ಪುಟಗಳು

ಗುರುವಾರ, ಜೂನ್ 11, 2015

ವೃತ್ತಪುರವಾಗಿದೆ ಭೀಭತ್ಸಪುರ!

ವೃತ್ತಪುರವಾಗಿದೆ ಭೀಭತ್ಸಪುರ!

                 ಒಂದು ಕಡೆ ಭೋರ್ಗರೆವ ರತ್ನಾಕರ, ಇನ್ನೊಂದೆಡೆ ಮುಗಿಲೆತ್ತರದ ಸಹ್ಯಾದ್ರಿಯ ಶಿಖರ, ಹಸಿರ ಸೀರೆಯ ಹೊದ್ದು ನಿಂತ ವನದೇವಿ, ನಡುನಡುವೆ ಅಮೃತವನ್ನೇ ಹೊತ್ತು ಬಳುಕಿ ಹರಿವ ಸುರಭಿ, ಇವೆಲ್ಲದರ ಮಧ್ಯದಲ್ಲಿ ಕಲ್ಪವೃಕ್ಷಗಳಡಿಯಲ್ಲಿ ಧರೆಯ ಸ್ವರ್ಗದಂತೆ ಮಿನುಗುತ್ತಿತ್ತು ವೃತ್ತಪುರ. ಮುಂದೆ ಚಂದದ ಚೆನ್ನಪಟ್ಟಣವೆಂದೆನಿಸಿಕೊಂಡಿತು. ಜೈನ ಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಒಂಬತ್ತನೇ ಶತಮಾನದಲ್ಲಿ ಹಾಡುವಳ್ಳಿಯಲ್ಲಿದ್ದ, ಶಬ್ದಾನುಶಾಸನ ಬರೆದ ವೈಯ್ಯಾಕರಣಿ, ಜೈನ ಯತಿ ಭಟ್ಟಾಕಳಂಕನ ಕಾರಣದಿಂದ ಭಟ್ಕಳವೆಂಬ ಹೆಸರು ಬಂತೆನ್ನುತ್ತದೆ ಒಂದು ಐತಿಹ್ಯ. ಹೊಯ್ಸಳರು, ಅಳುಪರು, ವಿಜಯನಗರದ ಸಾಳ್ವರು ರಾಜ್ಯಾಭಾರ ಮಾಡುತ್ತಿದ್ದ ಪುಣ್ಯಭೂಮಿ. ಪೋರ್ಚುಗೀಸರ ವಿರುದ್ಧ ಯುದ್ಧ ಸಾರಿದ ಚೆನ್ನಭೈರಾದೇವಿಯ ಆಡಳಿತಕ್ಕೂ, ಕೆಳದಿಯ ಆಡಳಿತಕ್ಕೂ ಇದು ಒಳಪಟ್ಟಿತ್ತು. ೧೬೭೦ರಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದು ಹದಿನೆಂಟು ಬ್ರಿಟಿಷರನ್ನು ಯಮಸದನಕ್ಕಟ್ಟಿದ ಸ್ವಾಭಿಮಾನದ ಭೂಮಿ. ಇಂತಹ ಧರೆಯ ಸ್ವರ್ಗ ನರಕ ಸದೃಶವಾದದ್ದು ಸೌದಿಯ ನವಾಯತರು ಕಾಲಿಟ್ಟ ಮೇಲೆ! ಇವತ್ತು ಭಾರತದಲ್ಲಿ ಎಲ್ಲಿ ಭಯೋತ್ಪಾದಕ ದಾಳಿಯಾದರೂ ಅದರ ತನಿಖೆ ಕೊನೆಗೆ ಬಂದು ನಿಲ್ಲುವುದು ಭಟ್ಕಳದಲ್ಲೇ!

ವೃತ್ತಪುರ ಭೀಭತ್ಸಪುರವಾದದ್ದು ಹೇಗೆ?

                ಭಟ್ಕಳಕ್ಕೂ ಭಯೋತ್ಪಾದನೆಗೂ ನಂಟು ಇಂದು ನಿನ್ನೆಯದಲ್ಲ. 1991ರಲ್ಲಿ ಭಟ್ಕಳದಲ್ಲಿ ಕೋಮುಗಲಭೆ ನಡೆದಿತ್ತು. ಈ ಕೋಮುಗಲಭೆಗೆ ಕಾರಣ ಹುಡುಕುತ್ತಾ ಹೋದಾಗ ಸಿಕ್ಕಿದ್ದು ಆಘಾತಕಾರಿ ಅಂಶ. ಐಎಸ್ಐ ಶಸ್ತ್ರಾಸ್ತ್ರ ಹಾಗೂ ಆರ್ಡಿಎಕ್ಸಗಳನ್ನು ಭಟ್ಕಳದ ಕರಾವಳಿಗೆ ರವಾನಿಸಿತ್ತು. ಭಟ್ಕಳದ ಪೇಟೆಯೊಳಗೆ ಗಲಭೆ ಸೃಷ್ಟಿಸಿ ಪೊಲೀಸ್ ಹಾಗೂ ಸೇನೆಯ ಗಮನವನ್ನು ಅತ್ತ ಸೆಳೆದು ಶಸ್ತ್ರಾಸ್ತ್ರಗಳನ್ನು ಕರಾವಳಿ ತೀರದಿಂದ ಸುರಕ್ಷಿತವಾಗಿ ಭಟ್ಕಳದಲ್ಲಿರುವ ತಮ್ಮ ತಾಣಗಳಿಗೆ ಸಾಗಿಸಿದ್ದರು ಭಯೋತ್ಪಾದಕರು. ಇದರ ಸೂತ್ರಧಾರಿ ಬೇರ್ಯಾರಲ್ಲ; ಭೂಗತ ಜಗತ್ತು, ಬಾಲಿವುಡ್ಡನ್ನು ಆಳುತ್ತಿರುವ, ಭದ್ರತಾ ಪಡೆಗಳು ಇನ್ನೇನು ಹಿಡಿಯಬೇಕು ಅನ್ನುವಾಗ ರಾಜಕಾರಣಿಗಳ ಕೃಪಾಕಟಾಕ್ಷದಿಂದ ತಪ್ಪಿಸಿಕೊಂಡ, ಈಗ ಪ್ರಧಾನಿ ನರೇಂದ್ರ ಮೋದಿಗೆ ಬೆದರಿ ಪಾಕಿಸ್ತಾನದಲ್ಲಿ ಪ್ರತಿನಿತ್ಯ ತನ್ನ ನಿವಾಸವನ್ನು ಬದಲಾಯಿಸುತ್ತ ಅಂಡಲೆಯುತ್ತಿರುವ ಅದೇ ದಾವೂದ್ ಇಬ್ರಾಹಿಮ್!

ದಾವೂದ್ ಇಬ್ರಾಹಿಂ ಸೌದಿ ಅರೇಬಿಯಾದಿಂದ, ಐಎಸ್ಐ ಸಹಾಯದಿಂದ ಹಡಗುಗಳ ಮೂಲಕ ಶಸ್ತ್ರಾಸ್ತ್ರ ಹಾಗೂ ಆರ್ಡಿಎಕ್ಸಗಳನ್ನು ರವಾನಿಸಿದ್ದ. ಈ ಶಸ್ತ್ರಾಸ್ತ್ರಗಳು ಗೋವಾ ಬಂದರಿಗೆ ಬಂದು ತಲುಪಿದ್ದವು. ಅಲ್ಲಿಂದ ಸ್ಪೀಡ್ ಬೋಟ್ಗಳ ಮೂಲಕ ಸಮುದ್ರ ಮಾರ್ಗವಾಗಿ ಭಟ್ಕಳಕ್ಕೆ ಇವುಗಳನ್ನು ರವಾನಿಸಲಾಯಿತು. ಭಟ್ಕಳದ ಸಮುದ್ರ ತೀರದಲ್ಲಿರುವ ನೈಸರ್ಗಿಕ ಬಂದರು ನಡುಗಡ್ಡೆಯಿಂದ ಮೀನುಗಾರಿಕಾ ದೋಣಿಗಳ ಮೂಲಕ ನಗರಕ್ಕೆ ತರಲಾಯಿತು. ಅಲ್ಲಿಂದ ಆಂಬುಲೆನ್ಸುಗಳ ಮೂಲಕ ಈ ಶಸ್ತ್ರಾಸ್ತ್ರಗಳನ್ನು ಭಾರತದ ವಿವಿಧೆಡೆ ರವಾನಿಸಲಾಗಿತ್ತು. ಭಟ್ಕಳದಲ್ಲಿದ್ದ ಮೊಹಮದ್ ಮೋತಿಶಾ ಇಸ್ಮಾಯಿಲ್ ಕೋಲಾ ಎಂಬಾತನನ್ನು ಬಳಸಿಕೊಂಡು ದಾವೂದ್ ಭಟ್ಕಳದಲ್ಲಿ ಭೂಮಿ ಖರೀದಿಸಿದ್ದ. ಅಲ್ಲಿ ಅಸ್ಪತ್ರೆಯನ್ನು ಸ್ಥಾಪಿಸಲಾಯಿತು. ಈ ಆಸ್ಪತ್ರೆಗೆ ಖರೀದಿಸಿದ್ದ ಆಂಬುಲೆನ್ಸುಗಳನ್ನು ಬಳಸಿಕೊಂಡು ಶಸ್ತ್ರಾಸ್ತ್ರ, ಆರ್ ಡಿ ಎಕ್ಸ್ ಗಳನ್ನು ಭಾರತದ ಬೇರೆ ಬೇರೆ ಕಡೆ ಸಾಗಿಸಲಾಯಿತು. ಮೋತಿಶಾಗೆ ಸಹಾಯ ಮಾಡಿದವರು ರಿಯಾಜ್, ಇಕ್ಬಾಲ್ ಹಾಗೂ ಯಾಸೀನ್ ಭಟ್ಕಳ್! ಇದಾಗಿ ಎರಡು ವರ್ಷಗಳ ತರುವಾಯ ಮುಂಬೈಯಲ್ಲಿ ಸರಣಿ ಬಾಂಬು ಸ್ಫೋಟ ನಡೆದಿತ್ತು. ಈ ಸ್ಫೋಟಕ್ಕೆ ಬಳಕೆಯಾದದ್ದು ಭಟ್ಕಳದಲ್ಲಿ ಬಂದಿಳಿದ ಆರ್ಡಿಎಕ್ಸೇ! ಮುಂದೆ ಭಾರತದಾದ್ಯಂತ ಆದ ಸ್ಪೋಟಗಳೆಲ್ಲದರ ವಿಚಾರಣೆ ಅಂತಿಮವಾಗಿ ಬಂದು ನಿಲ್ಲುವುದು ಭಟ್ಕಳಕ್ಕೆ. ಒಂದೋ ಅಲ್ಲಿಂದ ಸ್ಫೋಟಕ-ಸಾಮಗ್ರಿಗಳು ಪೂರೈಕೆಯಾಗಿವೆ ಇಲ್ಲಾ ಬಂಧಿತನ ಮೂಲ ಅದೇ ಆಗಿರುತ್ತದೆ. 1991ರ ಕೋಮುಗಲಭೆ ಬಗ್ಗೆ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗ ಕೂಲಂಕೂಶ ತನಿಖೆ ಮಾಡಿ ತನ್ನ 2000 ಪುಟಗಳ ವರದಿಯನ್ನು 1997ರಲ್ಲಿ ಸರಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಕೋಮುಗಲಭೆಗೆ ಕಾರಣಗಳ ಜೊತೆಗೆ ಭಟ್ಕಳದಲ್ಲಿ ಬೇರೂರಿರುವ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿತ್ತು. ಆದರೆ ಈ ವರದಿ ಇಂದಿಗೂ ವಿಧಾನಮಂಡಲದಲ್ಲಿ ಸಲ್ಲಿಕೆಯಾಗದೆ ಧೂಳು ತಿನ್ನುತ್ತಾ ಕೂತಿದೆ. ಕಾರಣ ಮತ್ತದೇ ಮತಬ್ಯಾಂಕ್ ರಾಜಕಾರಣ!

           ಇದರ ಬಗ್ಗೆ ನಮ್ಮ ಇಂಟಲಿಜೆನ್ಸ್ ಏಜೆನ್ಸಿಗೆ ತಿಳಿದಿರಲಿಲ್ಲವೆ? ತಿಳಿದಿತ್ತು. ಇಂಟೆಲಿಜೆನ್ಸಿ ಅಧಿಕಾರಿ ಅಗರ್ವಾಲ್ ಈ ಮಾಹಿತಿಯನ್ನು ರಾಜ್ಯ ಕಾರ್ಯದರ್ಶಿ ಅವರಿಗೆ ರವಾನಿಸಿದ್ದರು. ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ಅಗರ್ವಾಲ್ ಮತಾಂಧರಿಗೆ ಬಲಿಯಾದರು. 1996ರ ಏಪ್ರಿಲ್ನಲ್ಲಿ ರಾತ್ರಿ ಊಟ ಮುಗಿಸಿ ಟಿವಿ ನೋಡುತ್ತಿದ್ದ ಶಾಸಕ ಡಾ. ಯು. ಚಿತ್ತರಂಜನ್ ಅವರನ್ನು ಮನೆಯಲ್ಲಿಯೇ ಹತ್ಯೆ ಮಾಡಲಾಯಿತು. ಅವರ ಹತ್ಯೆಯಲ್ಲಿ ಏ.ಕೆ. 47 ಬಳಕೆಯಾಗಿತ್ತು. ಗಣೇಶೋತ್ಸವ, ರಾಮನವಮಿ, ಈದ್ ಸಂದರ್ಭಗಳಲ್ಲಿ ಇಲ್ಲಿಗೆ ಹೆಚ್ಚಿನ ಪೊಲೀಸ್ ತುಕಡಿಗಳನ್ನು ನೇಮಿಸುವುದು ಸಾಮಾನ್ಯವಾಯಿತು. 2004ರ ಮೇ 1ರ ರಾತ್ರಿ ಐಸ್ಕ್ರೀಂ ಪಾರ್ಲರ್ ಮುಚ್ಚಿ ಮನೆಗೆ ಬರುತ್ತಿದ್ದ ಸ್ಥಳೀಯ ಬಿಜೆಪಿ ನಾಯಕ ತಿಮ್ಮಪ್ಪ ನಾಯ್ಕ ಅವರನ್ನು ಭಯೋತ್ಪಾದಕರು ಗುಂಡಿಟ್ಟು ಕೊಂದರು. ಸ್ಥಳೀಯರ ಸಹಕಾರವಿಲ್ಲದೆ ಈ ಚಟುವಟಿಕೆಗಳು ನಡೆಯಲು ಸಾಧ್ಯವೇ? ಈ ಚಟುವಟಿಕೆಗಳು ಆರಂಭವಾಗುವ ಮೊದಲೇ ದುಬೈಯಿಂದ ಕೆಲವು ವ್ಯಕ್ತಿಗಳು ಭಟ್ಕಳದ ಮೂಲನಿವಾಸಿಗಳಿಗೆ ಮೂರುಪಟ್ಟು ಮೌಲ್ಯಕ್ಕೆ ಅಲ್ಲಿನ ಆಯಕಟ್ಟಿನ ಜಾಗಗಳನ್ನು ಖರೀದಿಸಿದ್ದರು. ತಮಗೆ ಅನುಕೂಲಕರವಾಗುವಂತೆ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಅಲ್ಲಿನ ಮನೆಗಳು ಹೇಗಿವೆಯೆಂದರೆ ಓಣಿಯ ಮೊದಲ ಮನೆ ಹೊಕ್ಕರೆ ಓಣಿಯ ಕೊನೆಯ ಮನೆಯಿಂದ ಹೊರಬರಬಹುದು, ಅಂತಹ ನಿರ್ಮಾಣಗಳು. ಮುಂದೆ ಏಕಾಏಕಿ ಇವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಮಾರುಕಟ್ಟೆ, ರಿಯಲ್ ಎಸ್ಟೇಟ್ ಮುಂತಾದುವುಗಳಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಿಕೊಂಡ ಇವರು ಮಾದಕದ್ರವ್ಯ ಕಳ್ಳಸಾಗಣೆಯನ್ನೂ ಮಾಡತೊಡಗಿದರು. ಮಾದಕದ್ರವ್ಯಗಳ ಜೊತೆಜೊತೆಗೇ ಶಸ್ತ್ರಾಸ್ತ್ರಗಳೂ ಬರತೊಡಗಿದವು. ಇಂದು ಭಾರತದಾದ್ಯಂತ ಈ ಜಾಲ ಬೆಳೆದಿದೆ.

                 ರಿಯಾಜ್ ಭಟ್ಕಳನ ತಂದೆ ಭಟ್ಕಳದಿಂದ ಮುಂಬೈಗೆ ಬಂದು ಪರ್ಸ್ ತಯಾರಿಸುವ ಉದ್ಯಮದಲ್ಲಿ ತೊಡಗಿಕೊಂಡಿದ್ದ. ಕುರ್ಲಾದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಮಾಡುತ್ತಿದ್ದ ರಿಯಾಜ್ ‘ಸಿಮಿ’ (ಸ್ಟುಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ)ಯ ಸದಸ್ಯನಾಗಿದ್ದ. ಇಸ್ಲಾಂ ಕುರಿತು ಉಗ್ರ ಭಾಷಣಗಳನ್ನು ಮಾಡುವ ಡಾ. ಝಕೀರ್ ನಾಯ್ಕ್ ಎಂಬ ದೇಶದ್ರೋಹಿಯ ಅಭಿಮಾನಿಯಾಗಿದ್ದ. ಮನೆಯಲ್ಲಿ ಓದಲು ಜಾಗವಿಲ್ಲ ಎಂಬ ನೆಪವೊಡ್ಡಿ ‘ಸಿಮಿ’ಯ ಗ್ರಂಥಾಲಯಕ್ಕೆ ಆತ ಓದಲು ಹೋಗುತ್ತಿದ್ದ. ಮೊದಲೇ ಮತದ ಅಮಲಿನಲ್ಲಿ ತೇಲಾಡುತ್ತಿದ್ದ ಆತನನ್ನು ಉಗ್ರರ ಸಿದ್ಧಾಂತಗಳು ಆಕರ್ಷಿಸಿದವು. ಕೆಲವೇ ದಿನಗಳಲ್ಲಿ ಆತ ಪ್ರಚೋದನಾಕಾರಿ ಭಾಷಣಗಳನ್ನು ಮಾಡಲಾರಂಭಿಸಿದ. ನ್ಯೂಯಾರ್ಕ್ನಲ್ಲಿ ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡಗಳ ಮೇಲೆ 2001ರ ಸೆಪ್ಟೆಂಬರ್ 11ರಂದು ಅಲ್ ಖೈದಾ ಉಗ್ರರ ದಾಳಿ ನಡೆದ ಮೇಲೆ ಹಲವು ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ಅವುಗಳಲ್ಲಿ ‘ಸಿಮಿ’ ಸಹ ಒಂದು. ‘ಸಿಮಿ’ಯ ಮುಂಬೈ ಕಛೇರಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ನಂತರ ಬೆದರಿದ ರಿಯಾಜ್ ಮತ್ತು ಆತನ ಕುಟುಂಬ ಮಂಗಳೂರು ಬಳಿಯ ಉಳ್ಳಾಲಕ್ಕೆ ಪರಾರಿಯಾದರು. ಈ ಸಮಯದಲ್ಲಿ ರಿಯಾಜ್ ‘ಇಂಡಿಯನ್ ಮುಜಾಹಿದೀನ್’ ಸಹ ಸಂಸ್ಥಾಪಕರಾದ ಅಬ್ದುಲ್ ಸುಭಾನ್ ಖುರೇಷಿ, ಸಾಧಿಕ್ ಶೇಖ್ ಅವರೊಂದಿಗೆ ಗುರುತಿಸಿಕೊಂಡ. ಜಿಹಾದಿಯಾಗಿ ಬದಲಾಗಿದ್ದ ಗುಜರಾತ್ ಮೂಲದ ಭೂಗತ ಪಾತಕಿ ಅಮೀರ್ ರಜಾ ಖಾನನ ಸಂಪರ್ಕವೂ ಏರ್ಪಟ್ಟಿತ್ತು. ಅಮೀರ್ ಮತ್ತು ರಿಯಾಜ್ ಭಟ್ಕಳ್ ಇತರ ಗೆಳೆಯರೊಂದಿಗೆ ಪಾಕಿಸ್ತಾನ ಪ್ರವೇಶಿಸಿದರು. ಇವರೆಲ್ಲ ಲಷ್ಕರ್–ಎ–ತೈಯಬಾ ಸಂಘಟನೆಯ ಶಿಬಿರದಲ್ಲಿ ಶಸ್ತ್ರಾಸ್ತ್ರ ನಿರ್ವಹಣೆ, ಸ್ಫೋಟಕಗಳನ್ನು ಜೋಡಿಸುವ ತರಬೇತಿ ಪಡೆದರು. ಅಮೀರ್ ರಜಾ ಖಾನ್ ಇದಕ್ಕೆಲ್ಲ ಹಣ ಒದಗಿಸತೊಡಗಿದ. ಪಾಕಿಸ್ತಾನದಿಂದ ಬಂದ ಮೇಲೆ ರಿಯಾಜ್ ಭಟ್ಕಳದ ಜಾಲಿ, ತೆಂಗಿನಗುಂಡಿ ಸಮುದ್ರ ತೀರದಲ್ಲಿ ತನ್ನ ತಂಡದವರಿಗೆ ಶಸ್ತ್ರಾಸ್ತ್ರ ನಿರ್ವಹಣೆ ತರಬೇತಿ ನೀಡಿದ್ದ. ‘ಇಂಡಿಯನ್ ಮುಜಾಹಿದೀನ್’ ಸ್ಥಾಪನೆಗೆ ಪೂರ್ವಭಾವಿ ಮಾತುಕತೆ, ತರಬೇತಿ ಭಟ್ಕಳದಲ್ಲಿ ನಡೆದಿತ್ತು. ಅಚ್ಚರಿ ಎಂದರೆ ಭಟ್ಕಳದ ಸಮುದ್ರ ತೀರದಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆಯುತ್ತಿದ್ದುದು ಪೊಲೀಸರಿಗೂ ತಿಳಿದಿತ್ತು. ಆದರೆ ಅವರ ಕೈಗಳನ್ನು ಸರಕಾರ ಕಟ್ಟಿಹಾಕಿತ್ತು. ಇನ್ನೊಬ್ಬ, ಯಾಸಿನ್ ಭಟ್ಕಳ್ ಅಂಜುಮನ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪೂರೈಸಿದ ನಂತರ ಅಪ್ಪನ ವ್ಯವಹಾರದಲ್ಲಿ ಕೈಜೋಡಿಸಲು ದುಬೈಗೆ ತೆರಳಿದ್ದ. ಅಪ್ಪನ ಜತೆ ಜಗಳವಾಡಿ ಮಾತುಬಿಟ್ಟು ಕೆಲ ವರ್ಷಗಳ ಕಾಲ ಮನೆಮಂದಿಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದ. ಉಗ್ರ ಸಂಘಟನೆಗಳಾದ ಲಷ್ಕರ್–ಎ–ತೈಯಬಾ, ತಾಲಿಬಾನ್ ಸಂಘಟನೆಗಳ ಒಡನಾಡಿಯಾಗಿ, ಇಂಡಿಯನ್ ಮುಜಾಹಿದೀನ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ. ಯಾಸಿನ್ ‘ಐಎಂ’ನ ಪ್ರಮುಖ ಕಮಾಂಡರ್. ಎಲ್ಲೇ ಸ್ಫೋಟ ನಡೆಯಲಿ ಸ್ಫೋಟಕಗಳನ್ನು ಪೂರೈಸುವ ಕೆಲಸ ಈತನೇ ಮಾಡುತ್ತಿದ್ದ. ಪುಣೆಯ ಜರ್ಮನ್ ಬೇಕರಿ, ಹೈದರಾಬಾದ್ನ ದಿಲ್ಸೂಖ್ ನಗರಗಳಲ್ಲಿ ಸ್ಫೋಟ ನಡೆಯುವ ಮುಂಚೆ ಈತ ಓಡಾಡಿದ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ  ದಾಖಲಾಗಿತ್ತು. ಜರ್ಮನ್ ಬೇಕರಿ ಸ್ಫೋಟ ಪ್ರಕರಣದ ಜಾಡು ಹಿಡಿದು ದೇಶಾದ್ಯಂತ ಉಗ್ರರಿಗೆ ಬಲೆ ಬೀಸಿದ್ದ ಪೊಲೀಸರಿಗೆ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತೆ ಬಿಹಾರ – ನೇಪಾಳ ಗಡಿಯಲ್ಲಿ 2013ರ ಆಗಸ್ಟ್ನಲ್ಲಿ ಯಾಸಿನ್ ಭಟ್ಕಳ್ ಸೆರೆಸಿಕ್ಕಿದ.

              ಭಟ್ಕಳದ ನವಾಯತ್ ಕಾಲೋನಿಯ ಅಬ್ದುಲ್ ಖಾದಿರ್ ಸುಲ್ತಾನ್ ಅರ್ಮರ್ ಭಟ್ಕಳ್ ಸಹೋದರರ ಗರಡಿಯಲ್ಲಿ ಬೆಳದು ಇಂಡಿಯನ್ ಮುಜಾಹಿದ್ದಿನ್ ಸೇರಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ವಿರುದ್ಧ ಇಂಡಿಯನ್ ಮುಜಾಹಿದ್ದಿನ್ ಸಂಘಟನೆಯ ಒಳಗೆ ಭಿನ್ನಮತವಿತ್ತು. ಎನ್ಐಎ ಅಧಿಕಾರಿಗಳ ವಿಚಾರಣೆ ವೇಳೆ ಯಾಸೀನ್ ಭಟ್ಕಳ್ ಈ ವಿಷಯ ತಿಳಿಸಿದ್ದ. ಅಫ್ಘಾನಿಸ್ತಾನದಲ್ಲಿ ಅಮೆರಿಕಾದ ಸೇನೆಯ ವಿರುದ್ಧ ಹೋರಾಟ ನಡೆಸಬೇಕು ಎಂದು ಸುಲ್ತಾನ್ ಅರ್ಮರ್ ಹಾಗೂ ಇತರೆ ಯುವಕರು ಅಪೇಕ್ಷೆ ಪಟ್ಟಿದ್ದರು. ಈ ಬೇಡಿಕೆಯನ್ನು ಐಎಸ್ಐ ನಿರಾಕರಿಸಿತ್ತು. ಆದ್ದರಿಂದ ಆಂತರಿಕ ಬೇಗುದಿಯೂ ಹೆಚ್ಚಾಗಿತ್ತು. ಯಾಸೀನ್ ಭಟ್ಕಳ್ನ ಬಂಧನದ ಬಳಿಕ ಸುಲ್ತಾನ್ ಅರ್ಮರ್ ಭಿನ್ನಮತಿಯ ಯುವಕರ ಗುಂಪು ಸಿದ್ಧಪಡಿಸಿಕೊಂಡ. ಅತ್ತ ಐಎಸ್ಐಎಸ್ ಉಗ್ರ ಸಂಘಟನೆ ಸ್ಥಾಪನೆಯಾಗಿ ಖಲೀಫನ ನೇಮಕವಾಗಿತ್ತು. ಇದು ಅರ್ಮರ್ನನ್ನು ಆಕರ್ಷಿಸಿತು. ಐಎಸ್ಐಎಸ್ ಉಗ್ರ ಸಂಘಟನೆಗೆ ನೆರವು ನೀಡಬೇಕು ಎಂಬ ಉದ್ದೇಶದಿಂದ ಅರ್ಮರ್ ಅನ್ಸರ್-ಉಲ್-ತಾವ್ಹಿದ್ ಸ್ಥಾಪಿಸಿದ್ದಾನೆ. ಇದು ಇಂಡಿಯನ್ ಮುಜಾಹಿದ್ದಿನ್, ಐಎಸ್ಐಎಸ್ ಹಾಗೂ ತೆಹ್ರಿಕ್-ಇ-ತಾಲಿಬಾನ್ ಉಗ್ರ ಸಂಘಟನೆಗಳ ಒಕ್ಕೂಟವಾಗಿದೆ. ಈ ಒಕ್ಕೂಟಕ್ಕೆ ಸುಲ್ತಾನ್ ಅರ್ಮರ್ನನ್ನೇ ಆಮೀರ್ ಎಂದು ಘೋಷಿಸಲಾಗಿದೆ. ಭಟ್ಕಳದ ಸುಲ್ತಾನ್ ಅರ್ಮರ್ ಭಾರತದಿಂದ ಸುಮಾರು 250 ಯುವಕರನ್ನು ಒಗ್ಗೂಡಿಸಿ ಆಫ್ಘಾನಿಸ್ತಾನದಲ್ಲಿ ಅಮೆರಿಕಾ ಸೇನೆ ವಿರುದ್ಧ ಹೋರಾಟ ನಡೆಸಲು ಸಜ್ಜುಗೊಳಿಸುವುದಾಗಿ ತಿಳಿಸಿದ್ದ. ಅದಕ್ಕಾಗಿ ಭಟ್ಕಳದಿಂದಲೂ ಯುವಕರನ್ನು ಒಗ್ಗೂಡಿಸಲು ಆರಂಭಿಸಿದ್ದ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಹಿನ್ನಲೆಯಲ್ಲಿ ಭಾರತ ತೊರೆಯಲು ಸಿದ್ಧವಾಗಿದ್ದ ಯುವಕರನ್ನು ತಡೆದು ಕೌನ್ಸೆಲಿಂಗ್ ಮಾಡಲಾಯಿತು. ಆದರೆ ಭಟ್ಕಳದಲ್ಲಿ ಮಾತ್ರ ಸುಲ್ತಾನ್ ಅರ್ಮರ್ ಸೃಷ್ಟಿಸಿದ ಕಾವು ಇನ್ನೂ ಹಾಗೆಯೇ ಉಳಿದಿದೆ. ಅನ್ವರ್ ಬೇಲಿಯನ್ನು ಸುಲ್ತಾನ್ ಅರ್ಮರ್ ಇಂಡಿಯನ್ ಮುಜಾಹಿದ್ದಿನ್ ಉಗ್ರ ಸಂಘಟನೆಯತ್ತ ಸೆಳೆದಿದ್ದ. ಭಟ್ಕಳದಲ್ಲಿ ಆಟೋ ಹಾಗೂ ಟೆಂಪೊ ಓಡಿಸುತ್ತಿದ್ದ ಅನ್ವರ್ ಬೇಲಿ ಕುವೈತ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ. ನಂತರ ದುಬೈಗೆ ತೆರಳಿ ಕಾರು ಚಾಲಕನಾದ. 2013ರವರೆಗೂ ಭಟ್ಕಳದಲ್ಲಿರುವ ಕುಟುಂಬದ ಜೊತೆ ಅನ್ವರ್ ಸಂಪರ್ಕದಲ್ಲಿದ್ದ. ಆ ಬಳಿಕ ಕುಟುಂಬದೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಾನೆ. ಅನ್ಸರ್-ಉಲ್-ತಾವ್ಹಿದ್ ಪರವಾಗಿ ಅಫ್ಘಾನಿಸ್ತಾನದಲ್ಲಿ ಹೋರಾಟ ಆರಂಭಿಸಿ ಸಾವನ್ನಪ್ಪಿದ್ದ. 2014ರ ಜುಲೈ ತಿಂಗಳಲ್ಲಿ ಅನ್ಸರ್-ಉಲ್-ತಾವ್ಹಿದ್ ಸಂಘಟನೆಯ ವೆಬ್ಸೈಟ್ನಲ್ಲಿ ಈತ ಹುತಾತ್ಮನಾಗಿದ್ದಾನೆ ಎಂದು ಪ್ರಕಟಿಸಲಾಗಿದೆ.

                ಈ ವರ್ಷ ಜನವರಿ ೧೩ರ ರಾತ್ರಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಪೊಲೀಸರ ಕೈಗೆ ಸೆರೆಸಿಕ್ಕ ಭಟ್ಕಳ ಮೂಲದ  ಉಗ್ರ ರಿಯಾಜ್ ಅಹಮದ್ ಸಯ್ಯದಿ ಹವಾಲಾ ಹಣದ ಕಿಂಗ್ ಪಿನ್ ಎಂದು ತನಿಖೆಯ ವೇಳೆ ದೃಢಪಟ್ಟಿದೆ. ಕಳೆದ 10 ವರ್ಷಗಳಿಂದ ದುಬೈನಲ್ಲಿದ್ದ ಈತ ಹಾರ್ಡ್ವೇರ್ ಅಂಗಡಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ. ಪಾಕಿಸ್ತಾನ ಹಾಗೂ  ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದ ರಿಯಾಜ್ ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹವಾಲಾ ಹಣವನ್ನು ಸಾಗಾಣಿಕೆ ಮಾಡುತ್ತಿದ್ದ. ದುಬೈನಿಂದ ಬರುತ್ತಿದ್ದ ಈತ ಅಲ್ಲಿಂದ ಸಾಕಷ್ಟು ಹಣ ಪಡೆದು ಮಹಾರಾಷ್ಟ್ರ, ಕೇರಳ, ಗುಜರಾತ್, ಕರ್ನಾಟಕ, ಆಂಧ್ರ ಪ್ರದೇಶ, ಗೋವಾ, ದೆಹಲಿ ಸೇರಿದಂತೆ ಮತ್ತಿತರ ಕಡೆ ಇರುವ ಭಯೋತ್ಪಾದನೆ ಸಂಘಟನೆಗಳಿಗೆ ಹವಾಲಾ ಹಣ ವಿತರಣೆ ಮಾಡುತ್ತಿದ್ದ. ದುಬೈನಲ್ಲಿದ್ದಾಗಲೇ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸಹ ಸಂಸ್ಥಾಪಕ ಹಾಗೂ ಸದ್ಯಕ್ಕೆ ಎನ್ಐಎ ವಶದಲ್ಲಿರುವ ಯಾಸಿನ್ ಭಟ್ಕಳ್ ಮತ್ತು ರಿಯಾಜ್ ಭಟ್ಕಳರನ್ನು ಈತ ಅನೇಕ ಬಾರಿ ಭೇಟಿ ಮಾಡಿದ್ದ. ಭಾರತದ ಮಹಾನಗರಗಳಲ್ಲಿ ಸ್ಫೋಟ ನಡೆಸಬೇಕೆಂದು ಯಾಸಿನ್ ಭಟ್ಕಳ್ ಹಾಗೂ ರಿಯಾಜ್ ಭಟ್ಕಳ್ ಸಹೋದರರು ಈತನಿಗೆ ನಿರ್ದೇಶನ ನೀಡಿದ್ದರು. ಇವರ ಸೂಚನೆಯಂತೆ ಈತ ಹವಾಲಾ ಹಣ ಪಡೆದುಕೊಂಡು ದೇಶದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿರುವ  ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದ್ದ. ಅಲ್ಲದೆ, ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಸಾಕಷ್ಟು ಪಳಗಿದ್ದ ರಿಯಾಜ್, ಬಾಂಬ್ ಸ್ಫೋಟಕ್ಕೆ ಬೇಕಾದ ಅಮೋನಿಯಂ ನೈಟ್ರೇಟ್, ಜಿಲೆಟಿನ್ ಕಡ್ಡಿ, ಪಿವಿಸಿ ಪೈಪ್ಗಳನ್ನು ಸಹ ಪೂರೈಕೆ ಮಾಡುತ್ತಿದ್ದ. ಪೊಲೀಸ್ ಮೂಲಗಳ ಪ್ರಕಾರ, ರಿಯಾಜ್ ಕಳೆದ 10 ವರ್ಷಗಳಿಂದ ಭಾರತದಲ್ಲಿ ಅನೇಕ ಭಯೋತ್ಪಾದನೆ ಸಂಘಟನೆಗಳಿಗೆ ಮಧ್ಯವರ್ತಿಯಾಗಿ ಹಣ ಪೂರೈಕೆ ಮಾಡುತ್ತಿದ್ದ. ಭಾರತದಲ್ಲಿರುವ ತಮ್ಮ ಸಹಚರರಿಗೆ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾಹಿತಿ ನೀಡಿದರೆ ಅದು ಬಹಿರಂಗಗೊಳ್ಳಬಹುದೆಂಬ ಆತಂಕದಿಂದ ಎಲ್ಲ ಸೂಚನೆಗಳನ್ನೂ ಅರೇಬಿಕ್ ಭಾಷೆಯಲ್ಲೇ ಬಳಸಲಾಗುತ್ತಿತ್ತು. ಮೊಬೈಲ್ ಸಂಭಾಷಣೆ, ಇ-ಮೇಲ್, ಟ್ವಿಟರ್ ಸೇರಿದಂತೆ ಮತ್ತಿತರ ಕಡೆ ಅರೇಬಿಕ್ ಭಾಷೆಯನ್ನೇ ಬಳಕೆ ಮಾಡಲಾಗಿದೆ. ಭಟ್ಕಳದವನೇ ಆದ ಸಯ್ಯದ್ ಇಸ್ಮಾಯಿಲ್ ಅಫಕ್ ಪತ್ನಿಯನ್ನು ನೋಡುವ ನೆಪದಲ್ಲಿ ಆಗಾಗ್ಗೆ ಕರಾಚಿಗೆ ತೆರಳಿ ಭಟ್ಕಳ್ ಸಹೋದರರನ್ನು ಭೇಟಿ ಮಾಡಿ ಹವಾಲಾ ಹಣ ಪಡೆಯುತ್ತಿದ್ದ. ಹೆಸರಿಗೆ ಮಾತ್ರ ಹೋಮಿಯೋಪತಿ ವೈದ್ಯನಾಗಿದ್ದ ಅಫಕ್  ಭಯೋತ್ಪಾದನೆ ಸಂಘಟನೆಗಳಿಗೆ ಹಣ ಸೇರಿದಂತೆ ಮತ್ತಿತರ ನೆರವು ನೀಡುತ್ತಿದ್ದ.

             ಹೀಗೆ ಭಟ್ಕಳವೆನ್ನುವುದು ಭಯೋತ್ಪಾದಕರ ಸ್ವರ್ಗವಾಗಿ ಬದಲಾಗಿ ಹೋಗಿದೆ. ಇದಕ್ಕೆ ಮುಖ್ಯ ಕಾರಣ ಮತಾಂಧತೆ. ಹಾಗೂ ಅದನ್ನು ಪೋಷಿಸುವ ಮದರಸಾಗಳು, ತಮ್ಮವನು ಮುಗ್ಧ ಎನ್ನುವ ಮುಸ್ಲಿಮರು,ಮುಗ್ಧರನ್ನು ಬಂಧಿಸುತ್ತಿದ್ದಾರೆಂದು ಕೂಗಾಡುವ ದೇಶದ್ರೋಹಿ ಮಾಧ್ಯಮಗಳು. ಭಟ್ಕಳವನ್ನು ನಿಯಂತ್ರಣಕ್ಕೆ ತರದಿದ್ದಲ್ಲಿ ಭಾರತದೊಳಗೆ ಹಲವು ಪಾಕಿಸ್ತಾನಗಳಾಗುವುದು ಸುಸ್ಪಷ್ಟ. ಯಾವುದೇ ಮತವಾಗಲಿ ಬದುಕಿ-ಬದುಕಲು ಬಿಡಿ ಎನ್ನುವ ಮೂಲ ತತ್ವವನ್ನೇ ಅರಿಯದಿದ್ದಲ್ಲಿ ನಷ್ಟ ಅದಕ್ಕೇ. ಇವತ್ತು ತನ್ನದ್ದಲ್ಲದ್ದೆಲ್ಲವನ್ನೂ ಅಸಹನೆಯಿಂದ ಕಂಡು ನಾಶ ಮಾಡುತ್ತಾ ಬರುವ ಅದು ಎಲ್ಲಾ ಮುಗಿದ ಮೇಲೆ ಸುಟ್ಟುಕೊಳ್ಳುವುದು ತನ್ನನ್ನೇ. ಸಂಪೂರ್ಣ ಇಸ್ಲಾಂಮಯವಾಗಿರುವ ದೇಶಗಳಲ್ಲಿ ಈ ಸಂಗತಿ ಈಗಾಗಲೇ ಅರಿವಿಗೆ ಬರುತ್ತಿದೆ. ಇಸ್ಲಾಂ ಜಗತ್ತಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ಇಸ್ಲಾಮಿಕ್ ಭಯೋತ್ಪಾದನೆ ನಿಲ್ಲಬೇಕಾದರೆ ಮುಸ್ಲಿಮರೇ ಭಯೋತ್ಪಾದಕರ ವಿರುದ್ಧ ಸೆಟೆದು ನಿಲ್ಲಬೇಕಾದ ಅಗತ್ಯತೆ ಇದೆ. ಆದರೆ ಅವರಿಂದ ಕನಿಷ್ಟ ವಿರೋಧಿಸುವ ಹೇಳಿಕೆಯೇ ಬರುತ್ತಿಲ್ಲ. ಮದರಸಾಗಳಲ್ಲಿ ರಾಷ್ಟ್ರೀಯತೆಯ ಬಗ್ಗೆ ಶಿಕ್ಷಣ ನೀಡಬೇಕಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಅನ್ಯ ಮತದವನನ್ನು ಕಾಫಿರನಂತೆ ಕಾಣದೆ ಮನುಷ್ಯನನ್ನಾಗಿ ಕಾಣು ಎಂದು ಕುರಾನಿನಲ್ಲಿ ಬದಲಾಯಿಸಬೇಕಾದ ಅವಶ್ಯಕತೆ ಇದೆ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ