ಪುಟಗಳು

ಬುಧವಾರ, ಜೂನ್ 20, 2012

ಸಮಾಗಮ.....

ದಗ್ಧ ದಿಗಂತದ ಶುದ್ಧ ಕೋಪಕೆ
ಮುಗ್ಧ ಭೂಮಿಗದು ಅಭಿಷೇಕ।
ವರುಣನಾರ್ಭಟಕೆ ಶಬ್ಧ ಸಾರಥ್ಯ
ಮೇಘ ಮಿಂಚೊಳ್ ಮರೆಯಾಗಿಹ ರವಿಯಾಟ॥

ಋತುರಾಜ ವಸಂತನ ಶೃಂಗಾರದಾಟವು
ಕೊಚ್ಚಿಹೋಯಿತು ಮುಂಗಾರಿನ ರಭಸದೊಳ್।
ನೊರೆಯುಕ್ಕಿಸೋ ನದಿ ತೊರೆಗಳ ಒನಪು ವೈಯ್ಯಾರ
ಇರುಳು ಕವಿಯುತಿರೆ ಕುಂಭದ್ರೋಣ ಝೇಂಕಾರ॥

ಮರುತನಾರ್ಭಟಕೆ ಸಿಡಿಲ ಠೇಂಕಾರ
ಕೋಲ್ಮಂಚಿಗೆ ಖಗ ಮೃಗಗಳ ಚೀತ್ಕಾರ।
ಅತಿಭೀಕರ ಅರಿಭಯಂಕರ ಭೂವರುಣ ಸಮಾಗಮ
ಪ್ರಕೃತಿಯ ಈ ಪ್ರಕ್ರಿಯೆ ನಿರಂತರ॥

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ