ಅದು ಬೆಂಗಳೂರಿನ ಪಶ್ಚಿಮ
ಭಾಗದಲ್ಲಿರುವ ಜೆಜೆ ನಗರದ ಗುಡ್ಡದಹಳ್ಳಿಯಲ್ಲಿರುವ
ಶಾಲೆ. ಆ ಶಾಲೆಯ ದೈಹಿಕ
ಶಿಕ್ಷಕರ ಮೇಲೆ ಜನವರಿ ಏಳರ
ಬೆಳಿಗ್ಗೆ ಪ್ರಕರಣವೊಂದು ದಾಖಲಾಗುತ್ತದೆ. ಏನು ಪ್ರಕರಣ? ಏಳು
ವರ್ಷದ ಹುಡುಗಿಯ ಮೇಲೆ ಅತ್ಯಾಚಾರ
ಮಾಡಿದ್ದಾರೆ ಎನ್ನುವ ಆರೋಪ. ಪೊಲೀಸರು
ಶಿಕ್ಷಕನನ್ನು ಬಂಧಿಸಲೆಂದು ಶಾಲೆಗೆ ಬರುತ್ತಾರೆ. ಇನ್ನೇನು
ಬಂಧಿಸಬೇಕೆನ್ನುವಷ್ಟರಲ್ಲಿ ಜನ ಆ ಜಾಗಕ್ಕೆ
ಬರತೊಡಗಿದರು. ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಎಂಟುನೂರು ಜನ! ಬಂದ ಜನರಲ್ಲಿ
ಹೆಚ್ಚಿನವರಿ 16-30 ವರ್ಷ ವಯಸ್ಸಿನ ಯುವಕರು.
ಬಂದವರೇ ಆ ಶಿಕ್ಷಕನನ್ನು ತಮಗೆ
ಒಪ್ಪಿಸಬೇಕೆಂದು ಪೊಲೀಸರನ್ನು ಆಗ್ರಹಪಡಿಸತೊಡಗಿದರು. ಆದರೆ ಪೊಲೀಸರು ನಿರಾಕರಿಸಿದಾಗ
ಪೊಲೀಸರ ಮೇಲೆಯೇ ಕಲ್ಲು ತೂರಾಟ
ಆರಂಭವಾಯಿತು. ಶಿಕ್ಷಕನಿಗೂ ಪ್ರಾಣಾಂತಿಕ ಹಲ್ಲೆ ನಡೆಸಲಾಯಿತು. ಒಂದಷ್ಟು
ಬೈಕ್-ಸ್ಕೂಟರುಗಳನ್ನೂ ಸುಟ್ಟುಹಾಕಿದರು, ಶಾಲಾ ಕಟ್ಟದದೊಳಗೆ ಕಲ್ಲು,
ಪ್ಲಾಸ್ಟಿಕ್ ಬಾಟಲ್ ತೂರಾಟ ನಡೆಸಿ,
ಶಾಲಾ ಕಟ್ಟಡಕ್ಕೆ ಹಾನಿಯನ್ನುಂಟು ಮಾಡಿ ಒಳಗಿರುವ ಮಕ್ಕಳಿಗೆ
ಹೆದರಿಕೆ ಹುಟ್ಟಿಸಿದರು. ಈ ಹಿಂಸಾಚಾರ ಹಲವಾರು
ಘಂಟೆಗಳವರೆಗೆ ನಡೆಯಿತು. ಕೊನೆಗೆ ಪೊಲೀಸರು ಹೆಚ್ಚುವರಿ
ಪಡೆಯನ್ನು ಕರೆಸಿ ಅಶ್ರುವಾಯು ಪ್ರಯೋಗ
ಮಾಡಿ ಆರೋಪಿಯನ್ನು ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾದರು. ಆದರೆ ಹಿಂಸಾಚಾರದಿಂದಾಗಿ ಜನಜೀವನ
ಅಸ್ತವ್ಯಸ್ತಗೊಂಡಿತ್ತು. ಘಟನೆಯ ಬಳಿಕ ೫೦ ಗಲಭೆಕೋರರನ್ನು ಬಂಧಿಸಲಾಗಿದೆ.
ಪೊಲೀಸರ ವಿಚಾರಣೆಯ ನಂತರ ತಿಳಿದುಬಂದದ್ದೇನೆಂದರೆ ಇದೊಂದು
ಕಟ್ಟುಕಥೆ. ಅಸಲಿಗೇ ಅತ್ಯಾಚಾರ ನಡೆದೇ
ಇರಲಿಲ್ಲ. ಯಾವುದೋ ದುರುದ್ದೇಶವಿಟ್ಟುಕೊಂಡೇ ಇಂತಹ ಪ್ರಕರಣವನ್ನು
ಸೃಷ್ಟಿಸಲಾಗಿತ್ತು. ಮತ್ತು ಮೊದಲೇ ಈ
ರೀತಿ ತಮ್ಮದೇ ಸಮುದಾಯದವರನ್ನು ಸೇರಿಸುವುದೆಂದು
ನಿರ್ಧರಿಸಲಾಗಿತ್ತು. ಇನ್ನೇನು ಕೆಲವೇ ದಿವಸಗಳಲ್ಲಿ
ಕಸ್ಟಡಿಯಲ್ಲಿರುವ ಶಿಕ್ಷಕನ ಬಿಡುಗಡೆಯಾಗಲಿದೆ. ಆದರೆ
ಮಾಧ್ಯಮಗಳಿಗೆ ಈ ಸಂಗತಿ ಈಗ
ಮರೆತೇ ಹೋಗಿದೆ. ಆ ಶಿಕ್ಷಕನ
ಕಳೆದು ಹೋದ ಮಾನವನ್ನು ಮರಳಿ
ಕೊಡುವವರಾರು? ಆ ಶಿಕ್ಷಕನ ಮಗಳ
ನಿಶ್ಚಿತಾರ್ಥವೂ ನಿಂತು ಹೋಗಿದೆ. ಅವರ
ಮನೆಯ ಘನತೆಯನ್ನು ಹಾಳುಮಾಡಿದ ದ್ರೋಹಿಗಳಿಗೆ ಏನನ್ನೋಣ?
ಈ ಘಟನೆಗೆ ಕಾರಣವೇನೆಂದು
ಒಳಹೊಕ್ಕು ನೋಡಿದಾಗ ಅನೇಕ ಆಘಾತಕಾರಿ
ಸಂಗತಿಗಳು ಬೆಳಕಿಗೆ ಬಂದವು. ಮೊದಲನೆಯದಾಗಿ
ಪೊಲೀಸರಿಗೆ ದೂರು ಕೊಟ್ಟವರು ಐವರು
ಮುಸ್ಲಿಮ್ ಹೆಂಗಳೆಯರು. ಗಂಡಂದಿರಿಲ್ಲದ ಈ ಮಹಿಳೆಯರ ಬಗ್ಗೆ
ಸ್ಥಳೀಯರಿಗೆ ಅನೇಕ ಸಂಶಯಗಳಿವೆ. ಇವರ
ಮೇಲೆ ಅನೈತಿಕ ವ್ಯವಹಾರದ ಆರೋಪ
ಜನರಿಂದ ಕೇಳಿ ಬರುತ್ತಿದೆ. ದೂರು
ನೀಡಿದ ಇವರೇ, ಅತ್ಯಾಚಾರ ಪೀಡಿತೆ
ಎಂದು ಹೇಳಲಾದ ಹುಡುಗಿಯ
ವೈದ್ಯಕೀಯ ಪರೀಕ್ಷೆ ನಡೆಸಲು ಅವಕಾಶ
ಕೊಡಲಿಲ್ಲ. ಅಲ್ಲದೆ ಪೊಲೀಸರು ಶಿಕ್ಷಕನನ್ನು
ಬಂಧಿಸಿ ಒಯ್ದ ಮೇಲೆ ಶಿಕ್ಷಕನ
ಮನೆಗೆ ಹೋಗಿ ಅವರ ಹೆಂಡತಿಯ
ಬಳಿ "ನಿನ್ನ ಗಂಡ ನಿನ್ನ
ಪಾಲಿಗೆ ಸತ್ತು ಹೋದ, ನೀನಿನ್ನು
ಬೇರೆ ಮದುವೆಯಾಗು" ಹೀಗೆಂದು ಬಗೆಬಗೆಯಲ್ಲಿ ಪೀಡಿಸಿ
ಅವರ ಮನಸ್ಥೈರ್ಯವನ್ನೂ ಕೆಡಿಸಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಒಂದೇ
ಸಮುದಾಯದ 800 ಜನ ಒಟ್ಟಾಗಿದ್ದು ಹೇಗೆ
ಮತ್ತು ಯಾಕೆ? ಕಾರಣವಿದೆ, ಅತ್ಯಾಚಾರಕ್ಕೊಳಗಾಗಿದ್ದಾಳೆ
ಎಂದು ಹೇಳಲಾದ ಬಾಲೆ ಮುಸ್ಲಿಂ.
ಶಾಲೆ ಹಿಂದೂಗಳಿಂದ ನಡೆಸಲ್ಪಡುವಂತಹದ್ದು. ಅಲ್ಲಿನ 70% ವಿದ್ಯಾರ್ಥಿಗಳು ಮುಸ್ಲಿಮರು. ಶಾಲೆಯ ಪಕ್ಕದಲ್ಲೆ ಒಂದು
ಮಸೀದಿಯಿದೆ. ಅಕ್ರಮವಾಗಿ ಕಟ್ಟಿದ್ದು ಮಾತ್ರವಲ್ಲದೆ ಅದರ ಕಟ್ಟಡ ಮೋರಿಯನ್ನೂ
ನುಂಗಿದೆ. ಹಾಗಾಗಿ ಶಾಲೆಯನ್ನು ಕೆಡವಿ
ಮಸೀದಿಯನ್ನು ಸಕ್ರಮಗೊಳಿಸುವ ಹುನ್ನಾರ ಒಂದು ಕಡೆ.
ಇನ್ನು ಅದೇ ಶಿಕ್ಷಕನ ಮೇಲೆ
ಯಾಕೆ ಆರೋಪ ಮಾಡಲಾಯಿತು? ಕಾರಣವಿದೆ.
ಮೂರು ದಿವಸದ ಹಿಂದೆ ಈದ್
ಸಂದರ್ಭ ಶಾಲೆಯ ಆವರಣದೊಳಗೆ ಕೆಲ
ಮುಸ್ಲಿಮ್ ಯುವಕರು ತಮ್ಮ ಧ್ವಜ
ಊರಲು ಮುಂದಾದಾಗ ಇದೇ ಶಿಕ್ಷಕ ಅದಕ್ಕೆ
ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಸೇಡು ಒಂದು
ಕಡೆಯಾಗಿದ್ದರೆ, ಆತ ಭಾಜಪಾ ಹಾಗೂ
ನಮೋ ಪರ ಒಲವು ಹೊಂದಿದ್ದು
ಇನ್ನೊಂದು ಕಾರಣ. ಅದಕ್ಕಿಂತಲೂ ಮುಖ್ಯವಾಗಿ
ಕೆಲ ದಿವಸಗಳ ಹಿಂದೆ ಪೊಲೀಸರು
ಆ ಸ್ಥಳದಲ್ಲಿದ್ದ ಕೆಲವು
ಗುಜರಿ ಅಂಗಡಿಗಳ ತಪಾಸಣೆ ನಡೆಸಿದ್ದರು.
ಹಾಗಾಗಿ ಪೊಲೀಸರು ಇನ್ನು ತಮ್ಮ
ತಂಟೆಗೆ ಬರಬಾರದೆನ್ನುವ ಉದ್ದೇಶ ಈ ಹಿಂಸಾಚಾರದ
ಹಿಂದೆ ಇರುವಂತೆ ಮೇಲ್ನೋಟಕ್ಕೇ ಕಾಣುತ್ತಿದೆ.
ಹಾಗಾದರೆ ಇಲ್ಲೇನೋ ಅಕ್ರಮದ ವಾಸನೆ
ಬರುತ್ತಿರುವುದು ಸಹಜ ತಾನೇ. ಅದರ
ವಿಚಾರಣೆ ನಡೆಸಬೇಕಾದವರು ಸುಮ್ಮನಿದ್ದಾರೆ. ಅವರಿಗೆ ವಿಚಾರಣೆಯ ಆಜ್ಞೆ-ಅನುಮತಿ ಕೊಡಬೇಕಾದವರು ನಿದ್ದೆ
ಮಾಡುತ್ತಿದ್ದಾರೆ.
ಗುಜರಿ ಅಂಗಡಿಯಲ್ಲಿ ತಪಾಸಣೆ ನಡೆಸಿದ ಕಾರಣಕ್ಕೇ
ಹಿಂಸಾಚಾರ ನಡೆಸಿದ ಬಾಂಧವರು, ತಮ್ಮವನನ್ನು
ಭಯೋತ್ಪಾದನೆಯ ತನಿಖೆಯಲ್ಲಿ ಬಂಧಿಸಿದಾಗ ಮುಗ್ಧ ಎನ್ನದೆ ಇದ್ದಾರೆಯೇ?
ಆತನಿಗೆ ಸಹಾಯ ಮಾಡೋದಿಲ್ಲ ಎನ್ನುವುದಕ್ಕೆ
ಏನು ಗ್ಯಾರಂಟಿ?(ಭಟ್ಕಳದಲ್ಲಿ ಈಗಾಗಲೇ ಭಯೋತ್ಪಾದಕರ ಪರ
ವಕೀಲಿಕೆ ಧನಸಹಾಯ ಆರಂಭವಾಗಿದೆ) ಹೀಗೆ
ಮುಂದುವರಿದರೆ ಹಿಂದೂಗಳ ಪರಿಸ್ಥಿತಿ ಏನಾದೀತು?
ಒಬ್ಬ ವ್ಯಕ್ತಿಯ ಮಾನ ಹಾನಿಯಾದರೂ ಪರವಾಗಿಲ್ಲ,
ತಮ್ಮ ಅವ್ಯವಹಾರಕ್ಕೆ ಕುತ್ತು ಬರಬಾರದೆಂದರೆ ಆ
ಮನಸ್ಥಿತಿ ಹೇಗಿರಬಹುದು? ನನಗೇನೋ ಇಲ್ಲಿ ದೇಶದ್ರೋಹದ
ಗುಮಾನಿ ಉಂಟಾಗುತ್ತಿದೆ. ನಿಮಗೆ? ಹೌದು ಈ
ಘಟನೆಯ ಬಗೆಗಿನ ಮಾಧ್ಯಮಗಳ ದಿವ್ಯ
ಮೌನಕ್ಕೇನು ಹೇಳಬೇಕು? ಇಂದು ಇದು ಆ
ಶಿಕ್ಷಕರೊಬ್ಬರ ಕಥೆ...ಮುಂದೆ ನಮ್ಮದ್ದೂ!
ಅಬ್ಬಾ ಹಿಂದೂವಿನ ದುರವಸ್ಥೆಯೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ