ಪುಟಗಳು

ಬುಧವಾರ, ಜೂನ್ 20, 2012

ಕೋಲ್ಮಿಂಚು

ಬೆದರಿದ ಹರಿಣದ ಆ ಕಣ್ಣನೋಟ
ಕುರುಳು ಕಚಗುಳಿಯಿಡುವ ಲಲಾಟ।
ಸಂಪಿಗೆಯಂದದಿ ನಾಸಿಕ
ಉಲಿದರೆ ಶುಕ॥

ಚೆಂಗುಲಾಬಿಯ ಎಸಳಿನ ತೆರದಿ ಕಪೋಲ
ಸುಮ ಶಾರೀರ ಸುಕೋಮಲ।
ಮಂದಹಾಸದ ಅಧರ ಅತಿ ಮಧುರ
ಮನವರಳುವುದು ಉಲಿದರೆ ಸುಮಧುರ॥

ರಾಜೀವಲೋಚನೆ ಗಜಗಮನೆ
ಕೋಗಿಲೆ ಕಂಠದ ಗಾನಸರಸಿರೆ।
ನವಿಲ ನಾಚಿಸುವ ನಾಟ್ಯರಾಣಿ
ಫಣಿವೇಣಿ ಚೆಲುವಿನ ಕಣಿ॥

ದುರ್ಲಭವಿದು ಅದ್ವಿತೀಯ ಬ್ರಹ್ಮಸೃಷ್ಠಿ
ಬಿರಿದ ಮಲ್ಲಿಗೆಯಿದು ತಾಗದಿರಲಿ ದೃಷ್ಠಿ।
ಲತೆಯ ಬಳುಕಿನ ಈ ವೈಯ್ಯಾರಿ
ಆಗದಿರಲಿ ಧರ್ಮ ಧಿಕ್ಕರಿಪ ಗಂಡುಬೀರಿ॥

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ