ಜಪಾನಿನಲ್ಲಿ ಭಾರತವನ್ನು "ಟೆಂಜಿಕು" ಎನ್ನುತ್ತಾರೆ. ಅಂದರೆ ಸ್ವರ್ಗ ಎಂದರ್ಥ!
"ನಾರಾ" ಜಪಾನಿನ ಪುರಾತನ ರಾಜಧಾನಿ ಕ್ಯೂಟೋ ನಗರದ ಬಳಿ ಇರುವ ಐತಿಹಾಸಿಕ ನಗರ. ಆಶ್ಚರ್ಯವೇನೆಂದರೆ ಇದರ ರಚನೆ ವಾರಾಣಸಿಯ ರೀತಿಯಲ್ಲಿದೆ. ಇಲ್ಲೊಂದು ದೇವಾಲಯವಿದೆ: "ಮುರೋಜಿ ಮಠ" ಅಂತ. ಅಲ್ಲಿನ ದೇವತೆಯನ್ನು ಪ್ರತಿನಿಧಿಸುವ ಬೀಜಾಕ್ಷರದ ಆಕೃತಿಯಲ್ಲೇ ಅಲ್ಲಿನ ಉದ್ಯಾನವನ ರಚನೆಯಾಗಿದ. ಕಲ್ಯಾಣಿಯ ಆಕಾರವೂ ಆ ಬೀಜಾಕ್ಷರದ ರೀತಿಯೇ. ಅಂದ ಹಾಗೆ ಆ ಬೀಜಾಕ್ಷರವೂ ("ವ") ಸಂಸ್ಕೃತದ್ದು. ಅದು ಇಲ್ಲಿನ ಮುಖ್ಯದೇವತೆ ವೈರೋಚನನನ್ನು ಪ್ರತಿನಿಧಿಸುತ್ತದೆ. ಈ ಪಟ್ಟಣದಲ್ಲಿ 800ಕ್ಕೂ ಹೆಚ್ಚು ದೇವಾಲಯಗಳಿವೆ. ಏಳನೆಯ ಶತಮಾನದಲ್ಲಿ ನಿರ್ಮಾಣವಾದ ಹೊರ್ಯೋಜಿ ದೇವಾಲಯ ಅತ್ಯಂತ ಹಳೆಯ ದೇವಾಲಯ. ಇದು ನಳಂದಾದಲ್ಲಿ ಪ್ರಚಲಿತವಿದ್ದ ಕಲಾ ಮಾದರಿಯಲ್ಲಿಯೇ ಕಟ್ಟಲ್ಪಟ್ಟಿತ್ತು. ಇಲ್ಲೇ ಗುಪ್ತರ ಕಾಲದ ಸಂಸ್ಕೃತದ ಹಸ್ತಪ್ರತಿಯೊಂದು ಸಿಕ್ಕಿತ್ತು. ದುರದೃಷ್ಟವಶಾತ್ ಯುದ್ಧವೊಂದರಲ್ಲಿ ಈ ದೇವಾಲಯ ನಾಶವಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ