 350 ಜನಾಂಗೀಯ ಗುಂಪುಗಳಿರುವ ಆಫ್ರಿಕಾದ ಅತ್ಯಂತ ಜನನಿಬಿಡ ದೇಶ. ಇಲ್ಲಿದ್ದ ಬಹುತೇಕ ಮೂಲನಿವಾಸಿಗಳನ್ನು ಮೊದಲು ಬಂದ ಕ್ರೈಸ್ತರು ಮತಾಂತರಗೊಳಿಸಿದರೆ, ಈಗ ಬೋಕೋ ಹರಾಮ್ ಇಸ್ಲಾಮಿಗೆ ಬಲವಂತವಾಗಿ ಮತಾಂತರಗೊಳಿಸುತ್ತಿದೆ. ಒಂದು ಕಾಲದಲ್ಲಿ ಕ್ರಿಸ್ತ-ಅಲ್ಲಾರ ಗೊಡವೆ ಇಲ್ಲದೆ ತಮ್ಮದೆ ಸಂಸ್ಕೃತಿಯನ್ನು ಪೋಷಿಸಿಕೊಂಡು ಶಾಂತಿಯುತವಾಗಿ, ಜಾಸ್ತಿಯೆಂದರೆ ತಮ್ಮಲ್ಲೇ ಜಗಳವಾಡಿಕೊಂಡು ಬದುಕುತ್ತಿದ್ದ ಈ ಶಕ್ತಿಶಾಲಿ ಜನಾಂಗದ ಮತಿ-ಸ್ಮೃತಿ ಎರಡೂ ಅಳಿದು ಹೋಗಿದೆ. ಈಗ ಈ ಜನಾಂಗದ ಸಂಖ್ಯೆ ಹತ್ತು ಪ್ರತಿಶತಗಳಿಗಿಂತಲೂ ಕಡಿಮೆಯಿದೆಯೆಂದರೆ ಅಲ್ಲಿ ಮತಾಂತರ ಯಾವ ಪರಿಯಲ್ಲಿದ್ದಿರಬಹುದು! ಈಗಂತೂ ಇಸ್ಲಾಂ ಹಾಗೂ ಕ್ರೈಸ್ತರದ್ದೇ ಆಟಾಟೋಪ. ಉತ್ತರ ಭಾಗದಲ್ಲಿ ಇಸ್ಲಾಂ ಪ್ರಬಲವಾಗಿದ್ದರೆ ದಕ್ಷಿಣದಲ್ಲಿ ಕ್ರೈಸ್ತರು! ಒಂದು ಕಾಲದಲ್ಲಿ ಪ್ರಬಲವಾಗಿದ್ದ ಯೇಸುವಿನ ಹಿಂಬಾಲಕರು ಇಲ್ಲಿನ ನೈಸರ್ಗಿಕ ಸಂಪತ್ತನ್ನು ಹಾಳುಗೆಡವಿದರೆ ಈಗ ಇಸ್ಲಾಂ ಮತಾಂಧತೆ ಕ್ರೈಸ್ತರನ್ನೆ ಭೀತರನ್ನಾಗಿಸಿದೆ. ನೈಜೀರಿಯಾದ ಗುಪ್ತಚರ ಇಲಾಖೆಯ ಮಾಹಿತಿಯಂತೆ 1999ರಿಂದ ಇಲ್ಲಿಯವರೆಗೆ 25000ಕ್ಕೂ ಹೆಚ್ಚು ಜನ ಮುಸ್ಲಿಮ್-ಕ್ರಿಶ್ಚಿಯನ್ನರ ಅಧಿಕಾರದ ಪೈಪೋಟಿಗೆ ಬಲಿಯಾಗಿದ್ದಾರೆ! ಮತೀಯ ಕಲಹದ ಪರಿಣಾಮ ಎಷ್ಟಿದೆಯೆಂದರೆ 70% ಜನ $1.25ಗಿಂತಲೂ ಕಡಿಮೆ ದೈನಂದಿನ ವೇತನ ಪಡೆಯುತ್ತಾರೆ. ಬೋಕೋ ಹರಾಮಿನಿಂದ ಹೆಚ್ಚು ತೊಂದರೆಗೊಳಗಾಗಿರುವ ಉತ್ತರ ಭಾಗದಲ್ಲಿ 72%ದಷ್ಟು ಜನ ಬಡತನದ ಬವಣೆಗೊಳಗಾಗಿ ಜೀವನ ನಡೆಸುತ್ತಿದ್ದಾರೆ. ನೈಜರ್ ಡೆಲ್ಟಾ ಭಾಗದಲ್ಲಿ ಸಿಗುವ ತೈಲ ಸಂಪತ್ತು ಉತ್ತರದ ಕೆಲವೇ ಕೆಲವು ಮುಸ್ಲಿಮರ ಹತೋಟಿಯಲ್ಲಿದ್ದು ದೇಶ ಆರ್ಥಿಕ ಅಸಮಾನತೆಯಿಂದ ಬಳಲುತ್ತಿದೆ. ಬೋಕೋ ಹರಾಮ್ ಜಾಗತಿಕ ಭಯೋತ್ಪಾದಕ ಸಂಘಟನೆಗಳಾದ ವಾಯುವ್ಯ ಆಫ್ರಿಕಾದಲ್ಲಿ ಕಾರ್ಯಾಚರಿಸುತ್ತಿರುವ ಆಲ್ ಕೈದಾ( al-Qaeda in the Islamic Maghreb (AQIM)), ಸೋಮಾಲಿಯಾದ ಆಲ್ ಶಬಾಬ್, ಹಾಗೂ ಅರಬ್ ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಆಲ್ ಕೈದಾ (al-Qaeda in the Arabian Peninsula)ಗಳ ಜೊತೆ ನಿರಂತರ ಸಂಪರ್ಕ ಕಾಯ್ದುಕೊಂಡು ಶಸ್ತ್ರಾಸ್ತ್ರ ಸಹಾಯವನ್ನು ಪಡೆಯುತ್ತಿದೆ.
ಶಕ್ತಿವಂತನೊಬ್ಬನಲ್ಲಿ ಅಸಹನೆ, ಕ್ರೌರ್ಯ, ಅಸಹಿಷ್ಣುತೆ ತುಂಬಿದ್ದರೆ ಆತನಿಂದ ಜಗತ್ತಿಗೇ ಆಪತ್ತು. ಹಿಂದೆ ದಾನವರು ವರಬಲದಿಂದ ಕೊಬ್ಬಿ ಜನರ ಮಾರಣಹೋಮ ನಡೆಸುತ್ತಿದ್ದರು. ಇಂದು ಜನರಲ್ಲಿರುವ ಅಲ್ಪ ಸ್ವಲ್ಪ ಬುದ್ದಿಯನ್ನು ನಾಶ ಮಾಡಿ ಇಸ್ಲಾಂಗೆ ಮತಾಂತರ ಮಾಡಿ ಮತೀಯತೆಯನ್ನು ಮೆದುಳಲ್ಲಿ ತುಂಬಿಸಿ ಜಗತ್ತಿನೆದುರು ಕಾಳಗಕ್ಕಿಳಿಸಲಾಗುತ್ತಿದೆ. ಮೊದಲೇ ಬಲಯುತರಾಗಿರುವ ಆಫ್ರಿಕಾದ ಜನಾಂಗಗಳ ಮೆದುಳು ಕಿತ್ತೆಸೆದು ಇಸ್ಲಾಂ ಎಂಬ ಅಫೀಮನ್ನು ತಿನ್ನಿಸಿದರೆ ಏನಾಗಬಹುದು ಎಂಬುದು ಆ ದೇಶಗಳ ಪ್ರಸಕ್ತ ಸ್ಥಿತಿಯನ್ನು ನೋಡಿದರೆ ತಿಳಿಯುತ್ತದೆ. ಕೆಲವನ್ನು ಹುಟ್ಟುವಾಗಲೇ ಚಿವುಟಿ ಹಾಕಬೇಕು...ಇಲ್ಲದಿದ್ದರೆ ಜಗತ್ತಿಗೆ ನೆಮ್ಮದಿ ಇರುವುದಿಲ್ಲ. ನಮ್ಮಲ್ಲೂ ಅಲ್ಲಲ್ಲಿ ನಿರಂತರ ಇಂತಹ ಸಂಘಟನೆಗಳು ಹುಟ್ಟಿಕೊಳ್ಳುತ್ತಲೇ ಇವೆ. ಒಂದಕ್ಕೊಂದು ಬೆಸೆಯುತ್ತಲೇ ಇವೆ. ನಾವು ನಮ್ಮದು ಆದಿ-ಅಂತ್ಯಗಳಿಲ್ಲದ ಸನಾತನ ಸಂಸ್ಕೃತಿ ಎಂದು ಹೇಳಿಕೊಂಡರೇನು ಪ್ರಯೋಜನ? ನಮ್ಮಲ್ಲಿರುವ ಮತಾಂಧರನ್ನು ಮಟ್ಟ ಹಾಕದಿದ್ದರೆ ಮುಂದೊಂದು ದಿನ ನನ್ನದು ಸನಾತನ ಸಂಸ್ಕೃತಿ ಎಂದು ಹೇಳಿಕೊಳ್ಳಲೂ ಯಾರೂ ಇರಲಾರರು! ಆಫ್ರಿಕಾದ ರೀತಿ ಭಾರತವೂ ಕಗ್ಗತ್ತಲ ದೇಶವಾಗಿ ಬದಲಾದೀತು!

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ