ಪುಟಗಳು

ಭಾನುವಾರ, ಮಾರ್ಚ್ 31, 2013

ಬೆಳದಿಂಗಳ ಬಾಲೆ

ಗೆಳತಿ,
ನಿನ್ನ ಸೌಂದರ್ಯವನ್ನು ಅದೆಂತು ವರ್ಣಿಸಲಿ?
ಅದು ಹಾಲು ಚೆಲ್ಲಿದ ಬೆಳದಿಂಗಳಂತೆ. ಬಿರಿದ ಮಲ್ಲಿಗೆ ಹೂವಿನಂತೆ. ನೊರೆಯುಕ್ಕುತಿಹ ಶುಭ್ರ ಜಲಧಾರೆಯಂತೆ. ಹಚ್ಚ ಹಸಿರು ಹೊದ್ದು ನಿಂತ ನಿತ್ಯ ನೂತನೆ ಪ್ರಕೃತಿ ದೇವಿಯಂತೆ.
 ನಿನ್ನ ಅಶ್ರುಗಳೋ ಅರವಿಂದದ ದಳಗಳು. ಕುಮುದವದನೆಯೇ ನಿನ್ನ ಆ ಸಂಪಿಗೆಯಂದದ ನಾಸಿಕಕ್ಕೆ ಶೋಭನವಾಗಿದೆ ಕಡುಗತ್ತಲಲೂ ಹೊಳೆಯುತಿರುವ ಆ ಮೂಗುತಿ. ನಾಗವೇಣಿ ನೀನುಲಿದರೆ ಶುಕವಾಣಿ. ನಲಿದಿರೆ ನವಿಲು, ಸ್ವರವದೋ ಕೋಗಿಲೆಯ ದನಿ.

ಓ ಹಂಸಗಮನೆ ನೀ ನಡೆದಿರೆ ಗಿಡಗಳು ಚಿಗುರುವವು. ಸುಮಗಳು ಅರಳುವವು. ಮಾರುತನು ಲಯಬದ್ಧವಾಗಿ ಬೀಸುವನು. ಸಿಂಹಕಟಿಯೇ ನಿನ್ನಧರ ಸೋಕಲು ಹಾತೊರೆದಿದೆ ತಂಗಾಳಿ. ನಿನ್ನ ಸೌಂದರ್ಯ ಹೊಗಳಲು ಪದಗಳೇ ಸಾಲವು ಬಡವಾಗಿಹುದು ಎನ್ನ ನಾಲಿಗೆ. ನೀ ನಕ್ಕರೆ ಬಲಾಹಕನು ಸರಿದಾಗ ಕಾಣುವ ಪೂರ್ಣಿಮೆಯ ಚಂದಿರನ ತೆರದಿ ನಿನ್ನ ಸೌಂದರ್ಯ ಇಮ್ಮಡಿಗೊಳ್ಳುವುದು. ಆದ್ದರಿಂದ ನೀ ನಗು, ನಗುತ್ತಲೇ ಇರು ಗೆಳತಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ