ಪುಟಗಳು

ಮಂಗಳವಾರ, ಜೂನ್ 15, 2021

ಪತಿತರೋದ್ಧಾರಕ್ಕೆ ಜೀವ ತೇಯ್ದ ವೀರ ಸಾವರ್ಕರ್

 ಪತಿತರೋದ್ಧಾರಕ್ಕೆ ಜೀವ ತೇಯ್ದ ವೀರ ಸಾವರ್ಕರ್


1931ರ ಫೆಬ್ರವರಿ 22. ವೇದಮಂತ್ರ ಘೋಷಗಳು ಮೊಳಗುತ್ತಿರಲು, ಕರವೀರ ಪೀಠದ ಶಂಕರಾಚಾರ್ಯರ ನೇತೃತ್ವದಲ್ಲಿ, ಐದು ಸಾವಿರಕ್ಕೂ ಹೆಚ್ಚು ಹಿಂದೂಗಳ ಸಮ್ಮುಖದಲ್ಲಿ ಭಂಗಿ ಬಾಲಕನೊಬ್ಬ  ಭಗವಾನ್ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ. ಭಂಗಿ ಬಾಲಕನೊಬ್ಬ ಶಂಕರಾಚಾರ್ಯರ ಪಾದ ಪೂಜೆ ಮಾಡಿ ಅವರಿಗೆ ಪುಷ್ಪ ಮಾಲೆಯೊಂದನ್ನು ಅರ್ಪಿಸಿದ. ಆದಿ ಶಂಕರರು ದೇವನದಿ ಗಂಗೆಯ ತಟದಲ್ಲಿ ಆತ್ಮ ತತ್ತ್ವವನ್ನು ಅರಿತಿದ್ದ ಚಾಂಡಾಲನನ್ನು ಅಪ್ಪಿಕೊಂಡ ಐತಿಹಾಸಿಕ ಘಟನೆಯನ್ನು ಆ ದೃಶ್ಯ ನೆನಪಿಸಿತು. ಉಪೇಕ್ಷಿತ ವರ್ಗಕ್ಕೆ ಸೇರಿದ ಬಾಲಕಿಯರೀರ್ವರು "ನಾನು ಜಡದೇಹ, ಅವನೆನ್ನ ಪ್ರಾಣ; ಅವನು ಹಿಂದೂ ದೇವ, ನಾನು ಹಿಂದು; ನಾನು ದೀನ, ಅವನು ದಯಾ ಸಿಂಧು, ನೀ ಎನ್ನ ಧರ್ಮಬಂಧು - ನನ್ನನ್ನು ತಡೆಯದಿರು, ಮುಂದೆ ಹೋಗಲು ಬಿಡು" ಎಂದು ಆರ್ತ ಸ್ವರದಲ್ಲಿ ಹಾಡಿದ ಪ್ರಾರ್ಥನೆ ನೆರೆದಿದ್ದವರ ಹೃದಯ ಕರಗಿಸಿತು. " ಹೇ ಪತಿತಪಾವನ ಸ್ವಾಮಿ ರಾಷ್ಟ್ರಕ್ಕೆ ರಾಷ್ಟ್ರವೇ ಪತಿತರಾಗಿರುವ ನಮ್ಮನ್ನು ಎಂದಿಗೆ ಉದ್ಧರಿಸುವೆ" ಎಂದು ನೆರೆದಿದ್ದ ಹಿಂದೂ ಜನಸ್ತೋಮ ಕರವ ಜೋಡಿಸಿ ಹಾಡಿತು. ಅಂದಿನಿಂದ ಅದು ಪತಿತಪಾವನ ಮಂದಿರವಾಯಿತು. ಅಲ್ಲಿ "ಸಹನಾವವತು| ಸಹನೌ ಭುನಕ್ತು" ಎಂಬ ಮಂತ್ರ ಸಾಕ್ಷಾತ್ಕಾರಗೊಂಡು ಅಖಿಲ ಹಿಂದೂಗಳ ಪೂಜೆಗೆ, ಸಹಭೋಜನಗಳಿಗೆ, ಸಭೆ ಸಮಾರಂಭಗಳಿಗೆ, ಹಿಂದೂಗಳ ಏಕತ್ವಕ್ಕೆ ಅದು ವೇದಿಕೆಯಾಯಿತು. ಪತಿತರನ್ನು ಪಾವನಗೊಳಿಸುವ ಈ ಮಹಾ ಕಾರ್ಯಕ್ಕೆ ಅಧ್ವರ್ಯುವಾಗಿ ನಿಂತಿದ್ದವರೇ ಸ್ವಾತಂತ್ರ್ಯ ವೀರ ಸಾವರ್ಕರ್.



ಅಂದು ಛಾಪೇಕರರಿಗೆ ಅನ್ಯಾಯವಾದಾಗ ಕಣ್ಣೀರ್ಗರೆಯುತ್ತಾ, ಫಡಕೆಯೆಂಬ ಕಿಡಿಯನ್ನು ಅಗ್ನಿದಿವ್ಯವನ್ನಾಗಿಸುತ್ತೇನೆಂಬ ಪ್ರತಿಜ್ಞೆಗೈಯ್ಯುವಾಗ ಭವತಾರಿಣಿಯ ಪಾದ ಸ್ಪರ್ಶಿಸಿದ್ದ ಪುಟ್ಟ ಹಸ್ತಗಳ ಮೂಲಕ ಯಾವ ಶಕ್ತಿ ಸ್ತ್ರೋತ ತನುವಿನಾದ್ಯಂತ ಸಂಚರಿಸಿ ಸ್ಪೂರ್ತಿ ತುಂಬಿತ್ತೋ ಅದೇ ಶಕ್ತಿ ಸ್ತ್ರೋತ ಇಂದು ಅಸ್ಪೃಶ್ಯರನ್ನು ಸ್ಪೃಶ್ಯರನ್ನಾಗಿಸಲು ದಾರಿ ತೋರಿಸಿತ್ತು. ಹಾಗೆಂದು ಅದೇನೂ ಆ ಕ್ಷಣದ ನಿರ್ಧಾರವೂ ಆಗಿರಲಿಲ್ಲ. ಅಥವಾ ಇಂದಿನ ಜಾತ್ಯಾತೀತರನ್ನುವಂತೆ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ದಮನಿತ ವರ್ಗವನ್ನು ಸೆಳೆದು ಬಲಿಪಶು ಮಾಡುವ ಹುನ್ನಾರವೂ ಆಗಿರಲಿಲ್ಲ. ತನ್ನ ಪ್ರಚಾರಕ್ಕಾಗಿ ಮಾಡಿಕೊಂಡ ಕಾರ್ಯವೂ ಅದಾಗಿರಲಿಲ್ಲ. ಅದಕ್ಕೆ ಅಂಡಮಾನಿನಲ್ಲಿ ಕರಿನೀರ ರೌರವವನ್ನು ಉಣುವಾಗಲೇ ಬೀಜಾರೋಪವಾಗಿತ್ತು. "ಏಕ ದೇವ ಏಕ ದೇಶ ಏಕ ಆಶಾ | ಏಕ ಜಾತಿ ಏಕ ಜೀವ ಏಕ ಭಾಷಾ ||" ಎಂಬ ಮಂತ್ರ ಅಲ್ಲಿಯೇ ಮೊಳೆದಿತ್ತು. ಅಂಡಮಾನಿನಿಂದ ಯರವಡಾ ಜೈಲಿಗೆ, ಬಳಿಕ ರತ್ನಗಿರಿಗೆ ಸ್ಥಾನಬದ್ಧತೆಯ ಶಿಕ್ಷೆಗೆ ಬಂದು ಸೇರಿದಾಗ ಅದರ ವ್ಯಾಪ್ತಿ ಮತ್ತಷ್ಟು ಹಿಗ್ಗಿತು. "ಅರಿಶಿನ-ಕುಂಕುಮ" ಕಾರ್ಯಕ್ರಮದ ಮೂಲಕ ಎಲ್ಲಾ ವರ್ಗದ ಮಹಿಳೆಯರ ನಡುವೆ ಸಮರಸ ಬೆಸೆಯುವ ಪ್ರಯತ್ನ ನಡೆಯಿತು. ಉಚ್ಛ ವರ್ಣೀಯ ಸ್ತ್ರೀಯರು ಉಪೇಕ್ಷಿತ ವರ್ಗದ ಮಹಿಳೆಯರಿಗೆ ಅರಿಶಿನ ಕುಂಕುಮ ಕೊಡಲು ನಿರಾಕರಿಸಿದಾಗ ತನ್ನ ಪತ್ನಿ ಯಮುನಾಳ ಮುಖಾಂತರ ಉಚ್ಛ ವರ್ಗದವರೊಬ್ಬರ ಮನೆಯಲ್ಲೇ ಅದನ್ನು ನೆರವೇರಿಸಿದರು. ಆರಂಭದ ವಿರೋಧ ನಿಧಾನವಾಗಿ ಕರಗುತ್ತಾ ಬಂದಿತು.


ಇದರ ನಡುವೆ ಹಿಂದೂ ಸಂಘಟನೆಗಾಗಿ ಸಾವರ್ಕರ್ ಕಾರ್ಯಕರ್ತರೊಡನೆ ಬೀದಿ ಬೀದಿ ಸುತ್ತಿದರು. ಸಮಾಜದ ಮೇಲ್ವರ್ಗದ ಮನೆಯ ಜೊತೆಗೆ ಸಮಾಜದಿಂದ ಉಪೇಕ್ಷಿತರಾಗಿದ್ದ ಬಂಧುಗಳ ಮನೆಗೂ ಅವರು ಸಂಪರ್ಕ ಬೆಸೆದರು. ಹಾಗೆ ಮಾಡುವಾಗ ಬೈಗುಳ, ಅವಹೇಳನ, ಅಪಮಾನಗಳನ್ನೂ ಅವರು ಸಹಿಸಬೇಕಾಯಿತು. ಅಂತಹಾ ಮೇರು ವ್ಯಕ್ತಿ ಅದೆಲ್ಲವನ್ನೂ ಮೌನವಾಗಿ ಸ್ವೀಕರಿಸಿದರು. ಸಾರ್ವಜನಿಕ ಶಾಲೆಗಳಲ್ಲಿ ಅಸ್ಪೃಶ್ಯರ ಮಕ್ಕಳಿಗೂ ಪ್ರವೇಶ ದೊರಕಿಸಲು ಅವರ ಹೋರಾಟ ನಡೆಯಿತು. ವಿರೋಧಿಸಿದವರಿಗೆ ಸಾವರ್ಕರ್ ಹೇಳಿದ್ದು ಒಂದೇ ಮಾತು - "ನಿಮ್ಮ ಮಕ್ಕಳನ್ನು ಮ್ಲೇಚ್ಛರೊಂದಿಗೆ ಕುಳಿತುಕೊಳ್ಳಲು ಬಿಡುತ್ತೀರಿ. ಒಂದು ವೇಳೆ ಅಸ್ಪೃಶ್ಯನೊಬ್ಬ ಮತಾಂತರವಾಗಿ ಮುಸ್ಲಿಮನೋ, ಕ್ರೈಸ್ತನೋ ಆದರೆ ಅವನ ಜೊತೆ ಸೇರುವಿಕೆಗೂ ನಿಮ್ಮ ಆಕ್ಷೇಪಗಳಿಲ್ಲ. ಆದರೆ ನಮ್ಮದೇ ದೇವರನ್ನು ಪೂಜಿಸುವ, ನಮ್ಮದೇ ಸಂಸ್ಕೃತಿಯನ್ನು ಆಚರಿಸುವ, ನಮ್ಮ ಪೂಜಾಪದ್ದತಿಯನ್ನೇ ಅನುಸರಿಸುವ ನಮ್ಮದೇ ಬಾಂಧವರನ್ನು ತುಚ್ಛವಾಗಿ ಕಾಣುವುದು ಯಾವ ಧರ್ಮ? ಯಾವ ನೀತಿ?". ಸಾವರ್ಕರರ ಈ ಹೋರಾಟ ಎಷ್ಟು ಪರಿಣಾಮ ಬೀರಿತೆಂದರೆ ಸ್ವತಃ ಶಾಲೆಗಳಿಗೆ ಸಂದರ್ಶನವಿತ್ತ ಜಿಲ್ಲಾ ನ್ಯಾಯಾಧೀಶರು " ಸಾವರ್ಕರರ ಪ್ರಯತ್ನಗಳ ಪರಿಣಾಮವಾಗಿ ಅಸ್ಪೃಶ್ಯ ಮಕ್ಕಳೂ ಎಲ್ಲರೊಡನೆ ಸಮವಾಗಿ ಕುಳಿತು ಶಿಕ್ಷಣ ಪಡೆಯುವಂತಾಗಿದೆ" ಎಂದು ತಮ್ಮ ವರದಿಯಲ್ಲಿ ಬರೆದರು.


ತಾವು ಅಂಡಮಾನಿನಲ್ಲಿ ಆರಂಭಿಸಿದ್ದ ಶುದ್ಧಿಕಾರ್ಯವನ್ನು ರತ್ನಗಿರಿಯಲ್ಲೂ ಮುಂದುವರೆಸಿದರು ಸಾವರ್ಕರ್. ಮೋಸಕ್ಕೋ, ಆಸೆಗೋ ಬಲಿಯಾಗಿ ಮತಾಂತರವಾಗಿದ್ದವರು ಮಾತೃಧರ್ಮಕ್ಕೆ ಮರಳಿ ಬಂದರು. ಕೆಲವು ಕ್ರೈಸ್ತ ಪಾದ್ರಿಗಳು ಮುಂಬೈ ಗವರ್ನರನಿಗೆ ದೂರು ನೀಡಿ, ಸರಕಾರ ಈ ಬಗ್ಗೆ ಸಾವರ್ಕರರಿಂದ ಸ್ಪಷ್ಟೀಕರಣ ಕೇಳಿದಾಗ, ಸಾವರ್ಕರ್ "ನಿಮ್ಮ ಅಧಿಕಾರವಿರುವ ಪ್ರದೇಶದಲ್ಲಿ ಮತಪರಿವರ್ತನಾ ಸ್ವಾತಂತ್ರ್ಯ ಇದೆಯೆಂದು ನಿಮ್ಮದೇ ಕಾನೂನು ಹೇಳುತ್ತದೆ. ಹಿಂದೂಗಳು ಕ್ರೈಸ್ತರಾಗುವುದನ್ನು ನೀವು ನಿಲ್ಲಿಸಿದರೆ ಆಗ ಶುದ್ಧಿ ಚಳುವಳಿಯ ಅವಶ್ಯಕತೆಯೇ ಇರುವುದಿಲ್ಲ" ಎಂದು ಮರು ಸವಾಲು ಹಾಕಿದರು. ರತ್ನಗಿರಿಯಲ್ಲಿದ್ದ ಕ್ರೈಸ್ತ ಮಿಷನರಿಗಳು ರಾತ್ರೋ ರಾತ್ರಿ ಗಂಟುಮೂಟೆ ಕಟ್ಟಬೇಕಾಯಿತು. ಮುಂದೆ ಸಾವರ್ಕರ್ ಕೈಗೊಂಡುದುದು ಅಸ್ಪೃಶ್ಯರಿಗೆ ದೇವಾಲಯಕ್ಕೆ ಪ್ರವೇಶ ದೊರಕಿಸಿಕೊಡುವಂತಹಾ ಮಹಾನ್ ಕಾರ್ಯ. ಮಹಾರರೋ, ಭಂಗಿಗಳೋ ದೇವಾಲಯದೊಳಕ್ಕೆ ಬಂದರೆ ಮೈಲಿಗೆಯಾಗುತ್ತದೆಯೆಂದು ಮೇಲ್ಜಾತಿಗಳವರು ಶರಂಪರ ವಿರೋಧಿಸಿದಾಗ ಸಾವರ್ಕರ್ " ಅಷ್ಟಕ್ಕೆಲ್ಲಾ ಮೈಲಿಗೆಯಾಗುವವನು ಅವನೆಂತಹಾ ದೇವರು?" ಎಂದು ಪ್ರಶ್ನಿಸಿದರು. "ದೇವರೆಂದರೆ ಪತಿತಪಾವನ, ಅವನ ದರ್ಶನ ಮಾತ್ರದಿಂದ ಎಂತಹಾ ವ್ಯಕ್ತಿಯೂ ಪುನೀತರಾಗುತ್ತಾರೆ. ನಿಜವಾದ ಅಸ್ಪೃಶ್ಯತಾ ನಿವಾರಣೆಯೆಂದರೆ, ತಮ್ಮ ಸಹಬಂಧುಗಳನ್ನೇ ದೂರವಿಟ್ಟು ಮನುಷ್ಯತ್ವಕ್ಕೆ ಕಳಂಕಪ್ರಾಯರಾಗಿ ನೀಚ ದೆಸೆಗಿಳಿದಿರುವ, ನಿಜವಾದ ಸನಾತನ ಧರ್ಮದಿಂದ ಹಾದಿ ತಪ್ಪಿರುವ, ತಾವು ಮಾತ್ರ ಸ್ಪೃಶ್ಯರೆಂದು ಭಾವಿಸಿರುವವರ ಉದ್ಧಾರ ಕಾರ್ಯ ಎಂದು ಈ ವಿರೋಧವನ್ನು ಕಟುವಾಗಿ ವಿಮರ್ಶಿಸಿದರು. ಇದರ ಪರಿಣಾಮ 1929ರ ನವೆಂಬರ್ ತಿಂಗಳಲ್ಲಿ ರತ್ನಗಿರಿಯ ಪ್ರಸಿದ್ಧ ವಿಠೋಬಾ ಮಂದಿರಕ್ಕೆ ಉಪೇಕ್ಷಿತ ವರ್ಗಕ್ಕೆ ಪ್ರವೇಶಾವಕಾಶ ದೊರೆತು ಶತಶತಮಾನಗಳ ಪರ್ಯಂತ ಭಾರತದ ಧರ್ಮಕ್ಕೆ, ಇತಿಹಾಸಕ್ಕೆ, ಯೋಗ್ಯತೆಗೆ ಕಳಂಕವಾಗಿದ್ದ ಕಪ್ಪು ಚುಕ್ಕೆಯೊಂದರ ಅಳಿಸುವಿಕೆಯ ಆರಂಭವಾಯಿತು. "ಯುಗಯುಗಗಳ ಕಳಂಕ ಕಳೆಯಿತು. ಮೈಲಿಗೆಯ ವಿಧಿಲಿಖಿತ ತೊಳೆದುಹೋಯಿತು. ಜನ್ಮಜನ್ಮಾಂತರಗಳ ಜಗಳ ಅಳಿಯಿತು. ಸಮಾಜದ ಶತ್ರುಗಳ ಸಂಚು ಮುರಿಯಿತು. ದಾಸರಾಗಿದ್ದವರಿಂದು ನಿಮ್ಮ ಸಹಕಾರಿಗಳಾಗಿದ್ದೇವೆ. ದೇವರ ಬಾಗಿಲನ್ನೂ, ನಿಮ್ಮ ಮನದ ಬಾಗಿಲನ್ನೂ ತೆರೆದುದಕ್ಕೆ ಕೃತಜ್ಞತೆಗಳು" ಎನ್ನುವ ಸಾವರ್ಕರರ ಗೀತೆಯನ್ನೇ ಒಕ್ಕೊರಲಿನಿಂದ ಹಾಡುತ್ತಿದ್ದ ಹಿಂದೂ ಜನಾಂಗದಿಂದ ಉಪೇಕ್ಷಿತವಾಗಿದ್ದು ಈಗ ಅಪೇಕ್ಷೆ ಈಡೇರಿದ ಆ ಕಣ್ಣುಗಳು ಕಾಂತಿಯಿಂದ ಮಿನುಗುತ್ತಿದ್ದವು. ಇದರ ಜೊತೆಗೆ ಹಿಂದೂ ಗಣಪತಿ ಉತ್ಸವ ಮೇರೆ ಮೀರಿದ ಸಂಭ್ರಮದೊಂದಿಗೆ ವರ್ಷಂಪ್ರತಿ ನಡೆಯತೊಡಗಿತು.


ಈ ಸಮಯದಲ್ಲೇ ಸಾವರ್ಕರ್ ಮನದಲ್ಲಿ "ಸರ್ವ ಹಿಂದೂ ಕೇಂದ್ರ"ವೊಂದರ ಸ್ಥಾಪನೆಯ ಯೋಚನೆಯೊಂದು ಮೂಡಿತು. ಅದರ ಫಲವಾಗಿ ಎದ್ದು ನಿಂತದ್ದೇ "ಪತಿತಪಾವನ"ವೆಂಬ ಭವ್ಯ ಮಂದಿರ. ಉದ್ಯಮಿಯಾಗಿದ್ದ ಭಾಗೋಜಿ ಕೀರ್ ಅವರ ಶ್ರದ್ಧೆ ಹಾಗೂ ಧನಸಹಾಯದ ಫಲವಾಗಿ ಈ ಮಂದಿರದ ನಿರ್ಮಾಣವಾಯಿತು. ಮಂದಿರದ ಉದ್ಘಾಟನೆಗೆ ಮೊದಲು ಸಾವರ್ಕರ್ ಕಾಶಿ ಪ್ರಯಾಗ ಸೇರಿದಂತೆ ಹಲವು ಕಡೆಗಳಿಂದ ವೇದಶಾಸ್ತ್ರ ಪಂಡಿತರನ್ನೆಲ್ಲಾ ಕರೆಯಿಸಿ ಅಸ್ಪೃಶ್ಯತೆಯ ಬಗೆಗೆ ಮೂರು ದಿನಗಳ ಸಂವಾದವೊಂದನ್ನು ಏರ್ಪಡಿಸಿದರು. ಒಂದು ಕಡೆ 125 ಜನ ಮಹಾ ಪಂಡಿತರು, ಇನ್ನೊಂದು ಕಡೆ ಸ್ವಾತಂತ್ರ್ಯ ವೀರ ಸಾವರ್ಕರ್. ಸಾವರ್ಕರರ ವಾದಕ್ಕೆ ಮನಸೋತ ವಿದ್ವಾಂಸರುಗಳು "ಶಾಸ್ತ್ರ ರೀತ್ಯಾ ನಿಮ್ಮ ಮಾತುಗಳಿಗೆ ನಮ್ಮ ಸಹಮತವಿದೆ. ಆದರೆ ಸಮಾಜ ಅದನ್ನು ಸ್ವೀಕರಿಸುವ ಪಕ್ವತೆಯನ್ನು ಸಾಧಿಸಿಲ್ಲ" ಎಂದು ಸಾವರ್ಕರರಿಗೆ ಜಯಘೋಷ ಹಾಡಿದರು. ದೇವರು ನಮ್ಮ ಪಾಲಿಗೆ ಎಂತಹಾ ಸತ್ಪುರುಷನನ್ನು ಕಳುಹಿಸಿದ್ದಾನೆ ಎಂಬ ಕೃತಜ್ಞ ಭಾವ ನಮ್ಮಲ್ಲಿ ಮೂಡಿ ಅಂತಃಕರಣ ತುಂಬಿ ಬಂತು ಎಂದು ಈ ವಾದದ ಪ್ರತ್ಯಕ್ಷದರ್ಶಿಯಾಗಿದ್ದ ಹಿಂದುಳಿದ ವರ್ಗಗಳ ನಾಯಕ ಕೃಷ್ಣರಾವ್ ಗಾಂಗುರ್ಡೆ ಬರೆದಿದ್ದಾರೆ. ಭಾಗೋಜಿ ಕೀರರು ಕಾಶಿ, ನಾಸಿಕ್ ಗಳಿಂದ ಮಂದಿರ ಪ್ರತಿಷ್ಠಾಪನೆಗೆ ವೇದ ವಿದ್ಯಾ ಸಂಪನ್ನ ಪಂಡಿತರನ್ನು ಕರೆಯಿಸಿದ್ದನ್ನು ನೋಡಿ ಸಹಿಸದ ಸ್ಥಳೀಯ ಬ್ರಾಹ್ಮಣರು "ಭಂಡಾರಿ ಜಾತಿಗೆ ಸೇರಿದ ಭಾಗೋಜಿ ಕೀರ್ ನಿರ್ಮಿಸಿದ ಮಂದಿರದಲ್ಲಿ ವೇದೋಕ್ತ ಪದ್ದತಿಯಿಂದ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದು ಸಮಂಜಸವಲ್ಲ" ಎಂದು ಆ ಬ್ರಾಹ್ಮಣರ ಕಿವಿಯೂದಿದರು. ಇದನ್ನು ಕೇಳಿ ಅವರೂ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗವಹಿಸಲು ನಿರಾಕರಿಸಿದಾಗ ಸಾವರ್ಕರ್ " ನೀವು ವೇದೋಕ್ತವಾಗಿಯೇ ಎಲ್ಲವನ್ನೂ ನಡೆಸಿಕೊಡಬೇಕು. ಇಲ್ಲವಾದರೆ ನಾನು ಹಿಂದೂ ಧರ್ಮ್ ಕೀ ಜೈ" ಎಂಬ ಒಂದೇ ಮಂತ್ರದೊಂದಿಗೆ ಮೂರ್ತಿಯನ್ನು ಸ್ಥಾಪಿಸಿ ಬಿಡುತ್ತೇನೆ" ಎಂದು ಖಡಕ್ ಧ್ವನಿಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದರು. ಈ ಮಾತು ಕೇಳಿ ಆ ಬ್ರಾಹ್ಮಣರ ನಿರ್ಧಾರವೂ ಬದಲಾಯಿತು. ಪತಿತ ಪಾವನ ನೆಲೆನಿಂತು ಪತಿತರನ್ನು ಉದ್ಧರಿಸಿದ. ಬಳಿಕ ರತ್ನಗಿರಿಯ ಭಾಗೇಶ್ವರ ದೇವಾಲಯದ ಬಾಗಿಲೂ ಪತಿತರಿಗೆ ಸಾವರ್ಕರ್ ನೇತೃತ್ವದಲ್ಲಿ ತೆರೆಯಲ್ಪಟ್ಟಿತು. ನಿಧಾನವಾಗಿ ಯಾರು ತಮ್ಮ ಜಾತಿಯ ಸಂಕುಚಿತ ಸಂಕಲೆಗಳಲ್ಲಿ ಬಂಧಿತರಾಗಿ ಕಟ್ಟರ್ ಜಾತಿವಾದಿಗಳಾಗಿದ್ದರೋ ಅವರೆಲ್ಲಾ ಕಟ್ಟರ್ ಸಾವರ್ಕರ್ ವಾದಿಗಳಾಗಿ ಬದಲಾಗತೊಡಗಿದರು. 


ದೀನರ ಬವಣೆ ಕಂಡು ಅವರ ಮನಸ್ಸು ಕರಗುತ್ತಿತ್ತು. ಸಮುದ್ರ ತಟದಲ್ಲಿ ಕುಷ್ಠರೋಗದಿಂದ ನರಳುತ್ತಾ, ಕೊಳೆತು ನಾರುತ್ತಿದ್ದ ಕೃಶ ದೇಹದಿಂದ ಬಿದ್ದಿದ್ದ ಮಹಿಳೆಯೋರ್ವಳಿಗೆ ತನ್ನ ಹೆಗಲ ಮೇಲಿದ್ದ ಶಲ್ಯವನ್ನೆ ಹೊದೆಸಿ, ಅನ್ನ ನೀರು ಕೊಟ್ಟು, ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಅನಾಥ ಮಹಿಳೆಯೊಬ್ಬಳು ಸತ್ತಾಗ ಆಕೆಯ ಮಗು ಬೀದಿಯಲ್ಲಿ ಬಿದ್ದಿದ್ದರೂ ಸಮಾಜ ಬಾಂಧವರು ಮುಗುಮ್ಮಾಗುಳಿದಾಗ ಆ ಮಗುವನ್ನು ಎದೆಕವಚಿಕೊಂಡು ಬೋರಕರ್ ನಾಟಕ ಮಂಡಲಿಯವರ ಬಳಿ ಕೊಟ್ಟು ಸಾಕುವಂತೆ ತಾಕೀತು ಮಾಡಿದರು. ಆದರೆ ಸಾವರ್ಕರರ ಹಿಂದೂ ಸುಧಾರಣೆಯಂತಹಾ ಸಾಮಾಜಿಕ ಕ್ರಾಂತಿಯಿಂದ ಅವರ ಸ್ಥಾನಬದ್ಧತೆಯ ಶಿಕ್ಷೆ ಮತ್ತೆ ಎಂಟು ವರ್ಷ ಮುಂದುವರೆಯಿತು. ಹೌದು ಕರಿನೀರ ಶಿಕ್ಷೆಯಿಂದ ಬಿಡುಗಡೆಯಾಗಿ ಭಾರತಕ್ಕೆ ಬಂದಾಗ ಭಾರತದಲ್ಲಿ ನಕಲಿ ಜಾತ್ಯಾತೀತವಾದ ಹಾಗೂ ನಕಲಿ ಅಹಿಂಸೆಯ ರಾಜಕಾರಣ ಬೇರು ಬಿಟ್ಟು ಹಿಂದೂ ಧರ್ಮವೆಂಬ ವೃಕ್ಷ ನಲುಗುತ್ತಿತ್ತು. ಅದಕ್ಕಾಗಿಯೇ ಸಾವರ್ಕರ್ ಹಿಂದುತ್ವಕ್ಕೊಂದು ವ್ಯಾಖ್ಯೆ ಕೊಡಬೇಕಾದ ಅಗತ್ಯತೆಯನ್ನು ಮನಗಂಡರು. ಹಾಗೆ ಮೂಡಿದ್ದೇ "ಹಿಂದುತ್ವ" ಎಂಬ ಕೃತಿ. ಜೊತೆಗೆ ಅವರು ಪ್ರತಿಪಾದಿಸಿ ಕಾರ್ಯಾಚರಿಸಿದ್ದು ಅಹಿಂದೂಗಳ ಶುದ್ಧೀಕರಣ, ಹಿಂದೂಗಳ ಸಂಘಟನೆ ಹಾಗೂ ಹಿಂದೂ ಸೈನಿಕೀಕರಣ ಎಂಬ ಮೂರು ಮುಖ್ಯ ಅಂಶಗಳು.


"ಆ ಸಿಂಧು ಸಿಂಧು ಪರ್ಯಂತ ಯಸ್ಯ ಭಾರತ ಭೂಮಿಕಾ|

ಪಿತೃಭೂಃ ಪುಣ್ಯ ಭೂಶ್ಚೈವ ಸ ವೈ ಹಿಂದುರಿತಿಸ್ಮೃತಃ||"


ಸಿಂಧೂವಿನಿಂದ ಸಮುದ್ರದವರೆಗೆ ಚಾಚಿಕೊಂಡಿರುವ ಈ ಪವಿತ್ರ ಭರತ ಭೂಮಿಯನ್ನು ತನ್ನ ಪಿತೃ ಭೂಮಿಯಾಗಿ, ತನ್ನ ತವರನ್ನಾಗಿ ಯಾರು ಸ್ವೀಕರಿಸುತ್ತಾನೋ ಅವನೇ ಹಿಂದೂ. ಹಿಂದೂ ಯಾರೆನ್ನುವುದಕ್ಕೆ ಸಾವರ್ಕರ್ ಕೊಟ್ಟ ಸ್ಪಷ್ಟ ವಿವರಣೆಯಿದು. ಈ ನಿಟ್ಟಿನಲ್ಲಿ ವೈದಿಕ, ಜೈನ, ಬೌದ್ಧ, ಲಿಂಗಾಯತ, ಸಿಖ್ಖ, ಆರ್ಯ-ಬ್ರಹ್ಮ-ದೇವ-ಪ್ರಾರ್ಥನಾ ಸಮಾಜ ಆದಿಯಾಗಿ ಭಾರತೀಯ ಮತಾವಲಂಬಿಗಳೆಲ್ಲಾ ಹಿಂದೂಗಳೇ. ಇಲ್ಲಿನ ಬುಡಕಟ್ಟು ಜನಾಂಗಗಳು, ಗಿರಿ ಕಾನನ ವಾಸಿಗಳು, ಯಾವುದೇ ರೀತಿಯ ಉಪಾಸಕರಾದರೂ ಅವರು ಹಿಂದೂಗಳೇ,ಭಾರತವೇ ಅವರಿಗೆ ಮಾತೃಭೂಮಿ. ಈ ವ್ಯಾಖ್ಯೆಯನ್ನು ಸರಕಾರ ಒಪ್ಪಿಕೊಂಡು ಮುಂಬರುವ ಸರಕಾರೀ ಜನಗಣತಿಯಲ್ಲಿ ಹಿಂದೂ ಜನಸಂಖ್ಯೆಯನ್ನು ನಮೂದಿಸುವಲ್ಲಿ "ಹಿಂದುತ್ವವನ್ನು" ಗುರುತಿಸಲು ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು ಸಾವರ್ಕರ್. ಸಾವರ್ಕರ್ ಅವರ ಹಿಂದುತ್ವದ ಪರಿಕಲ್ಪನೆಯನ್ನು ಬಹುವಾಗಿ ಪ್ರಶಂಸಿಸಿ ಒಪ್ಪಿಕೊಂಡಿದ್ದರು ಅಂಬೇಡ್ಕರ್. ಸಾವರ್ಕರರ ಹಿಂದುತ್ವ ಸಿದ್ಧಾಂತವನ್ನು ಅನುಸರಿಸುವವರನ್ನು ಕೋಮುವಾದಿಗಳೆಂದು ಜರೆಯುವ ಆಷಾಢಭೂತಿಗಳ ಅಮಲು ಇಳಿಸುವ ಇನ್ನೊಂದು ವಿಚಾರವೆಂದರೆ ಇದೇ ವ್ಯಾಖ್ಯೆಯನ್ನು ಅಂಬೇಡ್ಕರ್ ಕೂಡಾ ಬಳಸಿಕೊಂಡಿರುವುದು. ಸಾವರ್ಕರ್ ಭಾರತದಲ್ಲಿದ್ದ ಜನರನ್ನು ಈ ಆಧಾರದಲ್ಲಿ ಕೇವಲ ವರ್ಗೀಕರಣ ಮಾತ್ರ ಮಾಡಿ ಇಡುವುದಿಲ್ಲ. ಅವರು ಅಧಿಕಾರ ಯಾರ ಕೈಯಲ್ಲಿ ಇರಬೇಕೆನ್ನುವುದನ್ನೂ ಸ್ಪಷ್ಟವಾಗಿ ಹೇಳಿದ್ದರು. ಭಾರತವನ್ನು ಒಡೆಯುವುದನ್ನು ತೀವ್ರವಾಗಿ ವಿರೋಧಿಸಿದ್ದ ಸಾವರ್ಕರ್ ಹಿಂದೂಗಳಿಗೆ ಪ್ರಧಾನ ಸ್ಥಾನಮಾನಗಳಿರಬೇಕೆಂದೂ ಉಳಿದ ಸೆಮೆಟಿಕ್ ಮತಗಳವರು ಹಿಂದೂಗಳೊಂದಿಗೆ ಸಹಕಾರದಿಂದ ಬಾಳಬೇಕೆನ್ನುವುದನ್ನು ಪ್ರತಿಪಾದಿಸಿದ್ದರು. ಸಾವರ್ಕರರದ್ದು ರಾಷ್ಟ್ರೀಯವಾದದ ರಾಜಕಾರಣ. ವೈಯುಕ್ತಿಕ ಅಥವಾ ಸಾಮೂಹಿಕ ಲಾಭಗಳಿಗೆ ಎಂದೂ ರಾಷ್ಟ್ರೀಯತೆಯ ಜೊತೆ ರಾಜೀ ಮಾಡಿಕೊಂಡವರಲ್ಲ ಅವರು. ವ್ಯಕ್ತಿಯೊಬ್ಬ ಈ ದೇಶವನ್ನು ತನ್ನ ರಾಷ್ಟ್ರವಾಗಿ ಪೂಜಿಸದೇ ಇದ್ದರೇ ಆತ ರಾಷ್ಟ್ರೀಯ ಹೇಗಾದಾನು? "ರಾಷ್ಟ್ರ" ಎಂದರೇನೆಂದು ಅರಿತವರಿಗಷ್ಟೇ ಸಾವರ್ಕರ್ ಪ್ರತಿಪಾದಿಸಿದ "ಹಿಂದುತ್ವ " ಸಿದ್ಧಾಂತ ಅರ್ಥವಾದೀತು. ಹಾಗಂತ ಅಲ್ಲಿ ಉಳಿದ ಮತಗಳೆಡೆಗಿನ ದ್ವೇಷಕ್ಕೆ ಅವಕಾಶವಿಲ್ಲ. ಆದರೆ ಉಳಿದ ಮತಗಳು ಆಕ್ರಮಣಕ್ಕೆ ಬಂದಾಗ ಅದು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಅಂದರೆ ಅದು ಕೇವಲ "ಅಹಿಂಸಾ ಪರಮೋ ಧರ್ಮ" ಎಂದು ಆಚರಿಸುವುದಿಲ್ಲ. "ಧರ್ಮ ಹಿಂಸಾ ತಥೈವಚಾ" ಎನ್ನುವುದನ್ನೂ ಅರಿತು ಆಚರಿಸುತ್ತದೆ. ದುಷ್ಟ ದಮನವನ್ನೂ ಶಿಷ್ಟ ರಕ್ಷಣೆಯನ್ನೂ ಮಾಡಿ ಸಮಾಜದಲ್ಲಿ ಶಾಂತಿಯನ್ನು ತರುತ್ತದೆ. 


   "ಸೈನ್ಯವನ್ನು ಹಿಂದೂಕರಣಗೊಳಿಸಿ, ರಾಜಕೀಯವನ್ನು ಸೈನಿಕೀಕರಣಗೊಳಿಸಿ" ಎಂದಿದ್ದರು ಸಾವರ್ಕರ್. ಸೈನ್ಯವನ್ನು ಹಿಂದೂಕರಣಗೊಳಿಸುವುದೇನೋ ಸರಿ, ರಾಜಕೀಯವನ್ನೇಕೆ ಸೈನಿಕೀಕರಣಗೊಳಿಸಬೇಕು? ಸಾವರ್ಕರ್ ಸೈನ್ಯಾಡಳಿತವನ್ನು ಹೇರಿ ಎನ್ನುತ್ತಿದ್ದಾರೆಯೇ? ಸಾವರ್ಕರರದ್ದು ಕಮ್ಯೂನಿಸ್ಟ್ ಚಿಂತನೆಯೇ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಆದರೆ ವೇದಗಳಲ್ಲಿ ಉಲ್ಲೇಖಿಸಿದ, ಸನಾತನ ಧರ್ಮ ಆಚರಿಸಿಕೊಂಡು ಬಂದ, ಮಾನವ ಸಹಜ ಧರ್ಮವಾದ "ಕ್ಷಾತ್ರ"ವೇ ಈ ಮಾತಿನ ಮೂಲ. ಅಧಿಕಾರಕ್ಕೆ ಬರುವವನಲ್ಲಿ ಕ್ಷಾತ್ರ ಗುಣ ಇರಲೇಬೇಕು. ಅನ್ಯಾಯವನ್ನು ಹತ್ತಿಕ್ಕಿ, ಅಸಹಾಯಕರನ್ನು ರಕ್ಷಿಸಿ ಧರ್ಮ ಸಂಸ್ಕೃತಿಗಳನ್ನು ಉಳಿಸುವ ಕ್ಷಾತ್ರ ತೇಜವಿರಬೇಕು. ಸಾವರ್ಕರರ ಮಾತಿನ ಮೊದಲಾರ್ಧವನ್ನು ದ್ವಿತೀಯಾರ್ಧದೊಂದಿಗೆ ಸಮ್ಮಿಳಿತಗೊಂಡರೆ ಇದಕ್ಕೆ ಉತ್ತರ ಸಿಕ್ಕಿಬಿಡುತ್ತದೆ. ಹಾಗಾಗಿಯೇ ತನ್ನನ್ನು ಭೇಟಿಯಾದ ಸುಭಾಷರನ್ನು "ಇಂಗ್ಲೆಂಡ್ ಮಹಾಯುದ್ಧದ ಆತಂಕವನ್ನು ಎದುರಿಸುತ್ತಾ ಕುಸಿದಿರುವಾಗ ನಿಮ್ಮಂಥ ಮೇಧಾವಿ ನಾಯಕ ಹಳೆಯ ಬ್ರಿಟಿಷ್ ಸ್ಮಾರಕಗಳನ್ನು ಕೆಡಹುವ ಜುಜುಬಿ ಕೆಲಸಗಳನ್ನು ಮಾಡಿ ಸೆರೆ ಸೇರುವುದರಿಂದೇನು ಲಾಭ? ಹಲ ಸಾವಿರ ಉನ್ಮತ್ತರು ಕಣ್ಣೆದುರೇ ದಮನ ನಡೆಸುತ್ತಿರುವಾಗ ಹಿಂದೆಂದೋ ಸತ್ತವರ ಪ್ರತಿಮೆಗಳನ್ನು ಕೆಡಹುವುದರಿಂದುಂಟಾಗುವ ಸಮಾಧಾನ ಕಳಪೆಯದೇ ಅಲ್ಲವೇ? ಸೆರೆಯಲ್ಲಿರಬೇಕಾದವರು ಬ್ರಿಟಿಷರೇ ಹೊರತು ನಾವಲ್ಲ. ಸಶಸ್ತ್ರ ಬಂಡಾಯ ಅಸಾಧ್ಯವೇನಲ್ಲ. ಸೇನೆಗೆ ಹಿಂದೂ ತರುಣರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರಬೇಕೆಂದು ನಾನು ಹಿಂದಿನಿಂದ ಹೇಳುತ್ತಾ ಬಂದಿರುವುದು ಇದಕ್ಕೆ ಸಿದ್ಧತೆಯಾಗಿಯೇ ಅಲ್ಲವೇ?" ಎಂದು ಸಶಸ್ತ್ರ ಬಂಡಾಯಕ್ಕೆ ಪ್ರೇರೇಪಿಸಿದರು ಸಾವರ್ಕರ್. "ರಾಸ್ ಬಿಹಾರಿ ಬೋಸ್ ಕಳೆದ ಕೆಲವು ವರ್ಷಗಳಿಂದ ಜಪಾನಿನಲ್ಲಿ ನೆಲೆನಿಂತು ಸಶಸ್ತ್ರ ಸೈನ್ಯವೊಂದನ್ನು ಕಟ್ಟಲು ಶ್ರೀಗಣೇಶ ಹಾಡಿದ್ದಾರೆ. ನೀವೂ ಅವರಂತೆ ಜರ್ಮನಿ, ಇಟಲಿಯಲ್ಲಿ ಯುದ್ಧ ಕೈದಿಗಳಾಗಿರುವ ಭಾರತೀಯರ ಸಶಸ್ತ್ರ ಪಡೆಯೊಂದನ್ನು ಕಟ್ಟಿ ಬ್ರಿಟಿಷರ ಮೇಲೆ ದಾಳಿ ಮಾಡಿ. ಜಪಾನ್ ಹಾಗೂ ಜರ್ಮನಿ ನಿಮ್ಮನ್ನು ಬೆಂಬಲಿಸುತ್ತವೆ. ಅವರ ಸಹಾಯ ದೊರೆತೊಡನೆ ಬರ್ಮಾ ಅಥವಾ ಬಂಗಾಳಕೊಲ್ಲಿ ಕಡೆಯಿಂದ ಆಕ್ರಮಣ ಮಾಡಿ. ಇಂತಹ ಯಾವುದಾದರೂ ಸಾಹಸ ನಡೆಯದೆ ಭಾರತ ಮುಕ್ತವಾಗಲಾರದು. ನನ್ನ ದೃಷ್ಟಿಯಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಅಂತಹ ಸಾಹಸ ಕೈಗೊಳ್ಳಲು ಸಮರ್ಥರಾದ ಇಬ್ಬರು ಮೂವರ ಪೈಕಿ ನೀವು ಒಬ್ಬರು" ಎಂದು ಸುಭಾಷರಿಗೆ ಧೈರ್ಯ ತುಂಬಿ ಸುಭಾಷರ ಮುಂದಿನ ಯೋಜನೆಗೆ ರೂಪುರೇಷೆ ಒದಗಿಸಿದರು. ದೇಹ ಕರಿನೀರ ರೌರವದಿಂದ ಜರ್ಝರಿತಗೊಂಡಿದ್ದರೂ, ವೃದ್ದಾಪ್ಯದಿಂದ ಶಿಥಿಲಗೊಂದಿದ್ದರೂ ಅವರ ಮನಸ್ಸು ಕುಸಿದಿರಲಿಲ್ಲ. INA ಕಟ್ಟಿದ ಸುಭಾಷ್ ಸಿಂಗಾಪುರದಿಂದ ಮಾಡಿದ "ಫ್ರೀ ಇಂಡಿಯಾ ರೇಡಿಯೋ ಭಾಷಣದಲ್ಲಿ ಸ್ಮರಿಸಿದ್ದು ಸಾವರ್ಕರರನ್ನೇ - "ರಾಜಕೀಯ ಪ್ರಬುದ್ಧತೆ ಇಲ್ಲದ ಕಾಂಗ್ರೆಸ್ಸಿಗರು ಸೈನಿಕರನ್ನು ಹಣಕ್ಕಾಗಿ ಮಾರಿಕೊಂಡವರು ಎಂದು ಹೀಗಳೆಯುತ್ತಿರುವಾಗ ವೀರ ಸಾವರ್ಕರ್ ಸೇನೆಗೆ ಸೇರಿ ಎಂದು ತರುಣರನ್ನು ಹುರಿದುಂಬಿಸುತ್ತಿರುವುದು ಸ್ಪೂರ್ತಿದಾಯಕವಾಗಿದೆ. ಅವರ ಮಾತಿನಂತೆ ಭಾರತ ರಾಷ್ಟ್ರೀಯ ಸೇನೆಗೆ ಬೇಕಾದ ತರುಣ ತಂಡ ಸಿದ್ಧಗೊಂಡಿದೆ." ದೇಶ ಸ್ವತಂತ್ರಗೊಂಡ ಬಳಿಕ ಮಹಾರಾಷ್ಟ್ರದ ಶಿಕ್ಷಣ ಸಚಿವ ಬಾಳಾಸಾಹೇಬ ದೇಸಾಯಿಯವರಿಗೆ ಪತ್ರ ಬರೆದು ಶಾಲಾಕಾಲೇಜುಗಳಲ್ಲಿ ಸೈನಿಕ ಶಿಕ್ಷಣ ಆರಂಭಿಸುವಂತೆ ಸಾವರ್ಕರ್ ಸಲಹೆಯಿತ್ತರು. ಅದರಂತೆ ಬಾಳಾಸಾಹೇಬರು ಯೋಜನೆಯೊಂದನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಚವ್ಹಾಣರ ಸಮ್ಮತಿಯೊಡನೆ ಕೇಂದ್ರ ಸರಕಾರದ ಒಪ್ಪಿಗೆಗಾಗಿ ಕಳುಹಿಸಿದರು. ಪಂಚಶೀಲದ ಕನಸಿನ ಕಂಬಗಳ ಮೇಲೆ ರಕ್ಷಣಾ ಸೌಧ ಸ್ಥಾಪಿಸಿದ್ದ ನೆಹರೂ ಅದನ್ನು ಕಸದ ಬುಟ್ಟಿಗೆ ಎಸೆದರು! ಮೃತ್ಯುಂಜಯ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಸರಕಾರ ಸೇನಾಪಡೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಬೇಕೆಂದೂ, ಹೈಡ್ರೋಜನ್ ಬಾಂಬ್ ಅನ್ನೂ ತಯಾರಿಸಬೇಕೆಂದೂ, ಯುವ ಜನತೆಗೆ ಸೈನಿಕ ಶಿಕ್ಷಣ ಕೊಡಬೇಕೆಂದು ಸಾರಿದರು. ಚೀನಾದ ಕುರಿತು ಎಚ್ಚರಿಕೆಯಿಂದಿರಿ ಎಂದೂ ಅವರು ನೀಡಿದ ಎಚ್ಚರಿಕೆಯನ್ನು ನೆಹರೂ ನಿರ್ಲಕ್ಷ್ಯಿಸಿಬಿಟ್ಟರು. 


      ಬಯಸಿದ್ದರೆ ಜನಪ್ರಿಯತೆಯ ಅಲೆಯಲ್ಲಿ ಚುನಾವಣೆ ಗೆಲ್ಲಬಹುದಾಗಿದ್ದ ಸಾವರ್ಕರ್ ಹಿಂದೂಗಳ ಐಕ್ಯತೆ, ದೇಶದ ಸಮಗ್ರತೆಗೆಗಾಗಿಯೇ ತಮ್ಮ ಜೀವ ತೇಯ್ದರು. ಯಾವ ಭಾರತಕ್ಕಾಗಿ ಸಾವರ್ಕರ್ ತಾನು, ತನ್ನ ಪರಿವಾರ, ಬಂಧುಬಳಗ, ಸ್ನೇಹಿತ ವರ್ಗ ಮಾತ್ರವಲ್ಲ ತನ್ನ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಸಹಸ್ರ ಸಹಸ್ರ ಭಾರತೀಯರನ್ನು ಕ್ರಾಂತಿಕಾರಿಗಳನ್ನಾಗಿಸಿ ಸ್ವಾತಂತ್ರ್ಯ ಯಜ್ಞಕ್ಕೆ ಹವಿಸ್ಸನ್ನಾಗಿಸಿದರೋ, ಯಾವ ಭಾರತಕ್ಕಾಗಿ ಸಾಲು ಸಾಲು ಗುಂಡಿನ ಮಳೆಯನ್ನೂ ಲಿಕ್ಕಿಸದೆ ಅಗಾಧ ಸಾಗರವನ್ನು ಈಜಿ ಸ್ವಾತಂತ್ರ್ಯಕ್ಕಾಗಿ ತಹತಹಿಸಿದರೋ, ಯಾವ ಭಾರತಕ್ಕಾಗಿ ೫೦ ವರ್ಷಗಳ ಕರಿ ನೀರಿನ ಶಿಕ್ಷೆಯನ್ನು ಎದುರಿಸಿ ನಿರ್ಲಿಪ್ತರಾಗಿ ಅಂಡಮಾನಿಗೆ ಹೆಜ್ಜೆ ಹಾಕಿದರೋ, ಯಾವ ಭಾರತಕ್ಕಾಗಿ ಸಾವರ್ಕರ್ ಎತ್ತಿನ ಹಾಗೆ ಗಾಣ ಸುತ್ತಿ, ತೆಂಗಿನ ನಾರು ಸುಲಿದು ಛಡಿ ಏಟು ತಿಂದರೋ, ಯಾವ ಭಾರತಕ್ಕಾಗಿ ಮೊಟ್ಟ ಮೊದಲ ಬಾರಿ ಹರಿಜನೋದ್ಧಾರದ ಬಗ್ಗೆ ಧ್ವನಿ ಎತ್ತಿ ನೀವೂ ನಮ್ಮವರೇ ಎಂದು ಆಲಿಂಗಿಸಿ ಹಿಂದೂಗಳ ಸಂಘಟನೆಗೆ, ಸಮಗ್ರತೆಗೆ ಜೀವನವನ್ನು ಮುಡಿಪಾಗಿಟ್ಟರೋ… ಆ ಭಾರತ ಅವರಿಗೆ ಕೊನೆಗೆ ಕೊಟ್ಟಿದ್ದಾದರೂ ಏನು…? ಸಾವರ್ಕರ್ ಬಿಡುಗಡೆಯಾದ ಸಂದರ್ಭದಲ್ಲಿ ಏರ್ಪಡಿಸಿದ್ದ ಮೆರವಣಿಗೆಯ ಮೇಲೆ ಕಾಂಗ್ರೆಸ್ಸಿಗರು ಕಲ್ಲುತೂರಿದರು. ಬ್ರಿಟಿಷರು ಮುಟ್ಟುಗೋಲು ಹಾಕಿಕೊಂಡಿದ್ದ ಸಾವರ್ಕರರ ಮನೆಯನ್ನು ಹಿಂದಿರುಗಿಸುವುದಕ್ಕೂ ನೆಹರೂ ಒಲ್ಲೆ ಎಂದರು. ಆಂಗ್ಲರ ವಿರುದ್ದ ನಿರಂತರ ಬಡಿದಾಡಿ ಬೆಂಡಾದ ಆ ಮುದಿ ಜೀವವನ್ನು ಸ್ವತಂತ್ರ ಭಾರತ ಎರಡೆರಡು ಬಾರಿ ಜೈಲಿಗೆ ನೂಕಿತು. ಗಾಂಧಿ ಹತ್ಯೆಯ ಸುಳ್ಳು ಆರೋಪ ಹೊರಿಸಿ ಒಮ್ಮೆ, ಪಾಕಿಸ್ಥಾನದ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದಾಗ ಆತನಿಗೆ ತೊಂದರೆಯಾಗಬಾರದೆಂದು ಮತ್ತೊಮ್ಮೆ. ಸ್ಟಾಲಿನ್ ಗೆ ಶೃದ್ಧಾಂಜಲಿ ಸಲ್ಲಿಸಿದ ಭಾರತದ ಸಂಸತ್ತಿಗೆ ಸಾವರ್ಕರ್ ನೆನಪೇ ಆಗಲಿಲ್ಲ. ಮಣಿಶಂಕರ್ ಅಯ್ಯರ್ ಎಂಬ ದೇಶದ್ರೋಹಿ ಸಾವರ್ಕರ್ ಅಂಡಮಾನಿನ ಕಲ್ಲಿನ ಗೋಡೆಯ ಮೇಲೆ ಬರೆದ ಕಾವ್ಯಗಳನ್ನು ಅಳಿಸಿ ಹಾಕಿ ಬಿಟ್ಟ. ಅಲ್ಲಿದ್ದ ಸಾವರ್ಕರ್ ಫಲಕವನ್ನೂ ಕಿತ್ತೊಗೆದ. ಎನ್.ಡಿ.ಎ ಸರ್ಕಾರ ಸಾವರ್ಕರ್ ಮೂರ್ತಿಯನ್ನು ಸಂಸತ್ ಭವನದಲ್ಲಿ ಸ್ಥಾಪಿಸಲು ಮುಂದಾದಾಗ ಕಾಂಗ್ರೆಸ್ಸಿಗರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ದೂರ ಉಳಿದರು. ಇಂದಿಗೂ ವಿದ್ಯಾಲಯಗಳಲ್ಲಿ ಸಾವರ್ಕರ್ ಬಗೆಗೆ ಅಧ್ಯಯನ ಮಾಡಬಾರದೆಂಬ ‘ಅಲಿಖಿತ ಆಜ್ಞೆ’ ಹಾಗೂ ‘ಅಘೋಷಿತ ನಿರ್ಧಾರ’ಗಳಿವೆ.

ಅಮಾಯಕ ರೈತರನ್ನು ಯಾಮಾರಿಸಿದ ದೇಶವಿರೋಧೀ ಷಡ್ಯಂತ್ರ

 ಅಮಾಯಕ ರೈತರನ್ನು ಯಾಮಾರಿಸಿದ ದೇಶವಿರೋಧೀ ಷಡ್ಯಂತ್ರ


        ಕೇಂದ್ರದ ಭಾಜಪಾ ಸರಕಾರದೆಡೆಗಿನ ಕಾಂಗ್ರೆಸ್‍ ಪಾಳಯದ ಅಸಹಿಷ್ಣುತೆ ಇನ್ನೂ ನಿಂತಿಲ್ಲ. 2014ರಲ್ಲಿ ಶ್ರೀಯುತ ನರೇಂದ್ರ ಮೋದಿಯವರು ಪ್ರಧಾನಿಯಾಗುತ್ತಿದ್ದಂತೆ ಅಸಹಿಷ್ಣುತೆಯ ಪರಾಕಾಷ್ಠೆಗೆ ತಲುಪಿದ್ದ ಕಾಂಗ್ರೆಸ್ ಹಾಗೂ ಅದರ ಬೆಂಬಲಿಗರ ಕುಟಿಲ ನೀತಿಗಳು ಮತ್ತೆ ಮತ್ತೆ ಬೆತ್ತಲಾಗುತ್ತಾ ಇದ್ದರೂ ಕಾಂಗ್ರೆಸ್ಸಿಗರಿನ್ನೂ ಬುದ್ಧಿ ಬಂದಿಲ್ಲ. ಕೇಂದ್ರದ ಯಾವುದೇ ಯೋಜನೆಯನ್ನು, ಅದನ್ನು ಹಿಂದೆ ತಮ್ಮ ಸರ್ಕಾರವೇ ಪ್ರಸ್ಥಾಪಿಸಿದ್ದರೂ ಕೂಡಾ ಶತಾಯಗತಾಯ ವಿರೋಧಿಸುವುದನ್ನೇ ಕಾಯಕ ಮಾಡಿಕೊಂಡಿರುವ ಕಾಂಗ್ರೆಸ್ ಪಾಳಯ ದೇಶದ ಅಭಿವೃದ್ಧಿಗೆ ಮತ್ತಷ್ಟು ಮಾರಕವಾಗಿ ಪರಿಣಮಿಸಿದೆ. ಮೋದಿಯವರು ಪ್ರಧಾನಿಯಾದ ಬಳಿಕ ಕಾಂಗ್ರೆಸ್ ಪಾಳಯ ದೇಶದ ಮೇಲಿನ ಕಾಳಜಿಯ ಉದ್ದೇಶವಿಟ್ಟಾದರೂ ಸರಕಾರವನ್ನು ಬೆಂಬಲಿಸಿದ್ದಿದೆಯೇ ಎಂದರೆ ಶೂನ್ಯವೇ ಉತ್ತರ. ಅಸಲಿಗೆ ಕಾಂಗ್ರೆಸ್ಸಿನಿಂದ ದೇಶದ ಪರ ಕಾಳಜಿಯನ್ನು ನಿರೀಕ್ಷಿಸುವುದೇ ತಪ್ಪು. ಅಂದರೆ ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಮಾತ್ರ ಮಾರಕವಾಗಿಲ್ಲ; ದೇಶಕ್ಕೂ ಮಾರಕವಾಗಿದೆ. ದೇಶದ್ರೋಹಿಗಳೊಂದಿಗಿನ ಅದರ ನಂಟಂತೂ ಕಾಲಕಾಲಕ್ಕೆ ಜಗಜ್ಜಾಹೀರಾಗುತ್ತಲೇ ಇದೆ.


   ಕಾಂಗ್ರೆಸ್ಸಿನ ಗುಪ್ತಚರ ವ್ಯವಸ್ಥೆ ಬಹಳ ಚೆನ್ನಾಗಿದೆ. ಮೋದಿಯವರನ್ನು 2014ರ ಚುನಾವಣೆಗೆ ಭಾಜಪಾ ತನ್ನ ಅಭ್ಯರ್ಥಿಯನ್ನಾಗಿಸುತ್ತದೆ ಎಂಬ ಸುಳಿವು ಅದಕ್ಕೆ ಭಾಜಪಾ ಕಾರ್ಯಕರ್ತರಿಗಿಂತಲೂ ಮೊದಲೇ ಸಿಕ್ಕಿರಬೇಕು. ಅದಕ್ಕಾಗಿಯೇ ಅರವಿಂದ ಕೇಜ್ರಿವಾಲ್ ಎಂಬ ತನ್ನ ಏಜೆಂಟನ ನೇತೃತ್ವದಲ್ಲಿ ತನ್ನ ಇನ್ನೊಂದು ತಂಡವನ್ನು ಮಾಡಿ ಯಾರ ಗುಮಾನಿಗೂ ಬಾರದಂತೆ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನೇ, ಯಾರಿಗೂ ಸಂಶಯ ಬಾರದಂತೆ ತನ್ನ ತೆಕ್ಕೆಗೆ ಎಳೆದುಕೊಂಡಿತು. ಇದರ ವಾಸನೆ ಸಿಕ್ಕಿದ ಬಾಬಾ ರಾಮದೇವ್, ಕಿರಣ್ ಬೇಡಿಯಂತಹವರು ಅವರಿಂದ, ಅದರಿಂದ ದೂರಾದರು. ಆದರೆ ಪ್ರಚಂಡ ಮೋದಿ ಅಲೆ ಕಾಂಗ್ರೆಸ್ಸಿನ ಜೊತೆ ಅದರ ಎಲ್ಲ ಬೆಂಬಲಿಗರನ್ನು ಧೂಳೀಪಟ ಮಾಡಿದಾಗ ಆ ಪಾಳಯ ಅಕ್ಷರಶಃ ಮಕಾಡೆ ಮಲಗಿತ್ತು. ಆದರೆ ಪಕ್ಷವಾಗಿ ಕಾಂಗ್ರೆಸ್ ಸತ್ತರೂ ಅದು ಬೆಳೆಸಿದ ವ್ಯವಸ್ಥೆ, ಅದು ಸಾಕಿಕೊಂಡ ಬುದ್ಧಿ ಹೀನ ಜೀವಿ ವರ್ಗಗಳಿವೆಯಲ್ಲ; ಅವೆಲ್ಲಾ ಒಟ್ಟಾಗಿ ಪ್ರತಿಯೊಂದು ರಾಜ್ಯ ಅಥವಾ ಕೇಂದ್ರದ ಚುನಾವಣೆಯ ಪೂರ್ವದಲ್ಲಿ ಜಾತಿಜಗಳವೋ, ಮತೀಯಜಗಳವನ್ನೋ ಹುಟ್ಟು ಹಾಕಲು ನೀಲನಕ್ಷೆ ತಯಾರಿಸಿದವು. ಸ್ವಲ್ಪವೇ ದಿನಗಳಲ್ಲಿ ಎಲ್ಲಾ ಮೋದಿ ವಿರೋಧಿಗಳು ಒಟ್ಟಾದರು.


           ಈ ಯೋಜನೆಯ ಫಲವಾಗಿಯೇ ದನಗಳ್ಳ ಅಖ್ಲಾಕನ ಕೊಲೆಯ ಹಿಂದಿನ ಕಾರಣವನ್ನೇ ತಿರುಚಿ ಅದು ಅಂತಾರಾಷ್ಟ್ರೀಯ ಸುದ್ದಿಯಾಯಿತು. ಕಲ್ಬುರ್ಗಿ, ಪನ್ಸಾರೆ, ದಾಬೋಲ್ಕರ್ ಮುಂತಾದವರ ಹತ್ಯೆಯನ್ನು ಭಾಜಪಾದ ತಲೆಗೆ ಕಟ್ಟುವ ಯತ್ನ ನಡೆಯಿತು. ಎಲ್ಲಿಯೂ ಸಲ್ಲದ, ಯಾವ ಸಂತೆಯಲ್ಲೂ ಬಿಕರಿಯಾಗದ ಪ್ರಕಾಶಗಳಿಂದ ಗೌರಿ ಬೀಜ ಬಿತ್ತುವ ಪ್ರಕ್ರಿಯೆ ನಡೆಯಿತು. ಅಷ್ಟರವರೆಗೆ ಸಾಹಿತಿಗಳೆಂದು ಜನಮಾನಸಕ್ಕೆ ಪರಿಚಿತರಲ್ಲದ, ಓದುವುದು ಬಿಡಿ, ಮುದ್ರಿಸಲೂ ಯೋಗ್ಯವಿಲ್ಲದ ಅಕ್ಷರ ಕಸ ಸೃಷ್ಟಿಸಿದವರಿಂದ ಹಣ, ಸೈಟುಗಳನ್ನು ಕೊಡದೇ ಕೇವಲ ಫಲಕ ಮಾತ್ರ ಕೊಡುವ ಪ್ರಶಸ್ತಿ ವಾಪಸ್ ಎಂಬ ನಕಲಿ ಚಳವಳಿ ಆರಂಭವಾಯಿತು. ಈ ಅಸಹಿಷ್ಣುತೆಯ ಕೂಗು ದೇಶಕ್ಕೆ ಲಿಂಚಿಸ್ತಾನ್, ರೇಪ್ ಕ್ಯಾಪಿಟಲ್ ಎಂದೆಲ್ಲಾ ಹೆಸರು ಹಚ್ಚಿ ಅಪಪ್ರಚಾರಗೈಯುತ್ತಾ ಅಂತರರಾಷ್ಟ್ರೀಯ ಮಟ್ಟದಲ್ಲಿ  ದೇಶದ ಮಾನ ಕಳೆಯಲು ಶುರು ಮಾಡಿತು. ಜಾಟ್, ಪಟೇಲ್ ಮುಂತಾದ ಜಾತಿಗಳ ಮೀಸಲಾತಿಗಾಗಿ ಕಾಂಗ್ರೆಸ್ ತನ್ನ ಏಜೆಂಟುಗಳನ್ನು ಛೂ ಬಿಟ್ಟು ದಂಗೆ ಎಬ್ಬಿಸಲು ಯತ್ನಿಸಿತು. ಸರಸಂಘಚಾಲಕರು ಮೀಸಲಾತಿಯ ಬಗ್ಗೆ ಆಡಿದ ಮಾತನ್ನು ತಿರುಚಿ ದಮನಿತ ವರ್ಗಗಳನ್ನು ಸಂಘ, ಭಾಜಪಾದ ವಿರುದ್ಧ ತಿರುಗೇಳುವಂತೆ ಪ್ರೇರೇಪಿಸಿತು. ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳನ್ನೂ ಹಿಂದೂ ಸಂಘಟನೆಗಳ ತಲೆಗೆ ಕಟ್ಟುವ ಹುನ್ನಾರ ನಡೆಸಿತು. 370ನೇ ವಿಧಿಗೆ ಮೋದಿಯವರು ಮರಣ ಶಾಸನ ಬರೆದಾಗ ತನಗೇ ಶವಪೆಟ್ಟಿಗೆ ಸಿದ್ಧಪಡಿಸಿದಂತೆ ಕಾಂಗ್ರೆಸ್ ಪಾಳಯ ವರ್ತಿಸಿತು. ಸಿಎಎ & ಎನ್.ಆರ್.ಸಿಗಳನ್ನು ಮುಂದಿಟ್ಟುಕೊಂಡು ಹಿಂದೂಗಳ ಹತ್ಯಾಕಾಂಡವನ್ನು ಪ್ರಾಯೋಜಿಸಿತು. ಇವೆಲ್ಲದರ ಮುಂದುವರೆದ ಭಾಗವೇ ಈಗ ನಡೆಯುತ್ತಿರುವ ನಕಲಿ ರೈತ ಆಂದೋಲನ!


           ಸಂಸತ್ತಿನಲ್ಲಿ ಅಂಗೀಕೃತಗೊಂಡ ನಂತರವೂ ಈ ಕಾನೂನಿನ ಪರವಾಗಿ ಮಾತಾಡುತ್ತಿದ್ದ ಅಕಾಲಿದಳ ರಾಜಕೀಯ ಲಾಭಕ್ಕೋಸ್ಕರ ತನ್ನ ನಿಲುವನ್ನು ಬದಲಾಯಿಸಿತು. ಈ ಕಾನೂನನ್ನು ವಿರೋಧಿಸುತ್ತಿರುವ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್.ಸಿ.ಪಿ 2008ರಲ್ಲಿ ತಾವು ಮಹಾರಾಷ್ಟ್ರ ಸರಕಾರದಲ್ಲಿ ಪಾಲುದಾರರಾಗಿದ್ದಾಗ ಪ್ರಸಕ್ತ ಕಾನೂನುಗಳಿಗೆ ಪೂರಕವಾದ ಕಾನೂನುಗಳನ್ನು ಜಾರಿಗೆ ತಂದಿದ್ದವು. ತನ್ನ ಚುನಾವಣಾಪ್ರಚಾರದಲ್ಲಿ ಇವೇ ಕಾನೂನುಗಳನ್ನು ದೇಶಾದ್ಯಂತ ಜಾರಿಗೆ ತರುವುದಾಗಿ ಹೇಳಿದ್ದ ಕಾಂಗ್ರೆಸ್ ಹಾಗೂ ಇವುಗಳನ್ನು ಸಾರ್ವತ್ರಿಕವಾಗಿ ದೇಶದಲ್ಲಿ ಜಾರಿಗೆ ತರುವಂತೆ 2020ರ ಸೆಪ್ಟೆಂಬರ್ ತಿಂಗಳವರೆಗೂ ಪತ್ರಗಳ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತಿದ್ದ ಶರದ್ ಪವಾರ್ ಈಗ ಈ ಕಾನೂನಿನ ವಿರೋಧಿಗಳು! ಇದೇ ಕೃಷಿ ಕಾನೂನನ್ನು ಈಗ ನಕಲಿ ರೈತ ದಂಗೆಯ ಮುಖ್ಯ ರೂವಾರಿಯಾಗಿರುವ, ಕೋಟಿಗಟ್ಟಲೆ ಆಸ್ತಿಯುಳ್ಳ ರೈತ ನಾಯಕ ರಾಕೇಶ್ ಟಿಕಾಯತ್ 2020ರ ಜೂನ್'ನಲ್ಲಿ ಹೊಗಳಿದ್ದ. ಈ ರೈತ ದಂಗೆಯಲ್ಲಿ ಮೋದಿ ವಿರೋಧಿಗಳು ಮಾತ್ರವಲ್ಲಾ ದೇಶ ವಿರೋಧಿಗಳೂ ಸೇರಿದ್ದಾರೆ. ಅಸಲಿಗೆ ಅವರಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಮಾವೋವಾದಿಗಳು ಇಲ್ಲಿ ರೈತರಾಗಿದ್ದಾರೆ. ತಾವಿಲ್ಲಿ ಯಾಕೆ ಸೇರಿದ್ದೇವೆಂದು ಅರಿವಿಲ್ಲದವರೂ ಇದ್ದಾರೆ. ಸರಕಾರ ಮಂಡಿಸಿದ ಕೃಷಿ ಕಾನೂನು ತಮಗೇ ಲಾಭಕರ ಎಂಬುದರ ಅರಿವೇ ಇಲ್ಲದ ಪಾಪದ ರೈತರೂ ಕೆಲವರಿದ್ದಾರೆ. ದಿನಕ್ಕಿಷ್ಟು ಹಣ, ಬಿಟ್ಟಿ ಊಟ ಸಿಗುತ್ತದೆಂದು ಬಂದು ಒಟ್ಟಾದವರೂ ಇದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳಲ್ಲಿ ಬಂದು ತಲವಾರ್ ಝಳಪಿಸಿದವರಿದ್ದಾರೆ. ಅಲ್ಲಿ ಖಲಿಸ್ಥಾನೀ ಪರ ಘೋಷಣೆಗಳೂ ಮೊಳಗಿವೆ. ನಕ್ಸಲರ ಬಿಡುಗಡೆಗೆ ಒತ್ತಾಯಿಸುವ ಫಲಕಗಳೂ ಕಾಣಿಸಿಕೊಂಡಿವೆ. ರಾಷ್ಟ್ರಧ್ವಜವನ್ನು ಅವಮಾನಿಸುವ, ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗಳೂ ಅಲ್ಲಿ ನಡೆದಿವೆ. ಇದರ ಜೊತೆಗೆ ದೆಹಲಿಯಲ್ಲಿ ಸುರಕ್ಷಾ ಪಡೆಗಳ ಉಪಯೋಗಕ್ಕಾಗಿ ನೀಡಲಾಗಿರುವ 576 ಬಸ್‌ಗಳನ್ನು ಹಿಂದಕ್ಕೆ ಪಡೆಯುವಂತೆ ಡೆಲ್ಲಿ ಸಾರಿಗೆ ಸಂಸ್ಥೆಗೆ ಅರವಿಂದ್ ಕೇಜ್ರಿವಾಲ್ ಫರ್ಮಾನು ಹೊರಡಿಸಿದ್ದರು. 


         ಜನವರಿ 26ರಂದು ನಕಲಿ ರೈತರ ದಂಗೆಯ ವೇಳೆ ಪೊಲೀಸರು ಗರಿಷ್ಠ ಸಂಯಮವನ್ನು ಪ್ರದರ್ಶಿಸಿದರು. ಒಂದು ವೇಳೆ ಕೇಂದ್ರ ಸರಕಾರ ದಂಗೆಕೋರರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದ್ದರೆ ಅಂದು ಕೆಲವಾರು ಹೆಣ ಬೀಳುತ್ತಿತ್ತು. ಆಗ ಕಾಂಗ್ರೆಸ್ ಬೆಂಬಲಿತ ಮಾಧ್ಯಮಗಳು ಇದನ್ನೇ ತಿರುಚಿ, ಸರಕಾರದ ವಿರುದ್ಧ ಅಪಪ್ರಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿಸಲು ತಯಾರಾಗಿದ್ದರು.  ಟ್ರಾಕ್ಟರನ್ನು ಸ್ವತಃ ತನ್ನ ಮೇಲೆ ಪಲ್ಟಿ ಹೊಡೆಸಿಕೊಂಡು ಸತ್ತವನನ್ನು ಪೊಲೀಸರ ಗುಂಡಿನೇಟಿಗೆ ಸತ್ತ ಎಂದು ರಾಜ್ದೀಪ್ ಸರ್ದೇಸಾಯಿ ಸುಳ್ಳು ಸುದ್ದಿ ಹಬ್ಬಿಸಲು ನೋಡಿದ್ದು ಇದರ ಭಾಗವೇ. ಆದರೆ ಇದರ ಹಿಂದಿನ ಷಡ್ಯಂತ್ರ ಅಷ್ಟೇ ಅಲ್ಲ ಎಂದು ತಿಳಿದದ್ದು ಅಮೆರಿಕನ್ ಗಾಯಕಿ ರಿಹಾನಾ "ದೆಹಲಿಯಲ್ಲಿ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿರುವುದರಿಂದ ಆಂದೋಲನ ನಿರತ ರೈತರಿಗೆ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ನಾವೇಕೆ ದನಿ ಎತ್ತುತ್ತಿಲ್ಲ?" ಎಂದು ರಾತ್ರಿ ಎಂಟುಗಂಟೆಗೆ ಟ್ವೀಟ್ ಮಾಡಿದಾಗ. ಹೆಚ್ಚೆಂದರೆ ಐವತ್ತು ಸಾವಿರದಷ್ಟು ರಿಟ್ವೀಟ್ ಆಗುತ್ತಿದ್ದುದು, ಅಂದು ಮಾತ್ರ ಆಕೆಯ ಟ್ವೀಟು ಅರ್ಧ ದಿನದೊಳಗೆ ಎರಡೂವರೆ ಲಕ್ಷ ರಿಟ್ವೀಟ್ ಆಯಿತು! ಜೊತೆಗೆ ಅದರ ಬೆನ್ನಿಗೆ ಬೆಳಿಗ್ಗೆ ನಾಲ್ಕೂವರೆ ಹೊತ್ತಿಗೆ “ಇಂಡಿಯಾ ಈಸ್ ಆಟ್ ವಾರ್ ವಿತ್ ಇಟ್‌ಸೆಲ್ಫ್ – ಆಂಡ್ ಈವನ್ ರಿಹಾನಾ ಈಸ್ ನೋಟೀಸಿಂಗ್” ಎಂಬ ಬರ್ಖಾ ದತ್ತಳ ಲೇಖನ “ವಾಷಿಂಗ್‌ಟನ್ ಪೋಸ್ಟ್” ಪತ್ರಿಕೆಯಲ್ಲಿ ಪ್ರಕಟವಾಯಿತು! ಈ ಷಡ್ಯಂತ್ರ ಪೂರ್ಣವಾಗಿ ಸಾರ್ವಜನಿಕರಿಗೆ ದರ್ಶನವಾದುದು ಶಾಲೆ ಬಿಟ್ಟು ನಕಲಿ ಪರಿಸರವಾದಿಗಳ ದಾಳಕ್ಕೆ ಸಿಲುಕಿರುವ ಸ್ವೀಡನ್‌ ಪೋರಿ ಗ್ರೆಟಾ ಥನ್‌ಬರ್ಗ್ ಟೂಲ್ ಕಿಟ್ ಕೊಂಡಿಯೊಂದನ್ನು ಟ್ವೀಟ್ ಮಾಡುವ ಮೂಲಕ. ಅಂದೊಮ್ಮೆ "ಹೌ ಡೇರ್ ಯು?" ಅಂತ ವಿಶ್ವ ನಾಯಕರಿಗೆ ಕೇಳಿ ತಥಾಕಥಿತ ಪರಿಸರವಾದಿಗಳ ಕಣ್ಮಣಿಯಾಗಿದ್ದ ಗ್ರೇಟಾಳಿಗೆ ಇಂದು ಅದೇ ನಕಲಿ ಪರಿಸರವಾದಿಗಳು ತಮ್ಮ ರಹಸ್ಯ ಬಯಲಾಗಿಸಿದ್ದಕ್ಕಾಗಿ "ಹೌ ಡೇರ್ ಯು?" ಅನ್ನುವ ಪರಿಸ್ಥಿತಿ ಬಂದೊದಗಿದೆ!


           ಈ ಟೂಲ್ ಕಿಟ್'ನಲ್ಲಿ ದಂಗೆಕೋರರು ನಡೆಸಿದ್ದ ಸಭೆಗಳು, ತೆಗೆದುಕೊಂಡಿದ್ದ ನಿರ್ಣಯಗಳು ಎಲ್ಲಾ ಇದ್ದವು. ಜನವರಿ 26ನ್ನು “ಗ್ಲೋಬಲ್ ಡೇ ಆಫ್ ಆಕ್ಷನ್” ಆಗಿಸಿ ದೆಹಲಿಯಲ್ಲಿ ಭಾರಿ ಪ್ರಮಾಣದಲ್ಲಿ ಗೊಂದಲ ಹಾಗೂ ಅರಾಜಕತೆಯನ್ನು ಎಬ್ಬಿಸಬೇಕೆಂದೂ ನಿರ್ಣಯಿಸಲಾಗಿತ್ತು!  ಅದನ್ನು ಕಾರ್ಯಗತ ಮಾಡಲು ಸಲಹೆ, ಸೂಚನೆ, ಮಾರ್ಗದರ್ಶನ; ಅಗತ್ಯವಾದ ಸಿದ್ಧ ಟ್ವೀಟ್‌ಗಳು, ಹ್ಯಾಷ್‌ಟ್ಯಾಗ್‌ಗಳು ಎಲ್ಲವೂ ಅದರಲ್ಲಿದ್ದವು. ಗಲಭೆ ಆರಂಭವಾದಾಗ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳ ಮೂಲಕ ಹಾಗೂ ಲೈವ್ ಆಗಿ ಎಲ್ಲೆಡೆ ಪ್ರಸಾರ ಮಾಡಬೇಕೆಂದೂ, ಅದಕ್ಕೆ ನೀಡಬೇಕಾದ ಶೀರ್ಷಿಕೆಗಳ ಬಗೆಗೆ ಸಲಹೆಗಳಿದ್ದವು.  ರಿಹಾನಾ ಮಾಡಿದ ಟ್ವೀಟ್‌, ಯಾವಾಗ, ಯಾವ ಬಗೆಯ ಟ್ವೀಟ್ ಮಾಡಬೇಕೆಂದೂ ಅದರಲ್ಲೇ ಇತ್ತು. ಹೀಗೆ ಪೂರ್ವ ನಿಗದಿತ ಸಮಯಕ್ಕೆ ಟ್ವೀಟ್ ಮಾಡಿದ ಕಾರಣಕ್ಕೆ ಆಕೆಗೆ ಎರಡೂವರೆ ಮಿಲಿಯನ್ ಡಾಲರ್‌ಗಳು ಸಂದಾಯವಾಗಿತ್ತು! ಪೋಸ್ಟ್‌ಗಳಲ್ಲಿ ಹಾಕಬೇಕಾದ ಫೋಟೋಗಳ ಮಾದರಿಗಳೂ ಇದ್ದವು! “ಮೋದಿ ರೈತರ ಹತ್ಯಾಕಾಂಡಕ್ಕೆ ಯೋಜಿಸಿದ್ದಾರೆ” ಎಂಬ ಹ್ಯಾಷ್‌ಟ್ಯಾಗ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡಿ ಜನರನ್ನು ಕೆರಳಿಸಿ ನಡೆಸಬೇಕಾದ ಚಕ್ಕಾ ಜಾಮ್ ದಂಗೆಯ ಮಾಹಿತಿ,  ಫೆಬ್ರವರಿ 12-23ರ ಅವಧಿಯಲ್ಲೂ ದಂಗೆ ಎಬ್ಬಿಸುವ ಯೋಜನೆಗಳು ಅದರಲ್ಲಿದ್ದವು. ಅಂಬಾನಿ, ಅದಾನಿಯಂತಹ ದೇಶದ ದೊಡ್ಡ ಕೈಗಾರಿಕೋದ್ಯಮಿಗಳ ವಿರುದ್ಧವೂ ಕಾರ್ಯಾಚರಣೆ ಆರಂಭಿಸಬೇಕೆಂಬ ಸೂಚನೆಗಳೂ ಅದರಲ್ಲಿದ್ದವು. ಜಿಯೋಗೆ ಸೇರಿದ 1300ಕ್ಕೂ ಹೆಚ್ಚು ಮೊಬೈಲ್ ಟವರ್‌ಗಳನ್ನು ಹಾಳುಗೆಡವಿರುವುದರ ಹಿಂದಿನ ಕಾರಣ ಇದೇ. ವಿಶ್ವಸಂಸ್ಥೆ, ಅಮೆರಿಕಾ, ಬ್ರಿಟನ್, ಕೆನಡಾ ಮುಂತಾದೆಡೆ ಭಾರತದ ವಿರುದ್ದ ಅಭಿಪ್ರಾಯ ಮೂಡಿಸುವ ಯೋಜನೆಗಳೂ ಅದರಲ್ಲಿದ್ದವು.  ಸಿದ್ಧ ಟ್ವೀಟ್ ಹಾಗೂ ಹೇಳಿಕೆಗಳು ಇಂಗ್ಲಿಷ್ ಅಲ್ಲದೇ ಫ್ರೆಂಚ್ ಮತ್ತು ಪೋರ್ಚುಗೀಸ್‌ನಲ್ಲೂ ಇದ್ದವು! ಬ್ರಿಟಿಷ್ ಸಂಸತ್ ಸದಸ್ಯೆ ಕ್ಲಾಡಿಯಾ "ಭಾರತದ ರೈತರ ಸಮಸ್ಯೆಯ ಬಗ್ಗೆ ಬ್ರಿಟಿಷ್ ಸಂಸತ್‌ನಲ್ಲಿ ಚರ್ಚೆಯಾಗಬೇಕು" ಎಂದಿರುವುದು ಇದರ ಭಾಗವೇ. ಸರಕಾರದ ಜೊತೆ ಹನ್ನೆರಡು ಬಾರಿ ಮಾತುಕತೆ ನಡೆಸಿದ್ದರೂ ತಮ್ಮ ನಿಲುವುಗಳನ್ನು ಪದೇ ಪದೇ ಬದಲಾಯಿಸುತ್ತಿದ್ದ, ಸರ್ವೋಚ್ಛ ನ್ಯಾಯಾಲಯ ಸೃಷ್ಟಿಸಿದ ಸಮಿತಿಯನ್ನು ತಿರಸ್ಕರಿಸಿದ್ದ, ಕಾನೂನುಗಳ ಜಾರಿಯನ್ನು ಒಂದೂವರೆ ವರ್ಷಗಳವರೆಗೆ ಸರ್ಕಾರ ಸ್ಥಗಿತಗೊಳಿಸಿರುವುದನ್ನು ಕೂಡಾ ನಿರ್ಲಕ್ಷಿಸಿ ತಮ್ಮ ಪ್ರತಿಭಟನೆಯನ್ನು ಜಾರಿಯಲ್ಲಿಟ್ಟಿದ್ದ ಈ ನಕಲಿ ರೈತ ನಾಯಕರ ಉದ್ದೇಶ ದೇಶದ ಅನ್ನದಾತರ ಮೇಲಿನ ಕಾಳಜಿಯಲ್ಲ; ತಮ್ಮ "ಅನ್ನದಾತ"ರನ್ನು ಅಧಿಕಾರದಲ್ಲಿ ಕೂರಿಸುವ ಷಡ್ಯಂತ್ರ ಎನ್ನುವುದನ್ನು ಈ ಟೂಲ್ ಕಿಟ್ ಬಯಲು ಮಾಡಿತು.


          ತನ್ನವರಿಂದ ಸೂಚನೆ ಸಿಕ್ಕಿದ ಕೂಡಲೇ ಗ್ರೇಟಾ ಆ ಟೂಲ್ ಕಿಟ್ ಕೊಂಡಿಯಿದ್ದ ಟ್ವೀಟನ್ನೇನೋ ತೆಗೆದು ಹಾಕಿದಳು. ಆದರೆ ಆ ಲಿಂಕ್ ಬಳಸಿ ಟೂಲ್ ಕಿಟ್ ನೋಡಿದಾಗ ಹಲವು ರಹಸ್ಯಗಳು ಹೊರಬಂದವು. ಆಗ ಅಲ್ಲಿನ ಸಾಲುಗಳು ಮಾಯವಾಗಿ ಹೊಸ ಸಾಲುಗಳು ಮೂಡುತ್ತಿದ್ದವು. ಹಾಗೆ ಮಾಯವಾದ ಸಾಲುಗಳಲ್ಲಿ, “ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಜತೆ ಸಂಪರ್ಕದಲ್ಲಿರಿ” ಎಂದು ದಂಗೆಕೋರರಗಿಗೆ ನೀಡಿದ ಸೂಚನೆ ಕೂಡಾ ಒಂದಾಗಿತ್ತು! ಹಾಗೆ ಟೂಲ್‌ಕಿಟ್ ಅನ್ನು ಎಡಿಟ್ ಮಾಡುತ್ತಿದ್ದಾಕೆ ಆಮ್ ಆದ್ಮಿ ಪಕ್ಷದ, ಮುಂಬೈ ಉಚ್ಛ ನ್ಯಾಯಾಲಯದ ವಕೀಲೆ ನಿಕಿತಾ ಜೇಕಬ್. 137 ಜಿಬಿಯಷ್ಟು ಮಾಹಿತಿ ಆಕೆಯ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಗಳಿಂದ ದೊರೆತಿದೆ. ಅವುಗಳಲ್ಲಿ ದಂಗೆಯ ಬಗ್ಗೆ ಮಾಹಿತಿ, ದಂಗೆ ಎಬ್ಬಿಸಿ ಹಬ್ಬಿಸಲು ಪ್ರೇರೇಪಿಸುವ ವಿಡಿಯೋಗಳೆಲ್ಲಾ ದೊರೆತಿವೆ. ಆಕೆ "ಸಿಖ್ ಫಾರ್ ಜಸ್ಟೀಸ್" ಎಂಬ ನಿಷೇಧಿತ ಉಗ್ರ ಸಂಘಟನೆಯ ಇಮೈಲ್'ಗಳನ್ನು ನಿರ್ವಹಿಸುತ್ತಿದ್ದಾಕೆ. ಮಿಯಾ ಕ್ಯಾಂಪಸೀನಾ, ಎಕ್ಸ್‌ಟಿಂಕ್ಷನ್ ರೆಬೆಲಿಯನ್, ಯುಗ್ಮಾ ನೆಟ್‌ವರ್ಕ್ ಮುಂತಾದ ಅಂತಾರಾಷ್ಟ್ರೀಯ ಎಡಪಂಥೀಯ ಉಗ್ರ ಸಂಘಟನೆಗಳೆಲ್ಲಾ ಈ ದಂಗೆಗೆ ಸಹಾಯ ಹಸ್ತ ನೀಡಿವೆ! ಎಕ್ಸ್‌ಟಿಂಕ್ಷನ್ ರೆಬೆಲಿಯನ್ ಎಂಬ ಉಗ್ರ ಸಂಘಟನೆಗೆ ಹಣ ಕೊಡುವುದು ಭಾರತದಿಂದ ನಿಷೇಧವಾಗಿರುವ ಗ್ರೀನ್ ಪೀಸ್ ಸಂಘಟನೆ. ದಂಗೆಯ ನೀಲನಕ್ಷೆಯನ್ನು ತಯಾರಿಸಿದ “ಆಸ್ಕ್ ಇಂಡಿಯಾ ವೈ.ಕಾಮ್” ಎಂಬ ವೆಬ್‌ಸೈಟಿನ ನಿರ್ಮಾತೃ ಖಲಿಸ್ತಾನಿ ಉಗ್ರ ಧಲಿವಾಲನಿಂದ ಸ್ಥಾಪಿಸಲ್ಪಟ್ಟ ಕೆನಡಾದ “ಪೊಯೆಟಿಕ್ ಜಸ್ಟಿಸ್ ಫೌಂಡೇಶನ್” ಎಂಬ ಉಗ್ರ ಸಂಘಟನೆ. ಟೂಲ್ ಕಿಟ್ ತಯಾರಿಸಿದ "21 ವರ್ಷದ ಹಸುಳೆ" ಎಂದು ಕಾಂಗ್ರೆಸ್ ಪಾಳಯ ಮುದ್ದು ಮಾಡುತ್ತಿರುವ ದಿಶಾಳನ್ನು ಈತನೊಂದಿಗೆ ಬೆಸೆದವಳು ವಕೀಲೆ ನಿಕಿತಾ ಜೇಕಬ್. ಟೂಲ್ ಕಿಟ್ ನಿರ್ಮಾತೃಗಳಲ್ಲಿ ಒಬ್ಬನಾದ ಶಂತನು ಮುಲೂಕ್ ದಂಗೆಯ ಸಮಯದಲ್ಲಿ ಗಾಜಿಪುರ್ - ಸಿಂಘು, ಟೀಕ್ರಿ ಬಾರ್ಡರ್‌ಗಳಲ್ಲಿದ್ದ!


          ಹೌದು ದೇಶ ವಿರೋಧೀ ಶಕ್ತಿಗಳೆಲ್ಲಾ ಒಟ್ಟು ಸೇರಿವೆ. ಖಲಿಸ್ಥಾನೀ, ಐಎಸ್ಐ ಏಜೆಂಟರುಗಳಿಂದ ಸಹಾಯಹಸ್ತವೂ ಅವುಗಳಿಗೆ ಸಿಕ್ಕಿವೆ. ಆದರೆ ಇದರ ಹಿಂದಿರುವ ಮುಖ್ಯ ಪಾತ್ರಧಾರಿಯೊಬ್ಬನ ಬಗ್ಗೆ ಜಗತ್ತು ಜಾಗೃತವಾಗಬೇಕು. ಆತ ಜಾರ್ಜ್ ಸೋರೋಸ್. ಆತ ಮೋದಿಯವರನ್ನು ಸರ್ವಾಧಿಕಾರಿ ಎನ್ನುತ್ತಾನೆ. ಯಾರೆಲ್ಲಾ ಕ್ರೈಸ್ತ ಮಿಷನರಿಗಳಿಗೆ, ದೇಶವಿರೋಧೀ ವಿಚಾರವಾದಿಗಳಿಗೆ ಸೊಪ್ಪು ಹಾಕುವುದಿಲ್ಲವೋ ಅವರೆಲ್ಲಾ ಆ ಮತಾಂಧನ ದೃಷ್ಟಿಯಲ್ಲಿ ಸರ್ವಾಧಿಕಾರಿಗಳು. ಈ ಎಲ್ಲಾ ಸರ್ವಾಧಿಕಾರಿಗಳ ವಿರುದ್ಧ ಹೋರಾಡಲು ಆತ ಬಿಲಿಯನ್ಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾನೆ. ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಈಗಾಗಲೇ ಆತ ಹೂಡಿಕೆ ಮಾಡಿದ್ದಾನೆ. ಅಲ್ಲದೇ ಈ ದೇಶದ ವಿರುದ್ಧ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ, ಮೋದಿಯವರ ವಿರುದ್ಧ ಯಾವೆಲ್ಲಾ ಬರ್ಖಾ, ಸರ್ದೇಸಾಯಿಗಳು ಬರೆಯುತ್ತಿದ್ದಾರೋ, ಧ್ರುವ್ ರಾಥೀ ಮುಂತಾದ ದೇಶ ವಿರೋಧಿಗಳು ಯೂಟ್ಯೂಬ್'ನಂತಹಾ ಮಾಧ್ಯಮಗಳಲ್ಲಿ ವಿಡಿಯೋ ಮಾಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೋ ಅವರಿಗೆಲ್ಲಾ ಈ ಸೋರೋಸ್ ಬಿಸ್ಕೀಟ್ ಹಾಕುತ್ತಿದ್ದಾನೆ. ಈ ನಕಲಿ ರೈತರ ದಂಗೆಗೂ ಅವನಿಂದ ಪರೋಕ್ಷ ರೂಪದಲ್ಲಿ ಹಣ ಹರಿದಿದೆ. ವೀರ ಸಾವರ್ಕರರ ನಾಯಕತ್ವವನ್ನು ನಾವು ಬಳಸಿಕೊಳ್ಳಲಿಲ್ಲ, ನೇತಾಜಿ ಸುಭಾಷರನ್ನು ಉಳಿಸಿಕೊಳ್ಳಲಿಲ್ಲ; ಎಪ್ಪತ್ತು ವರ್ಷಗಳ ಬಳಿಕ ಸಿಕ್ಕಿದ ಅಪರೂಪದ ಹಿಂದೂ ನಾಯಕ ನರೇಂದ್ರ ಮೋದಿಯನ್ನಾದರೂ ಉಳಿಸಿಕೊಳ್ಳೋಣ. ಸೋರೋಸ್ನ ಎಂಜಲಿಗೆ ನಾಲಗೆಯೊಡ್ಡುವ ದೇಶ ವಿರೋಧೀ ಶಕ್ತಿಗಳ ಅಪಪ್ರಚಾರವನ್ನು ನಂಬದೆ ಮೋದಿಯವರ ಜೊತೆ ನಿಂತು ರಾಷ್ಟ್ರಧರ್ಮವನ್ನು ಪಾಲಿಸೋಣ.

ಶನಿವಾರ, ಫೆಬ್ರವರಿ 20, 2021

'ಹಲಾಲ್' ಹೆಸರಲ್ಲಿ ಸಾಂಸ್ಕೃತಿಕ ಮತಾಂತರ

 'ಹಲಾಲ್' ಹೆಸರಲ್ಲಿ  ಸಾಂಸ್ಕೃತಿಕ ಮತಾಂತರ




           ಕೊರೋನಾ ಶುರುವಾದ ಹೊಸತರಲ್ಲಿ ಅದರ ಹರಡುವಿಕೆಗೆ ಕಾರಣವಾದ ತಬ್ಲೀಘಿಗಳ ನಡೆಗೆ ದೇಶ ಕುದ್ದು ಹೋಗಿತ್ತು. ತಬ್ಲೀಘಿಗಳನ್ನು ಬೆಂಬಲಿಸಿದ ವಿಶ್ವಾಸಘಾತುಕ ಹುಟ್ಟುಗುಣವಿರುವವರ ವಿರುದ್ಧವೂ ದೇಶ ಎದ್ದು ನಿಂತಿತು. ಮುಂಬೈನಲ್ಲಿ ಮುಖಕ್ಕೆ ಮಾಸ್ಕ್ ಹಾಕದೆ, ಆಹಾರ ಪದಾರ್ಥವನ್ನು ವಿತರಿಸಲು ಬೇಕಾದ ಯಾವ ನಿಯಮವನ್ನೂ ಅನುಸರಿಸದೆ, ಮನೆಗೆ ಆಹಾರವಸ್ತು ತಂದುಕೊಟ್ಟವನಿಂದ ಅದನ್ನು ಸ್ವೀಕರಿಸುವುದನ್ನು ನಿರಾಕರಿಸಿದ್ದ ವ್ಯಕ್ತಿಯನ್ನು, "ಡೆಲಿವರಿ ಹುಡುಗ ಮುಸಲ್ಮಾನನೆಂಬ ಕಾರಣಕ್ಕೆ ಆಹಾರ ನಿರಾಕರಿಸಿದರು" ಎಂಬ ನೆಪವೊಡ್ಡಿ ಬಂಧಿಸಿಲಾಯಿತು. ತನ್ನ ಆರೋಗ್ಯದ ದೃಷ್ಟಿಯಿಂದ ಸರಕಾರವೇ ವಿಧಿಸಿದ ನಿಯಮದಂತೆ ಆಹಾರವನ್ನು ಪಡೆದುಕೊಳ್ಳಬಹುದಾದ ಆ ವ್ಯಕ್ತಿಯ ಹಕ್ಕನ್ನು ಸುಳ್ಳು ಆಪಾದನೆಯೊಡ್ಡಿ ಸರಕಾರದ ಇಲಾಖೆಯೇ ಮೊಟಕುಗೊಳಿಸಿತು! ಇದನ್ನು ಕಂಡು ರೊಚ್ಚಿಗೆದ್ದ ಹಿಂದೂಗಳು ತಿರುಗಿ ಬಿದ್ದರು. ಕೇಸರಿ ಧ್ವಜ ಹಿಂದೂಗಳ ಅಂಗಡಿಯ ಮುಂದೆ ಹೆಚ್ಚತೊಡಗಿತು. ಚೆನ್ನೈನಲ್ಲಿನ ಜೈನ್ ಸಮುದಾಯಕ್ಕೆ ಸೇರಿದ ಅಂಗಡಿಯ ಮಾಲಿಕರು "ನಾವು ಶುದ್ಧವಾದ ಆಹಾರ ಪದಾರ್ಥಗಳನ್ನು ನೇರ ನಿಮ್ಮ ಮನೆಗೆ ತಲುಪಿಸುತ್ತೇವೆ. ಹಾಗೂ ನಮ್ಮಲ್ಲಿ ಮುಸಲ್ಮಾನ ಕೆಲಸಗಾರರು ಇರುವುದಿಲ್ಲ" ಎಂಬ ಜಾಹೀರಾತನ್ನೂ ಪ್ರಕಟಿಸಿದ್ದೇ ತಡ, ವಾಟ್ಸ್ ಆಪ್'ನಲ್ಲಿ ಬಂದ ಜಾಹೀರಾತನ್ನು ಆಧಾರವಾಗಿಟ್ಟುಕೊಂಡೇ ಪೊಲೀಸರು ಆ ಅಂಗಡಿ ಮಾಲಿಕರ ಮೇಲೆ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿಬಿಟ್ಟರು. ಬಹುತ್ವವನ್ನು ಗೌರವಿಸಬೇಕು ಎನ್ನುವ, ಸೆಕ್ಯುಲರ್ ಎಂಬ ಲೊಳಲೊಟ್ಟೆಯ ಸಿದ್ಧಾಂತ ಸದಾ ಪ್ರತಿಪಾದಿಸಲ್ಪಡುವ ರಾಷ್ಟ್ರದಲ್ಲಿ ಜೈನರಿಗೆ ತಮ್ಮ ಆಹಾರ ಸಂಸ್ಕೃತಿಯ ಪ್ರಕಾರ ಜಾಹೀರಾತು ಕೊಡಲು ಅವಕಾಶ ಸಿಗಲಿಲ್ಲ. ಆದರೆ ತದ್ವಿರುದ್ಧವಾಗಿ ಹಲಾಲ್ ಸಂಸ್ಕೃತಿಗೆ ರಾಜಾತಿಥ್ಯ ದೊರೆಯುತ್ತಲೇ ಇದೆ!


             ಏನಿದು ಹಲಾಲ್? ಇಸ್ಲಾಮಿನಲ್ಲಿ ಅನುಮತಿಸಲಾಗಿರುವಂತಹವನ್ನು ಹಲಾಲ್ ಎಂದೂ ನಿಷೇಧಕ್ಕೊಳಪಟ್ಟಿರುವಂಥವನ್ನು ಹರಾಮ್ ಎಂದೂ ಕರೆಯಲಾಗುತ್ತದೆ. ಯಾವ ಆಹಾರ ಪದಾರ್ಥವನ್ನು ತಿನ್ನಬೇಕು, ತಿನ್ನುವ ಮುನ್ನ ಅದನ್ನು ಹೇಗೆ ಕತ್ತರಿಸಬೇಕು, ಇವೆಲ್ಲವೂ ಕುರಾನ್ ಮತ್ತು ಹದೀಸ್ಗಳಲ್ಲಿ ಹೇಳಿರುವಂತೆ ಆಚರಿಲ್ಪಟ್ಟರೆ ಮಾತ್ರ ತಿನ್ನಲು ಯೋಗ್ಯವಾದಂಥವು. ಹರಾಮ್ ಆದುದನ್ನು ತಿಂದರೆ ಆತನ ಪ್ರಾರ್ಥನೆಯನ್ನು ಅವರ ಭಗವಂತ ಕೇಳಲಾರನಂತೆ! ಹಲಾಲ್, ಝಟ್ಕಾದಂತೆ ಒಂದೇ ಏಟಿಗೆ ಪ್ರಾಣಿಯನ್ನು ಕಡಿದು ಅದಕ್ಕೆ ನೋವು ಅರಿವಾಗದಂತೆ ಮಾಡುವ ವಿಧಾನವಲ್ಲ. ಹಲಾಲ್ನಲ್ಲಿ ಪ್ರಾಣಿ ನರಳುತ್ತಾ ಸಾಯುತ್ತದೆ. ಆಸ್ಟ್ರೇಲಿಯಾ, ಇಂಗ್ಲೆಂಡು ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಪ್ರಾಣಿಗಳನ್ನು ಕೊಲ್ಲುವಮುನ್ನ ಪ್ರಜ್ಞೆ ತಪ್ಪಿಸಬೇಕೆಂಬ ನಿಯಮವಿದೆ. ಹಲಾಲ್'ನಲ್ಲಿ ‘ಬಿಸ್ಮಿಲ್ಲಾ’ ಎನ್ನುತ್ತಾ ಪ್ರಾಣಿಯ ಕುತ್ತಿಗೆಯನ್ನು ನಿಧಾನವಾಗಿ ಕತ್ತರಿಸಬೇಕು. ಆ ಸಮಯದಲ್ಲಿ ಮೌಲ್ವಿಯೊಬ್ಬ ಕಲ್ಮಾ ಓದಬೇಕು! ಈ ರೀತಿ ಪ್ರಾಣಿಯನ್ನು ಕತ್ತರಿಸುವವ ಮುಸಲ್ಮಾನನೇ ಆಗಿರಬೇಕು.  ಹೀಗೆ ಕತ್ತರಿಸುವಾಗ ಚಾಕು ಚೂಪಾಗಿದ್ದು ಆ ಪ್ರಾಣಿಯ ಕನಿಷ್ಠಪಕ್ಷ ಎರಡು ರಕ್ತನಾಳಗಳನ್ನು, ಕಂಠದಭಾಗವನ್ನು ಕತ್ತರಿಸಬೇಕು. ಆದರೆ ಬೆನ್ನಹುರಿಯನ್ನು ಕತ್ತರಿಸುವಂತಿಲ್ಲ. ಕುತ್ತಿಗೆಯ ಭಾಗದಿಂದಲೇ ಎಲ್ಲಾ ರಕ್ತ ಹೊರಹೋಗುವಂತೆ ನೋಡಿಕೊಂಡು ಪ್ರಾಣಿ ಪೂರ್ಣ ಸತ್ತಿದೆ ಎಂದಮೇಲೆ ಮುಂದಿನ ಹಂತಕ್ಕೆ ಕೈ ಹಾಕಬೇಕು. ಹೀಗೆ ಪ್ರಾಣಿಯನ್ನು ವಿಲವಿಲ ಒದ್ದಾಡುವಂತೆ ಮಾಡಿ ಚಿತ್ರಹಿಂಸೆ ಕೊಟ್ಟು ಕೊಲ್ಲುವ ಕ್ರೌರ್ಯದ ಪರಮಾವಧಿ ಹಲಾಲ್!


               ಈ ಹಲಾಲ್ ಎನ್ನುವುದು ಅವರ ಆಚರಣೆಯಲ್ಲವೇ? ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲೇ ಅನ್ಯರು ಇರುವುದಂತೂ ಸತ್ಯ. ಆದರೆ ಹಲಾಲ್ ಹೇರಿಕೆ ಕೇವಲ ಇಸ್ಲಾಮಿನ ಒಳಗೆ ಮಾತ್ರ ಉಳಿದಿಲ್ಲ ಅದು ಇಸ್ಲಾಮೇತರರ ಒಳಗೂ ಇಳಿಯುತ್ತಿದೆ; ಇಳಿಸಲಾಗುತ್ತಿದೆ! ಹಲಾಲ್ ಕೇವಲ ಪ್ರಾಣಿಗಳನ್ನು ಕೊಯ್ಯುವ ಒಂದು ವಿಧಾನವಾಗಿ ಮಾತ್ರ ಇದ್ದಿದ್ದರೆ ಯಾರದ್ದೂ ತಕರಾರಿರಲಿಲ್ಲ. ಇಲ್ಲಿ ಅವರೊಳಗಿನ ಆಚರಣೆಯನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ ಈ ಆಚರಣೆ ನೆಪದಲ್ಲಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡು,  ಹಿಂದುಳಿದ ವರ್ಗಗಳಿಂದ ಉದ್ಯೋಗವನ್ನು ಕಸಿದುಕೊಂಡು ತಮ್ಮವರಿಗೆ ಮಾತ್ರ ಉದ್ಯೋಗ ದಕ್ಕಿಸಿಕೊಳ್ಳುವ ಅವರ ವ್ಯಾಪಾರ ಜಿಹಾದ್ ಬಗ್ಗೆ ವಿರೋಧವಿದೆ. ಅದಕ್ಕಿಂತಲೂ ತಮ್ಮ ಆಚರಣೆಯನ್ನು ಅನ್ಯರ ಮೇಲೂ ಹೇರುವ ಈ ಪ್ರಚ್ಛನ್ನ ಜಿಹಾದ್ ಬಗ್ಗೆ ವಿರೋಧವಿದೆ. ಮೊದಲೆಲ್ಲಾ ಮುಸ್ಲಿಮರ ಅಂಗಡಿಗಳಲ್ಲಿ ಮಾತ್ರವಿದ್ದ "ಹಲಾಲ್" ಬೋರ್ಡ್ ಇತ್ತೀಚೆಗೆ ಹಿಂದೂಗಳ, ಕ್ರೈಸ್ತರ ಅಂಗಡಿ, ಹೋಟೆಲುಗಳಲ್ಲೂ ಕಾಣಿಸಿಕೊಳ್ಳತೊಡಗಿತು. ಹಲಾಲ್ ಮಾಡಬೇಕಾದವನು ಮುಸಲ್ಮಾನನೇ ಆಗಿರಬೇಕು ಎಂಬ ಅದರ ನಿಯಮದ ಪ್ರಕಾರ ಹಲಾಲ್ ಪ್ರಮಾಣಪತ್ರ ಪಡೆದ ಪ್ರತಿಯೊಂದು ಅಂಗಡಿಯೂ ಮುಸಲ್ಮಾನರನ್ನೇ ಆ ಪ್ರಕ್ರಿಯೆಗೆ ಇಟ್ಟುಕೊಳ್ಳಬೇಕು. ಇದರಿಂದ ಪರಂಪರಾಗತವಾಗಿ ಮಾಂಸ ಕತ್ತರಿಸುತ್ತಿದ್ದ ಹಿಂದೂಗಳ ಅಥವಾ ಹಿಂದೂ ಅಂಗಡಿಗಳಲ್ಲಿ ಆ ಕೆಲಸಕ್ಕಿದ್ದ ಹಿಂದೂಗಳ, ಕ್ರೈಸ್ತರ ಕೆಲಸಕ್ಕೆ ಕುತ್ತಾಯಿತು. ಅಲ್ಲದೆ ಮೇಲಿನ ಎರಡು ಪ್ರಕರಣಗಳಲ್ಲಿ ನಿರ್ದಿಷ್ಟ ಜಾತಿಯನ್ನು ಹೇಳಿದ ನೆಪವೊಡ್ಡಿ ಬಂಧಿಸಿದ ಸರಕಾರೀ ವ್ಯವಸ್ಥೆ ಹಲಾಲ್ ಪ್ರಮಾಣಪತ್ರ ಪಡೆದ ಅಂಗಡಿಯೂ ನಿರ್ದಿಷ್ಟವಾಗಿ ಮುಸ್ಲಿಮರನ್ನೇ ಕೆಲಸಕ್ಕಿಟ್ಟುಕೊಂಡಿದ್ದೇನೆ ಎಂದು ಸಾರಿ ಹೇಳುವಾಗ ಅವರನ್ನೇಕೆ ಬಂಧಿಸುವುದಿಲ್ಲ? ಸೆಕ್ಯುಲರ್ ದೇಶದಲ್ಲಿ ಕೆಲವರಿಗೆ ಮಾತ್ರ ಹಕ್ಕುಗಳು, ರಿಯಾಯಿತಿಗಳು ಹೆಚ್ಚೆಂದೇ?


              ಒಂದು ಆಸ್ಪತ್ರೆಗೆ ಹಲಾಲ್ ಪ್ರಮಾಣಪತ್ರ ಸಿಗಬೇಕಾದರೆ, ಅಲ್ಲಿನ ಕ್ಯಾಂಟೀನ್ಗೆ ಕೋಳಿಯನ್ನು ತರುವವ, ಕ್ಯಾಂಟೀನಿನಲ್ಲಿ ಆ ಕೋಳಿಯನ್ನು ಹಲಾಲ್ ಮಾಡುವವ ಇಬ್ಬರೂ ಮುಸಲ್ಮಾನರಾಗಿರಬೇಕಾಗುತ್ತದೆ. ಮಾತ್ರವಲ್ಲ ಆಸ್ಪತ್ರೆಯಲ್ಲಿ ಅನ್ಯ ಮತದ ಪ್ರಾರ್ಥನಾ ಮಂದಿರಗಳು ಇರುವಂತಿಲ್ಲ; ಅವು ಹರಾಮ್ ಆಗುತ್ತವೆ. ಅಲ್ಲಿ ಮುಸ್ಲಿಮರ ಪ್ರಾರ್ಥನೆಗೆ ಕೋಣೆಗಳನ್ನು ಮೀಸಲಿಡಬೇಕಾಗುತ್ತದೆ. ಹೀಗೆ ಅಲ್ಲಿನ ಉದ್ಯೋಗಗಳೆಲ್ಲಾ ಮುಸ್ಲಿಮರ ಪಾಲಾಗುತ್ತವೆ. ಮುಂದಿನ ದಿನಗಳಲ್ಲಿ ಇವರ ಬೇಡಿಕೆಗಳು ಮತ್ತಷ್ಟು ಹೆಚ್ಚುತ್ತವೆ. ಕೋಳಿ ಸಾಕಾಣಿಕೆಯ ಜಾಗವೂ ಹರಾಮ್ ವಸ್ತುಗಳಿಂದ ಮುಕ್ತವಾಗಿರಬೇಕು ಎನ್ನಲಾಗುತ್ತದೆ, ಅಂದರೆ ಕೋಳಿ ಫಾರಂ ಸುತ್ತಲೂ ಹಂದಿ,ನಾಯಿಗಳು ಸುಳಿದಾಡದಂತಹ ವಾತಾವರಣ ಇರಬೇಕಾಗುತ್ತದೆ. ಕೇವಲ ಕೋಳಿ ಕೊಯ್ಯುವ, ಅದನ್ನು ಸರಬರಾಜು ಮಾಡುವವ ಶರಿಯಾ ಪಾಲಿಸುವ ಮುಸ್ಲಿಂ ಆಗಿದ್ದರೆ ಸಾಲದು, ಕೋಳಿ ಸಾಕುವವನು ನಮ್ಮವನೇ ಆಗಿರಬೇಕು ಎನ್ನುವ ಬೇಡಿಕೆ ಶುರುವಾಗುತ್ತದೆ. ಇದು ಮತಾಂತರಕ್ಕೂ ಎಡೆ ಮಾಡಿಕೊಡುತ್ತದೆ. ಪ್ರತಿ ಹಂತದಲ್ಲೂ ಮುಸ್ಲಿಮರಿಗೆ ಉದ್ಯೋಗ ದೊರಕಿಸಿಕೊಡುವುದು ಮಾತ್ರವಲ್ಲದೇ ಹಿಂದುಳಿದ-ದಲಿತ ವರ್ಗದಿಂದ ಅವರ ಪಾರಂಪರಿಕ ವ್ಯವಹಾರಗಳನ್ನು ಕಸಿದುಕೊಳ್ಳುವ ಗುಪ್ತ ಉಪಾಯ ಇವರದ್ದು.


           ಪ್ರಾಣಿಗಳನ್ನು ಕತ್ತರಿಸುವ ಈ ವಿಧಾನದಿಂದ ನಮಗೇನೂ ಸಮಸ್ಯೆಯಿಲ್ಲ ಎಂದು ಸಸ್ಯಾಹಾರಿಗಳು ನೆಮ್ಮದಿಯ ನಿಟ್ಟುಸಿರೇನು ಬಿಡಬೇಕೂಂತಿಲ್ಲ. ಯಾಕೆಂದರೆ ಮೊದಲನೆಯದಾಗಿ ಇದು ಹಿಂದೂಗಳ ವ್ಯವಹಾರ, ಸಂಸ್ಕೃತಿಗೆ ಮಾರಕವಾಗುವ ಸಮಸ್ಯೆ. ಎರಡನೆಯದಾಗಿ ಹಲಾಲ್'ನ ಕಬಂಧ ಬಾಹು ಮಾಂಸಾಹಾರಕ್ಕಷ್ಟೇ ಸೀಮಿತವಾಗುಳಿದಿಲ್ಲ. ಒಣ ಹಣ್ಣು, ಎಣ್ಣೆ, ಸಿಹಿ ಪದಾರ್ಥ, ಗೋಧಿ, ಮೈದಾ ಮುಂತಾದ ಧಾನ್ಯಗಳು, ಬಿಸ್ಕೆಟ್, ಚಾಕೊಲೇಟು ಮುಂತಾದ ಆಹಾರ ಪದಾರ್ಥಗಳು, ಆಹಾರ ತಯಾರಿ, ಸಾಬೂನು, ಶ್ಯಾಂಪೂ, ಹಲ್ಲುಜ್ಜುವ ಪುಡಿ & ಪೇಸ್ಟ್, ಕಾಡಿಗೆ, ಲಿಪ್‌ಸ್ಟಿಕ್ ಇತ್ಯಾದಿ ಸೌಂದರ್ಯವರ್ಧಕ ವಸ್ತುಗಳು, ಟಿಷ್ಯೂ ಪೇಪರ್, ಗೃಹನಿರ್ಮಾಣಸಂಸ್ಥೆಗಳು, ಮಾಲ್ಗಳು, ಆಸ್ಪತ್ರೆಗಳು, ಔಷಧಿಗಳು, ರೈಲ್ವೇ-ವಿಮಾನಯಾನ ಸಂಸ್ಥೆಗಳಲ್ಲಿನ ಆಹಾರ ತಯಾರಿ, ಪ್ರವಾಸೋದ್ಯಮ, ಸರಕು ಸಾಗಣೆ ಎಲ್ಲವೂ ಹಲಾಲ್ ಪ್ರಮಾಣೀಕೃತವಾಗುತ್ತಿವೆ. ಹಲ್ದಿರಾಮ್’ನ ಶಾಕಾಹಾರಿ ಆಹಾರವೂ, ಮ್ಯಾಕ್‌ಡೊನಾಲ್ಡ್‌ನ ಬರ್ಗರ್ ಹಾಗೂ ಡಾಮಿನೋಸ್‌ನ ಪಿಝ್ಝಾಗಳೂ ಹಲಾಲ್ ಪ್ರಮಾಣೀಕೃತವಾಗಿವೆ! ಅರೆ ಇವೆಲ್ಲಾ ಹೇಗೆ ಹಲಾಲ್ ಆದವು? ಇವುಗಳನ್ನೆಲ್ಲಾ ಹಲಾಲ್ ವ್ಯಾಪ್ತಿಗೆ ತಂದವರು ಮುಂದಕ್ಕೆ ಇವುಗಳ ಉತ್ಪಾದನೆ, ಕಚ್ಚಾವಸ್ತುಗಳ ಸಂಗ್ರಹಣೆ, ಆಯಾ ಕೆಲಸಗಳ ಉಸ್ತುವಾರಿ ಎಲ್ಲವೂ ಶರಿಯಾ ಪಾಲಿಸುವ ಮುಸ್ಲಿಮನಿಂದಲೇ ಆಗಬೇಕು ಎನ್ನುತ್ತಾರೆ. ಹೀಗೆ ಮತೀಯ ಆಧಾರದ ಮೇಲೆ ಆರಂಭವಾದ ಸಮಾನಾಂತರ ಅರ್ಥವ್ಯವಸ್ಥೆ ಏಕಸ್ವಾಮ್ಯವನ್ನು ಸಾಧಿಸಿ ಮೆರೆಯುತ್ತದೆ. ದೇಶವನ್ನು ಪಾಕಿಸ್ತಾನವನ್ನಾಗಿಸುತ್ತದೆ.


               ಭಾರತದಲ್ಲಿ ಸರಕಾರೀ ಮಟ್ಟದಲ್ಲಿ ಈ ಪ್ರಮಾಣಪತ್ರ ಪಡೆಯುವ ನಿಯಮವನ್ನು ಶುರು ಮಾಡಿದವ ಮಣಿಶಂಕರ್ ಅಯ್ಯರ್. ಹೌದು ವೀರ ಸಾವರ್ಕರರನ್ನು ನಿಂದಿಸಿದ್ದ ಅದೇ ದೇಶದ್ರೋಹಿ ಮಣಿಶಂಕರ್ ಅಯ್ಯರ್. ನರೇಂದ್ರ ಮೋದಿಯವರನ್ನು ಸೋಲಿಸಲು ಪಾಕಿಸ್ತಾನದ ಸಹಾಯಹಸ್ತ ಬೇಡಿದ್ದ ಅದೇ ಮಣಿಶಂಕರ್ ಅಯ್ಯರ್. ಮುಸ್ಲಿಮರ ಜೊತೆ ಸೇರಿಕೊಂಡು ಇಂತಹುದೊಂದು ಸಮಾನಾಂತರ ಅರ್ಥವ್ಯವಸ್ಥೆಯನ್ನು ಸೃಷ್ಟಿಸಿದ ಕಾಂಗ್ರೆಸ್ ಇಡೀ ದೇಶಕ್ಕೆ ಹಲಾಲ್ ಉಣಿಸುತ್ತಿದೆ. ಇದು ಹಿಂದೂ ಹಾಗೂ ಕ್ರೈಸ್ತರ ಮೇಲಿನ ಜೆಜಿಯಾ! ಈ ಹಲಾಲ್ ಪ್ರಮಾಣಪತ್ರಕ್ಕಾಗಿ 20,500 ರೂಪಾಯಿ ಹಾಗೂ ಪ್ರತೀವರ್ಷ ನವೀಕರಣಕ್ಕಾಗಿ 15,000 ರೂಪಾಯಿ ಶುಲ್ಕವಿದೆ.  ಅದರ ಮೇಲೆ ಯಾವೆಲ್ಲ ವಸ್ತುಗಳಿಗೆ ಹಲಾಲ್ ಮುದ್ರೆ ಬೇಕೋ ಅದಕ್ಕೆ ಪ್ರತ್ಯೇಕ ಶುಲ್ಕ ತೆರಬೇಕಾಗುತ್ತದೆ. ಒಟ್ಟಾರೆ ಈ ಮೊತ್ತ ವರ್ಷಕ್ಕೆ ಐವತ್ತುಸಾವಿರದಷ್ಟಾಗುತ್ತದೆ. ಇಸ್ಲಾಮೀ ದೇಶಗಳಿಗೆ ರಫ್ತು ಮಾಡುವ ಉತ್ಪಾದನೆಗಳಿಗೆ ‘ಹಲಾಲ್ ಪ್ರಮಾಣಪತ್ರ’ ಇರಲೇಬೇಕಾಗುತ್ತದೆ! ವಿಪರ್ಯಾಸವೆಂದರೆ ತಮ್ಮ ವ್ಯಾಪಾರ ವೃದ್ಧಿಯ ದುರಾಸೆಯಿಂದ ಹಲ್ದಿರಾಮ್, ಪತಂಜಲಿ, ಶ್ರೀಶ್ರೀ, ಬಿಕಾನೇರ್ ಸಹಿತ ಭಾರತದ ಹಲವು ಸಂಸ್ಥೆಗಳು ಈ ಪ್ರಮಾಣಪತ್ರವನ್ನು ಪಡೆದು ಹಿಂದೂಗಳ ಮೇಲೆ ಜಿಹಾದೀ ಸಂಸ್ಕೃತಿಯನ್ನು ಹೇರುತ್ತಿವೆ! ಈ ದೇಶದ ಯಾವುದೇ ಫೈವ್ ಸ್ಟಾರ್ ಹೋಟಲ್ ಹಲಾಲ್ ಪ್ರಮಾಣಪತ್ರವಿಲ್ಲದೆ ಕಾರ್ಯಾಚರಿಸುವುದಿಲ್ಲ. ಹೋಟೆಲ್, ಡಾಬಾ ಮಾತ್ರವಲ್ಲದೆ ಏರ್ ಲೈನ್ಸ್, ಸೈನ್ಯದ ಆಹಾರದಲ್ಲಿಯೂ ಕೂಡಾ ಹಲಾಲ್ ನುಗ್ಗಿದೆ! ತನ್ನನ್ನು ಜಾತ್ಯತೀತ ಎಂದು ಹೇಳಿಕೊಳ್ಳುವ ಹಿಂದಿನ ಕೇಂದ್ರ ಸರಕಾರವು ಭಾರತೀಯ ರೈಲ್ವೆ, ಏರ್ ಇಂಡಿಯಾ ಹಾಗೂ ಪ್ರವಾಸೋದ್ಯಮ ಮಂಡಳಿಯಂತಹ ಸರಕಾರಿ ಸಂಸ್ಥೆಗಳಲ್ಲಿಯೂ ಹಲಾಲ್ ಅನ್ನು ಕಡ್ಡಾಯ ಮಾಡಲು ಅನುಮತಿ ನೀಡಿತ್ತು. ಹೆಚ್ಚೇಕೇ ಸಂಸತ್ತಿನ ಕ್ಯಾಂಟೀನನ್ನು ಹಲಾಲ್ ಮುಕ್ತಗೊಳಿಸಲು ಸ್ಪೀಕರ್ ಓಂ ಬಿರ್ಲಾ ಜೀ ಓಂಕಾರ ಹೇಳಬೇಕಾಯಿತು! ಕಟ್ಟಡವೂ ಹಲಾಲ್ ಪ್ರಮಾಣೀಕೃತವಾಗಬೇಕು ಎಂದು ಕೇರಳದಲ್ಲಿ ಮುಸ್ಲಿಮರು ಬೊಬ್ಬಿರಿಯಲು ಶುರು ಮಾಡಿದ್ದಾರೆ. ಸಿಮೆಂಟ್, ಮರಳು, ಮರ, ಕಬ್ಬಿಣಕ್ಕೂ ಹಲಾಲ್'ಗೂ ಏನು ಸಂಬಂಧ?ಸರಕಾರಗಳೂ ಮತಬ್ಯಾಂಕ್ ಭದ್ರತೆಗೆ ಈ ಹಲಾಲ್'ನ ದಾಸರಾಗಿವೆ. ಕಳೆದ ವರ್ಷ ರಮಝಾನ್ ಸಮಯದಲ್ಲಿ ನ್ಯೂಯಾರ್ಕ್ ಮುನ್ಸಿಪಾಲಿಟಿ 5 ಲಕ್ಷ  ಹಲಾಲ್ ಕಿಟ್ ಗಳನ್ನು ಉಚಿತವಾಗಿ ವಿತರಿಸಿತ್ತು! ಕೊರೋನಾ ವ್ಯಾಕ್ಸೀನ್ ಕೂಡಾ ಹಲಾಲ್ ಆಗಬೇಕೆಂದು ಕೂಗೆದ್ದಿತ್ತು. ಹಲಾಲ್ ಪ್ರಮಾಣಪತ್ರ ಇನ್ನು ಮನುಷ್ಯರಿಗೆ ಮಾತ್ರ ಬಾಕಿ ಅನ್ನುತ್ತೀರಾ? ಮಲೇಶಿಯಾದಲ್ಲಿ ಅದೂ ಶುರುವಾಗಿದೆ. ಇತ್ತೀಚೆಗೆ ಅಲ್ಲಿ ಕಾಮಿಡಿಯನ್ ಒಬ್ಬರೂ ತನಗೂ ಹಲಾಲ್ ಪ್ರಮಾಣಪತ್ರ ಕೊಟ್ಟ ಬಗ್ಗೆ ತಾನು ಈಗ 'ಹಲಾಲ್ ಪ್ರಮಾಣೀಕೃತ ಕಾಮಿಡಿಯನ್' ಎಂದು ವ್ಯಂಗ್ಯವಾಡಿದ್ದರು. ಹಲಾಲ್ ಬ್ಯುಸಿನೆಸ್ ಈಗ 110ಕೋಟಿ ರೂಪಾಯಿಗಳಿಗೇರಿದೆ. ಇದರಿಂದ ಎರಡು ಕೋಟಿಯಷ್ಟು ಹಿಂದೂಗಳು ಕೆಲಸ ಕಳೆದುಕೊಂಡಿದ್ದಾರೆ. ಆ ಜಾಗಕ್ಕೆ ಮುಸ್ಲಿಮರು ಬಂದಿದ್ದಾರೆ.


             ಭಾರತ ಸರ್ಕಾರದ ‘ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ’ ಹಾಗೂ ಅನೇಕ ರಾಜ್ಯಗಳಲ್ಲಿ ‘ಆಹಾರ ಮತ್ತು ಔಷಧಿ ಪ್ರಾಧಿಕರಣ’ ಈ ವಿಭಾಗಗಳು ಇರುವಾಗ ‘ಹಲಾಲ್ ಪ್ರಮಾಣಪತ್ರ’ ನೀಡುವ ಅನೇಕ ಇಸ್ಲಾಮೀ ಸಂಸ್ಥೆಗಳ ಆವಶ್ಯಕತೆ ಏನಿದೆ?  ಜಾತ್ಯತೀತ ಭಾರತದಲ್ಲಿ ಸರಕಾರದ 'ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ(FSSAI)'ದಿಂದ ಪ್ರಮಾಣಪತ್ರವನ್ನು ಪಡೆದ ನಂತರ ಈ ಖಾಸಗೀ ಇಸ್ಲಾಮೀ ಪ್ರಮಾಣಪತ್ರ ಪಡೆಯಲು ಕಡ್ಡಾಯವೇಕೆ? ಈ ಹದಿನೇಳು ಪ್ರತಿಶತ ಜನರ ಮತೀಯ ಆಚರಣೆಯನ್ನು ಬಹುಸಂಖ್ಯಾತರ ಮೇಲೆ ಹೇರುವುದರ ಉದ್ದೇಶವಾದರೂ ಏನು? ‘ಹಲಾಲ್’ ಪದದ ಅರ್ಥ ಇಸ್ಲಾಮ್‌ಗನುಸಾರ ಮಾನ್ಯತೆ ಪಡೆದ ಎಂದು! ಹಾಗಾಗಿ ಈ ‘ಹಲಾಲ್ ಪ್ರಾಮಾಣಪತ್ರ’ ಕೊಡುವವರು ಖಾಸಗಿ ಇಸ್ಲಾಮಿ ಸಂಸ್ಥೆಗಳು! ಹೀಗೆ ‘ಹಲಾಲ್ ಪ್ರಮಾಣೀಕೃತ’ದಿಂದ ಸಿಗುವ ಕೋಟಿಗಟ್ಟಲೆ ಹಣವು ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಗೆ ಸಿಗದೇ ಅದು ಕೆಲವು ಇಸ್ಲಾಮೀ ಸಂಘಟನೆಗಳ ಪಾಲಾಗುತ್ತದೆ. ಈ ಸಂಘಟನೆಗಳು ಭಯೋತ್ಪಾದಕ ಕೃತ್ಯಗಳಲ್ಲಿ ಸಿಲುಕಿದ ಮತಾಂಧರನ್ನು ಬಿಡುಗಡೆ ಮಾಡಲು ಕಾನೂನಿನ ನೆರವು ನೀಡುತ್ತಿವೆ. ಅದೇ ರೀತಿ ಕೇಂದ್ರ ಸರಕಾರವು ಮಾಡಿದ ದೇಶ ಪರವಾದ ಕಾನೂನುಗಳಾದ ಸಿಎಎ, ವಿಧಿ370ರ ರದ್ದತಿ ಮುಂತಾದುವನ್ನು ವಿರೋಧಿಸುವವರಿಗೆ ದಂಗೆಯನ್ನು ಮಾಡಲು ಬೇಕಾದ ಸಹಾಯವನ್ನು ತನುಮನಧನದಿಂದ ಕೊಡುತ್ತವೆ.


            ಭಾರತದಲ್ಲಿ ಹಲಾಲ್ ಅನ್ನು ಪ್ರಾಮಾಣಿಕರಿಸುವ ಸಂಸ್ಥೆ ಜಮಾತ್-ಇ -ಉಲೆಮಾ ಎಂಬ ಇಸ್ಲಾಮಿಕ್ ಸಂಸ್ಥೆ. ಹಲಾಲ್ ಪ್ರಮಾಣ ಪತ್ರ ಪಡೆಯಲು ಮತ್ತು ಅದನ್ನು ನವೀಕರಿಸಲು ಕಟ್ಟಬೇಕಾದ ಶುಲ್ಕದಿಂದ ಬಂದ ಹಣವನ್ನು ಈ ಸಂಸ್ಥೆ ಭಯೋತ್ಪಾದಕ ಚಟುವಟಿಕೆಗಳಿಗೆ ಹಂಚುತ್ತದೆ. ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಕಾನೂನು ರೀತ್ಯಾ ನೆರವು ನೀಡುವುದು ಇದರ ಒಂದು ಭಾಗ. ಹಲಾಲ್ ಉದ್ಯಮದಿಂದ ಬಂದ ಹಣದ ಒಂದು ಪಾಲು ಇಸ್ಲಾಂನ ಧಾರ್ಮಿಕ ಕಾರ್ಯಗಳಲ್ಲಿ ಬಳಕೆಯಾಗಬೇಕು ಎನ್ನುವುದು ಮುಸ್ಲಿಮರ ನಿಯಮ. ಆ ಹಣದಲ್ಲಿ ನಡೆಯುವ ಮದರಾಸವೊಂದು ಅಲ್ಲಿರುವ ಪುಟ್ಟ ಮಕ್ಕಳ ತಲೆಯಲ್ಲಿ ಕಾಫೀರರ ವಿರುದ್ಧ ದ್ವೇಷವನ್ನು ಕಟ್ಟಿಕೊಡುತ್ತದೆ. ನಮ್ಮ ಕಾಲಮೇಲೆ ನಾವೇ ಚಪ್ಪಡಿ ಎಳೆದುಕೊಳ್ಳುವುದು ಎಂದರೆ ಇದೇ ತಾನೇ? ಮುಸಲ್ಮಾನರು ಮಸೀದಿಗಳಿಗೆ ನೀಡುವ ಝಕಾತ್(ದೇಣಿಗೆ)ನ್ನು ಈ ರೀತಿಯಾದ ದೇಶವಿರೋಧಿ ಚಟುವಟಿಕೆ ಗಳಿಗೆ ಬಳಸುವುದು ಅನವರತವೂ ದೃಢಪಟ್ಟ ಸಂಗತಿ. 2016 ನೆ ಇಸವಿಯಲ್ಲಿ ಇದೇ ಸಂಘಟನೆಯ ಕಾನೂನು ಘಟಕದ ಅಧ್ಯಕ್ಷ ಗುಲ್ಜಾರ್ ಅಜ್ಮಿ, "ಜಿಹಾದ್ನಿಂದ ಜೈಲಿನಲ್ಲಿ ಕೊಳೆಯುತ್ತಿರುವ ನಮ್ಮ ಹುಡುಗರನ್ನು ರಕ್ಷಿಸಲು ಈ ರೀತಿಯಾದ ಹಣವನ್ನು ಬಳಸಿಕೊಳ್ಳುತ್ತೇವೆ. ಇದಕ್ಕೆ ಅಲ್ಲಾಹುವಿನ ಸಮ್ಮತಿಯಿದೆ" ಎಂದಿದ್ದ. ಹಲಾಲ್ ಪ್ರಮಾಣಪತ್ರ ನೀಡುವ ಇಂತಹ ದೇಶ ದ್ರೋಹಿ ಸಂಘಟನೆಗಳು 108 ಭಯೋತ್ಪಾದಕರನ್ನು ಜೈಲಿನಿಂದ ಬಿಡುಗಡೆಗೊಳಿಸಿದೆ. ಹಲಾಲ್, ಝಕಾತ್'ಗಳಿಂದ ಬಂದ ಎರಡು ಕೋಟಿಗೂ ಹೆಚ್ಚು ಹಣವನ್ನು ಇದಕ್ಕೆ ನಿಯೋಗಿಸಲಾಗಿದೆ. ಅಸೋಸಿಯೇಷನ್ ಆಫ್ ಮುಸ್ಲಿಮ್ ಪ್ರೊಫೆಷನಲ್ಸ್ ಎಂಬ  ಸಂಘಟನೆಯು ಮಾಡಿದ ಸರ್ವೆ(2016)ಯ ಪ್ರಕಾರ ಭಾರತದಲ್ಲಿರುವ 17.18 ಕೋಟಿ ಮುಸ್ಲಿಂ ಜನಸಂಖ್ಯೆಯಲ್ಲಿ ಕೇವಲ 10% ನಷ್ಟು ಜನರು ಝಕಾತ್ ಕಟ್ಟಿದರೂ, ಬರೋಬ್ಬರಿ 7,500 ಕೋಟಿಯಷ್ಟು ಹಣ ಸಂಗ್ರಹವಾಗುತ್ತದೆ. ಜನವರಿ 1, 2019 ರಂದು NIA ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲಿ ಭಯೋತ್ಪಾದರನ್ನು ಹೆಡೆಮುರಿಕಟ್ಟುವುದರಲ್ಲಿ ಯಶಸ್ವಿಯಾಯಿತು, ಆದರೆ ಇದೇ ಜಮಾತ್ ಉಲೆಮಾ ಇ ಹಿಂದ್ ಸಂಘಟನೆ ಇವರಿಗೆ ಕಾನೂನು ನೆರವು ನೀಡಿ ಪ್ರಕರಣದಿಂದ ಖುಲಾಸೆ ಗೊಳಿಸಿತು. ಇಡೀ ದೇಶದಲ್ಲಿ ಕೊರೊನ ಹರಡಿಸಿದ ತಬ್ಲೀಘಿ ಜಮಾತಿಗಳ ಪರವಾಗಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದೂ ಇದೇ ಸಂಸ್ಥೆ. ಪಶ್ಚಿಮ ಬಂಗಾಳದ ಉಲೆಮಾ ರಾಜ್ಯಾಧ್ಯಕ್ಷ ಸಿದ್ದಿಕುಲ್ಲಾ ಎನ್.ಆರ್.ಸಿ ಹಾಗೂ ಸಿಎಎಗೆ ಯಾವುದೇ ದಾಖಲೆಗಳನ್ನು ನೀಡಬೇಡಿ ಎಂದು ಮುಸ್ಲಿಮರಿಗೆ ಹೇಳಿದ್ದ.


              2020ರ ಕ್ರಿಸ್ಮಸ್ ಸಮಯದಲ್ಲಿ ಹಲಾಲ್ ವಿರುದ್ಧ ಕೇರಳದ ಕ್ರೈಸ್ತರು ದನಿ ಎತ್ತಿದರು. ಯೇಸುವಿನ ಜನ್ಮ ದಿನದಂದು ನಮಗೇಕೆ ಹಲಾಲ್ ಮಾಂಸ ಸರಬರಾಜು ಮಾಡುತ್ತೀರಿ ಎಂದು ಸರಕಾರವನ್ನು ಪ್ರಶ್ನಿಸಿದಾಗ ಪಿಣರಾಯಿ ಸರಕಾರ ಆ ದನಿಯ ಸದ್ದಡಗಿಸಲು ಯತ್ನಿಸಿತು. ಕ್ರೈಸ್ತರ ಸಂಘಟನೆಯಾದ ‘ಚರ್ಚ್ಸ್ ಆಕ್ಸಲರಿ ಆಫ್ ಸೋಷಿಯಲ್ ಆಕ್ಷನ್’ ‘ಹಲಾಲ್ ಮಾಂಸವನ್ನು ಸೇವಿಸದಂತೆ” ಕ್ರೈಸ್ತರಿಗೆ, ಕರೆ ನೀಡಿತ್ತು. ಹಲಾಲ್ ಮಟನ್ ವಿಷಕಾರಿ. ಪ್ರಾಣಿಯು ನರಳಿ ನರಳಿ ನಿಧಾನವಾಗಿ ಸಾಯುವಾಗ ಅದರ ಮೆದುಳು ಕೆಲಸ ಮಾಡುತ್ತಿರುವುದರಿಂದ ಕೆಟ್ಟ ಭಾವನೆಗಳು ಪ್ರವಹಿಸುತ್ತವೆ. ನರವ್ಯವಸ್ಥೆ, ಅಂಗಾಂಗಗಳು, ಮೂಳೆಗಳು ಮತ್ತು ದೇಹದ ಎಲ್ಲಾ ಭಾಗಗಳು ಬದುಕುಳಿಯುವ ಹಂಬಲದಿಂದ ಹಿಗ್ಗಿಸಲು ಪ್ರಯತ್ನಿಸುತ್ತವೆ. ಆದ್ದರಿಂದ ಸಂಪೂರ್ಣ ದೇಹವು ಹೆಣಗಾಡಿ ನರಳಿ ಪ್ರಾಣಿಯು ಸಾಯುತ್ತದೆ. ಇಂತಹಾ ಮಾಂಸವನ್ನು ತಿನ್ನುವುದರಿಂದ ಆ ಭಾವನೆಗಳು, ಆ ಕ್ರೌರ್ಯ ತಿಂದವನ ದೇಹವನ್ನು ಸೇರುತ್ತವೆ. ಅವನ ಪ್ರವೃತ್ತಿಯೂ ಕ್ರೌರ್ಯವಶವಾಗುತ್ತದೆ. ಭಾರತ ಸರ್ಕಾರದ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ(APEDA)ವು  ಹಲಾಲ್ ಪದವನ್ನು ಸರಕಾರಿ ದಸ್ತಾವೇಜ್ 'ರೆಡ್ ಮೀಟ್ ಮ್ಯಾನ್ಯುಯೆಲ್' ನಿಂದ ತೆಗೆದುಹಾಕಿದೆ. ಸರ್ಕಾರದ ಈ ನಡೆಯಿಂದ 'ಹಲಾಲ್ ಸರ್ಟಿಫಿಕೇಟ್' ನ ಅವಶ್ಯಕತೆಯು ಇಲ್ಲವಾಗಿ ಎಲ್ಲಾ ರೀತಿಯ ಅಧಿಕೃತ ಮಾಂಸ ವ್ಯಾಪಾರಿಗಳು ತಮ್ಮ ನೋಂದಣಿಯನ್ನು ಮಾಡಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಇಸ್ಲಾಂ ಸಂಸ್ಥೆಗಳ 'ಹಲಾಲ್ ಪ್ರಮಾಣಪತ್ರ'ದ ಆಟ ಅಂತ್ಯವಾದಂತಾಯಿತು. ಈ ಕಾರಣಕ್ಕೆ ನಾವು ಕೇಂದ್ರ ಭಾಜಪಾ ಸರಕಾರವನ್ನು ಅಭಿನಂದಿಸಬೇಕು.


ಭಾಗ್ಯನಗರದ ಜನನವಾದ ಬಗೆ…..

ಭಾಗ್ಯನಗರದ ಜನನವಾದ ಬಗೆ…..


               "ಗೋಲ್ಕೊಂಡಾ ಕೋಟೆಯ ಭೌತಿಕ ಪುರಾವೆಗಳನ್ನು ಮರುಪರಿಶೀಲಿಸಿದಾಗ ಕೋಟೆಯ ಅಂತರತಮ ಆವರಣದ ಗೋಡೆಗಳು ಹದಿಮೂರು ಅಥವಾ ಹದಿನಾಲ್ಕನೆಯ ಶತಮಾನದ ಆರಂಭಿಕ ಭಾಗಕ್ಕೆ ಚೆನ್ನಾಗಿ ಹೊಂದುತ್ತವೆ. ಈ ಗೋಡೆಗಳು ಕೋಟೆಗೆ ಮತ್ತೆ ಜೋಡಿಸಲ್ಪಟ್ಟ(ಶಾಸನದಲ್ಲಿ ಉಲ್ಲೇಖಿತವಾದ)ವುಗಳಿಂದ ಪ್ರತ್ಯೇಕತೆಯನ್ನು ತಮ್ಮ ವಿಶಿಷ್ಟತೆಯಿಂದಾಗಿ ಕಾಯ್ದುಕೊಂಡಿವೆ. ಇವು ಎರಡು ಪಕ್ಕದ ಆವರಣಗಳನ್ನು 'ಬಾಲ ಹಿಸಾರ್'ನ ಮೇಲ್ಭಾಗದೊಂದಿಗೂ, ಮೂರನೆಯದನ್ನು ಪರ್ವತದ ತಳದೊಂದಿಗೂ ರೂಪಿಸಿವೆ. ಗಾರೆಯಿಲ್ಲದೆ ಚೌಕ ಹಾಗೂ ಆಯತಾಕಾರವಾಗಿ ಕತ್ತರಿಸಲ್ಪಟ್ಟ ಬೃಹದಾಕಾರದ ಗ್ರಾನೈಟ್ ಶಿಲೆಗಳಿಂದ ಇವು ಮಾಡಲ್ಪಟ್ಟಿವೆ. ನೆಲ ಭಾಗವೂ ಅನಿಯಮಿತವಾಗಿ ಕತ್ತರಿಸಿದ ಆದರೆ ಸರಿಯಾಗಿ ಜೋಡಿಸಲ್ಪಟ್ಟ ಗ್ರಾನೈಟ್ ಶಿಲೆಗಳಿಂದ ಮಾಡಲ್ಪಟ್ಟಿವೆ. ಪರ್ವತದ ಅನಿಯಮಿತ ಆಕಾರದ ಕಲ್ಲುಗಳ ಜೊತೆ ಕೌಶಲ್ಯಪೂರ್ಣವಾಗಿ ಈ ಶಿಲೆಗಳನ್ನು ಜೋಡಿಸಿ ಗೋಡೆಗಳನ್ನು ಪರ್ವತದ ಮೇಲೆ ಹಾಗೂ ಸುತ್ತ ಕಟ್ಟಲಾಗಿದೆ. ಮುಂದಿನ ಯಾವುದೇ ನಿರ್ಮಾಣದಲ್ಲೂ ಈ ಗೋಡೆಗಳ ಮೇಲ್ಭಾಗವನ್ನು ಮಾರ್ಪಡಿಸಿಲ್ಲ. ಕೋಟೆಗಳ ಮೇಲೆ ಆಯತಾಕಾರದ ಬುರುಜುಗಳನ್ನು ಅಲ್ಲಲ್ಲಿ ಇಡಲಾಗಿದೆ. ಕೌಶಲ್ಯಪೂರ್ಣವಾಗಿ ಕತ್ತರಿಸಲ್ಪಟ್ಟ ಶಿಲೆಗಳಲ್ಲಿ ಚೌಕಾಕಾರದ ರಂಧ್ರಗಳನ್ನು ಕೊರೆದು ಅಲ್ಲಿ ಪರ್ವತದ ಕಲ್ಲುಗಳಿಂದ ಗೋಡೆಯನ್ನು ಪ್ರತ್ಯೇಕಿಸುವ ಸಲುವಾಗಿ ಮರ/ಲೋಹದ ತುಂಡುಗಳನ್ನು ತೂರಿಸಲಾಗಿದೆ.....ಹೀಗೆ ಒಟ್ಟಾರೆಯಾಗಿ ಈ ಎಲ್ಲಾ ಗುಣಲಕ್ಷಣಗಳು ಬಾಲ ಹಿಸಾರ್ ನ ಮೇಲ್ಭಾಗದ ಗೋಡೆಗಳನ್ನು ಕೋಟೆಯ ಉಳಿದ ರಚನೆಗಳಿಂದ ಪ್ರತ್ಯೇಕಿಸುತ್ತವೆ. ಇದರ ಹೊರ ಆವರಣದ ಗೋಡೆಯ ಕಾಲ ಹದಿನಾರನೆಯ ಶತಮಾನ(ಶಾಸನಾಧರಿತ)" ಇದು ಪುರಾತತ್ವ ಶಾಸ್ತ್ರಜ್ಞ ಮಣಿಕಾ ಸರ್ದಾರ್ ನಿರೂಪಿಸಿರುವ ವಿವರಗಳು. ಅಲ್ಲಿಗೆ ಗೋಲ್ಕೊಂಡಾ, ಸುಲ್ತಾನ್ ಖುಲಿಯಿಂದ ನಿರ್ಮಾಣಗೊಂಡಿದೆಯೆಂಬ ತಿರುಚುವ ಇತಿಹಾಸಕಾರರ ವಾದ ಸೋತು ಹೋಯಿತು. ಆತ ಹುಟ್ಟುವ ಮೊದಲೇ ಆ ಕೋಟೆಯಿತ್ತು. ಹಾಗಾದರೆ ಇದರ ನಿರ್ಮಾಣ ಮಾಡಿದ್ದು ಯಾರು? ಹದಿಮೂರನೆಯ ಶತಮಾನದಲ್ಲಿ ಇದು ಯಾರ ವಶದಲ್ಲಿತ್ತು? ಇದಕ್ಕೂ ಉತ್ತರ ಸಿಕ್ಕಿದೆ.


            ಹನ್ನೆರಡು - ಹದಿಮೂರನೇ ಶತಮಾನದಲ್ಲಿ ಆಂಧ್ರದಲ್ಲಿ ಪ್ರಬಲವಾಗಿದ್ದ ರಾಜವಂಶ ಕಾಕತೀಯರದ್ದು. ಗೋಲ್ಕೊಂಡಾ ಅವರ ವಶದಲ್ಲಿತ್ತು. ಅಲ್ಲಿನ ಕೋಟೆಯನ್ನು ನಿರ್ಮಿಸಿದವರು ಇವರೇ. ಗಣಪತಿ ದೇವ ಈ ಸಾಮ್ರಾಜ್ಯದ ಸ್ಥಾಪಕ.  ಬಾಲ್ಯದಲ್ಲಿಯೇ ದೇವಗಿರಿಯ ಯಾದವರಿಗೆ ಸೆರೆಸಿಕ್ಕಿ ಬಳಿಕ ಬಿಡಿಸಿಕೊಂಡು ಸ್ವತಂತ್ರವಾದ ಸಾಮ್ರಾಜ್ಯವನ್ನು ಸ್ಥಾಪಿಸಿದ.ಅದು ಶತಮಾನಕ್ಕೂ ಹೆಚ್ಚು ಕಾಲ ಬೆಳೆದು ವೈಭವದ ದಿನಗಳನ್ನು ಕಂಡುದದರ ಹಿಂದೆ ಗಣಪತಿದೇವನ ಪರಿಶ್ರಮವಿದೆ. ಗೋಲ್ಕೊಂಡಾ ಕೋಟೆ ಬಹುಷಃ ಇವನಿಂದಲೇ ನಿರ್ಮಾಣಗೊಂಡಿರಬೇಕು. ಹೇಗಿದ್ದರೂ ಈ ಕೋಟೆ ಕಾಕತೀಯರ ಕಾಲದಲ್ಲೇ ಆಗಿತ್ತು ಎಂಬುದಕ್ಕೆ ಮೊಘಲ್ ಚರಿತ್ರೆಗಳಾದ ಮಾಸಿರ್-ಐ-ಆಲಮ್‌ಗಿರಿ ಮತ್ತು ಮುಂಟಖಾಬ್ ಅಲ್ ಲುಬಾಬ್'ಗಳಲ್ಲೇ ಉಲ್ಲೇಖಗಳಿವೆ. ಅಲ್ಲದೇ ಹಿಂದೂ ರಾಜರಿಂದ ಅದು ಮುಸ್ಲಿಂ ದೊರೆಗಳ ಕೈಗೆ ಸಿಕ್ಕಿದುದನ್ನೂ ಅವು ಉಲ್ಲೇಖಿಸಿವೆ. "ಹಿಂದೆ ಮಂಗಲ್ ಎಂದು ಕರೆಯಲ್ಪಡುತ್ತಿದ್ದು ದೇವರಾಯ ಎಂಬ ಹಿಂದೂ ಅರಸನಿಂದ ಆಳಲ್ಪಡುತ್ತಿದ್ದು, ಅವನಿಂದ ಬಹಮನಿಗಳು ಕಿತ್ತುಕೊಂಡರು. ಬಳಿಕ ಸುಲ್ತಾನ್ ಮಹಮ್ಮದ್ ಬಹಮನಿಯ ಗುಲಾಮನಾದ ಅಲಿ ನಖಿ ಕುತುಬ್ ಮುಲ್ಕ್'ನ ಸ್ವಾಧೀನಕ್ಕೆ ಬಂತು" ಎಂದು ಇವುಗಳಲ್ಲಿ ಉಲ್ಲೇಖಿಸಲಾಗಿದೆ.


              ಕುತುಬ್ ಶಾಹಿ ರಾಜವಂಶವನ್ನು ಸ್ಥಾಪಿಸಿದವ ಸುಲ್ತಾನ್ ಖುಲಿ ಕುತುಬ್ ಮುಲ್ಕ್ (ಸಾ.ಯು. 1470-1543). ಉಳಿದ ಮುಸ್ಲಿಮ ಆಕ್ರಮಣಕಾರರಂತೆ ಭಾರತದಲ್ಲಿನ ಅಪಾರ ಸಂಪತ್ತು ಹಾಗೂ ಅವಕಾಶಗಳ ಸುದ್ದಿ ಕೇಳಿ ಬಂದವನೀತ. ಬಂದದ್ದು ಇರಾನಿನ ಹಮದನ್'ನಿಂದ. ಭಾರತದ ಪಶ್ಚಿಮ ಕರಾವಳಿಯ ಚೌಲ್ ಎಂಬ ಬಂದರು ನಗರಕ್ಕೆ ಕಾಲಿಟ್ಟ ಈತ, ಒಂದು ಮುಷ್ಟಿ ಕಪ್ಪು ಮಣ್ಣನ್ನು ಕೈಯಲ್ಲಿ ಹಿಡಿದು ಭಾರತದಾದ್ಯಂತ ಶಿಯಾ ಮತವನ್ನು ಹಬ್ಬಿಸುವುದಾಗಿ ಪ್ರತಿಜ್ಞೆ ಮಾಡಿದ. ಬಹಮನಿ ರಾಜ ಶಿಹಾಬುದ್ದೀನ್ ಮಹಮೂದ್ ಕೈಕೆಳಗೆ ಚಾಕರಿಗೆ ಆರಂಭಿಸಿದ ಆತ ಶೀಘ್ರವಾಗಿ ಪ್ರಮುಖ ಹುದ್ದೆಗಳನ್ನು ಪಡೆಯುತ್ತಾ ತೆಲಿಂಗ(ಈಗಿನ ತೆಲಂಗಾಣದ ಮೂಲ) ದೇಶದ ರಾಜ್ಯಪಾಲನಾದ. 1518ರಲ್ಲಿ ಬಹಮನಿ ಸುಲ್ತಾನ ಮರಣ ಹೊಂದಿದ ಬಳಿಕ, ಸುಲ್ತಾನ್ ಖುಲಿ ಗೋಲ್ಕೊಂಡದಲ್ಲಿ ಸ್ವತಂತ್ರ ಆಡಳಿತಗಾರನಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡ. ಗೋಲ್ಕೊಂಡಾ ಕೋಟೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿದ. ಕೆಲವು ಆವರಣಗಳನ್ನು ಸೇರಿಸಿದ. ಕೋಟೆಯ ಕೇಂದ್ರದಲ್ಲಿದ್ದ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಿದ. ಇವತ್ತಿಗೂ ಹೈದರಾಬಾದಿನ ಹಳೆಯ ಮಸೀದಿ ಎಂದು ಕರೆಯಲ್ಪಡುವ ಜಾಮಿ ಮಸೀದೀ ಇದೇ!


           ಗಣಪುರದ ಕೋಟಗುಡಿಯ ದ್ವಾರದ ಪಡಿಯಚ್ಚಿನಂತಿರುವ ಹದಿಮೂರನೆಯ ಶತಮಾನದ ದ್ವಾರ, ಸ್ತಂಭಗಳು, ಬಳ್ಳಿ, ರತ್ನ-ವಜ್ರ, ಶಾಖೆಗಳ ಕೆತ್ತನೆಗಳು, ಬಂಡೆಯಲ್ಲಿ ಕೆತ್ತಲಾದ ಶಿಲ್ಪ ಎಲ್ಲವೂ ಅಲ್ಲಿ ದೇವಾಲಯವಿದ್ದುದನ್ನು, ಬಳಿಕ ನಾಶ ಮಾಡಿ ಮಸೀದಿಯಾಗಿಸಿದುದನ್ನು ಸಾರಿ ಹೇಳುತ್ತವೆ. ಬೆಟ್ಟದ ದೇವಾಲಯವನ್ನು ತಾರಾಮತಿ ಮಸೀದಿಯಾಗಿ ಪರಿವರ್ತಿಸಲಾಯಿತು. ಬಳಿಕ ಅಕ್ಕಣ್ಣ-ಮಾದಣ್ಣ ದೇವಸ್ಥಾನವನ್ನು ಔರಂಗಜೇಬನು ನಾಶಪಡಿಸಿದನು. ಆದಾಗ್ಯೂ, ಗುಹಾ ದೇವಾಲಯಗಳು ಇಂದಿಗೂ ಉಳಿದುಕೊಂಡಿವೆ. ಗೋಲ್ಕೊಂಡ ಕೋಟೆಯೊಳಗೆ ಇಂದಿಗೂ ಜಗದಂಬಾ ಗುಹಾ ದೇವಾಲಯವಿದೆ.




            ಯಾವ ಹಿಂದೂ ದೇವಾಲಯವನ್ನು ಸುಲ್ತಾನ್ ಖುಲಿ ಮಸೀದಿಯಾಗಿ ಪರಿವರ್ತಿಸಿದನೋ ಅಲ್ಲಿ ಆತ ನಮಾಜ್ ಮಾಡುತ್ತಿದ್ದಾಗ ಆತನ ಮಗ ಜಮ್ಶೆಡ್ ಖುಲಿ ಅವನನ್ನು ಇರಿದು ಕೊಂದ. ಬಳಿಕ ಸಿಂಹಾಸನವನ್ನೂ ಆಕ್ರಮಿಸಿಕೊಂಡ. ತನ್ನ ಪಟ್ಟಕ್ಕೆ ಕುತ್ತು ತರಬಲ್ಲನೆಂದು ಸಹೋದರ ಇಬ್ರಾಹಿಂ ಖುಲಿಯನ್ನು ಕೊಲ್ಲಿಸಲು ಯತ್ನಿಸಿದ. ಹೆದರಿದ ಇಬ್ರಾಹಿಮ್ ಖುಲಿ ಪ್ರಬಲ ಹಿಂದೂ ಸಾಮ್ರಾಜ್ಯ ವಿಜಯನಗರಕ್ಕೆ ಪಲಾಯನ ಮಾಡಿದ. ಕೃಷ್ಣದೇವರಾಯನ ಅಳಿಯ ರಾಮರಾಯ ಆತನಿಗೆ ಏಳು ವರ್ಷಗಳಷ್ಟು ದೀರ್ಘ ಕಾಲ ಆಶ್ರಯ ಕೊಟ್ಟ. ಮಾತ್ರವಲ್ಲ ಜಹಗೀರುಗಳನ್ನೂ ದಯಪಾಲಿಸಿದ. ಜಗಮಗಿಸುವ ಹಿಂದೂ ಸ್ವರ್ಣ ಸಾಮ್ರಾಜ್ಯವನ್ನು ಸ್ಥಾಪಿಸುವ ಉದ್ದೇಶ ಹೊತ್ತು ಎದ್ದಿದ್ದ ವಿಜಯನಗರ ತನ್ನ ಅರಸರ ಸೆಕ್ಯುಲರ್ ನೀತಿಯಿಂದ ತನ್ನ ಅವಸಾನದ ಬೀಜವನ್ನೂ ಒಡಲೊಳಗೆ ಹೊತ್ತುಕೊಂಡಿತ್ತು. ಬುಕ್ಕದೇವರಾಯನ ಕಾಲದಲ್ಲೇ ಅಲ್ಲೊಂದು ಮಸೀದಿ ನಿರ್ಮಾಣವಾಗಿತ್ತು. ಮುಸ್ಲಿಮರಿಗೆ ಹಿಂದೂ ರಾಜನನ್ನು ಗೌರವಿಸುವ ಶಂಕೆ ಬಂದಾಗ ಇದನ್ನು ನೋಡಿಯಾದರೂ ಗೌರವಿಸಲಿ ಎಂದು ಆಸ್ಥಾನದಲ್ಲಿ ಖುರಾನಿನ ಪ್ರತಿಯೊಂದನ್ನು ಇಟ್ಟುಕೊಂಡಿದ್ದರು. ಅಳಿಯ ರಾಮರಾಯನ ಕಾಲದಲ್ಲಂತೂ ಈ ಸೆಕ್ಯುಲರುತನ ಮೇರೆ ಮೀರಿತು. ಆಗ ಸೈನ್ಯದಲ್ಲಿ ಮುಸ್ಲಿಮರ ಜಮಾವಣೆಯೂ ಜಾಸ್ತಿಯಾಯಿತು. ರಾಜ್ಯದಲ್ಲಿ ಮಸೀದಿಗಳ ಸಂಖ್ಯೆಯೂ ಬೆಳೆಯಿತು. ಮುಸ್ಲಿಮರಿಗೆಂದೇ ಮಾರುಕಟ್ಟೆ ಜಾಗವೂ ದೊರಕಿತು. ತನ್ನ ಸಹೋದರ ಹಾಗೂ ಆಸ್ಥಾನವಾಸಿಗಳ ವಿರೋಧದ ನಡುವೆಯೂ ಅವರಿಗೆ ಪ್ರಾಣಿ(ಗೋವು?) ಹತ್ಯೆಗೆ ಅವಕಾಶವನ್ನೂ ರಾಮರಾಯ ಮಾಡಿಕೊಟ್ಟಿದ್ದ. ಯಾವ ಸಾಮ್ರಾಜ್ಯ ಮತಾಂಧತೆಯನ್ನು ಮಣ್ಣು ಮುಕ್ಕಿಸಲು ಮಣ್ಣಿನಿಂದ ಎದ್ದು ನಿಂತಿತ್ತೋ ಅಲ್ಲಿಯೇ ಮೈಮರೆವೂ ಆವರಿಸಿತ್ತು. ಇಬ್ರಾಹಿಮ್ ಖುಲಿಯ ವಿಚಾರದಲ್ಲಿ ಆದದ್ದೂ ಅದೇ. ಆತನಿಗೆ ಭಾಗೀರಥಿ ಎನ್ನುವ ರಾಜಪರಿವಾರದ ಹುಡುಗಿಯನ್ನು ಮದುವೆ ಮಾಡಿಕೊಡಲಾಯಿತು. ರಾಮರಾಯನಂತೂ ಆತನನ್ನು ಫರ್ಜಾಂಡ್' (ಮಗ) ಎಂದೇ ಸಂಬೋಧಿಸುತ್ತಿದ್ದ.


          ಜಮ್ಷೆಡ್ ಸತ್ತ ಬಳಿಕ ಗೋಲ್ಕೊಂಡಾವನ್ನು ಗೆಲ್ಲಲು ತನ್ನ ಫರ್ಜಾಂಡ್ ಇಬ್ರಾಹಿಂನಿಗೆ ರಾಮರಾಯ ಸಹಾಯವನ್ನು ಮಾಡಿದ. ಆ ಯುದ್ಧದಲ್ಲಿ, ರಾಮರಾಯರ ಆಶ್ರಯದಲ್ಲಿ ಇಬ್ರಾಹಿಂಗೆ ಹಿಂದೂಗಳ ಅಪಾರ ಬೆಂಬಲವೂ ದೊರಕಿತು ಎಂಬುದನ್ನು ಗಮನಿಸಬೇಕು. ಗೋಲ್ಕೊಂಡಕ್ಕೆ ಹೋಗುವ ದಾರಿಯಲ್ಲಿ ಕೊಯಿಲ್ಕೊಂಡ ಕೋಟೆಯಲ್ಲಿ, ಹಿಂದೂಗಳು ಅವನಿಗೆ ನಿಷ್ಠೆ ಮತ್ತು ಬೆಂಬಲವನ್ನು ಸೂಚಿಸುವ ಪ್ರತಿಜ್ಞೆ ಮಾಡಿದರು. ಕೊಯಿಲ್‌ಕೊಂಡ ಶಾಸನದಲ್ಲಿ, ಹಿಂದೂಗಳು "ನಾವು ಇಬ್ರಾಹಿಂ ಖುಲಿಯನ್ನು ಬೆಂಬಲಿಸುವ ಪ್ರತಿಜ್ಞೆಯನ್ನು ಮಾಡುತ್ತಿದ್ದೇವೆ. ನಮ್ಮಲ್ಲಿ ಯಾರಾದರೂ ಈ ವಾಗ್ದಾನವನ್ನು ಮುರಿದರೆ ವಾರಣಾಸಿಯಲ್ಲಿ ಹಸುಗಳು ಮತ್ತು ಬ್ರಾಹ್ಮಣರನ್ನು ಕೊಲೆ ಮಾಡಿದ ಸಮಾನವಾದ ಪಾಪಕ್ಕೆ ಗುರಿಯಾಗುತ್ತಾರೆ" ಎಂದು ಭರವಸೆ ನೀಡಿದರು. ಮಾತ್ರವಲ್ಲದೆ ಅದೇ ಇಬ್ರಾಹಿಂನನ್ನು ಮಲ್ಕಿಭಾ (ರಾಮ) ಎಂದು ಕರೆಯಲಾಯಿತು, (ಮಲಿಕ್) ಇಬ್ರಾಹಿಂನನ್ನು ಭಗವಾನ್ ರಾಮನೊಂದಿಗೆ ಸಮೀಕರಿಸಲಾಯಿತು. ರಾಜನೊಬ್ಬ ಮೂರ್ಖ ಹಾಗೂ ಸೆಕ್ಯುಲರ್ ಚಿಂತಕನಾದಾಗ ಯಾವೆಲ್ಲಾ ಅಪಸವ್ಯಗಳು ಆಗಬಹುದೋ ಅದೆಲ್ಲವೂ ಆಯಿತು!


            ಆದರೆ ಎಲ್ಲಾ ಮುಸ್ಲಿಮರ ಹುಟ್ಟುಗುಣದಂತೆಯೇ ಉಪಕಾರ ಸ್ಮರಣೆ ಇಬ್ರಾಹಿಂನಲ್ಲಿ ಉಳಿಯಲಿಲ್ಲ. ರಾಮರಾಯರು ಅಹ್ಮದ್ ನಗರದ ಮೇಲೆ ದಂಡೆತ್ತಿ ಹೋದಾಗ ಆ ರಾಜ್ಯವನ್ನು ಗೆದ್ದು ಆತನೆಲ್ಲಿ ಬಲಿಷ್ಠನಾಗುತ್ತಾನೋ ಎಂಬ ಹೊಟ್ಟೆ ಉರಿಯಿಂದ ಹಳೆಯ ದ್ವೇಷವನ್ನು ಮರೆತು ಅಹ್ಮದ್ ನಗರದ ಸುಲ್ತಾನ ನಿಜಾಂಷಾನಿಗೆ ಇಬ್ರಾಹಿಂ ಬೆಂಬಲ ನೀಡಿದ. ಇದರಿಂದ ಉರಿದೆದ್ದ ರಾಮರಾಯರು ಕಲ್ಯಾಣಿಕೋಟೆಯ ಮೇಲೆ ದಂಡೆತ್ತಿ ಹೋದ ಸಂದರ್ಭದಲ್ಲಿ ಗೋಲ್ಕೊಂಡಾ ರಾಜ್ಯವನ್ನು ಧೂಳೀಪಟ ಮಾಡಿ ಇಬ್ರಾಹಿಂನಿಗೆ ಪಾಠ ಕಲಿಸಿದರು. ಪಾನ್ ಗಲ್, ಗಣಪುರಗಳನ್ನು ರಾಮರಾಯರಿಗೆ ಅರ್ಪಿಸಿ ಇಬ್ರಾಹಿಂ ಸಂಧಿ ಮಾಡಿಕೊಳ್ಳಬೇಕಾಯಿತು. ಇಷ್ಟಾದ ಮೇಲೂ ಇಬ್ರಾಹಿಂನ ಜನ್ಮಜಾತ ಬುದ್ಧಿ ಬದಲಾಗಲಿಲ್ಲ. ರಾಮರಾಯನನ್ನು ಸದೆಬಡಿಯಲು ನಾವೆಲ್ಲಾ ಒಟ್ಟಾಗಬೇಕು ಎಂಬ ಸಂದೇಶ ತನ್ನ ಶತ್ರು ಬಿಜಾಪುರದ ಆದಿಲ್ ಷಾನಿಂದ ಬಂದದ್ದೇ ತಡ ಜೊಲ್ಲು ಸುರಿಸಿಕೊಂಡು ಸನ್ನದ್ಧನಾದ. ಹೊಸ ಸ್ನೇಹವನ್ನು ನೆಂಟಸ್ತನದಿಂದ ಬಲಪಡಿಸಿಕೊಳ್ಳಲು ತನ್ನ ಮಗಳನ್ನು ಆದಿಲ್ ಷಾನಿಗೂ ಅವನ ತಂಗಿಯನ್ನು ತನ್ನ ಮಗನಿಗೂ ತಂದುಕೊಳ್ಳಲು ಒಪ್ಪಿಕೊಂಡ. ಸಂಯುಕ್ತರಂಗ ವಂಚನೆಯಿಂದ ಯುದ್ಧಕ್ಕೆ ಆರಂಭಿಸಿತು. ರಘುನಾಥರಾಯ ಧರೆಗುರುಳಿ, ವೆಂಕಟಾದ್ರಿಯ ಕಣ್ಣು ಹೋದುದನ್ನು ಕಂಡ ರಾಯರು ಅಕ್ಷರಶಃ ಪ್ರಳಯ ರುದ್ರನಂತೆ ಮುಸ್ಲಿಂ ಸೈನ್ಯವನ್ನು ಚೆಂಡಾಡಿದರು. ಚದುರಿ ಹೋದ ಸೈನ್ಯವನ್ನು ಒಗ್ಗೂಡಿಸಿಕೊಂಡು, ಓಡಿ ಹೋಗಲು ಹವಣಿಸುತ್ತಿದ್ದ ಗೋಲ್ಕೊಂಡಾ,  ಬಿಜಾಪುರ ಸುಲ್ತಾನರನ್ನು ಹುರಿದುಂಬಿಸಿದ ನಿಜಾಂಷಾ ತಾಮ್ರದ ನಾಣ್ಯಗಳನ್ನು ಒತ್ತಾಗಿ ತುಂಬಿದ್ದ ಗುಂಡುಗಳನ್ನು ಫಿರಂಗಿಗಳಿಂದ ಸ್ಫೋಟಿಸಿ ವಿಜಯನಗರದ ಸೈನ್ಯ ದಿಕ್ಕಾಪಾಲಾಗುವಂತೆ ಮಾಡಿದ. ಅದೇ ಸಮಯದಲ್ಲಿ ರಾಯರು ನಂಬಿದ್ದ ಮುಸ್ಲಿಂ ಸರದಾರರು, ಸೈನಿಕರೆಲ್ಲಾ ನಿಷ್ಠೆ ಬದಲಾಯಿಸಿಬಿಟ್ಟರು. ಅಹ್ಮದ್ ನಗರದ ಮದ್ದಾನೆಯೊಂದು ಪಲ್ಲಕ್ಕಿಯಲ್ಲಿದ್ದ ರಾಮರಾಯರನ್ನು ಕೆಳಕ್ಕೆ ಬೀಳಿಸಿ ಸೊಂಡಿಲಿನಲ್ಲಿ ಎತ್ತಿಕೊಂಡಿತು. ಆ ವಯೋವೃದ್ಧ ವೀರನನ್ನು ಬಂಧಿಸಿ ನಿಜಾಂಷಾ ಬಳಿ ಕರೆದೊಯ್ದಾಗ ಆತ ರಾಯರ ತಲೆಕಡಿದು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಿದ. ರಾಜ ಸೋತನೆಂದು ಸೈನ್ಯ ಬೆದರಿ ಚೆಲ್ಲಾಪಿಲ್ಲಿಯಾಯಿತು. ಎರಡುಪಟ್ಟು ಹೆಚ್ಚು ಸೈನ್ಯಬಲವಿದ್ದರೂ ವಿಜಯನಗರದ ಸೈನ್ಯ ವಂಚಕರಿಂದಾಗಿ, ಅಲ್ಲಲ್ಲ ಸೆಕ್ಯುಲರ್ ಮತಿಭ್ರಾಂತತೆಯಿಂದಾಗಿ ಸೋತು ಹೋಯಿತು. ಕೃಷ್ಣೆ ಕೆಂಪಾದಳು. ಆ ಒಂದು ದಿವಸವೇ ಒಂದು ಲಕ್ಷ ಕಾಫಿರರನ್ನು ಕತ್ತರಿಸಿ ಕೆಡವಲಾಯಿತು ಎಂದು ಫಿರಿಸ್ತಾ ಬರೆದಿದ್ದಾನೆ. ಕಲ್ಲಿನಲ್ಲಿ ಕೆತ್ತಿದ ರಾಮರಾಯನ ತಲೆಯನ್ನು ಬಿಜಾಪುರದ ಕೋಟೆಯಲ್ಲಿ ಮಲಮೂತ್ರಗಳು ಹರಿಯುವ ಒಳಚರಂಡಿಗೆ ಕಿಂಡಿಯಾಗಿ ಇರಿಸಿದ ಆ ಮತಾಂಧರ ಕ್ರೌರ್ಯಕ್ಕೆ ವಿಜಯನಗರ ಬೆಚ್ಚಿಬಿತ್ತು. ಸತತ ಆರು ತಿಂಗಳು ನಗರವನ್ನು ಸೂರೆಗೈಯ್ಯಲಾಯಿತು. ಮಹಿಳೆ, ಹಸುಳೆ, ಶಿಲ್ಪಕಲೆ ಎಲ್ಲದರ ಮೇಲೂ ಅವರ ಅತ್ಯಾಚಾರ ವಿಜೃಂಭಿಸಿತು. ತುಂಗಾಭದ್ರೆಯ ಒಡಲು ರಕ್ತದಿಂದ ತುಂಬಿಹೋಯಿತು. ಸ್ವರ್ಣ ಹಂಪೆ ಹಾಳು ಹಂಪೆಯಾಯಿತು. ಕಲಿಯುಗದ ಹಸಿಯ ಹಿರಿಮಸಣವಾಯಿತು. "ತಾಳವಿಲ್ಲದೆಲೆ, ಬೇತಾಳನಂದದಿ ಕುಣಿವ ಕಾಳನರ್ತಕನ ಕಾಲ್ಕೆಳಗೆ ತೊತ್ತುಳಿಗೊಂಡು ಹಾಳಾಗಿ ಹುಡಿಗೂಡಿ ಹೋದ ಕನ್ನಡನಾಡಿಗಿದಿರಾಗಿ ಬಂದು ನಿಂದು | ಹಾಳುಗಳ ಹೊರವೊಳಗೆ ಹಾಳುಗಳ ಸಾಲುಗಳು, ಬೀಳುಗಳ ಬದಿಬದಿಗೆ ಬೀಳುಗಳ ಬಾಳುಗಳು, ಕಾಳರಕ್ಕಸನ ಕಡೆಕೂಳು ಬಾಳಕವಾದ ನಾಡ ನಡುಮನೆಯ ಕಂಡೆ" ಎಂದು ಹಂಪೆ ಹಾಳಾದ ಬಗೆಯನ್ನು ಕಂಡು ಕಣ್ಣೀರು ಸುರಿಸಿದ್ದಾರೆ ಬೇಂದ್ರೆ ಕವಿ.


             ಆರು ತಿಂಗಳ ಕಾಲ ಅವ್ಯಾಹತವಾಗಿ ಮತಾಂಧರು ವಿಜಯನಗರವನ್ನು ಲೂಟಿ ಮಾಡಿ ಸುಟ್ಟು ಹಾಕಿದರು. ಈ ಸಂಪತ್ತಿನ ಹಂಚಿಕೆಯಲ್ಲಿ ಅವರ ಮಧ್ಯೆಯೇ ಜಗಳ ಶುರುವಾಯಿತು. ಬಳಿಕ ಅವರಿಗೆ ತಮ್ಮ ಸರದಾರರ ಮೇಲೆಯೇ ಗುಮಾನಿ ಶುರುವಾಯಿತು. ಪತ್ತೆ ಹಚ್ಚಲು ಇಬ್ರಾಹಿಂ ಸ್ವತಃ ತನ್ನ ಭಾವ ಹಾಗೂ ಸಂಪತ್ತನ್ನು ಸೂರೆಗೈಯ್ಯಲು ತಾನು ನೇಮಿಸಿದ್ದ ಸರದಾರ ಮುಸ್ತಫಾ ಖಾನನ ಜೊತೆ ರಂಗಕ್ಕಿಳಿದ. ಮುಸ್ತಫಾ ಖಾನ್ ಗೊಲ್ಕೊಂಡಾದ ಸರಹದ್ದಿನಲ್ಲಿದ್ದ ಮುದ್ಗಲ್, ತೆಕ್ಕಲ್ಕೋಟ್ ಹಾಗೂ ರಾಯಚೂರಿನ ಕೋಟೆಗಳನ್ನು ಆದಿಲ್ ಷಾನಿಗೆ ಹಸ್ತಾಂತರಿಸಿದ ಸುದ್ದಿ ತಿಳಿದು ಅವನನ್ನು, ಅವನಲ್ಲಿದ್ದ ಸಂಪತ್ತನ್ನೆಲ್ಲಾ ಕಿತ್ತುಕೊಂಡು ಆ ಕೆಲಸದಿಂದ ಕಿತ್ತೆಸೆದ. ವಿಜಯನಗರದ ಲೂಟಿಯಿಂದ ಇಬ್ರಾಹಿಂಗೆ ಸಿಕ್ಕಿದ ಪಾಲೇ ಎಷ್ಟಿತ್ತೆಂದರೆ ಮೂವತ್ತು ವರ್ಷಗಳ ಬಳಿಕ ಅದರ ಒಂದು ಪಾಲನ್ನು ಬಳಸಿ ಹೈದರಾಬಾದ್ ನಗರವನ್ನು ನಿರ್ಮಿಸಲಾಯಿತು. ಹೌದು, ವಿಜಯನಗರವನ್ನು ಲೂಟಿ ಮಾಡುವ ಮೂಲಕ ಪಡೆದ ಹಣದಿಂದ ಇಬ್ರಾಹಿಂನ ಮರಣಾನಂತರ ಅವನ ಮಗ ಮುಹಮ್ಮದ್ ಖುಲಿ ಹೈದರಾಬಾದ್ ನಗರವನ್ನು ನಿರ್ಮಿಸಿದ. ಅಲ್ಲಿ ಹಾಗೂ ಗೋಲ್ಕೊಂಡಾ ಕೋಟೆಯಲ್ಲಿ ಈ ಸಂಪತ್ತನ್ನು ಇರಿಸಿ ಕಾವಲಿಗೆ ನಿಷ್ಠಾವಂತ ಮುಸ್ಲಿಮ್ ಹಾಗೂ ಯೂರೋಪಿಯನ್ ಸೈನ್ಯವನ್ನಿಡಲಾಯಿತು. ವಿಜಯನಗರದಿಂದ ಸೂರೆಗೈದ ಅಪಾರ ವಜ್ರಗಳನ್ನು ಸಮುದ್ರ ಮೂಲಕ ವಿದೇಶಕ್ಕೆ ಮಾರಾಟ ಮಾಡುವ ವ್ಯಾಪಾರವೂ ಶುರುವಾಯಿತು. ಮುಸ್ಲಿಮರಿಗೆ ಅಪಾರ ಪ್ರಮಾಣದ ಭೂಮಿಯನ್ನು ಹಂಚಲಾಯಿತು. ಯಥಾಪ್ರಕಾರ ಹಿಂದೂಗಳ ಪಾಲಿಗೆ ತೆರಿಗೆ ಕಟ್ಟುವುದು ಮಾತ್ರ ಉಳಿಯಿತು!


           ಇಬ್ರಾಹಿಂ ಖುಲಿಯ ಮರಣಾನಂತರ ಗೋಲ್ಕೊಂಡಾದ ಪಟ್ಟವನ್ನೇರಿದವನು ಅವನ ಮಗ ಮಹಮ್ಮದ್ ಖುಲಿ. ಅವನ ಹೆಂಡತಿಯ ಹೆಸರು ಭಾಗ್ಮತಿ. ಅವಳ ಹೆಸರಿನಿಂದಲೇ ಈಗಿನ ಹೈದರಾಬಾದ್ ನಗರ ಭಾಗ್ಯನಗರವೆಂದು ಕಟ್ಟಲ್ಪಟ್ಟಿತು. ಮೊನ್ನೆ ಮೊನ್ನೆ ಯೋಗಿಜೀಯವರು ಹೈದರಾಬಾದ್ ಅನ್ನು ಭಾಗ್ಯನಗರವೆಂದು ಮರು ನಾಮಕರಣ ಮಾಡುತ್ತೇವೆ ಎಂದಾಗ ಸೆಕ್ಯುಲರ್ ಬ್ರಿಗೇಡಿನಿಂದ ಹೈದರಾಬಾದಿನ ನಿಜ ಇತಿಹಾಸವನ್ನು ಬಚ್ಚಿಡುವ ಕಾರ್ಯ ಆರಂಭವಾಯಿತು. "ಹೈದರಾಬಾದ್ ಭಾಗ್ಯನಗರವಾಗಿರಲೇ ಇಲ್ಲ. ಭಾಗ್ಮತಿ ಇರಲೇ ಇಲ್ಲ" ಎಂಬ ಹೇಳಿಕೆಗಳೂ, ಲೇಖನಗಳೂ, ವಿಡೀಯೋಗಳು, ಸಾಮಾಜಿಕ ಜಾಲತಾಣಗಳಲ್ಲಿ ಬರವಣಿಗೆಗಳೂ ಪುಂಖಾನುಪುಂಖವಾಗಿ ಬಂದವು. ಕೆಲವರು ಇನ್ನೂ ಮುಂದಕ್ಕೆ ಹೋಗಿ ಯೋಗಿ ಜೀಯವರು ಉತ್ತರಪ್ರದೇಶದಲ್ಲಿ ಕಾನೂನು ಮಾಡಿ ಯಾವುದನ್ನು ನಿಷೇಧಿಸಿರುವರೋ ಅದೇ ಲವ್ ಜಿಹಾದ್ ಈ ಪ್ರಕರಣದಲ್ಲಿ ನಡೆದಿತ್ತು; ಹಾಗಾಗಿ ಭಾಗ್ಯನಗರವೆಂದು ನಾಮಕರಣ ಮಾಡುವುದು ಹಾಸ್ಯಾಸ್ಪದ ಎಂದು ಯೋಗಿಜೀಯವರನ್ನು ಹಳಿಯಲು ಯತ್ನಿಸಿದರು. ಮಹಮ್ಮದ್ ಖುಲಿ ಹಾಗೂ ಭಾಗ್ಮತಿಯ ವಿವಾಹದ ಮೆರವಣಿಗೆಯ ಸಮಕಾಲೀನ ಕುತುಬ್ ಶಾಹಿ ಚಿತ್ರಕಲೆಯೊಂದು ಅಶ್ಮೋಲಿಯನ್ ಮ್ಯೂಸಿಯಂನಲ್ಲಿದೆ. ಇದನ್ನು ಮಾಡಿದವ ಅವರ ಮೊಮ್ಮಗನೇ. ಆರತಿಗಳನ್ನು ಹೊತ್ತ ಮಹಿಳೆಯರೊಂದಿಗೆ ಮದುಮಕ್ಕಳು ಇರುವ ಹಿಂದೂ ಶೈಲಿಯ ವಿವಾಹವನ್ನು ಈ ಚಿತ್ರದಲ್ಲಿ ನೋಡಬಹುದು. ಮುಸ್ಲಿಮನೊಬ್ಬ ಹಿಂದೂ ಶೈಲಿಯ ವಿವಾಹವಾದುದಕ್ಕೆ ಕಾರಣವೇನು?



           ಭಾಗ್ಯನಗರ ಹಾಗೂ ಚಾರ್ ಮಿನಾರ್ ಅನ್ನು ನಿರ್ಮಿಸಿದವ ಇದೇ ಮಹಮ್ಮದ್ ಖುಲಿ. ಆತನ ತಾಯಿ ಹಿಂದೂ. ಆಕೆ ಮಗನನ್ನು ಹಿಂದೂ ಸಂಪ್ರದಾಯದಂತೆಯೇ ಬೆಳೆಸಿದಳು. "ಕುಲಿಯತ್" ಎಂದು ಕರೆಯಲ್ಪಡುವ ಅವನ ಉರ್ದು ಕವಿತೆಗಳಲ್ಲಿ ಸ್ವತಃ ಆತನೇ ಇದನ್ನು ಬರೆದಿದ್ದಾನೆ. ಅದರಲ್ಲಿ ಆತ "ನಾನು ನನ್ನ ಹಿಂದೂ ತಾಯಿಯ ಕೃಪೆಯಿಂದ ಅವಳ ಮಡಿಲಲ್ಲಿ ಬೆಳೆದೆ. ಈಗ ನಾನು ನನ್ನ ಮೂಲ ಧರ್ಮವನ್ನು, ನಂಬಿಕೆಯನ್ನು ಬಿಟ್ಟು ಹೊಸ ಮತವನ್ನು ಸ್ವೀಕರಿಸಿದೆ" ಎಂದಿದ್ದಾನೆ. ಹೀಗೆ ಹಿಂದೂ ಧರ್ಮವನ್ನು ತೊರೆದ ಆತ ತನ್ನ ಪೂರ್ವಜರ ಷಿಯಾ ಸಂಪ್ರದಾಯವನ್ನು ಅಳವಡಿಸಿಕೊಂಡ. ಆದರೆ ಅದಕ್ಕೂ ಮುಂಚೆಯೇ ಆತನಿಗೆ ಭಾಗ್ಮತಿಯೊಂದಿಗೆ ಪ್ರೀತಿಯೂ ಶುರುವಾಗಿತ್ತು. 1589ರಲ್ಲೇ ಅಂದರೆ ಅವನು ಹಿಂದೂ ಆಗಿರುವಾಗಲೇ ಅವಳೊಡನೆ ಹಿಂದೂ ಪದ್ದತಿಯಂತೆ ವಿವಾಹವೂ ಆಗಿತ್ತು. ಹಾಗೆಯೇ ಮದುವೆಯಾದ ಬಳಿಕವೂ ಆಕೆ ಮತಾಂತರವಾದುದಕ್ಕೆ ಯಾವುದೇ ಆಧಾರಗಳಿಲ್ಲ. ಅವಳಿಗೆ ಗೋರಿ ಯಾಕೆ ಇಲ್ಲ ಎನ್ನುವುದೇ ಇದನ್ನು ವಿವರಿಸುತ್ತದೆ. ಆದ್ದರಿಂದ ಇದು ಲವ್ ಜಿಹಾದ್ ಆಗಿತ್ತು ಎನ್ನುವುದು ಸತ್ಯದೂರ ವಿಚಾರ.



           ಹೈದರಾಬಾದ್‌ನ ಸಲಾರ್ ಜಂಗ್ ಮ್ಯೂಸಿಯಂನಲ್ಲಿ ಭಾಗಮತಿಯ ಹಳೆಯ ಚಿತ್ರವಿದೆ. ಅವಳ ಪ್ರಭಾವ ಪ್ರಚಂಡದ್ದದ್ದಾಗಿರಬೇಕು. ಅವಳೊಂದಿಗೆ 1,000 ಸೈನಿಕರು ಇದ್ದರು. ಖುಲಿ ಅವಳನ್ನು "ಹೈದರ್ ಮಹಲ್" (ಧೈರ್ಯಶಾಲಿ ಪ್ರಿಯೆ) ಎಂದು ವರ್ಣಿಸಿದ್ದಾನೆ. ಹೈದರಾಬಾದ್ ಮತ್ತು ಭಾಗ್ ನಗರ ಈ ಎರಡೂ ಹೆಸರೂ ಅವಳದ್ದೇ. ಅವಳು ಕಿರೀಟ ಧಾರಣೆ ಮಾಡುತ್ತಿದ್ದಳು. ಅವಳ ಸೌಂದರ್ಯ, ಪ್ರೀತಿ, ಸ್ವಭಾವ ಹಾಗೂ ಧೈರ್ಯವನ್ನು ವರ್ಣಿಸುತ್ತಾ ಅವಳೇಕೆ ಕಿರೀಟ ಧರಿಸಲು ಅರ್ಹಳು ಎಂದು ತನ್ನ ಕುಲಿಯತ್ ಕವಿತೆಯಲ್ಲಿ ವಿವರಿಸಿದ್ದಾನೆ ಮಹಮ್ಮದ್ ಖುಲಿ. ಕೆಲವರು ಭಾಗ್ ನಗರ ಎಂದರೆ ಉದ್ಯಾನಗಳ ನಗರವೆಂದು ಹೆಸರನ್ನು ತಿರುಚಲು ಯತ್ನಿಸಿದರೂ ಫ್ರೆಂಚ್ ಯಾತ್ರಿಕರ ಬರಹಗಳು ಇವನ್ನು ಅಲ್ಲಗಳೆಯುತ್ತವೆ. ತನ್ನ ಹೆಂಡತಿಯ ಇಚ್ಛೆಯಂತೆ ಅವಳ ಪ್ರೀತಿಗಾಗಿ ರಾಜನು ಅವಳ ಹೆಸರನ್ನು ಈ ನಗರಕ್ಕೆ ಇರಿಸಿದ್ದಾನೆಂದು ಆ ಯಾತ್ರಿಕರು ಬರೆದಿದ್ದಾರೆ. ಮಾತ್ರವಲ್ಲ ಭಾಗ್ಯನಗರದ ನಿರ್ಮಾಣದ ಹೊತ್ತಲ್ಲಿ ಅಲ್ಲಿ ಉದ್ಯಾನಗಳೇ ಇರಲಿಲ್ಲ. ಅಲ್ಲದೆ ಇಬ್ರಾಹಿಂನ ಯೋಜನೆಗಳ ವೈಫಲ್ಯದಿಂದಾಗಿ ಆ ಭಾಗಕ್ಕೆ ನೀರಾವರಿ ವ್ಯವಸ್ಥೆಯೂ ಸಮರ್ಪಕವಾಗಿರಲಿಲ್ಲ. ಇನ್ನೂ ಗಿಡಗಳು ಬೆಳೆಯುವುದೆಂತು? ಉದ್ಯಾನಗಳನ್ನು ನಿರ್ಮಿಸುವುದೆಂತು? ಹದಿನೇಳನೇ ಶತಮಾನದಿಂದೀಚೆಗೆ ಬಶೀರ್ ಬಾಘ್ ಹಾಗೂ ಹುಸೈನ್ ನಗರಗಳಲ್ಲಿ ಉದ್ಯಾನಗಳು ನಿರ್ಮಿತವಾದವಷ್ಟೇ. ಭಾಗ್ಯನಗರಕ್ಕೆ ಭಾಗ್ಯಮತಿಯ ಹೆಸರಿಡಲಾಗಿದೆ; ಉದ್ಯಾನಗಳಿಂದ ಆ ಹೆಸರು ಬಂದದ್ದಲ್ಲ ಎಂಬ ಅಂಶವು ನಾಣ್ಯಗಳ ಮೇಲೆ ಹೈದರಾಬಾದ್‌ನ ಕಾಲಸೂಚಕ ಹೆಸರು "ಫರ್ಖುಂಡಾ ಬುನ್ಯಾಡ್" ಎಂದಿರುವುದರಿಂದಲೇ ಸಾಬೀತಾಗಿದೆ. ಪರ್ಷಿಯನ್ ಭಾಷೆಯಲ್ಲಿ ಫರ್ಖುಂಡಾ ಎಂದರೆ ಅದೃಷ್ಟ (ಸಂಸ್ಕೃತದ ಭಾಗ್ಯ) ಎಂಬರ್ಥವೇ ಹೊರತು "ಉದ್ಯಾನಗಳು" (ಪರ್ಷಿಯನ್ನಿನ ಬಾಗ್) ಎಂದಲ್ಲ. ಅಲ್ಲದೆ ತೆಲುಗಿನಲ್ಲಿ ಭಾಗ್ ಹಾಗೂ ಭಾಗ್ಯ ಎರಡೂ ಸಮನಾರ್ಥಕ ಪದಗಳು.


          ಭಾಗಮತಿಯ ಅಸ್ತಿತ್ವಕ್ಕೆ ಸಮಕಾಲೀನ ಮೊಘಲ್ ಪುರಾವೆಗಳಿವೆ. ಅವಳ ಜೀವಿತಾವಧಿಯಲ್ಲಿ, ಅಬುಲ್ ಫಜಲ್'ನ ಸಹೋದರ 1591 ರಲ್ಲಿ ಹೈದರಾಬಾದಿಗೆ ಬಂದಿದ್ದ. ಅವನು ನೀಡಿರುವ ಸಾಕ್ಷ್ಯವು ಭಾಗಮತಿಯ ಅಸ್ತಿತ್ವವನ್ನು ಸಾಬೀತು ಮಾಡುವ ಮೂಲಕ ಆಕೆಯ ಐತಿಹಾಸಿಕತೆಯನ್ನು ನಿರಾಕರಿಸುವವರಿಗೆ ಕಪಾಳಮೋಕ್ಷ ಮಾಡುತ್ತಿದೆ. ಅವನು ಆಕೆಯನ್ನು ಘಾಟಿ ಹೆಂಗಸು, ವೇಶ್ಯೆ, ರಾಜನ ಹಳೆಯ ಪ್ರೇಯಸಿ ಎಂದು ಜರೆದು ಅವಳ ಮಾತು ಕೇಳಿ ಅಲ್ಲಿನ ಅರಸ, ಸರದಾರರು ನಮಗೆ ತೊಂದರೆ ಕೊಡುವವರೇ ಆಗಿದ್ದಾರೆ ಎಂದು ಬರೆದಿದ್ದಾನೆ. ಇನ್ನೊಬ್ಬ ಸಮಕಾಲೀನ ಮುಸ್ಲಿಂ ಚರಿತ್ರಕಾರ ನಿಜಾಮುದ್ದೀನ್ 1594 ರಲ್ಲಿ ಭಾಗಮತಿಯ ಬಗ್ಗೆ ಅವಳ ಜೀವಿತಾವಧಿಯಲ್ಲಿಯೇ ಬರೆದಿದ್ದಾನೆ. ಹೈದರಾಬಾದ್ / ಭಾಗ್ಯನಗರಕ್ಕೆ  ಅವಳ ಹೆಸರನ್ನು ಇಡಲಾಗಿದೆ ಎಂದು ಅವನು ಸಾಕ್ಷ್ಯ ನೀಡುತ್ತಾನೆ. ಆತನೂ ಆಕೆಯನ್ನು ಸುಲ್ತಾನನ ಹಿಂದೂ ವೇಶ್ಯೆ, ಅವಳ ಜೊತೆಗೆ ಸಾವಿರ ಕುದುರೆ ಸವಾರರನ್ನು ರಾಜ ಇಟ್ಟಿದ್ದಾನೆ ಎಂದು ಹೀನಾಯವಾಗಿ ಬರೆದಿದ್ದಾನೆ. ಇನ್ನೊಬ್ಬ ಸಮಕಾಲೀನ ಮುಸ್ಲಿಂ ಇತಿಹಾಸಕಾರ ಫೆರಿಷ್ತಾ, ಹೈದರಾಬಾದ್ / ಭಾಗ್ಯನಗರಕ್ಕೆ ಭಾಗ್ಮತಿಯ ಹೆಸರಿಡಲಾಗಿದೆ ಎಂದೇ ಬರೆದಿದ್ದಾನೆ. ಈ ಎಲ್ಲಾ ಮುಸ್ಲಿಂ ಇತಿಹಾಸಕಾರರು ಅವಳ ಬಗೆಗೆ ಅವಮಾನಕರ ಭಾಷೆ ಬಳಸಿದುದಕ್ಕೆ ಕಾರಣವೇನಿರಬಹುದು? ಆಕೆ ಮತಾಂತರವಾಗಿರದೇ ಇದ್ದುದು ಹಾಗೂ ನಗರಕ್ಕೆ ಆಕೆಯ(ಹಿಂದೂ ರಾಣಿಯ) ಹೆಸರಿನ್ನಿರಿಸಿರುವುದನ್ನು ಸಹಿಸಲು ಆ ಮತಾಂಧರಿಗೆ ಸಾಧ್ಯವಾಗಿಲ್ಲ ಅನ್ನಿಸುತ್ತದೆ. 19ನೇ ಶತಮಾನದಲ್ಲಿಯೂ ಈ ಹೆಸರನ್ನೇ ಬಳಸಲಾಗುತ್ತಿತ್ತು. ಬ್ರಿಟಿಷ್ ಇಐಸಿ ಕಾರ್ಟೋಗ್ರಾಫರ್ ಆರನ್ ಅರೋಸ್ಮಿತ್ ಅವರು 1816ರಲ್ಲಿ ತಾನು ಮಾಡಿದ ನಕ್ಷೆಯಲ್ಲಿ ಭಾಗ್ನಗರ್ ಎಂದೇ ನಮೂದಿಸಿದ್ದಾರೆ.


ಈ ಎಲ್ಲಾ ಸಾಕ್ಷ್ಯಗಳು ಹೈದರಾಬಾದಿಗೆ ಭಾಗಮತಿಯ ಹೆಸರಿಡಲಾಗಿದೆ ಎಂದು ಸ್ಪಷ್ಟವಾಗಿ ಹೇಳುತ್ತವೆ. ಆದರೂ ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ದಾಳಿ ಮಾಡಲಾಗಿದೆ. ಸೆಕ್ಯುಲರ್ ಬುದ್ಧಿಯ ಪುರಾತತ್ವ ಇಲಾಖೆ ಭಾಗ್ಯಲಕ್ಷ್ಮಿ ದೇವಸ್ಥಾನವನ್ನು "ಅನಧಿಕೃತ ನಿರ್ಮಾಣ" ಎಂದು ಕರೆದು ಅದನ್ನು ಧ್ವಂಸ ಮಾಡಲು ಮುಂದಾಗುತ್ತದೆ.


          ಪುರಾತತ್ವ ಇಲಾಖೆ ದೇವಾಲಯವನ್ನು "ಅನಧಿಕೃತ ನಿರ್ಮಾಣ" ಎಂದು ಕರೆದರೆ, ಸರ್ಕಾರದ ದತ್ತಿ ಇಲಾಖೆಯು ಚಾರ್ಮಿನಾರ್‌ನ ಭಾಗ್ಯಲಕ್ಷ್ಮಿ ದೇವಾಲಯವನ್ನು 'ನೋಂದಾಯಿತ ದೇವಾಲಯಗಳಲ್ಲಿ' ಒಂದೆಂದು ಪಟ್ಟಿಮಾಡಿದೆ! ರಾಜ್ಯ ಸರ್ಕಾರವು ದೇವಾಲಯದ ಆದಾಯವನ್ನು ತನ್ನ ಸೆಕ್ಯುಲರ್ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಹಿಂಜರಿದಿಲ್ಲ! 2012ರಲ್ಲಿ ದೇವಾಲಯದ ಸಂಘಟಕರು ದೀಪಾವಳಿಗಾಗಿ ತಾತ್ಕಾಲಿಕ ನಿರ್ಮಾಣವನ್ನು ಮಾಡಲು ಬಯಸಿದಾಗ, ಪೊಲೀಸರು ಅವರನ್ನು ಬಲವಂತವಾಗಿ ತಡೆದರು. ಒಂದೆಡೆ ದೇವಾಲಯದ ಆದಾಯವನ್ನು ಕಸಿದುಕೊಳ್ಳುವುದು ಇನ್ನೊಂದೆಡೆ ದೇವಾಲಯವನ್ನು "ಅನಧಿಕೃತ" ಎಂದು ಕರೆದು ತಾತ್ಕಾಲಿಕ ನಿರ್ಮಾಣಕ್ಕೂ ಅನುಮತಿಸುವುದಿಲ್ಲ ಎನ್ನುವ ಈ ಇಬ್ಬಗೆಯ ನೀತಿ ವಿಚಿತ್ರವಲ್ಲವೆ? ದೇವಾಲಯವು ಪಾರಂಪರಿಕ ತಾಣವಾದ ಚಾರ್ಮಿನಾರ್‌ಗೆ ಹಾನಿಯನ್ನುಂಟುಮಾಡುತ್ತಿದೆ ಮತ್ತು ಅದನ್ನು ತೆಗೆದುಹಾಕಬೇಕು ಎನ್ನುವ ಅವರು ಚಾರ್ಮಿನಾರ್ ಸಂಕೀರ್ಣದ ಒಳಗೆ ಮತ್ತು ಚಾರ್ಮಿನಾರ್ ಜಾಗವನ್ನು ಅತಿಕ್ರಮಿಸಿ ಇತ್ತೀಚೆಗೆ ನಿರ್ಮಿಸಲಾದ ಸೂಫಿ ಚಿಲ್ಲಾ ಬಗ್ಗೆ ಮೌನ ವಹಿಸುತ್ತಾರೆ! ಭಾಗ್ಯಲಕ್ಷ್ಮಿ ದೇವಸ್ಥಾನದ ಅರ್ಚಕರೂ ಸಹಾ ನಿಜಾಮನ ಕಾಲದಲ್ಲಿ ಚಾರ್ಮಿನಾರ್ ಪಕ್ಕದಲ್ಲಿ ದೇವಿಯನ್ನು ಹೊಂದಿರುವ ಶಾಶ್ವತ ದೇವಾಲಯವಿತ್ತು ಎಂದು ಹೇಳಿಕೊಂಡಿಲ್ಲ. ಬದಲಿಗೆ ಅವರು ಹೇಳಿದ್ದು ಅಲ್ಲಿ ತಲೆತಲಾಂತರದಿಂದ ಪವಿತ್ರ ಶಿಲೆಯಿದೆ ಮತ್ತು ದೀಪಾವಳಿಯ ಸಮಯದಲ್ಲಿ ಪೆಂಡಾಲ್ ಹಾಕಿ ಪೂಜಿಸಲಾಗುತ್ತಿತ್ತು ಎಂದು. ಇದರ ಬಗ್ಗೆ ಆಕ್ಷೇಪವೆತ್ತುವವರು ಹಲವು ಸಾವಿರ ದೇವಾಲಯಗಳನ್ನು ಮತಾಂಧರು ಭಗ್ನಗೊಳಿಸುದುದರ ಬಗ್ಗೆ ಯಾಕೆ ಮೌನವಹಿಸುತ್ತಾರೆ?


ರಾಮನದ್ದಾಯಿತು; ಕೃಷ್ಣನನ್ನೂ ಸೆರೆವಾಸದಿಂದ ಬಿಡಿಸಬೇಕಾಗಿದೆ...

 ರಾಮನದ್ದಾಯಿತು; ಕೃಷ್ಣನನ್ನೂ ಸೆರೆವಾಸದಿಂದ ಬಿಡಿಸಬೇಕಾಗಿದೆ...


 


         ಶ್ರೀ ವಲ್ಲಭರ ಮಧುರಾಷ್ಟಕವು "ಮಥುರಾಧಿಪತೇರಖಿಲಂ ಮಧುರಂ", ಶ್ರೀಕೃಷ್ಣನಿಗೆ ಸಂಬಂಧಿಸಿದ ಎಲ್ಲವೂ ಮಧುರವಾದುದು ಎಂದು ವರ್ಣಿಸುತ್ತಾ ಮಧುರ ಭಾವವನ್ನು ಉಂಟುಮಾಡುತ್ತದೆ. ಆದರೆ ಕೃಷ್ಣನ ಜೀವನವು ಮಧುರವಾಗಿತ್ತೇ ಎಂದು ನೋಡಿದರೆ ಅದು ಕಲ್ಲುಮುಳ್ಳುಗಳ ಹಾದಿಯಾಗಿದ್ದದ್ದು ಕಂಡುಬರುತ್ತದೆ. ಭಕ್ತರನ್ನು ಭವಬಂಧನದಿಂದ ಬಿಡುಗಡೆ ಮಾಡುವವನ ಜನ್ಮವೇ ಕಾರಾಗೃಹದ ಬಂಧನದಲ್ಲಾಯಿತು. ಜೀವ ಉಳಿಸಲು ಅಪ್ಪ ವಸುದೇವ ರಾತ್ರೋರಾತ್ರಿ ತುಂಬಿ ಹರಿಯುತ್ತಿದ್ದ ಯಮುನೆಯನ್ನು ದಾಟಿ ಗೋಕುಲದಲ್ಲಿ ಗೋಪಬಾಲನನ್ನು ತಂದಿರಿಸಬೇಕಾಯಿತು. ಮುಂದೆ ಕಂಸ ಕಳಿಸಿದ ಪೂತನಿ, ಶಕಟ, ಧೇನುಕ, ವತ್ಸ, ನಗ, ಹಯ, ವೃಷಭ, ಕಾಳಿಂಗರನ್ನು ಸದೆಬಡಿಯಬೇಕಾಯಿತು. ಕುವಲಪೀಡಾ, ಚಾಣೂರ, ಮುಷ್ಠಿಕರನ್ನು ಮೆಟ್ಟಿ ನಿಲ್ಲಬೇಕಾಯಿತು. ಮಲ್ಲಮಾವ ಕಂಸನನ್ನು ಸಂಹರಿಸಬೇಕಾಯಿತು. ಬಳಿಕವೂ ಎಷ್ಟು ಬಾರಿ ನಾಶಗೈದರೂ ಮತ್ತೆ ಮತ್ತೆ ದಾಳಿ ಎಸಗುತ್ತಿದ್ದ ಅಜ್ಜ(ಕಂಸನ ಮಾವ) ಜರಾಸಂಧನಿಂದ ನೆಮ್ಮದಿ ಕಾಣಲು ದ್ವಾರಕೆಗೆ ಹೋಗಿ ನೆಲೆಸಬೇಕಾಯಿತು. ಅಂತಹಾ ಕಠಿಣ ಜೀವನದಲ್ಲೂ ಸದಾ ಹಸನ್ಮುಖಿಯಾಗಿದ್ದ, ಭಕ್ತರಿಗೆ ಸದಾ ಮಧುರನಾಗಿದ್ದ ಮಥುರಾಧಿಪತಿಯನ್ನು ಭಕ್ತರು ಮಧುರಾಧಿಪತಿ ಎಂದೇ ಕೊಂಡಾಡಿದ್ದು ಸಹಜವೇ ಆಗಿದೆ. ಮಥುರಾಧಿಪತಿಗಿದ್ದ ಈ ಕಠಿಣ ಪರಿಸ್ಥಿತಿ ಆತನ ಜನ್ಮಸ್ಥಾನ ಮಥುರೆಗೂ ಬಂದಿತು. ಮತ್ತದು ತಮ್ಮದಲ್ಲದ್ದನ್ನು ಸದಾ ಭಂಜಿಸುವ ಬರ್ಬರ ಮತೀಯರಿಂದಲೇ ಎನ್ನುವುದು ಜಾತ್ಯಾತೀತರು ಮುಚ್ಚಿಡಲು ನೋಡಿದರೂ ತೆರೆದು ತೋರುತ್ತಿರುವ ಸತ್ಯ!


             ಪ್ರಾಚೀನ ಕಾಲದಲ್ಲಿ ಮಹಾರಣ್ಯವಾಗಿದ್ದ ಮಥುರಾ ಮಧು ರಾಕ್ಷಸನ ಅಂಕೆಗೆ ಒಳಪಟ್ಟಿತ್ತು. ಪ್ರಭು ಶ್ರೀರಾಮನ ಅಶ್ವಮೇಧದ ತುರಗವನ್ನು ತಡೆದ ಈತ ಹಾಗೂ ಈತನ ಮಗ ಲವಣಾಸುರ ಹಯವ ಕಾಯಲು ಬಂದ ಶತ್ರುಘ್ನನೊಡನೆ ಕಾದು ಮಡಿದರು. ಮಧುವನ, ಮಥುರಾ ಎಂದು ಶತ್ರುಘ್ನನಿಂದ ನಾಮಕರಣಗೊಂಡಿತು. ಮುಂದೆ ಅದು ಶತ್ರುಘ್ನನ ಮಗನಾದ ಶೂರಸೇನನ ಪಾಲಿಗೆ ಬಂತು. ಇಂತಹಾ ಮಥುರಾ ದ್ವಾಪರೆಯಲ್ಲಿ ಯದು ವಂಶಜರ ವಶಕ್ಕೆ ಬಂದು ರಾಜಾ ಉಗ್ರಸೇನನ ಆಳ್ವಿಕೆಯಲ್ಲಿ ಮೆರೆಯಿತು. ತಂದೆಯನ್ನು ಸೆರೆಗೆ ತಳ್ಳಿದ ಕಂಸ ಪ್ರಜಾಪೀಡಕನಾಗಿ ಮೆರೆದ. ಅಶರೀರವಾಣಿಯನ್ನು ಕೇಳಿ ತಂಗಿ-ಭಾವರನ್ನು ಸೆರೆಯಲ್ಲಿಟ್ಟು ಅವರಿಂದ ಜೀವ ತಳೆದ ಆರು ಮಕ್ಕಳನ್ನು ಅಪ್ಪಳಿಸಿ ಕೊಂದ. ಕೃಷ್ಣ ಬಲರಾಮರಿಬ್ಬರು ತಪ್ಪಿ, ಕೃಷ್ಣನನ್ನು ಕೊಲ್ಲುವ ಹಂಚಿಕೆಗಳೂ ವಿಫಲವಾಗಿ ಕೊನೆಗೆ ಅವರಿಂದಲೇ ಸಂಹರಿಸಲ್ಪಟ್ಟ. ಕೃಷ್ಣ ತನ್ನ ಅಜ್ಜ ಉಗ್ರಸೇನನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ. ತನ್ನ ಅಳಿಯನ ಸಾವಿನಿಂದ ದುಃಖಿತನಾದ ಜರಾಸಂಧ ಕಾಲಯವನನನ್ನು ಜೊತೆ ಸೇರಿಸಿಕೊಂಡು ಯಾದವರ ಮೇಲೆ ಸತತ ಆಕ್ರಮಣ ಮಾಡಿದ. ಜರಾಸಂಧನ ಉಪಟಳದಿಂದ ತಪ್ಪಿಸಿಕೊಳ್ಳಲು ಕೃಷ್ಣ ದ್ವಾರಕೆಗೆ ತೆರಳಿದ.

 

             ಸಪ್ತಮೋಕ್ಷದಾಯಕ ಕ್ಷೇತ್ರಗಳಲ್ಲಿ ಮಥುರೆಯೂ ಒಂದು. ಸರ್ವಪಾಪಹರಳಾದ ಯಮುನೆಯ ತಟದಲ್ಲಿ ಸ್ಥಿತವಾದ ಮಥುರಾಮಂಡಲವು 20 ಯೋಜನಗಳಷ್ಟು ವ್ಯಾಪಿಸಿದೆ ಎಂದು ವರಾಹಪುರಾಣವು ವರ್ಣಿಸಿದೆ. ಶ್ರೀಕೃಷ್ಣನ ಬಾಲ ಲೀಲೆಗಳಿಗೆ ಸಾಕ್ಷಿಯಾಗಿ, ಗೋಕುಲ, ವೃಂದಾವನ, ಗೋವರ್ಧನಗಳಿಂದ ಒಡಗೂಡಿ ವ್ರಜಮಂಡಲವೆಂದು ಪ್ರಖ್ಯಾತಿಯಾದ ಈ ಪ್ರದೇಶ ಅತ್ಯಂತ ಸಮೃದ್ಧ ಪ್ರದೇಶವಾಗಿತ್ತು. ಭಾಗವತ ಸಂಪ್ರದಾಯವೂ ಇಲ್ಲೇ ಮೊಳಕೆಯೊಡೆಯಿತು. ಬುದ್ಧನ ಪದಸ್ಪರ್ಶದಿಂದ ಪುನೀತವಾಯಿತು. ಜೊತೆಗೆ ವೈದಿಕ ಮತಕ್ಕೂ ಇಲ್ಲಿ ಗ್ರಹಣ ಹಿಡಿಯಿತು. ಉಪಗುಪ್ತ, ಅಶೋಕರಿಂದಾಗಿ ಹಿಂದೂಗಳನ್ನು ಬೌದ್ಧ ಮತಕ್ಕೆ ಮತಾಂತರಿಸುವ ಕೇಂದ್ರವಾಯಿತು. ಉಪಗುಪ್ತ ಮಥುರಾ ಹಾಗೂ ಸುತ್ತಮುತ್ತಲಿನ ಹಿಂದೂಗಳನ್ನು ಬೌದ್ಧರನ್ನಾಗಿಸಿದ. ಅವನಿಂದ ಮತಾಂತರಗೊಂಡ ಹದಿನೆಂಟು ಸಾವಿರಕ್ಕೂ ಹೆಚ್ಚು ಮಂದಿ ಬೌದ್ಧ ಮತ ಪ್ರಚಾರಕ್ಕೆ ದೇಶವಿದೇಶಗಳಲ್ಲಿ ಹರಡಿಕೊಂಡರು. ಅಶೋಕ ನಡೆಸುತ್ತಿದ್ದ ಬಲವಂತದ ಮತಾಂತರ ಜಗತ್ಪ್ರಸಿದ್ಧ. ಹ್ಯೂಯೆನ್ ತ್ಸಾಂಗ್ ಮಥುರಾಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಐದು ಮಂದಿರಗಳು, ಅಶೋಕನು ಕಟ್ಟಿಸಿದ ಮೂರು ಸ್ತೂಪಗಳು, ಇಪ್ಪತ್ತು ಬೌದ್ಧವಿಹಾರಗಳು ಇದ್ದುದನ್ನು ದಾಖಲಿಸಿದ್ದಾನೆ. ಬಳಿಕ ಕುಶಾನರ ಕಾಲದಲ್ಲಿ ಮಥುರಾದಲ್ಲಿ ಜೈನರ ಪ್ರಭಾವ ಹೆಚ್ಚಿತು. ಹೀಗಿದ್ದ ಮಥುರಾದಲ್ಲಿ ವೈದಿಕಧರ್ಮ ಪುನರುಜ್ಜೀವನಗೊಂಡದ್ದು ಶ್ರೀಶಂಕರವಿಜಯದ ಬಳಿಕವೇ.


             ಇಂದಿರುವ ಕೃಷ್ಣಜನ್ಮಭೂಮಿ ದೇವಾಲಯವು ಕೃಷ್ಣನು ಜನಿಸಿದ ನಿಜವಾದ ಸ್ಥಳವಲ್ಲ. ಇದು ಕೃಷ್ಣನ ನಿಜವಾದ ಜನ್ಮಸ್ಥಳದ ಪಕ್ಕದಲ್ಲಿ ನಿರ್ಮಿಸಲ್ಪಟ್ಟ ದೇವಾಲಯ. 1949ರಲ್ಲಿ ತೆಗೆದ ಮಥುರಾದ ಶಾಹಿ ಈದ್ಗಾದ ಚಿತ್ರ ಇದನ್ನು ಸ್ಪಷ್ಟಪಡಿಸುತ್ತದೆ. ಶಾಹಿ ಈದ್ಗಾದ ತಳಪಾಯದಲ್ಲಿ ಮತ್ತು ಅದರ ಸುತ್ತಲೂ ಭಗ್ನಗೊಂಡ ದೇವಾಲಯದ ಅವಶೇಷಗಳನ್ನು ಕಾಣಬಹುದು. ಈ ಅವಶೇಷಗಳ ಮೇಲ್ಭಾಗದಲ್ಲಿ ಪುರಾತತ್ವ ಇಲಾಖೆಯಿಂದ ನಿಲ್ಲಿಸಲ್ಪಟ್ಟ "ಶ್ರೀಕೃಷ್ಣಜನ್ಮಭೂಮಿ" ಎಂಬ ಫಲಕವನ್ನು ನೋಡಬಹುದು. "ಹಿಂದೂಗಳು ತಮ್ಮ ದೇವರಾದ ಭಗವಾನ್ ಶ್ರೀಕೃಷ್ಣನ ಜನ್ಮಸ್ಥಾನವೆಂದು ನಂಬುವ ಜಾಗ" ಎಂಬ ಉಲ್ಲೇಖ ಈ ಫಲಕದಲ್ಲಿದೆ. ಹಿಂದೆ ಇಲ್ಲಿ ಭವ್ಯವಾದ ಕೇಶವದೇವ ಮಂದಿರವಿತ್ತು. ಮಹಮದ್ ಘಜನಿ ಎಂಬ ಮತಾಂಧ ಸಾಮಾನ್ಯ ಯುಗ 1017ರಲ್ಲಿ ಮಥುರಾದ ಮೇಲೆ ದಾಳಿ ಮಾಡಿದ. ನಗರದ ಸಕಲ ಸಂಪತ್ತನ್ನು ದೋಚಿ ಮಥುರೆಗೆ ಬೆಂಕಿ ಇಟ್ಟ. ಚಿನ್ನದ ದೊಡ್ಡ ಐದು ವಿಗ್ರಹಗಳು ಸೇರಿದಂತೆ 25ಸಾವಿರ ಪೌಂಡ್ ಸಂಪತ್ತನ್ನು ಆತ ದೋಚಿದ. ಬಳಿಕ ಮಥುರಾದ ಮೇಲೆ ದಾಳಿಯೆಸಗಿದವ ಸಿಕಂದರ್ ಲೋದಿ, 1500ರಲ್ಲಿ. 1618 ರಲ್ಲಿ, ಓರ್ಛಾ ರಾಜ ವೀರ್ ಸಿಂಗ್ ದೇವಾ ಬುಂದೇಲಾ 33ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮಂದಿರವನ್ನು ಮರು ನಿರ್ಮಿಸಿದ. ನೆನಪಿರಲಿ ಆ ಕಾಲದಲ್ಲಿ ಒಂದು ರೂಪಾಯಿ, 296ಕೆಜಿ ಅಕ್ಕಿಗೆ ಸಮನಾಗಿತ್ತು. ಅಂದರೆ ಈ ಬೃಹತ್ ಮೊತ್ತದ ಮೌಲ್ಯವೆಷ್ಟೆಂದು ಊಹಿಸಿಕೊಳ್ಳಬಹುದು.


             ಆದರೆ ಮಥುರೆಯ ಭವಿಷ್ಯ ಮಧುರವಾಗಲಿಲ್ಲ. ಮುಂದೆ ಅದು ಮತಾಂಧ ಔರಂಗಜೇಬನ ಬರ್ಬರತೆಗೆ ಬಲಿಯಾಯಿತು. 1670ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಅಬ್ದ-ಇನ್-ನಬೀರಖಾನ್ ಜನ್ಮಸ್ಥಾನದಲ್ಲಿದ್ದ ಕೇಶವದೇವ ಮಂದಿರವನ್ನು ನೆಲಸಮಗೊಳಿಸಿ ಅದರ ಅವಶೇಷಗಳನ್ನು ಬಳಸಿಕೊಂಡು ಶಾಹಿ ಈದ್ಗಾವನ್ನು ನಿರ್ಮಿಸಿದ. ಅಂದಿನಿಂದ ಅದನ್ನು ಮರಳಿ ಪಡೆಯಲು ಹಿಂದೂಗಳ ಹೋರಾಟ ಇಂದಿಗೂ ಜಾರಿಯಲ್ಲಿದೆ. 18ನೇ ಶತಮಾನದಲ್ಲಿ ಮರಾಠರು ಮಥುರಾ ಮಾಲೀಕತ್ವವನ್ನು ಪಡೆಯಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. 1804ರಲ್ಲಿ ಮಥುರಾ ಬ್ರಿಟಿಷರ ನಿಯಂತ್ರಣಕ್ಕೆ ಬಂತು. 1815ರಲ್ಲಿ ಈಸ್ಟ್ ಇಂಡಿಯಾ ಕಂಪನಿ, ಕೃಷ್ಣ ಜನ್ಮಭೂಮಿಯ 13.37 ಎಕರೆ ಭೂಮಿಯನ್ನು ಹರಾಜು ಹಾಕಿತು. ಆಗ ಇದನ್ನು ಬನಾರಸ್‌ನ ಶ್ರೀಮಂತ ಬ್ಯಾಂಕರ್ ರಾಜ ಪತ್ನಿಮಲ್ 45 ಲಕ್ಷಕ್ಕೆ ಖರೀದಿಸಿದರು. ಅದರಲ್ಲಿ ಶಾಹಿ ಈದ್ಗಾವೂ ಸೇರಿತ್ತು. ಆ ದಿನಗಳಲ್ಲಿ ಈ ಮಸೀದಿ ಹಿಂದೂ ಅವಶೇಷಗಳ ಮೇಲೆ ನಿರ್ಮಿಸಲಾದ, ಕೈಬಿಟ್ಟ, ಯಾವುದೇ ರೀತಿಯ ಚಟುವಟಿಕೆಗಳಿಲ್ಲದ ಸ್ಥಳವಾಗಿತ್ತು. 1921ರಲ್ಲಿ ಮುಸ್ಲಿಮರು ಈ ಭೂಮಿಯ ಮೇಲಿನ ಮಾಲಿಕತ್ವವನ್ನು ಪ್ರಶ್ನಿಸಿದರು. 1935ರಲ್ಲಿ  ಅಲಹಾಬಾದ್ ಹೈಕೋರ್ಟ್ ರಾಜಾ ಪತ್ನಿಮಲ್ ಅವರ ವಂಶಸ್ಥರ ಪರವಾಗಿ ತೀರ್ಪು ನೀಡಿತು. ಗಮನಿಸಿ ಈಸ್ಟ್ ಇಂಡಿಯಾ ಕಂಪನಿಯು ಹರಾಜು ಹಾಕಿದಾಗ ಯಾವುದೇ ಮುಸ್ಲಿಮರು ಈ ಭೂಮಿಯನ್ನು ಖರೀದಿಸಲು ಮುಂದೆ ಬರಲಿಲ್ಲ. ಆದರೆ ಭೂಮಿಯನ್ನು ಖರೀದಿಸಿದ ನಂತರ, ಅವರು ನ್ಯಾಯಾಲಯಗಳಲ್ಲಿ ಮಾಲೀಕತ್ವವನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಇದರಿಂದ ಇಂದಿನ ಕಾಲದಲ್ಲೂ ಜಗಳಕ್ಕೆ ಮೂಲಕಾರಣರು ಯಾರು ಎನ್ನುವ ಅಂಶ ತಿಳಿಯುತ್ತದೆ. ಜೊತೆಗೆ ತಮ್ಮದಲ್ಲದ ಭೂಮಿಯನ್ನು ಕಿತ್ತುಕೊಳ್ಳಲು ಹವಣಿಸುವ ಆಕ್ರಮಣಕಾರೀ ಮನಸ್ಥಿತಿಯಿಂದ ಹೊರಬರಲಾಗದ ಕುರಾನ್ ಪೀಡಿತರ ಧೋರಣೆಯನ್ನು ಪ್ರತ್ಯಕ್ಷೀಕರಿಸುತ್ತದೆ. ರಾಜಾ ಪತ್ನಿಮಲ್ ಅವರ ವಂಶಸ್ಥರ ಪರವಾಗಿ ನ್ಯಾಯಾಲಯವು ತೀರ್ಪು ನೀಡಿದ ನಂತರವೂ, ಸ್ಥಳೀಯ ಮುಸ್ಲಿಮರ ಸತತ ಬೆದರಿಕೆ ಹಾಗೂ ಅಡಚಣೆಯುಂಟುಮಾಡುವ ಪ್ರವೃತ್ತಿಯಿಂದಾಗಿ ಅಲ್ಲಿ ದೇವಾಲಯವನ್ನು ಮರುನಿರ್ಮಿಸುವ ಯೋಜನೆಯನ್ನು ಮುಂದುವರಿಸಲು ಆಗಲೇ ಇಲ್ಲ. 1944ರಲ್ಲಿ ಪತ್ನಿಮಲ್ ವಂಶಜರು ಈ ಭೂಮಿಯನ್ನು ಮದನ್ ಮೋಹನ್ ಮಾಳವೀಯ, ಗಣೇಶ ಗೋಸ್ವಾಮಿ, ಭಿಕೆನ್ ಲಾಲರಿಗೆ ಮಾರಾಟ ಮಾಡಿದರು.


            1947ರ ಬಳಿಕ ಬಿರ್ಲಾ ಈ ಭೂಮಿಯನ್ನು ಖರೀದಿಸಿದರು. ಆತ ಕೃಷ್ಣ ಜನ್ಮಭೂಮಿ ಟ್ರಸ್ಟ್ ಅನ್ನು ರಚಿಸಿದರು. 1968ರಲ್ಲಿ, ಟ್ರಸ್ಟ್ ಮತ್ತು ಶಾಹಿ ಈದ್ಗಾ ಸಮಿತಿಯ ನಡುವೆ ಒಪ್ಪಂದವೊಂದು ನಡೆದು ಮಸೀದಿಯ ಪಕ್ಕದ ಭೂಮಿ ಟ್ರಸ್ಟ್‌ಗೆ ಸೇರಿತು ಮತ್ತು ಈದ್ಗಾ ನಿರ್ವಹಣೆ ಈದ್ಗಾ ಸಮಿತಿಗೆ ಸೇರಿತು. ಆದರೆ ಈದ್ಗಾದ ಮೇಲೆ ಟ್ರಸ್ಟ್‌, ಕಾನೂನು ರೀತಿ ಯಾವುದೇ ಹಕ್ಕನ್ನು ಪಡೆಯುವಂತಿರಲಿಲ್ಲ! ಸಂಕ್ಷಿಪ್ತವಾಗಿ ಹೇಳುವುದಾದರೆ ಈ ಒಪ್ಪಂದವು ಮೂಲ ಕೃಷ್ಣ ದೇವಾಲಯದ ಮೇಲ್ಭಾಗದಲ್ಲಿ ನಿರ್ಮಿಸಲಾದ ಶಾಹಿ ಈದ್ಗಾದ ಅಸ್ತಿತ್ವವನ್ನು ಗುರುತಿಸಿತು. ಅಲ್ಲಿಯವರೆಗೆ ಆ ಮಸೀದಿಗೆ ಕಾನೂನು ರೀತ್ಯಾ ಯಾವುದೇ ಅಸ್ತಿತ್ವವಿರಲಿಲ್ಲ. ಈ ಒಪ್ಪಂದದ ಬಳಿಕವೇ ಆ ಮಸೀದಿಯಲ್ಲಿ ಕಾರ್ಯಚಟುವಟಿಕೆ ಆರಂಭಗೊಂಡಿತು. ಒಪ್ಪಂದಕ್ಕೆ ಬರುವ ಮೊದಲು ಯಾವುದೇ ಹಿಂದೂ ಸಂಘಟನೆ ಅಥವಾ ಸಾರ್ವಜನಿಕರನ್ನು ಸಂಪರ್ಕಿಸಿಲ್ಲ ಎಂಬುದನ್ನು ಗಮನಿಸಬೇಕು. ಇದು ನೇರವಾಗಿ ಬಿರ್ಲಾಗಳು ಹಾಗೂ ಶಾಹಿ ಈದ್ಗಾ ಸಮಿತಿಯ ನಡುವೆ ಇತ್ತು. ಈ ಒಪ್ಪಂದವು ಹಿಂದೂಗಳಿಗೆ ಈದ್ಗಾದ ದಕ್ಷಿಣಕ್ಕೆ ಒಂದು ಸಣ್ಣ ತುಂಡು ಭೂಮಿಯನ್ನಷ್ಟೇ ನೀಡಿತು. ಇದೇ ಒಪ್ಪಂದದ ಮೇರೆಗೆ ವಿವಾದಿತ ಸ್ಥಳದಲ್ಲಿ ಯಾವುದೇ ಬದಲಾವಣೆ ಮಾಡಬಾರದು; ನಿರ್ಮಾಣಗಳ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದು ಮಥುರಾ ಸಿವಿಲ್ ಕೋರ್ಟ್ ತೀರ್ಪು ನೀಡಿತು. ಅಂದರೆ ಈ ಒಪ್ಪಂದದಿಂದ ಹಿಂದೂಗಳು ಮೋಸ ಹೋಗಿದ್ದಾರೆಂದು ಬೇರೆ ಹೇಳಬೇಕಾಗಿಲ್ಲ. ಆಧುನಿಕ ಕೃಷ್ಣ ಜನ್ಮಭೂಮಿ ದೇವಾಲಯವು 1982 ರಲ್ಲಿ ಪೂರ್ಣಗೊಂಡಿತು. ವೃಂದಾವನದ ನಿವಾಸಿ ಮನೋಹರ್ ಲಾಲ್ ಶರ್ಮಾ ಅವರು 1968ರ ಒಪ್ಪಂದವನ್ನು ಪ್ರಶ್ನಿಸಿ ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು ಮತ್ತು 1947 ರ ಆಗಸ್ಟ್ 15 ರಂದು ಇದ್ದಂತೆ ಎಲ್ಲ ಪೂಜಾ ಸ್ಥಳಗಳಲ್ಲಿ ಯಥಾಸ್ಥಿತಿಯನ್ನು ಕಾಪಾಡುವ "ಧಾರ್ಮಿಕ ಪೂಜಾ ಸ್ಥಳ ಕಾಯಿದೆ - 1991"ನ್ನು ರದ್ದುಗೊಳಿಸುವ ಮನವಿಯನ್ನು ಸಲ್ಲಿಸಿದರು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇದೆ.



          ಶಿವ, ರಾಮ, ಕೃಷ್ಣರು ಈ ದೇಶದ ಅಸ್ಮಿತೆಗಳು. ಮರ್ಯಾದಾ ಪುರುಷೋತ್ತಮನ ಜನ್ಮಸ್ಥಾನದ ವಿವಾದ ಬಗೆಹರಿದು ಮಂದಿರದ ಕಾರ್ಯವೇನೋ ಆರಂಭವಾಗಿದೆ. ಕಾಶಿ ವಿಶ್ವೇಶನ ದೇವಾಲಯ ಹಾಗೂ ಕೃಷ್ಣನ ಜನ್ಮಸ್ಥಾನ ಭಕ್ತರಿಗಾಗಿ ಕಾಯುತ್ತಿವೆ. ಸರಕಾರ, ನ್ಯಾಯಾಲಯಗಳೂ ಇದಕ್ಕೆ ಮನಸ್ಸು ಮಾಡಿ ಮುಂದಡಿಯಿಡಬೇಕಿದೆ. ಮಥುರಾಧೀಶನ ಜನ್ಮಸ್ಥಾನದಲ್ಲೇ ಅವನ ಪ್ರತಿಷ್ಠೆ ಮಧುರವಾಗಿ ನೆರವೇರಲಿ. ಜೊತೆಗೆ ಗೋಪಾಲನ ಭೂಮಿಯಲ್ಲಿ ನಿರ್ಭಯದ ಗೋಪಥವೂ ನಿರ್ಮಾಣವಾಗಲಿ.