ಭಾವ ರಾಗ ತಾಳ ಮಿಲನ.....!!!
ಆಹಾ!
ಎಂತಹಾ ಅಮೋಘ ದೃಶ್ಯವಿದು ಗೆಳತಿ! ನಿನ್ನ ಚರಣವನ್ನು ಸ್ಪರ್ಷಿಸುತ್ತಿರುವ ಆ ಜಲ ಸಿರಿಗೆ ಮಿಹಿರನ ಕಿರಣ ಸೋಕಿ ಅದರಿಂದ ತವ ವದನ ಪೂರ್ಣಿಮೆಯ ಚಂದಿರನ ಕಾಂತಿಯಂದದಿ ಹೊಳೆಯುತಿರೆ ಅದರಲ್ಲಿ ನನ್ನ ಭಾವ ಬಿಂಬವನ್ನು ಕಾಣುತ್ತಿರುವ ನಾನೆಷ್ಟು ಧನ್ಯ ಗೆಳತಿ!
ನಿನ್ನ ಕಾಲಿನ ಗೆಜ್ಜೆ ನಾದಕೆ ಮನ ಸೋತ ಪಿಕ ತಾ ಹಾಡಲು ಮಯೂರ ನರ್ತಿಸೆ ಆ ಮರದ ಮೇಲೆ ಕುಳಿತ ಜೋಡಿ ಗಿಣಿಗಳು ಮಧುರ ಭಾವದಿ ಉಲಿಯುತಿರೆ, ಹಂಸಗಳು ನಿನ್ನ ಸೌಂದರ್ಯಕೆ ನಾಚಿ ತಲೆಯ ತಗ್ಗಿಸಿ ನಿಂತಿವೆ ನೋಡು!
ಆ ನಾದಕೆ ಮರುಳಾದ ನಾಗಿಣಿ ತನ್ನ ಬೇಟೆಯ ಮರೆತು ತನ್ನರಸನ ಅರಸುತಾ ಹೊರಟಿಹುದು ನೋಡು!
ಸಾಲು ವೃಕ್ಷಗಳು ಆ ಗಾನಕೆ ತಲೆದೂಗುತಿರೆ ಮಾರುತ ನಿನ್ನ ಅಂದವ ಕಂಡು ತನ್ನ ವೇಗವನ್ನು ಮಂದಗೊಳಿಸಿಹನು ನೋಡೆ!
ಆ ಚೆಲುವ ಜಿಂಕೆ ಮರಿ ಮೇಯುವುದನ್ನು ಮರೆತು ನಿಂತಿರೆ ಅದ ಹಿಡಿಯಲು ಹೊಂಚು ಹಾಕುತ್ತಿದ್ದ ವ್ಯಾಘ್ರ ತನ್ನ ಹಸಿವನ್ನೇ ಮರೆತು ನೋಡುತಿದೆ!
ಭಾವ ರಾಗ ತಾಳ ಮಿಲನ.....!!!
ಆ ಝರಿಯು ಗೆಳತಿ
ತವ ಚರಣ ಸೋಕಿ
ಆ ಮಿಹಿರ ಕಿರಣ
ಪ್ರತಿಫಲಿಸೆ ಎನ್ನ ಬಿಂಬ||
ನಿನ್ನ ಗೆಜ್ಜೆಯ ತಾಳಕೆ ಸೋತಿಹುದು
ಮಯೂರ ತಾ ನಲಿಯುತಿಹುದು ನೋಡು
ಆ ಸ್ವರಕೆ ಒಲಿದು ಪಿಕ ತನ ಸ್ವರವ
ಜೋಡಿಸಲು ಮೂಡಿಹುದು ಒಲವ ಹಾಡು||
ನುಣುಪಾದ ನಿನ್ನ ಮೈಯ ಶುಭ್ರತೆಗೆ
ನಾಚಿಹುದು ಶ್ವೇತ ಹಂಸ|
ನಾಗಿಣಿಯು ಅರಸುತಿರೆ ತನ್ನರಸ
ಅನುದಿನವು ರಾಜಹಂಸ||
ಇದ ನೋಡಿ ಆ ಜೋಡಿ
ಶುಕ ಉಲಿಯೆ ಪ್ರಣಯದ ರಾಗ|
ಪ್ರಕೃತಿಯ ಈ ಸೊಬಗ ನೋಡಿ
ಕಳೆದೋಯ್ತು ಮನದ ವಿರಾಗ||

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ