ಪುಟಗಳು

ಬುಧವಾರ, ಜೂನ್ 20, 2012

ಅಹುದು ನೀ ಎನ್ನ ಹೃದಯ ಸಾಮ್ರಾಟ.....!!!

ನಾಳೆ ೨೬ ವೀರಸಾವರ್ಕರ್ ಸ್ಮೃತಿ ದಿವಸ. ಆ ಪ್ರಯುಕ್ತ ಈ ಅಂತರಂಗದ ನಿನಾದ॥
ಏಡನ್।
ಅಲ್ಲಿ ಫಡಕೆಯ ಕಿಡಿ ಆರಿತು!
ಭಗೂರು।
ಇಲ್ಲಿ ಸ್ವಾತಂತ್ರ್ಯದ ಅಗ್ನಿದಿವ್ಯ ಮೊರೆಯಿತು!!
ಭವತಾರಿಣಿಯೆದುರು ಭವಿತವ್ಯದ ಧ್ಯಾನ
ಅಭಿನವಭಾರತದಾಖ್ಯಾನ।
ಮಿತ್ರಮೇಳದ ಉದ್ಯಾಪನ
ಕ್ರಾಂತಿಗೀತೆಗೆ ನವ ವ್ಯಾಖ್ಯಾನ॥
ವಿದ್ಯಾಲಯ ತ್ಯಜಿಸಿತು ದೇಶಭಕ್ತಿಯಪರಾಧ
ಸ್ವದೇಶಿಯತೆ ಸ್ಪುರಿಸಿತು ಚಳವಳಿಯ ಹರಿಕಾರ।
ವಿದೇಶಿಯತೆ ಸ್ವರಾಷ್ಟ್ರ ಯಜ್ಞಕ್ಕಾಹುತಿ
ಮಾತೆಗಾಗಿ ಮಾತ್ರವೇ ಆತ್ಮಾಹುತಿ॥
ಸಿಂಹದ ಗುಹೆಗೆ ನರಸಿಂಹನಾಗಮನ
ಪ್ರಥಮ, ದಂಗೆಯದಲ್ಲ ಸ್ವಾತಂತ್ರ್ಯಸಂಗ್ರಾಮ।
ಅರಳಿತು ಮ್ಯಾಜಿನಿಯ ಜೀವನ ಚರಿತ್ರೆ
ಸುಪ್ರೇರಣೆ ಹೃದಯಸಾಮ್ರಾಟ ಶಿವಬಾ ಸುಚರಿತ್ರೆ॥
ಅಗ್ನಿಕಣವೆದ್ದಿತು ಮದನ
ಮರ್ಧನವಾದನು ದುಷ್ಟ ಕರ್ಜನ॥
ಮಾತೃಭೂಮಿಗೆ ರುಧಿರಮಜ್ಜನ
ರೋಮಾಂಚಸದೃಶ ಸರ್ವಜನ॥
ಘಾತವಾಗೆರಗಿತು ಯಾನ
ಬಂಧನ ಜಯಿಸೆ ಸಾಗರ ಈಸಿದ ಸಾಹಸಿ।
ಎರಗಿತು ಕರಿನೀರ ಯಾತನಾ
ಜನ ಕಣ್ಣೀರ್ಗರೆಯುತ ಕಳಿಸಿತು ಹರಸಿ॥
ಗುದ್ದುಗಳಿಗೆ ಶಿಲೆಯಾಗಿ ಗಾಣಕ್ಕೊರಳೊಡ್ಡಿ
ಶುದ್ಧೀಚಳವಳಿ ಸಾಧನೆಗಿಲ್ಲ ಅಡ್ಡಿ।
ಶಿಲೆಯಲ್ಲರಳಿತು ದಶಸಹಸ್ರ ಸಾಲಿನ ಕಮಲಾ
ಮಾತೆ ಭಾರತಿಯ ಪೂಜೆಗೊಪ್ಪಿಸಿದ ಪುಷ್ಪಕಮಲ॥
ಇತಿಹಾಸಕಾರ ಕಾದಂಬರಿಕತೃ ಕವಿಪುಂಗವ
ಲಿಪಿ ಪಂಚಾಂಗ ಧರ್ಮಸುಧಾರಕ ವಾಗ್ಭಟ।
ಭಾಷಾಶುದ್ಧಿ ಸಾಮಾಜಿಕ ಕ್ರಾಂತಿ
ಪ್ರೀತಿಯ ತಾತ್ಯಾ ಹಿಂದೂ ಹೃದಯಸಾಮ್ರಾಟ॥
ತಾತ್ಯಾ.....ತಾತ್ಯಾ.....ತಾತ್ಯಾ.....
ಆದರೆ,
ಮರೆತು ಯಾತನೆ
ಉಳಿದ ವೇದನೆ।
ದಿವ್ಯಚೇತನ
ಅಮರ ಚೇತನ॥

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ