ಅರಳುತಿಹ ಕೆಂದಾವರೆಯ ಎಳೆಯ
ದಳಗಳ ಮುತ್ತಿಕ್ಕಿದ ಶುಭ್ರ ಸ್ಪಟಿಕ
ಬಿರಿದ ಗುಲಾಬಿಯ ಮೇಲಿನ ಮುತ್ತಿನ ಹನಿ
ಮಲ್ಲಿಗೆಯ ಕಂಪು ಸಿರಿ ಸಂಪಿಗೆಯಂತೆ
ಆ ಮುಗುದೆ॥
ಹಿತವೆನಿಪ ಉದಯ ಸೂರ್ಯರಶ್ಮಿ
ಕೇಶವನಾಡಿಸುವ ಶೀತಲ ಮಂದಾನಿಲ
ಹಸಿರ ಮುಚ್ಚಿಸಿಹ ಮುಂಜಾವಿನ ರಜತ ಮಂಜು
ಏಕ ನಿನಾದದೊಳು ತಾ ಮೆರೆವ ನಿರ್ಮಲ ಜಲಧಿ
ಆ ಮುಗುದೆ॥
ನಾಚಿದ ಮೊಗವದು ಮುಸ್ಸಂಜೆಯ ರವಿ
ಗೂಡು ಸೇರುತಿಹ ಬಾನಾಡಿಗಳ ನಡುವೆ ಬೆದರಿದ ಹರಿಣಿ
ಚಕ್ರಗಳ ಸ್ವಾಧೀನಪಡೆದ ಸುಷುಮ್ನಾವಸ್ಥೆಯ ಯೋಗಿ
ನಿಶೆಯ ನಶೆಗೆ ಜಾರುತಿಹ ಬೆಳದಿಂಗಳ ಬಾಲೆ
ಆ ಮುಗುದೆ॥
ದಳಗಳ ಮುತ್ತಿಕ್ಕಿದ ಶುಭ್ರ ಸ್ಪಟಿಕ
ಬಿರಿದ ಗುಲಾಬಿಯ ಮೇಲಿನ ಮುತ್ತಿನ ಹನಿ
ಮಲ್ಲಿಗೆಯ ಕಂಪು ಸಿರಿ ಸಂಪಿಗೆಯಂತೆ
ಆ ಮುಗುದೆ॥
ಹಿತವೆನಿಪ ಉದಯ ಸೂರ್ಯರಶ್ಮಿ
ಕೇಶವನಾಡಿಸುವ ಶೀತಲ ಮಂದಾನಿಲ
ಹಸಿರ ಮುಚ್ಚಿಸಿಹ ಮುಂಜಾವಿನ ರಜತ ಮಂಜು
ಏಕ ನಿನಾದದೊಳು ತಾ ಮೆರೆವ ನಿರ್ಮಲ ಜಲಧಿ
ಆ ಮುಗುದೆ॥
ನಾಚಿದ ಮೊಗವದು ಮುಸ್ಸಂಜೆಯ ರವಿ
ಗೂಡು ಸೇರುತಿಹ ಬಾನಾಡಿಗಳ ನಡುವೆ ಬೆದರಿದ ಹರಿಣಿ
ಚಕ್ರಗಳ ಸ್ವಾಧೀನಪಡೆದ ಸುಷುಮ್ನಾವಸ್ಥೆಯ ಯೋಗಿ
ನಿಶೆಯ ನಶೆಗೆ ಜಾರುತಿಹ ಬೆಳದಿಂಗಳ ಬಾಲೆ
ಆ ಮುಗುದೆ॥
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ