ನಿನ್ನ ಕಣ್ಣಂಚಲಿ ಅಶ್ರು ಬಿಂದು ಜಾರಿರಲು ಎನ್ನ ಮನದ ಭಿತ್ತಿಯಲಿ ನಿನ್ನ ಆ ಭಾವ ಪ್ರಕಟವಾಗಿ ಈ ಹೃದಯ ನಿನಗಾಗಿ ಮಿಡಿದಿರಲು ಮೌನವೇಕೆ ಹೇ ಸುರುಚಿರಾನನೆ?
ನಿನ್ನ ಕಣ್ಣ ಬಿಂದು ಜಾರಿರೆ
ಮಿಡಿದಿದೆ ಹೃದಯ ವೀಣೆ
ಮನದಲಿ ಆ ಭಾವ ಮೊಳೆತಿರೆ
ಈ ಮೌನವೇಕೆ ನಾ ಕಾಣೆ||
ಅಶ್ರುಧಾರೆ ಜಾರಿ ಕಪೋಲ ಸ್ಪರ್ಷಿಸೆ
ತವ ವದನವದೇನು ಸುಂದರ
ಮೌನ ಮುರಿದು ಮುತ್ತು ಸುರಿದು
ನೀಗು ನಿನ್ನ ಮನದ ಬೇಸರ||
ಅದುರುತಿಹವು ಅಧರ ನಿನ್ನ ಮಾತ ಪೋಣಿಸೆ
ದುಗುಡ ಮರೆತು ಮೊಗದಿ ನಿನ್ನ ನಗುವ ಕಾಣಿಸೆ
ಹೃದಯ ವೀಣೆ ತಂತಿ ಮೀಟಿ ರಾಗ ಹೊಮ್ಮಿರೆ
ಅರಿತೆಯೇನೆ ಮಧುರ ನಾದ ಶುಭ್ರ ಈ ಧಾರೆ||
ಗಾನದಲ್ಲಿ ಲೀನವಾಗಿ ಇಹವ ಮರೆತಿರೆ
ಮ್ಲಾನವದನ ವಿಮುಖವಾಗಿ ಮಧುರ ವಾಣಿಯು
ಮುಳುಗುತಿರುವ ರವಿಯ ರಂಗು ನಿನ್ನ ಮೊಗದೊಳು
ಭೋರ್ಗರೆದು ಹರಿಯುತಿಹುದು ಒಲವ ಧಾರೆಯು||
ನಿನ್ನ ಕಣ್ಣ ಬಿಂದು ಜಾರಿರೆ
ಮಿಡಿದಿದೆ ಹೃದಯ ವೀಣೆ
ಮನದಲಿ ಆ ಭಾವ ಮೊಳೆತಿರೆ
ಈ ಮೌನವೇಕೆ ನಾ ಕಾಣೆ||
ಅಶ್ರುಧಾರೆ ಜಾರಿ ಕಪೋಲ ಸ್ಪರ್ಷಿಸೆ
ತವ ವದನವದೇನು ಸುಂದರ
ಮೌನ ಮುರಿದು ಮುತ್ತು ಸುರಿದು
ನೀಗು ನಿನ್ನ ಮನದ ಬೇಸರ||
ಅದುರುತಿಹವು ಅಧರ ನಿನ್ನ ಮಾತ ಪೋಣಿಸೆ
ದುಗುಡ ಮರೆತು ಮೊಗದಿ ನಿನ್ನ ನಗುವ ಕಾಣಿಸೆ
ಹೃದಯ ವೀಣೆ ತಂತಿ ಮೀಟಿ ರಾಗ ಹೊಮ್ಮಿರೆ
ಅರಿತೆಯೇನೆ ಮಧುರ ನಾದ ಶುಭ್ರ ಈ ಧಾರೆ||
ಗಾನದಲ್ಲಿ ಲೀನವಾಗಿ ಇಹವ ಮರೆತಿರೆ
ಮ್ಲಾನವದನ ವಿಮುಖವಾಗಿ ಮಧುರ ವಾಣಿಯು
ಮುಳುಗುತಿರುವ ರವಿಯ ರಂಗು ನಿನ್ನ ಮೊಗದೊಳು
ಭೋರ್ಗರೆದು ಹರಿಯುತಿಹುದು ಒಲವ ಧಾರೆಯು||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ