ಯಾರು ಮಹಾತ್ಮ?
ಭಾಗ- ೧೯
ಭಾರತದಲ್ಲಿ ಖಿಲಾಫತ್ತಿನ ರಕ್ತದಾಟಕ್ಕೆ ಬೀಜಾರೋಪ ಮಾಡಿದ್ದ ಮತಾಂಧ ಮಹಮ್ಮದ್ ಅಲಿ "ಒಬ್ಬ ಚರಿತ್ರಹೀನ ಮುಸ್ಲಿಮ್ ಕೂಡಾ ಗಾಂಧಿಗಿಂತ ಉತ್ತಮ" ಎಂದಿದ್ದ. ಇಂತಹ ಮಹಮ್ಮದ್ ಅಲಿ ಹಾಗೂ ಅತನ ಸಹೋದರ ಶೌಕತ್ ಅಲಿಯೇ ಕಳೆದ ಶತಮಾನದ ಭಾರೀ ನರಮೇಧವಾದ ಮೋಪ್ಲಾ ದಂಗೆಗೆ ಮೂಲ ಕಾರಣರು. ಸೈಯ್ಯದ್ ಅಹಮದ್ ಖಾನನ "ಮೊಹಮ್ಮದನ್ ಆಂಗ್ಲೋ ವಿವಿ"ಯನ್ನು ಅಲಿಘಡ ವಿವಿಯಾಗಿ, ಪ್ರತ್ಯೇಕತೆಯ ವಿಷಬೀಜಬಿತ್ತಿ ದೇಶವಿಭಜನೆಗೆ ಕಾರಣವಾಗುವ ವಿವಿಯಾಗಿ ಬದಲಾಯಿಸಿದ್ದು ಇದೇ ಅಲಿ ಸಹೋದರರು. ಮುಸ್ಲಿಂ ಲೀಗಿನ ಜನ್ಮದಾತರಿವರು. ಇಂತಹ ಧೂರ್ತರು ದೇಶವಿರೋಧಿ ಚಟುವಟಿಕೆಗಾಗಿ ಬಂಧಿತರಾದಾಗ ಅವರ ಬಿಡುಗಡೆಗೆ ಬ್ರಿಟಿಷ್ ಸರ್ಕಾರದ ಜೊತೆ ಪತ್ರವ್ಯವಹಾರ ಆರಂಭಿಸಿದರು ಗಾಂಧಿ. ನಾನು ಮುಸ್ಲಿಮರ ನಿಜ ಗೆಳೆಯನಾಗಬೇಕೆಂದರೆ ಅಲಿ ಸಹೋದರರ ಬಿಡುಗಡೆಗೆ, ಖಿಲಾಫತ್ ಪ್ರಶ್ನೆಯನ್ನು ಬಗೆಹರಿಸಲು ಎಲ್ಲಾ ಸಹಾಯ ಮಾಡಬೇಕೆಂಬುದು ನನ್ನ ಭಾವನೆ ಎಂದರು ಗಾಂಧಿ.ಇಸ್ಲಾಮ್ ಇತಿಹಾಸದ ಬಗ್ಗೆ ಕರಪತ್ರ ಹೊರಡಿಸಿದ್ದ ಅಪರಾಧಕ್ಕಾಗಿ ಭಾರತೀಯ ದಂಡ ಸಂಹಿತೆ ಕಲಂ 195 ಪ್ರಕಾರ ನಾಥುರ್ ಮಲ್ ಶರ್ಮಾಗೆ ಶಿಕ್ಷೆ ವಿಧಿಸಲಾಗಿತ್ತು. ಅಬ್ಬ ಈ ದೇಶದಲ್ಲಿ ಸತ್ಯ ಹೇಳುವುದೂ ಅಪರಾಧ! ಇದರ ಮೇಲ್ಮನವಿಯ ವಿಚಾರಣೆ ನಡೆಯುತ್ತಿದ್ದಾಗ ಅಬ್ದುಲ್ ಕಯೂಮ್ ಎಂಬಾತ ಅವರನ್ನು ನ್ಯಾಯಾಲಯದಲ್ಲೇ ಗುಂಡಿಕ್ಕಿ ಕೊಂದ. ಮುಸ್ಲಿಮರು ಇದನ್ನು ಖಂಡಿಸಲಿಲ್ಲ. ಬದಲಾಗಿ ಕಯೂಮ್ ಪರ ನಿಂತರು. ಅವನನ್ನು ಕ್ಷಮಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆಯೂ ನಡೆಯಿತು. ಬರ್ಕತ್ ಅಲಿ ಕಯೂಮ್ ಪರ ವಾದಿಸಿದ. ಕುರಾನ್ ಪ್ರಕಾರ ಕಯೂಮ್ ಕ್ರಮ ಸಮರ್ಥನೀಯ ಅಂದ. ಇಂತಹ ಅನೇಕ ಘಟನೆಗಳು ನಡೆದವು. ಅನೇಕ ಹಿಂದೂ ನಾಯಕರನ್ನು ಮುಸ್ಲಿಮರು ಸಾಯಿಸಿದರು. ಮುಸ್ಲಿಮ್ ಜನಾಂಗ ಕೊಲೆಗಾರರ ಬೆನ್ನಿಗೆ ನಿಂತಿತು. ಹಿಂದೂಗಳಿಗೆ ಅಹಿಂಸೆ ಬೋಧಿಸುತ್ತಿದ್ದ ಗಾಂಧಿ ಇಂತಹ ಹಿಂಸಾ ನಡವಳಿಕೆಗಳನ್ನು ಖಂಡಿಸಲೂ ಇಲ್ಲ. ಉಪವಾಸ ಕೂರಲೂ ಇಲ್ಲ. ಬದಲಾಗಿ ರಶೀದನನ್ನು ಸೋದರ ಎಂದೂ, ಸುಹ್ರಾವರ್ದಿಯನ್ನು ಹುತಾತ್ಮ ಎಂದೂ ಕರೆದರು! ಈ ಎಲ್ಲಾ ಘಟನಾವಳಿಗಳನ್ನು ನೋಡುವಾಗ ಗಾಂಧಿಯೊಳಗೆ ಇದ್ದದ್ದು ಮುಸ್ಲಿಮನೇನೋ ಎನ್ನುವ ಸಂಶಯ ಕಾಡಲಾರಂಭಿಸುತ್ತದೆ. ಹಿಂದೂ ಮುಸ್ಲಿಮ್ ಐಕ್ಯತೆ ಸಾಧಿಸುವತ್ತ ತೀವ್ರಾಸಕ್ತರಾಗಿದ್ದ ಗಾಂಧಿ ಹಿಂದೂಗಳ ಬಲಿದಾನದಿಂದಲೇ ಅದು ಸಾಧ್ಯ ಎಂದು ಪರಿಗಣಿಸಿ ಹಿಂದೂಗಳ ಹತ್ಯೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ(ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ - ಡಾ. ಬಿ. ಆರ್ ಅಂಬೇಡ್ಕರ್). ಇವತ್ತಿನ ರಾಜಕೀಯ ನಾಯಕರುಗಳಿಗೂ ಗಾಂಧಿಗೂ ಏನು ವ್ಯತ್ಯಾಸವಿದೆ?
ಮುಸ್ಲಿಮರಿಗೆ ಪ್ರತ್ಯೇಕ ಮತದಾರ ಕ್ಷೇತ್ರ ಕೊಡುವುದನ್ನು ದುಂಡುಮೇಜಿನ ಪರಿಷತ್ತಿನಲ್ಲಿ ಗಾಂಧಿ ವಿರೋಧಿಸಿದರು. ಆದರೆ ಅದನ್ನು ಮತಕ್ಕೆ ಹಾಕಿದಾಗ ಪರ-ವಿರೋಧ ಯಾವುದನ್ನೂ ತಾಳದೆ ವಿಚಿತ್ರ ನಿಲುವು ಪ್ರದರ್ಶಿಸಿದರು. ಇದು ಗಾಂಧಿಯ ಹಿಂದೂ ಮುಸ್ಲಿಮರ ನಡುವೆ ಏಕತೆ ತರಲು ಮಾಡಿದ ಪ್ರಯತ್ನದ ಕಥೆ. ಇದರಿಂದ ಎಂತಹ ಹಾನಿಯಾಯಿತೆಂದು ಇತಿಹಾಸವೇ ಹೇಳುತ್ತದೆ(ಪಾಕಿಸ್ತಾನ್ ಆರ್ ಪಾರ್ಟಿಷನ್ ಆಫ್ ಇಂಡಿಯಾ - ಡಾ. ಬಿ. ಆರ್ ಅಂಬೇಡ್ಕರ್).
1946ರಲ್ಲಿ ನೌಕಾಲಿ ಹಾಗೂ ತಿಪ್ರೇಹ್'ಗಳಲ್ಲಿ ಭೀಕರ ಅತ್ಯಾಚಾರಗಳು ನಡೆದ ಬಳಿಕ ಅಲ್ಲಿಗೆ ಹೋದ ಗಾಂಧಿ ಉಳಿದುಕೊಂಡಿದ್ದ ಮನೆಯ ಮೇಲೆ ತ್ರಿವರ್ಣ ಧ್ವಜ ಇರುವುದನ್ನು ಕಂಡ ಮುಸ್ಲಿಮನೊಬ್ಬ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ. ಗಾಂಧಿ ತಕ್ಷಣ ಧ್ವಜ ತೆಗೆಯುವಂತೆ ಸೂಚಿಸಿದರು. ಒಬ್ಬ ಮತಾಂಧ ಆಕ್ಷೇಪ ವ್ಯಕ್ತಪಡಿಸಿದನೆಂಬ ಕಾರಣಕ್ಕೆ ರಾಷ್ಟ್ರಧ್ವಜವನ್ನೇ ಕಿತ್ತೆಸೆದ ವ್ಯಕ್ತಿಗೆ ದೇಶದ ಬಗ್ಗೆ ಎಂತಹ ಭಾವನೆಯಿದ್ದೀತು? ಇಂತಹ ವ್ಯಕ್ತಿಯನ್ನು ಮಹಾತ್ಮನನ್ನಾಗಿ, ರಾಷ್ಟ್ರಪಿತನನ್ನಾಗಿ ಮಾಡಿತಲ್ಲ ಈ ದೇಶ! ಈ ದೇಶದ ಬೌದ್ಧಿಕ ದಾರಿದ್ರ್ಯ, ಹ್ರಾಸಗೊಂಡ ಕ್ಷಾತ್ರದ ಪ್ರತೀಕವಲ್ಲವೇ ಇದು?
ಕಾಶ್ಮೀರದಲ್ಲಿ ಮುಸ್ಲಿಮ್ ಬಾಹುಳ್ಯವಿರುವ ಕಾರಣ ಮಹಾರಾಜ ಅಧಿಕಾರವನ್ನು ಶೇಖ್ ಅಬ್ದುಲ್ಲಾಗೆ ಹಸ್ತಾಂತರಿಸಿ ಕಾಶಿಗೆ ಹೋಗಬೇಕೆಂದು ಪದೇ ಪದೇ ಹೇಳುತ್ತಿದ್ದರು ಗಾಂಧಿ. ಆದರೆ ಹೈದರಾಬಾದಿನಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿಯಿದ್ದಾಗ್ಯೂ ನಿಜಾಮ ಮೆಕ್ಕಾಗೆ ಹೋಗಬೇಕೆಂಬ ಅಣಿಮುತ್ತು ಗಾಂಧಿಯ ಬಾಯಿಯಿಂದ ಉದುರಲಿಲ್ಲ. ಹೈದರಾಬಾದ್ ಸಮಸ್ಯೆಯೇನೋ ಉಕ್ಕಿನ ಮನುಷ್ಯನ ಉಕ್ಕಿನ ನಿರ್ಧಾರದಿಂದ ಪರಿಹಾರವಾಗಿ ಅದು ಭಾರತಕ್ಕೆ ಸೇರಿತು. ಆದರೆ ಕಾಶ್ಮೀರವನ್ನು ನೆಹರೂ ಮಹಾಶಯ ಮಧ್ಯ ಪ್ರವೇಶಿಸಿ ವಿಚಾರವನ್ನು ವಿಶ್ವಸಂಸ್ಥೆಗೊಯ್ದು ತನ್ನ ಗೆಳೆಯನಿಗೆ ನೆರವಾದರು. ಕಾಶ್ಮೀರದ ಸಮಸ್ಯೆಯಲ್ಲಿ ನೆಹರೂ ಪಾತ್ರ ಎಷ್ಟಿದೆಯೋ ಗಾಂಧಿಯ ಪಾತ್ರವೂ ಅಷ್ಟೇ ಇದೆ. ಗಾಂಧಿ ಬಾಯಲ್ಲಿ ಹೇಳಿದರು; ಅವರ ಶಿಷ್ಯ ಅದನ್ನು ಮಾಡಿ ತೋರಿಸಿದ ಅಷ್ಟೇ! ಚಿಕ್ಕಪುಟ್ಟ ವಿಷಯಕ್ಕೆಲ್ಲಾ ಉಪವಾಸ ಕೂರುತ್ತಿದ್ದ ಆ ಮಹಾನುಭಾವ ಕಾಶ್ಮೀರದ ವಿಚಾರದಲ್ಲೇಕೆ ಉಪವಾಸ ಕೂರಲಿಲ್ಲ? ಅಖಂಡ ಭಾರತವನ್ನು ಛಿದ್ರಗೊಳಿಸುವ ಹುನ್ನಾರವೇ ಅದು?
ವಿಭಜನೆಯಾದ ಸಂದರ್ಭದಲ್ಲಿ ಅವಿಭಜಿತ ಭಾರತದಲ್ಲಿ ಉಳಿದಿದ್ದ ಹಣದ ಪಾಲಿನ ವಿಷಯದಲ್ಲಿ ಎರಡೂ ದೇಶಗಳ ಪ್ರತಿನಿಧಿಗಳ ನಡುವೆ ಸರಣಿ ಚರ್ಚೆಗಳು ನಡೆದು ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ಕೊಡುವುದೆಂದು ನಿಶ್ಚಯಿಸಲಾಯಿತು. ಆ ಸಂದರ್ಭದಲ್ಲಿ ಪಾಕಿಸ್ತಾನ ತನ್ನ ದಾಳಿಕೋರರನ್ನು ಕಾಶ್ಮೀರಕ್ಕೆ ಛೂ ಬಿಟ್ಟು ದಾಂಧಲೆ ಎಬ್ಬಿಸಲು ಆರಂಭಿಸಿತು. ಹಾಗಾಗಿ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಈ ಹಣ ಕೊಟ್ಟರೆ ತನ್ನ ವಿರುದ್ಧ ಸಮರ ಸಾರಲು ಅದನ್ನು ಉಪಯೋಗಿಸಿಕೊಳ್ಳಬಹುದೆಂಬ ಶಂಕೆಯಿಂದ ಹಣ ಕೊಡಲು ನಿರಾಕರಿಸಿತು. ಈ ಸಂದರ್ಭದಲ್ಲಿ ಗಾಂಧಿ ಪಾಕಿಸ್ತಾನಕ್ಕೆ ಹಣ ಕೊಡಬೇಕೆಂದು ಆಮರಣಾಂತ ಉಪವಾಸ ಕೂತರು. ಉಪವಾಸ ಕೂರುವ ಮುನ್ನ ಮೌಂಟ್ ಬ್ಯಾಟನ್ ಜೊತೆ ಚರ್ಚಿಸಿದ್ದ ಗಾಂಧಿ " ನಾನು ಆಮರಣಾಂತ ಉಪವಾಸ ಆರಂಭಿಸುತ್ತಿರುವುದು ಎರಡು ಷರತ್ತುಗಳಿಗಾಗಿ. ಒಂದು ದೆಹಲಿಯಲ್ಲಿ ಶಾಂತಿ ನೆಲೆಸಬೇಕೆಂದು. ಎರಡನೆಯದ್ದು ಪಾಕಿಸ್ತಾನಕ್ಕೆ 55ಕೋಟಿ ರೂಪಾಯಿ ಕೊಡಬೇಕೆಂದು. ನಾನು ಉಪವಾಸ ಕೂತರೆ ಅವರು ನನ್ನನ್ನು ತಿರಸ್ಕರಿಸಲು ಸಾಧ್ಯವಿಲ್ಲ" ಎಂದು ಕಿರುನಗು ಸೂಸುತ್ತಾ ನುಡಿದರು(ಫ್ರೀಡಮ್ ಅಟ್ ಮಿಡ್ ನೈಟ್ - ಕಾಲಿನ್ಸ್ & ಲ್ಯಾಪಿಯೆರ್). ಎರಡೂ ಸಂಭವಿಸಿತು. ಗಾಂಧಿಯ ದೃಷ್ಟಿಯ ಶಾಂತಿ - ಅಂದರೆ ಹಿಂದೂಗಳು ತಮ್ಮ ಪ್ರತೀಕಾರವನ್ನು ನಿಲ್ಲಿಸಿದರು. ಆದರೆ ಮುಸ್ಲಿಮರಿಂದ ದಾಂಧಲೆ, ಕೊಲೆ, ಅತ್ಯಾಚಾರಗಳು ನಿಲ್ಲಲಿಲ್ಲ; ಗಾಂಧಿಯ ದೃಷ್ಟಿಯ ಶಾಂತಿ ಎಂದರೆ ಅದೇ. ಏಕೆಂದರೆ ಗಾಂಧಿ ಉಪವಾಸ ಆರಂಭಿಸಿದ್ದು ಹಿಂದೂಗಳು ತಿರುಗಿಬಿದ್ದಾಗಲೇ. ಮುಸ್ಲಿಮರಿಂದ ಹಿಂದೂಗಳ ಕಗ್ಗೊಲೆಯಾಗುತ್ತಿದ್ದಾಗ ಈ ಮಹಾತ್ಮ ಅವರಿಗೆ ಅಹಿಂಸೆಯ ವೀರರೆಂಬ ಶಹಬಾಸ್ ಗಿರಿ ಕೊಡುತ್ತಿದ್ದರು. ಇತ್ತ ಗಾಂಧಿಯ ಉಪವಾಸಕ್ಕೆ ಬೆದರಿದ ಸರ್ಕಾರ 55 ಕೋಟಿ ರೂಪಾಯಿ ಕೊಡಲೊಪ್ಪಿತು.
ವಿಭಜನೆಯಾದದ್ದು ಮತದ ಆಧಾರದ ಮೇಲೆ. ಅಲ್ಲಿನ ಹಿಂದೂಗಳೆಲ್ಲಾ ಇಲ್ಲಿಗೆ ಬರಬೇಕು. ಇಲ್ಲಿರುವ ಮುಸ್ಲಿಮರೆಲ್ಲಾ ಅತ್ತ ಹೋಗಬೇಕು ಎನ್ನುವುದೂ ವಿಭಜನೆಯ ಷರತ್ತುಗಳಲ್ಲೊಂದು. ಅಲ್ಲಿರುವ ಹಿಂದೂಗಳು ಇತ್ತ ಬಂದರು. ಬರದಿದ್ದವರನ್ನು ಓಡಿಸಲಾಯಿತು. ಸಿಕ್ಕಿದವರನ್ನು ಹುರಿದು ಮುಕ್ಕಲಾಯಿತು. ಇಲ್ಲಿನವರು ಅಲ್ಲಿ ಹೋಗಬೇಕೆಂದಾಗ ಈ ಮಹಾತ್ಮ ಎಂದು ಕರೆಸಿಕೊಂಡ ವ್ಯಕ್ತಿ ತಡೆದರು. ಇಲ್ಲಿನ ಹಿಂದೂಗಳು ತಮ್ಮವರ ಮೇಲಿನ ಅತ್ಯಾಚಾರದ ಸುದ್ದಿ ಕೇಳಿ ಕೆರಳಿ ಮುಸ್ಲಿಮರನ್ನು ಒದ್ದು ಹೊರಹಾಕಲು ಸಿದ್ಧರಾದಾಗ ಉಪವಾಸ ಕೂತುಬಿಟ್ಟರು! ಭಳಿರೇ ಮಹಮ್ಮದ್ ಕರೀ ಗಾಂಧಿ! (ಈ ಉಲ್ಲೇಖದಿಂದಲೇ ಗಾಂಧಿಗೆ ಅನೇಕ ಪತ್ರಗಳು ಬರುತ್ತಿದ್ದವು!)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ