ದಂಗಾ ದೀದಿಯ ಸೆಕ್ಯುಲರ್ ಉನ್ಮಾದ; ಬಸವಳಿಯಿತು ವಂಗ!
ಮನೆ, ಕಛೇರಿಗಳಿಗೆ ಬೆಂಕಿ ಹಚ್ಚಲಾಯಿತು. ಮನೆಗಳಲ್ಲಿದ್ದ ವಸ್ತುಗಳನ್ನೆಲ್ಲಾ ದೋಚಲಾಯಿತು. ಹೇಗೆಂದರೆ ಮರು ದಿವಸಕ್ಕೆ ಅಡುಗೆ ಮಾಡಲು ಅಕ್ಕಿ, ದವಸಧಾನ್ಯ, ಗ್ಯಾಸ್ ಯಾವುದೂ ಉಳಿಯದಂತೆ! ಅಂಗಡಿಗಳಲ್ಲಿದ್ದ ವಸ್ತುಗಳನ್ನೆಲ್ಲಾ ದೋಚಲಾಯಿತು. ಹಸುಳೆ ಮಕ್ಕಳ ಅಪ್ಪಂದಿರ ಎರಡೂ ಕಾಲುಗಳನ್ನು ಕತ್ತರಿಸಲಾಯಿತು. ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಯುವಕರನ್ನು ಅಟ್ಟಾಡಿಸಿ ಬಡಿಯಲಾಯಿತು. ಪ್ರಾಯದ ಮುದುಕ ಮುದುಕಿಯರಿಗೂ ತದುಕಲಾಯಿತು. ಒಬ್ಬನೇ ಒಬ್ಬ ಪತ್ರಕರ್ತ ಅಲ್ಲಿಗೆ ಧಾವಿಸಿ ಘಟನೆಗಳನ್ನು ವರದಿ ಮಾಡಲಿಲ್ಲ. ತಮ್ಮ ಬಳಿ ಬಂದ ಮಾಹಿತಿಯನ್ನೂ ಪ್ರಕಟಿಸಲಿಲ್ಲ. ಪೊಲೀಸರು ಯಾವುದೇ ಕೇಸು ದಾಖಲಿಸಲಿಲ್ಲ. ಸರಕಾರ ಪ್ರಜೆಗಳ ಸಹಾಯಕ್ಕೆ ನಿಲ್ಲಲಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಸ್ವತಃ ಬಂಗಾಳದ ಕಣ್ಣೀರಿನ ಕಥೆಗಳನ್ನು, ದಂಗೆಯ ಭೀಕರತೆಯನ್ನು ರಾಜ್ಯವಿಡೀ ಸುತ್ತಾಡಿ ಕಂಡ ರಾಜ್ಯಪಾಲರು ಪತ್ರಿಕಾ ಘೋಷ್ಠಿಯಲ್ಲಿ ಪ್ರಕಟಿಸಿದ ಪರಿ ಇದು. ಪರಿಶೀಲನೆಗೆಂದು ಹೋದ ರಾಜ್ಯಪಾಲರ ವಾಹನವನ್ನೇ ತಡೆದು ನಿಲ್ಲಿಸಲಾಯಿತು. ಅದರ ವಿರುದ್ಧ ಕೇಸು ದಾಖಲು ಮಾಡಲು ಐದು ದಿವಸ ಹಿಡಿಯಿತು. ಅದೂ ರಾಜ್ಯದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಗೃಹ ಕಾರ್ಯದರ್ಶಿ, ಪೊಲೀಸ್ ಕಮೀಷನರ್ ಮತ್ತಿತರ ಉನ್ನತ ಅಧಿಕಾರಿಗಳನ್ನು ಒಟ್ಟುಗೂಡಿಸಿ ವಿಡೀಯೋ ಕಾನ್ಪರೆನ್ಸ್ ಮಾಡಿದ ಬಳಿಕ. ಇನ್ನು ಜನಸಾಮಾನ್ಯರ ಪಾಡೇನು? "ಜನ ಸಾವಿರಾರು ಸಂಖ್ಯೆಯಲ್ಲಿ ತಮ್ಮ ವಾಸಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಓಡಿ ಹೋಗುತ್ತಾರೆಂದರೆ ಇನ್ನು ನಮ್ಮನ್ಯಾವ ಸರಕಾರ, ಆರಕ್ಷಕ ಪಡೆ ರಕ್ಷಿಸಲಾರದು ಎಂಬ ಭೀತಿಯಿಂದ ಪ್ರಾಣ ಉಳಿಸಿಕೊಳ್ಳಲಲ್ಲದೆ ಮತ್ತೇನು? ಸಂತ್ರಸ್ತರು ಯಾರು, ದಂಧೆಕೋರರು ಯಾರು ಎನ್ನುವುದು ರಹಸ್ಯವೇನಲ್ಲವಲ್ಲ? ನಾವು ಸಂವಿಧಾನದ ಕಗ್ಗೊಲೆಯನ್ನು ಕಣ್ಣಾರೆ ಕಂಡು ಸುಮ್ಮನಿದ್ದೇವೆ ಎಂದರೆ ಶಿಕ್ಷೆಯಾಗಬೇಕಾದ್ದು ನಮಗೆ ಅಲ್ಲವೇ? ಇದೇ ದಿಕ್ಕಿನಲ್ಲಿ ಮುಂದುವರೆದರೆ ಬಂಗಾಳವನ್ನು ಉಳಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ" ಇದು ರಾಜ್ಯಪಾಲರ ಬಾಯಿಯಿಂದ ಉದುರಿದ ರಾಜಕೀಯ ಭಾಷಣವಲ್ಲ. ಇದು ಬಂಗಾಳೀ ಹಿಂದೂಗಳು ರಾಜ್ಯಪಾಲರನ್ನು ಕಂಡು ಕಾಲು ಹಿಡಿದು ಕಣ್ಣೀರಿಟ್ಟು ತಮ್ಮ ಅಳಲು ತೋಡಿಕೊಂಡುದದರ ಸಂಕ್ಷಿಪ್ತ ರೂಪ.
ದೇಶದ ಉಳಿದೆಡೆಯ ಹಿಂದೂಗಳಿಗೆ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗೆಗೆ ಒಂದು ಸಣ್ಣ ಕಲ್ಪನೆಯೂ ಇಲ್ಲ. ಅಷ್ಟು ವ್ಯವಸ್ಥಿತವಾಗಿ ಮಾಧ್ಯಮಮಾಫಿಯಾ ದಂಗೆಯ ಸುದ್ದಿಗಳನ್ನು ಮುಚ್ಚಿಟ್ಟಿದೆ. ಪ್ರತ್ಯಕ್ಷದರ್ಶಿಗಳು ಮಾಡಿರುವ ವಿಡೀಯೋಗಳನ್ನು ತಮ್ಮದೇ "ಫ್ಯಾಕ್ಟ್ ಚೆಕ್ ಸ್ಟಾಂಡರ್ಡ್"ಗೆ ಒಗೆದು ಅವುಗಳೆಲ್ಲಾ ನಕಲಿ ಎನ್ನುತ್ತಾ ದಂಗೆಯ ಸುದ್ಧಿಗಳನ್ನು ಹಂಚಿದವರ ನೈತಿಕ ಸ್ಥೈರ್ಯವನ್ನೂ ಉಡುಗಿಸಿದ ಈ ವ್ಯವಸ್ಥೆ ಮಾಫಿಯಾವಲ್ಲದೇ ಮತ್ತೇನು? ದೂರದ ಪ್ಯಾಲೆಸ್ಟೈನಿನ ರಕ್ತಕಾರುವಂತೆ ಬಣ್ಣ ಹಚ್ಚಿಕೊಂಡ ವಿಡೀಯೋಗಳಿಗೆಲ್ಲಾ ಅಸಲಿ ಪ್ರಮಾಣಪತ್ರ ಕೊಟ್ಟು ಹಿಂದೂಗಳ ವಿರುದ್ಧದ ದೌರ್ಜನ್ಯವನ್ನು ಮಾತ್ರ ನಕಲಿ ಎನ್ನುವವರ ಕಣ್ಣುಗಳಲ್ಲಿರುವುದು ಹಿಂದೂವಿರೋಧದ ದಾಹ ಮಾತ್ರ. ದೂರದ ಪ್ಯಾಲೆಸ್ಟೈನಿಗೆ ಮಿಡಿದ ಪಠಾಣನ ಮಾನವೀಯತೆಯು ಹತ್ತಿರದ ಹಿಂದೂಗಳಿಗೆ ಮಿಡಿಯಲೇ ಇಲ್ಲ. ಯಾವ ಮಾಧ್ಯಮಗಳು ಸರಿಯಾದ ವರದಿ ಮಾಡುತ್ತವೆಯೋ ಅವುಗಳನ್ನು ಹತ್ತಿಕ್ಕಲಾಗುತ್ತದೆ. ಫೇಕ್ ನ್ಯೂಸ್ ಫ್ಯಾಕ್ಟರಿಗಳು ಹಿಂದೂಗಳ ತಲೆಯಲ್ಲಿ ಸುದ್ದಿಮಲವನ್ನು ತುಂಬಿಸುತ್ತಿವೆ. ನಮ್ಮ ಸಂಘ ಬಂಧುಗಳಿಂದಾಗಿ, ತಮ್ಮ ತವರು ನೆಲದಲ್ಲಿ ನಡೆದ ಘಟನೆಗಳಿಗೆ ಪ್ರತ್ಯಕ್ಷದರ್ಶಿಯಾಗಿದ್ದ ಬಂಗಾಳೀ ಹಿಂದೂ ಸ್ನೇಹಿತರಿಂದ ಈ ವಿಚಾರ ಕೆಲವಷ್ಟು ಜನರಿಗಾದರೂ ತಿಳಿದಿದೆ ಎಂಬುದೇ ಸಮಾಧಾನದ ಸಂಗತಿ.
ಹಾಗಾದರೆ ಬಂಗಾಳದಲ್ಲಿ ನಡೆದದ್ದು ನಕಲಿ ದಂಗೆಯೇ? ಸೆಕ್ಯುಲರುಗಳ ದೃಷ್ಟಿಯಲ್ಲಿ ಹೌದು. ಆದರೆ ಬಂಗಾಳೀ ಸ್ನೇಹಿತರ ಮ್ಲಾನವದನ, ಭೀತಿ, ಕಣ್ಣೀರುಗಳನ್ನು ನೋಡುವ ಮಾನವೀಯತೆಯಿರುವ ಯಾವ ವ್ಯಕ್ತಿಗಾದರೂ ಅಲ್ಲಿ ನಡೆದ ದೌರ್ಜನ್ಯವನ್ನು ಊಹಿಸಬಹುದು. ಅದೇ ಅನುಭವ ಬಂಗಾಳದ ರಾಜ್ಯಪಾಲರಿಗಾದದ್ದು. ಸೆಕ್ಯುಲರು ಉನ್ಮಾದದ ಆಡಳಿತ ಅರಾಜಕತೆಗಿಂತಲೂ ಎಷ್ಟು ಭಯಂಕರ ಎನ್ನುವುದು ಗೋಚರಕ್ಕೆ ಸಿಕ್ಕಿದ್ದು. ಅಲ್ಲಿ ನಡೆದದ್ದು ಮತ್ತೊಂದು ನವಖಾಲೀ ಹತ್ಯಾಕಾಂಡ. ಕಲ್ಕತ್ತಾದ ಮುಸ್ಲಿಂ ಬಾಹುಳ್ಯವಿರುವ ಸ್ಥಳಗಳಿಂದ ಜಿಹಾದೀಗಳನ್ನು ಬಂಗಾಳದ ಮೂಲೆಮೂಲೆಗೂ ಅಟ್ಟಿ ಹಿಂದೂಗಳಿಗೆ ತಿರುಗಿ ಬೀಳಲೂ ಕಿಂಚಿತ್ತೂ ಕ್ಷಣವೂ ಸಿಗದಂತೆ ನಡೆಸಿದ ವ್ಯವಸ್ಥಿತ ದಂಗೆ. ಬಂಗಾಳೀ ಸ್ನೇಹಿತನೊಬ್ಬ ಹೇಳುತ್ತಿದ್ದ. ಆತನ ಅಕ್ಕನ ಮನೆಗೆ ನುಗ್ಗಿದ ಜಿಹಾದೀಗಳು ಮನೆಗೆ ಬೆಂಕಿ ಕೊಟ್ಟದ್ದಲ್ಲದೆ ಆಕೆಯ ಮೇಲೆ ಹಲ್ಲೆಯನ್ನೂ ನಡೆಸಿದರು. ಕಣ್ಣಿನ ಕೆಳ ಭಾಗಕ್ಕೆ ಬಿದ್ದ ಏಟು ಒಂದೂವರೆ ದಿವಸ ಆಕೆ ಏನನ್ನೂ ತಿನ್ನಲಾಗದ, ಕುಡಿಯಲಾಗದ ಸ್ಥಿತಿಗೆ ತಂದೊಡ್ಡಿತು. ದೌರ್ಜನ್ಯಕ್ಕೆ ಕಾರಣ ಒಂದೇ ಆಕೆ ಭಾಜಪವನ್ನು ಬೆಂಬಲಿಸಿದುದು. ಇದೊಂದು ಉದಾಹರಣೆ ಮಾತ್ರ. ಇಂತಹಾ ಹಲವು ದೌರ್ಜನ್ಯದ ಘಟನೆಗಳನ್ನು ಬಂಗಾಳದ ಸ್ನೇಹಿತರಿಂದ ಕೇಳಿದ್ದೇನೆ. ಇಂತಹಾ ಹಲವು ದೌರ್ಜನ್ಯಗಳು ನಡೆದವು, ಭಾಜಪಾದ ಕಾರ್ಯಾಲಯಗಳನ್ನು ಸುಟ್ಟು ಹಾಕಲಾಯಿತು. ಭಾಜಪಾ ಬೆಂಬಲಿತರ ಮನೆಗಳು ಬೆಂಕಿಗೆ ಆಹುತಿಯಾದವು. ಅವರ ಮೇಲೆ ಹಲ್ಲೆ, ಅತ್ಯಾಚಾರ ನಡೆಯಿತು. ಜಿಹಾದೀಗಳ ಉನ್ಮತ್ತತೆ ಯಾವ ಪ್ರಮಾಣದಲ್ಲಿತ್ತೆಂದರೆ ಸಾವಿರಾರು ಹಿಂದೂಗಳು ಮಾನ, ಪ್ರಾಣ ರಕ್ಷಣೆಗೆ ಅಸ್ಸಾಂಗೆ ತೆರಳಬೇಕಾಯಿತು!
ಬಂಗಾಳೀ ಹಿಂದೂಗಳಿಗೆ ಈಗಲಾದ್ರೂ ಬುದ್ಧಿ ಬರಬಹುದು ಅಂತ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಉಢಾಫೆಯ ಮಾತಾಡುತ್ತ ತೌಡು ಕುಟ್ಟುತ್ತಾರೆ. ಆದರೆ ಅಲ್ಲಿನ ವಸ್ತುಸ್ಥಿತಿಯನ್ನು ಇವರು ಅರಿತಿಲ್ಲ. ಬಂಗಾಳೀ ಹಿಂದೂ ಈ ಬಾರಿ ಭಾಜಪಾವನ್ನು ಗೆಲ್ಲಿಸಲೆಂದೇ ತುದಿಗಾಲಲ್ಲಿ ನಿಂತಿದ್ದ. ಭಾಜಪಾ ಅಧಿಕಾರಕ್ಕೆ ಬರುತ್ತದೆ, ತನ್ನ ಮೇಲಿನ ದೌರ್ಜನ್ಯಗಳಿಗೆಲ್ಲಾ ಮಂಗಳ ಹಾಡುತ್ತದೆ ಎಂದು ಭಾವಿಸಿದ್ದ. ಆದರೆ ಬಂಗಾಳದ ಬಾಬೂಗಳನ್ನು ತನ್ನ ಹಣದ ಥೈಲಿಯ ರುಚಿ ತೋರಿಸಿ ಅಂಗೈಯಲ್ಲಿಟ್ಟುಕೊಂಡಿರುವ ದೀದಿಯ ಷಡ್ಯಂತ್ರದಿಂದ ಭಾಜಪ ಅಧಿಕಾರದ ಹತ್ತಿರವೂ ಸುಳಿಯಲಿಕ್ಕಾಗಲಿಲ್ಲ. ದಂಗಾ ದೀದಿ ಗೆದ್ದದ್ದು ಇವಿಎಮ್ ಯಂತ್ರಗಳನ್ನೇ ಬದಲಾಯಿಸಿ ಎಂದು ಬಂಗಾಳಿಗಳೇ ಹೇಳುತ್ತಾರೆ. ಈ ಆರೋಪಕ್ಕೆ ಮತ ಎಣಿಕೆ ಮುಗಿದ ನಂತರ ಟಿ.ಎಂ.ಸಿ ಕಾರ್ಯಾಲಯ ಮತ್ತು ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿದಾಗ ಸಿಕ್ಕ ಇವಿಎಮ್ ಯಂತ್ರಗಳೇ ಸಾಕ್ಷಿ. ಆದರೆ ಈ ತನಿಖೆ ದೀದಿ ಅಧಿಕಾರ ವಹಿಸಿಕೊಂಡ ಕೂಡಲೇ ಹಳ್ಳ ಹಿಡಿಯಿತು. ಸೋತ ಬಳಿಕ ದೀದಿಯ ಮೇಲೆ ಗೂಬೆ ಕೂರಿಸುವುದು ಅಂತ ನಿಮಗನ್ನಿಸಿದರೆ ಒಂದು ಬೂತ್ ಲೆವೆಲಿನ ಉದಾಹರಣೆ ಕೊಡುತ್ತೇನೆ. ನನ್ನೋರ್ವ ಬಂಗಾಳೀ ಸ್ನೇಹಿತನ ಬೂತ್ ನಲ್ಲಿ ಭಾಜಪಾ ಮೇಲುಗೈ ಖಚಿತವಾಗಿತ್ತು. ಆದರೆ ಮತ ಎಣಿಕೆಯ ದಿನ ದೀದಿಯ ಪಕ್ಷಕ್ಕೆ 770 ಮತ, ಭಾಜಪಾಕ್ಕೆ 10 ಮತ, ಕಮ್ಯುನಿಸ್ಟ್ ಪಕ್ಷಕ್ಕೆ ಒಂದು ಮತ ಸಿಕ್ಕಿತ್ತು. ಇಂತಹಾ ದೊಡ್ಡ ಅಂತರ ಅದರಲ್ಲೂ ಭಾಜಪಾಕ್ಕೆ ಕೇವಲ ಹತ್ತೇ ಮತ ಹೇಗೆ ಸಾಧ್ಯ? ಅದೂ ಭಾಜಪ ಪ್ರಬಲವಾಗಿದ್ದ ಬೂತ್'ನಲ್ಲಿ? ಬೂತ್ನಲ್ಲಿ ಸಿಗುವ ಮತದ ಲೆಖ್ಖ ಯಾವಾಗಲೂ ಬಹುತೇಕ ಖಚಿತವಾದದ್ದು ಎನ್ನುವುದು ಬೂತ್ ಮಟ್ಟದ ಚುನಾವಣಾ ಕಾರ್ಯತಂತ್ರದ ಜ್ಞಾನವುಳ್ಳ ಎಂತಹವರಿಗಾದರೂ ತಿಳಿದಿರುತ್ತದೆ. ಬಂಗಾಳದ ಚುನಾವಣೆಯಲ್ಲಿ ಬಾಂಗ್ಲಾದೇಶದವರೆಷ್ಟು ಮಂದಿ ಮತ ಹಾಕಿದ್ದಾರೋ ದೇವರಿಗೇ ಗೊತ್ತು! ಬಾಂಗ್ಲಾದೇಶಿಗಳಿಗೆ ಹಣಕೊಟ್ಟು ಓಟು ಹಾಕಿಸಲು ಯತ್ನಿಸಿ ಸಿಕ್ಕಿ ಬಿದ್ದ ಪ್ರಕರಣವೂ ನಿಮಗೆ ನೆನಪಿರಬಹುದು. ಗೆದ್ದವರಲ್ಲಿ 29 ಶಾಸಕರು ರೋಹಿಂಗ್ಯಾಗಳು!
ಬಂಗಾಳದಿಂದ ಹೊರಗಿರುವ ನನ್ನ ಬಂಗಾಳೀ ಮಿತ್ರರು ಅದೆಷ್ಟು ಕುಸಿದಿದ್ದರೆಂದರೆ ಕೆಲ ದಿವಸ ಸರಿಯಾಗಿ ಕೆಲಸ ಮಾಡುವ ಮನಸ್ಥಿತಿಯಲ್ಲೂ ಇರಲಿಲ್ಲ. ಕೆಲವರು ವಿಜಯಿಯಾಗಿದ್ದ ಭಾಜಪಾ ಶಾಸಕರು ಜನರ ರಕ್ಷಣೆಗೆ ನಿಲ್ಲಬೇಕಿತ್ತು ಎಂದು ಭಾಜಪಾವನ್ನು ಆಕ್ಷೇಪಿಸುತ್ತಾರೆ. ಆದರೆ ಅವರೇನಾದ್ರೂ ಆವತ್ತು ಮನೆಯಿಂದ ಹೊರಬೀಳುತ್ತಿದ್ದರೂ ಹೆಣವಾಗುತ್ತಿದ್ದರು. ಇದಕ್ಕೆ ದಂಗೆಕೋರರು ಹಲವು ಭಾಜಪಾ ನಾಯಕರ ಮನೆಯ ಸುತ್ತ ಠಳಾಯಿಸಿ ಮನೆಯನ್ನೇ ಧ್ವಂಸಗೊಳಿಸಲು ಆರಂಭಿಸಿದ್ದು, ಬಳಿಕ ಅವರನ್ನು ಅಲ್ಲಿಂದ ಚದುರಿಸಲು ಕೇಂದ್ರ ಸೈನಿಕಪಡೆಯನ್ನು ಕಳುಹಿಸಬೇಕಾಗಿಬಂದದ್ದೇ ಸಾಕ್ಷಿ. ಇನ್ನು ಕೆಲವರು ಕೇಂದ್ರ ಸರಕಾರ ತಕ್ಷಣ ಸೈನಿಕರನ್ನು ನಿಯೋಜಿಸಬೇಕಿತ್ತು ಅನ್ನುತ್ತಾರೆ. ಸಹಜವಾದದ್ದೇ. ಆದರೆ ಒಂದು ವ್ಯವಸ್ಥಿತ ದಂಗೆಯನ್ನು ಹತ್ತಿಕ್ಕಲು ಕೇಂದ್ರ ಸೈನಿಕ ಪಡೆಯನ್ನು ಎಷ್ಟೂಂತಾ, ಎಲ್ಲೀಂತಾ ಕಳುಹಿಸಬಹುದು. ಸೇನೆಯನ್ನು ಕಳುಹಿಸಿದ ಬಳಿಕವೂ ಸಂಪೂರ್ಣ ದಂಗೆಯನ್ನು ಹತ್ತಿಕ್ಕಲು ಕೆಲದಿನಗಳಾದರೂ ಬೇಕು. ಇದು ಕೇಂದ್ರದ ಸಮರ್ಥನೆಯಲ್ಲ. ವಸ್ತುಸ್ಥಿತಿ. ಕೇಂದ್ರ ಇದನ್ನೆಲ್ಲಾ ಮುಂಚೆಯೇ ಅರಿವಿಗೆ ತಂದುಕೊಂಡು ವ್ಯವಸ್ಥೆ ಮಾಡಬೇಕಿತ್ತು ಎನ್ನುವುದು ಸ್ವಲ್ಪಮಟ್ಟಿಗೆ ಸರಿ ಅನ್ನಿಸುತ್ತದೆ. ಜನರ ರಕ್ಷಣೆಗೆ ಮೊದಲೇ ವ್ಯವಸ್ಥೆ ಮಾಡಬೇಕಿತ್ತು. ದೀದಿ ಮೋಸ ಮಾಡುತ್ತಾಳೆ ಎಂಬ ಗುಮಾನಿಯೂ ಕೇಂದ್ರ ಸರಕಾರಕ್ಕೆ ಬರಲಿಲ್ಲ ಎಂದರೆ ವಿಚಿತ್ರ & ವಿಪರ್ಯಾಸವೇ ಸರಿ.
ಪ್ರತಿಪಕ್ಷಗಳು ಮೋದಿಯವರನ್ನು ಹಿಟ್ಲರ್, ಡಿಕ್ಟೇಟರ್ ಎಂದು ಬಿಂಬಿಸಲು ಪ್ರಯತ್ನಿಸಿದವು. ಮೋದಿಯವರ ಕೂದಲೂ ಕೊಂಕಿಸಲೂ ಸಾಧ್ಯವಾಗಲಿಲ್ಲ. ಆಗ ಅವರ ಕಣ್ಣಿಗೆ ಬಿದ್ದುದು ಬಡಪಾಯಿ ಹಿಂದೂಗಳು. ಅದರ ಪ್ರತ್ಯಕ್ಷ ಸಾಕ್ಷಿ ಬಂಗಾಳದಲ್ಲಿದೆ. ತಾನು ಗೆದ್ದುದೇ ತಡ, ತನ್ನ ಗೂಂಡಾಗಳಿಗೆ ಬೇಕಾದ್ದನ್ನು ಮಾಡುವ ಸ್ವಾತಂತ್ರ್ಯ ಕೊಟ್ಟಳು ಆಕೆ. ಹೀಗೆ ಕಾಯುತ್ತಿರುವ ಅದೆಷ್ಟು ನಾಯಕರುಗಳಿದ್ದಾರೋ? ದೆಹಲಿಯಲ್ಲಿ, ಬೆಂಗಳೂರಿನ ಡಿಜೆಹಳ್ಳಿಯಲ್ಲಿ ಆದದ್ದು ನೆನಪಿದೆಯಲ್ಲಾ! ಇದೆಲ್ಲಾ ಉದ್ದೇಶಪೂರ್ವಕವಾಗಿಯೇ, ವ್ಯವಸ್ಥಿತವಾಗಿಯೇ ನಡೆಯಿತು ಎನ್ನುವುದಕ್ಕೆ ಸಾಕ್ಷಿಗಾಗಿ ನಾವು ಚುನಾವಣಾ ಪೂರ್ವದ ಸಮಯಕ್ಕೆ ಧಾವಿಸಬೇಕು. ತೃಣಮೂಲ ಶಾಸಕ ಹಮೀದುಲ್ ರಹಮಾನ್ ತಮಗೆ ಮತ ಹಾಕದವರನ್ನು ಒಂದು ಕೈ ನೋಡಿಕೊಳ್ಳುತ್ತೇನೆ ಎಂದು ಬಹಿರಂಗ ಸವಾಲು ಹಾಕಿದ್ದ.ಶೇಖ್ ಅಲಾಮ್ ಎನ್ನುವವ ಭಾರತದ ಮೂವತ್ತು ಪ್ರತಿಶತ ಮುಸ್ಲಿಮರು ಒಂದಾದರೆ ನಾವು ನಾಲ್ಕು ಪಾಕಿಸ್ತಾನಗಳನ್ನು ನಿರ್ಮಿಸಬಹುದು ಎಂದಿದ್ದ. ಇವರೆಲ್ಲಾ ಬಿಡಿ ಸ್ವತಃ ದಂಗಾ ದೀದಿಯೇ "ಕೇಂದ್ರ ಪಡೆಗಳು ತೆರಳಿದ ಬಳಿಕ ಅವರನ್ನು ಯಾರು ರಕ್ಷಿಸುತ್ತಾರೆ?" ಎಂದು ಚುನಾವಣಾ ರ್ಯಾಲಿಯಲ್ಲಿ ಬೆದರಿಕೆ ಹಾಕಿದ್ದಳು. ಕೇಂದ್ರ ಸರಕಾರ ನೇತಾಜಿಯವರ 125ನೇ ಜಯಂತಿಯನ್ನು "ಪರಾಕ್ರಮ್ ದಿವಸ್" ಎಂದು ವಿಶಿಷ್ಟವಾಗಿ ಆಚರಿಸಲು ತೊಡಗಿದಾಗ ದೀದಿ ಅದಕ್ಕೂ ಅಡ್ಡಗಾಲು ಹಾಕಿದಳು. ಜನರು ಜೈಶ್ರೀರಾಮ್ ಘೋಷಣೆ ಹಾಕಿದ್ದೂ ಅವಳ ಪಿತ್ಥವನ್ನು ನೆತ್ತಿಗೇರಿಸಿತು. ಜೈ ಶ್ರೀರಾಮ್ ಎಂಬುದು ಆತಂಕವಾದಿಗಳ ಘೋಷಣೆ ಎಂದುಬಿಟ್ಟಳು. ರಾಮನವಮಿಯ ಮೆರವಣಿಗೆಗಳಲ್ಲಿ ಬಿಲ್ಲು-ಬಾಣಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಿದಳು. ಮುಸಲ್ಮಾನರ ಹಬ್ಬವೂ ದುರ್ಗಾಪೂಜೆಯ ಸಮಯದಲ್ಲೇ ಬಂದುದಕ್ಕಾಗಿ ದುರ್ಗಾಪೂಜೆಯ ಮೆರವಣಿಗೆಯಯನ್ನೇ ನಿಲ್ಲಿಸಿದಳು. ಎಲ್ಲಾ ದೇಶ ವಿರೋಧಿಗಳು ಒಟ್ಟಾಗಿದ್ದರು. ನಕಲಿ ಪರಿಸರ ಹೋರಾಟಗಾರ್ತಿ ಗ್ರೇಟಾನ ಟೂಲ್ ಕಿಟ್ ನೋಡಿದರೆ ಅದರಲ್ಲಿ ದಂಗೆಯ ಬಗೆಗಿನ ಯೋಜನೆಯ ಹೊಳಹುಗಳು ಕಾಣಿಸುತ್ತವೆ.
ಕೆಲ ವರ್ಷಗಳ ಹಿಂದೆ ಮಾಲ್ಡಾದಲ್ಲಿ ಎದ್ದ ದಂಗೆಯ ಉರಿಯೇ ಇಂದು ಬಂಗಾಳದಾದ್ಯಂತ ಹಬ್ಬಿದೆ. ಅಂದು ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಮುಸಲರು ಮಾರಕಾಯುಧ, ದೊಡ್ಡ ದೊಡ್ಡ ಹಸಿರು ಬಾವುಟಗಳನ್ನು ಹಿಡಿದು ರಾಷ್ಟ್ರೀಯ ಹೆದ್ದಾರಿ 34ನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು ಕಿರುಚಾಡುತ್ತಿದ್ದರು. ಗಡಿ ಭದ್ರತಾ ಪಡೆಯ ವಾಹನವೂ ಸೇರಿ ಇಪ್ಪತ್ತೈದಕ್ಕೂ ಹೆಚ್ಚು ವಾಹನಗಳು ಮತಾಂಧತೆಯ ಕಿಚ್ಚಿಗೆ ಆಹುತಿಯಾಗಿದ್ದವು. ಅಂಗಡಿ-ಮನೆ, ಪೊಲೀಸ್ ಸ್ಟೇಷನ್ನಿಗೂ ಬೆಂಕಿಬಿದ್ದಿತ್ತು. ಆಸ್ತಿ ಪಾಸ್ತಿಯ ಲೂಟಿಯೂ ನಡೆದಿತ್ತು. ಹತ್ತಾರು ಹಿಂದೂ ದೇವಾಲಯಗಳನ್ನು ಸುಡಲಾಯಿತು. ಇಪ್ಪತ್ತೈದಕ್ಕು ಹೆಚ್ಚು ಹಿಂದೂಗಳ ಮನೆ, ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದವು. ಕಾಲಿಯಾಚಾಕ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ಅಲ್ಲಿದ್ದ ಕಡತಗಳನ್ನೆಲ್ಲಾ ಸುಟ್ಟು ಹಾಕಲಾಗಿತ್ತು. ಇದೆಲ್ಲವೂ ಒಂದೇ ದಿನ ಕೆಲವೇ ಕ್ಷಣಗಳಲ್ಲಿ ನಡೆದು ಹೋಗಿತ್ತು.
ಲವ್ ಜಿಹಾದ್ ಮತಾಂಧರ ಕೈಯಲ್ಲಿರುವ ಬಹು ಮುಖ್ಯ ಅಸ್ತ್ರ. ಇದರ ದುಷ್ಪರಿಣಾಮಗಳು ಒಂದೆರಡಲ್ಲ. 2014ರಲ್ಲಿ ಪಶ್ಚಿಮ ಬಂಗಾಳದ ಆರಾಮ್ ಭಾಗ್ ಕ್ಷೇತ್ರದಿಂದ ಗೆದ್ದಾಕೆ ಆಫ್ರಿನ್ ಅಲಿ. ಅದು ಎಸ್.ಸಿ ಮೀಸಲು ಕ್ಷೇತ್ರ! ಆಕೆ ಹುಟ್ಟಿದ್ದು ಹಿಂದೂವಾಗಿ(ಅಪರೂಪಾ ಪೊದ್ದರ್) ಮದುವೆಯಾಗಿ ಮತಾಂತರವೂ ಆದಳು. ಭಾಜಪಾ ಆಕೆಯ ಮೇಲೆ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಿದಾಗ ತಾನು ಹೆಸರು ಮಾತ್ರ ಬದಲಾಯಿಸಿದ್ದೇನೆ,ಮತವನ್ನಲ್ಲ ಎಂದಳು! ಮೀಸಲಾತಿ ಕಾನೂನಿನ ದುರುಪಯೋಗ! ಸಂಸ್ಕೃತ ಪದವಿ ವಿದ್ಯಾರ್ಥಿನಿ ಪ್ರಜ್ಞಾ ದೇಬನಾಥಳ ಬಳಿ ಪ್ರೀತಿಯ ನಾಟಕ ಮಾಡಿ, ಮತಾಂತರಿಸಿ ಮದುವೆಯಾದ ಮತಾಂಧನೊಬ್ಬ ಅವಳ ತಲೆಯಲ್ಲಿ "ಕ್ರೈಮ್ ರಿಪೋರ್ಟ"ನ್ನು ತುಂಬಿಸಿದ. ಬಳಿಕ ಅವಳನ್ನು ಬಾಂಗ್ಲಾದೇಶದ ಭಯೋತ್ಪಾದಕರ ಗುಂಪಿಗೆ ಪರಿಚಯಿಸಿದ. ಆಯೇಷಾ ಎಂಬ ಹೊಸ ಹೆಸರು ಸಿಕ್ಕಿದ ಬಳಿಕ ಆಕೆ ಬಾಂಗ್ಲಾದೇಶದ ಮದರಸಾಗಳಲ್ಲಿ ಪುಟ್ಟ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕಿಯಾದಳು. ಜೊತೆಗೆ ಜಾಲತಾಣಗಳಲ್ಲಿ ತನ್ನ ಸಂಪರ್ಕಕ್ಕೆ ಬಂದ ತರುಣ-ತರುಣಿಯರನ್ನು ಹಿಂದೂಧರ್ಮದ ವಿರುದ್ಧ ಎತ್ತಿಕಟ್ಟುವ, ಭಯೋತ್ಪಾದನೆಗೆ ಸಜ್ಜುಗೊಳಿಸುವ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಳು. ಐಸಿಸ್ ಬೆಂಬಲಿತ ಜಮಾತ್-ಉಲ್ ಮುಜಾಹಿದ್ದೀನ್ ಎಂಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥೆಯೂ ಆದಳು. ಅವಳಿಗೆ ಬಲೆ ಬೀಸಿದ ಬಾಂಗ್ಲಾದೇಶ ಉಗ್ರನಿಗ್ರಹ ಪಡೆ ಢಾಕಾದಲ್ಲಿ ಆಕೆಯನ್ನು ಬಂಧಿಸಿತು. ವಿಚಾರಣೆ ವೇಳೆಗೆ ಆಕೆ ತಾನು ಹೇಗೆ ಗಡಿಯಲ್ಲಿ ಲೀಲಾಜಾಲವಾಗಿ ಎರಡೂ ಕಡೆ ಸಂಚರಿಸುತ್ತಿದ್ದೆ, ಪಶ್ಚಿಮ ಬಂಗಾಳದ ಹಳ್ಳಿ-ಹಳ್ಳಿಗಳೂ ಹೇಗೆ ಮತಾಂತರಗೊಳ್ಳುತ್ತಿವೆ ಎನ್ನುವುದನ್ನು ವಿವರವಾಗಿ ಬಿಚ್ಚಿಟ್ಟಳು. ಈ ಎಲ್ಲಾ ಪ್ರಕರಣ ಬೆಳಕಿಗೆ ಬಂದದ್ದು ಬಂಗಾಳದ ಬಸಿರ್ ಹಾತ್ ನಲ್ಲಿದ್ದ ಐಸಿಸ್ ಏಜೆಂಟ್ ತಾನಿಯಾ ಫವ್ರೀನಳನ್ನು ಎನ್ಐಎ ಬಂಧಿಸಿದ ಮೇಲೆ. ಸ್ಥಳೀಯ ಪೊಲೀಸರು ಈ ಪ್ರಕರಣವನ್ನು ಮುಚ್ಚಿ ಹಾಕಲು ಶತಪ್ರಯತ್ನ ನಡೆಸಿದ್ದರು!
ಕಾಂಗ್ರೆಸ್, ಕಮ್ಯೂನಿಸ್ಟ್ ಆಳ್ವಿಕೆಯಲ್ಲಿ ಬೆಳೆದ ಕೈಗಾರಿಕೆಗಳೂ ನೆಲಕಚ್ಚಿದ್ದವು. ನಂದಿಗ್ರಾಮದಲ್ಲಿ ನಡೆದ ಪ್ರಹಸನವನ್ನು ನೋಡಿದವರಿಗೆ ಅದಕ್ಕಿರುವ ಕಾರಣಗಳನ್ನು ಊಹಿಸಲು ಸಾಧ್ಯವಾಗಬಹುದು. ದೀದಿ ಈ ಕ್ಷೇತ್ರಕ್ಕೆ ಅವೆರಡೂ ಪಕ್ಷಗಳನ್ನೂ ನಾಚಿಸುವಂತೆ ಘಾತಕವಾಗೆರಗಿದಳು. ದಿನನಿತ್ಯದ ಮುಷ್ಕರ, ದಂಗೆ, ಭ್ರಷ್ಟಾಚಾರಗಳಿಗೆ ಬೇಸತ್ತ ಸಂಸ್ಥೆಗಳು ಒಂದೊಂದಾಗಿ ಬಂಗಾಳದಿಂದ ಕಾಲ್ತೆಗೆದವು. ಒಂದು ಕಾಲದಲ್ಲಿ ಎಂಬತ್ತರಿಂದ ತೊಂಬತ್ತು ಪ್ರತಿಶತ ಕ್ಯಾಂಪಸ್ ಸೆಲೆಕ್ಷನ್ ಆಗುತ್ತಿದ್ದ, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಮ್ಮೆ ಮುಂಚೂಣಿಗೆ ಬರುವ ಪ್ರಯತ್ನದಲ್ಲಿದ್ದ ತಾಂತ್ರಿಕ ವಿದ್ಯಾಲಯಗಳಲ್ಲಿ ಈಗ ಕ್ಯಾಂಪಸ್ ಸೆಲೆಕ್ಷನ್ ಎಂಬ ಪದವೇ ಅಪರಿಚಿತವಾಗಿದೆ. ಅವುಗಳಲ್ಲಿ ಶಿಕ್ಷಣ ಶುಲ್ಕ ಏರುತ್ತಲೇ ಇದೆ. ಶಿಕ್ಷಕರ ಸಂಬಳ ಇಳಿಮುಖವಾಗುತ್ತಿದೆ. ತತ್ಪರಿಣಾಮ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಇದು ಕೇವಲ ತಾಂತ್ರಿಕ ವಿದ್ಯಾಲಯಗಳ ಕಥೆ ಮಾತ್ರವಲ್ಲ. ಪ್ರಾಥಮಿಕ, ಪ್ರೌಢ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಇದು ದಂಗಾ ದೀದಿಯ ಆಡಳಿತದ ನೇರ ಪರಿಣಾಮ.
ಹೇಗಿತ್ತು ಬಂಗಾಳ? ಹದಿನೇಳನೇ ಶತಮಾನದಲ್ಲಿ ಭಾರತಕ್ಕೆ ಬಂದ ಫ್ರೆಂಚ್ ಪ್ರವಾಸಿ ಫ್ರಾಂಸ್ವಾ ಬರ್ನಿಯರ್ ಬಂಗಾಳದ ಕುರಿತು ಇಂತೆಂದಿದ್ದಾನೆ..."ಈಜಿಪ್ಟ್ ಅನ್ನು ವಿಶ್ವದ ಅತೀ ಹೆಚ್ಚು ಸಮೃದ್ಧಭರಿತ ಮತ್ತು ಪ್ರಕೃತಿವರಪ್ರಸಾದಿತವಾದ ಸುಭಿಕ್ಷ ನಾಡು ಎನ್ನುತ್ತಾರೆ. ಆದರೆ, ಬಂಗಾಳಕ್ಕೆ ಎರಡು ಬಾರಿ ಭೇಟಿ ನೀಡಿದ ನನ್ನ ಅನುಭವದಲ್ಲಿ ಈ ಗೌರವ ಬಂಗಾಳಕ್ಕೇ ಸಲ್ಲಬೇಕಿದೆ. ಬಂಗಾಳದಲ್ಲಿ ಬೆಳೆದ ಭತ್ತ ದೇಶ ವಿದೇಶಗಳಿಗೂ ಸರಬರಾಜಾಗುತ್ತದೆ. ಗಂಗಾ ನದಿಯ ಮೂಲಕ ಪಾಟ್ನಾಕ್ಕೂ ಸಮುದ್ರ ಮಾರ್ಗದ ಮೂಲಕ ದೇಶದ ವಿವಿದೆಡೆಗಳಿಗೆ ಹಾಗೂ ವಿದೇಶಗಳಿಗೂ ರಫ್ತಾಗುತ್ತದೆ. ಇಲ್ಲಿ ಉತ್ಪಾದನೆಯಾದ ಸಕ್ಕರೆ ಗೋಲ್ಕೊಂಡಾ ಮತ್ತು ಕರ್ನಾಟಕ ಪ್ರಾಂತಗಳಿಗೂ ಸರಬರಾಜಾಗುತ್ತದೆ. ಇಲ್ಲಿನ ಸಾಮಾನ್ಯರೂ ದಿನನಿತ್ಯದ ಊಟದಲ್ಲಿ ಯಥೇಚ್ಛವಾಗಿ ಉಪಯೋಗಿಸುವ ಬೇರೆ ಕಡೆ ದುಬಾರಿ ಅನಿಸುವ ವಸ್ತುಗಳು ಇಲ್ಲಿನ ಆಹಾರ ಸಮೃದ್ಧಿಗೆ ಸಾಕ್ಷಿಯಾಗಿದೆ. ಅದು ಹತ್ತಿ-ರೇಷ್ಮೆಗಳ ಸಮೃದ್ಧ ತಾಣ. ಇದು ಕೇವಲ ಭಾರತದ ಮುಖ್ಯ ಪ್ರಾಂತವಲ್ಲ, ಇಡೀ ಯೂರೋಪಿಗೆ ರಾಜಧಾನಿ ಎಂದರೂ ಉತ್ಪ್ರೇಕ್ಷೆಯಿಲ್ಲ." ತಾಂತ್ರಿಕರ, ರಾಮಕೃಷ್ಣ, ಅರವಿಂದ, ವಿವೇಕಾನಂದರ ಆಧ್ಯಾತ್ಮ ಲೋಕ; ರವೀಂದ್ರ, ಶರತ್ ಚಂದ್ರ, ಬಂಕಿಮ, ವಿಭೂತಿಭೂಷಣರ ಸಾಹಿತ್ಯ ಲೋಕ; ರತ್ನಾಕರನ ತೆರೆಗಳನ್ನೇ ನಿಯಂತ್ರಿಸುತ್ತಿದ್ದ ಸಂಗೀತೋತ್ಸವ; ಇಡೀ ಬಂಗಾಳವನ್ನು ಒಂದಾಗಿಸುತ್ತಿದ್ದ ದುರ್ಗಾಪೂಜೆಯ ವೈಭವ ಎಲ್ಲಿ ಹೋದವು? ವಂಗಭಂಗದ ವಿರುದ್ಧ ಬಂಗಾಳ ಹೇಗೆ ಸಿಡಿದೆದ್ದಿತ್ತೆಂದರೆ ಅದನ್ನು ವಿರೋಧಿಸದ ಬಂಗಾಳಿಯೇ ಇರಲಿಲ್ಲ. ಪ್ರತೀ ಬಂಗಾಳಿ ತನ್ನನ್ನು ತಾನು ಕ್ರಾಂತಿಗೆ ಸಮರ್ಪಿಸಿಕೊಂಡಿದ್ದ. ಆ ದೇಶ ನಿಷ್ಠೆ ಎಲ್ಲಿ ಹೋಯಿತು? ಇಂದು ಬಂಗಾಳ ಯೋಚಿಸಿದ್ದನ್ನು ನಾಳೆ ಭಾರತ ಯೋಚಿಸುತ್ತದೆ ಎಂಬ ಮಾತ್ಯಾಕೆ ಸವಕಲಾಗಿ ಹೋಯಿತು?
ಬಕ್ತಿಯಾರ್ ಖಿಲ್ಜಿ ಬಂಗಾಳವನ್ನು ಆಕ್ರಮಿಸಿದ ಬಳಿಕ ಬಂಗಾಳದಲ್ಲಿ ಅಪಾರ ಪ್ರಮಾಣದ ಹಿಂದೂಗಳ ಸುನ್ನತ್ ನಡೆಯಿತು. ಇದಕ್ಕೆ ಕಾರಣರಾದವರು ಅವನೊಟ್ಟಿಗೆ ಬಂದ ಹನ್ನೆರಡು ಸೂಫಿಗಳು! ಅವರನ್ನು ಯೋಧ ಸಂತರೆಂದೇ ಮುಸ್ಲಿಮ್ ಪಂಡಿತರು ಗುರುತಿಸುತ್ತಾರೆ! 17-18ನೇ ಶತಮಾನದ ವೇಳೆಗೆ ಬಂಗಾಳದ ಬಟ್ಟೆ ಈಜಿಪ್ಟ್, ಪರ್ಷಿಯಾ, ಜಾವಾ, ಜಪಾನ್, ಚೀನಾಗಳಿಗೆ ರಫ್ತಾಗುತ್ತಿದ್ದವು. ಬಂಗಾಳವೊಂದೇ ಪ್ರತಿವರ್ಷ ಒಂದೂವರೆ ಕೋಟಿ ರೂಪಾಯಿಗಳಷ್ಟು ವಾರ್ಷಿಕ ವಹಿವಾಟು ನಡೆಸುತ್ತಿತ್ತು. ಬಂಗಾಳದ ರೇಷ್ಮೆ ಉತ್ಪಾದನೆ ಜಗತ್ತಿನ ಶೇಕಡಾ 33ರಷ್ಟಿತ್ತು. ಬ್ರಿಟಿಷರ ಆಕ್ರಮಣದ ಬಳಿಕ ಎಲ್ಲವೂ ಬದಲಾಯಿತು. ವಿದೇಶಕ್ಕೆ ರಫ್ತು ಮಾಡುವುದಕ್ಕೂ ಪ್ರತಿಬಂಧ ಹಾಕಲಾಯಿತು. ಬ್ರಿಟಿಷರ ಒಡೆದಾಳುವ ಹಾಗೂ ಬ್ರಿಟಿಷ್ ಶಿಕ್ಷಣ ನೀತಿ ಬಂಗಾಳವನ್ನು ಭಾರತದ ಉಳಿದ ಪ್ರಾಂತ್ಯಗಳಿಗಿಂತಲೂ ಹೆಚ್ಚಾಗಿ ಜರ್ಝರಿತವನ್ನಾಗಿ ಮಾಡಿತು. ಅದರ ಜೊತೆಗೆ ಮುಸ್ಲಿಂ ಮತಾಂಧತೆಯ ಕ್ರೌರ್ಯ ಬಂಗಾಳವನ್ನು ಸುಡಲಾರಂಭಿಸಿತು. ಪ್ರತ್ಯೇಕ ರಾಷ್ಟ್ರಕ್ಕಾಗಿ ಹಪಹಪಿಸುತ್ತಿದ್ದ ಮುಸ್ಲಿಮ್ ಲೀಗ್, ತನ್ನ ಕಾರ್ಯ ಸಾಧನೆಗಾಗಿ 1946ರ ಆಗಸ್ಟ್ 16ರಂದು “ನೇರ ಕಾರ್ಯಾಚರಣೆ ದಿನ” ಹೆಸರಲ್ಲಿ ಬಂಗಾಳದಲ್ಲಿ ರಕ್ತದ ಹೊಳೆ ಹರಿಸಿತು. ಅದು ಬಂಗಾಳದ ಮಂತ್ರಿಯಾಗಿದ್ದ ಸುಹ್ರಾವರ್ದಿ ಎಂಬ ನರರಾಕ್ಷಸ ನಡೆಸಿದ ಸರಕಾರೀ ಪ್ರಾಯೋಜಿತ ದಂಗೆ. ಹಿಂದೂಗಳ ಮನೆ-ಅಂಗಡಿಗಳಿಗೆ ಬೆಂಕಿ ಹಚ್ಚಲಾಯಿತು. ಹಿಂದೂ ಹೆಂಗಳೆಯರ ಮೇಲೆ ಅತ್ಯಾಚಾರ ನಡೆಸಲಾಯಿತು. ಅಬಾಲವೃದ್ಧರಾದಿಯಾಗಿ ಹಿಂದೂಗಳನ್ನು ಕತ್ತರಿಸಿ ಬೀದಿ ಬೀದಿಗಳಲ್ಲಿ ಚೆಲ್ಲಲಾಯಿತು. ರಸ್ತೆರಸ್ತೆಗಳಲ್ಲಿ ಹೆಣಗಳ ರಾಶಿ ಬಿದ್ದಿತು. ಹೂಗ್ಲಿ ನದಿಯಲ್ಲಿ ಹೆಣಗಳು ತೇಲಿಹೋದವು. ಬಂಗಾಳದ ನದಿ, ಕಾಲುವೆಗಳು ರಕ್ತದಿಂದ ಕೆಂಪಾದವು. ಮೂರು ದಿನಗಳ ಅವಧಿಯಲ್ಲಿ 5000ಕ್ಕೂ ಹೆಚ್ಚು ಹಿಂದೂಗಳು ಕೊಲೆಯಾಗಿ ಹೋದರು. ಲಕ್ಷಕ್ಕೂ ಹೆಚ್ಚುಮಂದಿ ಪ್ರಾಣ-ಮಾನ ಭಯದಿಂದ ಕೋಲ್ಕತ್ತಾವನ್ನು ಬಿಟ್ಟು ತೆರೆಳಬೇಕಾಯಿತು. ಒಬ್ಬ ಗೋಪಾಲ್ ಮುಖ್ಯೋಪಾಧ್ಯಾಯರು ಇಲ್ಲದಿರುತ್ತಿದ್ದರೆ ಕೋಲ್ಕತ್ತಾ, ಹೂಗ್ಲಿ ಸೇರಿದಂತೆ ಬಂಗಾಳದ ಬಹುಭಾಗ ಇಸ್ಲಾಮ್ ಮಯವಾಗಿ ಪಾಕಿಸ್ತಾನದ ಭಾಗವಾಗಿ ಬಿಡುತ್ತಿದ್ದವು!
ಬ್ರಿಟಿಷರ ನೀತಿಯನ್ನೇ ತಮ್ಮದಾಗಿಸಿಕೊಂಡ ಕಾಂಗ್ರೆಸ್, ಕಮ್ಯೂನಿಸ್ಟ್ ಹಾಗೂ ದಂಗಾ ದೀದಿ ಉಳಿದ ಬಂಗಾಳವನ್ನೂ ವಿಭಜಿಸುತ್ತಾ ಸಾಗಿದರು. ಮೇರೆ ಮೀರಿದ ತುಷ್ಟೀಕರಣ ಬಂಗಾಳವನ್ನು ಇಸ್ಲಾಂಮಯವಾಗಿಸುತ್ತಾ ಸಾಗಿತು. ತಮ್ಮ ದೇವನ ಕ್ರೈಮ್ ರಿಪೋರ್ಟ್ ಅನ್ನೇ ಪವಿತ್ರ ಗ್ರಂಥವೆನ್ನುವ ಮತಾಂಧತೆ ಒಮ್ಮೆ ಹೊಕ್ಕರೆ ಅಲ್ಲಿ ದಂಗೆಯಲ್ಲದೆ ಇನ್ನೇನು ಉಳಿದೀತು? ಬಂಗಾಳದ ಅತ್ಯದ್ಭುತವಾದ ಭಾರತೀಯ ಸಾಂಸ್ಕೃತಿಕ ಪರಂಪರೆ, ಶಾಂತಿ-ಸುವ್ಯವಸ್ಥೆ-ಆತ್ಮಗೌರವಗಳ ಜೀವನ ವ್ಯವಸ್ಥೆಯ ನಾಮಾವಶೇಷವಾಗುತ್ತಿರುವುದರ ಹಿಂದಿನ ಕಾರಣ ಇದೇ. ಸೀಸ್ತಾನ್'ನಿಂದ ಬ್ರಾಹ್ಮಣಬಾರಿಯವರೆಗೆ ಜೀವರುಗಳನ್ನು, ಪ್ರಾಣಪ್ರತಿಷ್ಠೆಯಾದ ದೇವರುಗಳ ವಿಗ್ರಹಗಳನ್ನು ಚೆಲ್ಲಾಡಿ ಹಿಂದೂ ಸಂಸ್ಕೃತಿಯನ್ನು ನಾಶ ಮಾಡಲು ಯತ್ನಿಸಿದ ಮತಾಂಧತೆಯ ಕಾರಣದಿಂದಲೇ ಈಗ ನಮ್ಮ ಕಣ್ಣೆದುರಿಗೇ "ಸ್ವರ್ಣಸದೃಶ ಬಂಗಾಳ" ನಶಿಸಿಹೋಗುತ್ತಿದೆ. ಈ ವಿನಾಶಕ್ಕೆ ಕಾಂಗ್ರೆಸ್ - ಕಮ್ಯೂನಿಸ್ಟ್ ಹಾಗೂ ಅವರ ಗಂಜಿಯನ್ನೇ ನಂಬಿಕೊಂಡುಬಂದಿರುವ ಬೂಸಾ ಸಾಹಿತ್ಯ, ಸಿನೇಮಾ ಮಾಫಿಯಾ ಪಡೆಯ ಕೊಡುಗೆಯೂ ಬಹಳವೇ ಇದೆ.
ಬಂಗಾಳದ ಪುನರ್ನಿರ್ಮಿತಿ ಸುಲಭವಲ್ಲ. ಸುಟ್ಟುಹಾಕಿದ್ದನ್ನು ಪುನರ್ ನಿರ್ಮಿಸುವುದು ಸುಲಭದ ಮಾತೇನು? ನಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಮುದಾಯ ಉಳಿದರೆ ತಾನೇ ಪುನರ್ ನಿರ್ಮಾಣ ಸಾಧ್ಯ! ಬಂಗಾಳದಲ್ಲಿ ನಡೆಯುವ ದಂಗೆಗಳು ದೀದಿಯ ನಿರ್ದೇಶನದಲ್ಲೇ ನಡೆಯುತ್ತವೆ. "ಮಾಡಬೇಕಾದ ಕೆಲಸಗಳು ತುಂಬಾ ಇವೆ" ಎಂದು ಆಕೆ ಮುಲ್ಲಾಗಳ ಗುಂಪಲ್ಲಿ ಮಾತಾಡಿರುವ ವಿಡೀಯೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮನೆಯಲ್ಲೇ ಬಾಂಬು ತಯಾರಿಸುವ, ಭಯೋತ್ಪಾದಕರಿಗೆ ಬಹಿರಂಗವಾಗಿಯೇ ಬೆಂಬಲ ನೀಡುವ, ನುಸುಳುಕೋರರಿಗೆ, ಕಳ್ಳಸಾಗಣಿಕೆಗಾರರಿಕೆ, ನಕಲಿನೋಟುಜಾಲಕ್ಕೆ ಸುವ್ಯವಸ್ಥೆ ಒದಗಿಸಿಕೊಡುವ, ಹಿಂದೂಗಳನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ಕಾಣುವ ಸಂಸದ, ಶಾಸಕರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಒಂದು ದೊಡ್ಡ ಭಯೋತ್ಪಾದಕ ಸಂಘಟನೆ. ಅಂತಹಾ ಸಂಘಟನೆಯನ್ನು ನಿಷೇಧಿಸಿ, ಜನರಿಗೆ ರಕ್ಷಣೆ ಕೊಡದ ಭಯೋತ್ಪಾದಕ ಸರಕಾರವನ್ನು ಕಿತ್ತೊಗೆದು ಅಲ್ಲಿ ರಾಷ್ಟ್ರಪತಿ ಆಡಳಿತ ನಡೆಸುವುದೇ ಬಂಗಾಳವನ್ನು ಉಳಿಸುವ ಏಕೈಕ ದಾರಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ