ಪುಟಗಳು

ಮಂಗಳವಾರ, ಅಕ್ಟೋಬರ್ 13, 2015

ಈಶ್ವರೀ_ಬಳ್ಳಿ

#ನಾಸ್ತಿಮೂಲಮನೌಷಧಮ್
#ಈಶ್ವರೀ_ಬಳ್ಳಿ

ಸಂಸ್ಕೃತದಲ್ಲಿ ನಕುಲಿ, ರುದ್ರಜಿಟಾ; ಕನ್ನಡದಲ್ಲಿ ಈಶ್ವರೀ ಬಳ್ಳಿ;ತುಳುವಿನಲ್ಲಿ "ಈಸರಾ ಬೇರ್" ಎನ್ನುವ ಹೆಸರುಗಳು. ಮೂರು ವಿಧದ ಈಶ್ವರ ಬಳ್ಳಿಗಳಿವೆ. ಚಿತ್ರದಲ್ಲಿರುವಂತಹದ್ದು ದೊಡ್ಡ ಎಲೆಗಳ ಬಳ್ಳಿ. ಹೂಗಳು ಅರಳುವಾಗ ಮಧ್ಯದ ಹಳದಿ ವರ್ಣವನ್ನು ನೇರಳೆ ವರ್ಣ ಸುತ್ತುವರಿದು ಹಾವು ಹೆಡೆಬಿಚ್ಚಿದಂತೆ ಕಾಣುತ್ತದೆ. ಕಾಯಿಗಳು ಒಡೆದು ಬಳ್ಳಿಯಲ್ಲಿ ತೊಟ್ಟಿಲಂತೆ ತೂಗುತ್ತವೆ.

ಇದರ ಉಪಯೋಗಗಳು ಹಲವಾರು. ಇದನ್ನು ಜ್ವರ, ಕೆಮ್ಮು, ಮಲಬದ್ಧತೆ, ಮೂಲವ್ಯಾಧಿ, ವಿಷಮ ಜ್ವರ, ಸನ್ನಿಜ್ವರ, ದೃಷ್ಟಿ ದೋಷ ಶಮನಕ್ಕಾಗಿ ಬಳಸುತ್ತಾರೆ. ಹಾವಿನ ವಿಷವಿಳಿಸಲು  ಬಳಸುತ್ತಾರೆ. ಸರ್ಪ ಕಚ್ಚಿದಲ್ಲಿ, ಹಸೀ ಎಲೆಗಳನ್ನು ಚೆನ್ನಾಗಿ ಜಜ್ಜಿ ಕಷಾಯಮಾಡಿ ಕುಡಿಸಿದರೆ ವಿಷ ಇಳಿಯುವುದು. ವಿಷಜಂತು ಕಡಿತಕ್ಕೆ ಶಮನಕಾರಿಯಾಗಿ ಇದರ ಬೇರು ಕೂಡಾ ಉಪಯುಕ್ತ. ಇಡೀ ಸಸ್ಯ ಹಾವು ಕಡಿತದಲ್ಲಿ ವಿಷವಿಳಿಸಲು, ಮೂಳೆ ಜೋಡಣೆಯಲ್ಲಿ, ಮಲೇರಿಯಾ ಶಮನಕಾರಿಯಾಗಿಯೂ ಉಪಯುಕ್ತ.

ಪಶ್ಚಿಮ ಘಟ್ಟದ ಕಾಡುಗಳಲ್ಲಿ ಬೇರೆ ಮರಗಳನ್ನು ತಬ್ಬಿ ಬೆಳೆಯುವ ಈಶ್ವರ ಬಳ್ಳಿ ಈಗ ವಿನಾಶದ ಅಂಚಿನಲ್ಲಿದೆ. ಅತಿಯಾದ ಬಳಕೆ ಒಂದೆಡೆಯಾದರೆ ಮರಗಳ ನಾಶದಿಂದ ಬದುಕಲು ಆಶ್ರಯ ಸಿಗದೇ ಇರುವುದು ಇನ್ನೊಂದೆಡೆ. ಇದರ ಮಧ್ಯೆ ಕೇವಲ ರಾಜಕಾರಣಿಗಳು-ಕಾಂಟ್ರಾಕ್ಟ್ ದಾರರಿಗೆ ಮಾತ್ರ ಪ್ರಯೋಜನವಾಗುವ ಎತ್ತಿನಹೊಳೆಯಂತಹ ಯೋಜನೆಗಳು ಇಂತಹ ಉಪಯುಕ್ತ ಸಸ್ಯಗಳನ್ನು ಗತಕಾಲಕ್ಕೆ ಸೇರಿಸುತ್ತಿವೆ.

1 ಕಾಮೆಂಟ್‌:

  1. ಈಶ್ವರಬಳ್ಳಿ ನಂಜುನಿವಾರಕ ಸಸ್ಯವಾಗಿದೆ. ಬಹಳ ಪರಿಮಳಯುಕ್ತವಾದ ಸಸ್ಯ. ಸಸ್ಯದ ಯಾವುದೇ ಭಾಗವನ್ನು ಕಿತ್ತರೂ ವಿಶೇಷ ಪರಿಮಳವಿರುತ್ತದೆ. ವಿಶೇಷವಾಗಿ ಸರ್ಪಸುತ್ತು(ಹರ್ಪಿಸ್) ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಏಕಮೂಲಿಕೆಯಾಗಿಯೂ ಬಳಸಬಹುದಾಗಿದೆ. ಪ್ರತಿ ಮನೆಗಳಲ್ಲೂ ಇರಲೇಬೇಕಾದ ಔಷಧೀಯ ಸಸ್ಯ.

    ಪ್ರತ್ಯುತ್ತರಅಳಿಸಿ