ಪುಟಗಳು

ಬುಧವಾರ, ಜೂನ್ 20, 2012

ಸುಪ್ತ ಸ್ವರ

ನವಿಲ ನಾಟ್ಯ ಮನಕೆ ಮುದವು ಗೆಳತಿ ಸುಂದರ
ದುಗುಡ ಮರೆತು ಸೇರು ಎನ್ನ ಹೃದಯ ಮಂದಿರ
ಗರಿಯ ಬಿಚ್ಚಿ ನಲಿವ ರೀತಿ ರಮ್ಯ ಮನೋಹರ
ಧರಣಿ ಸೊಬಗ ನೋಡಿ ನಗುವ ಗೆಳೆಯ ಚಂದಿರ॥

ಮೇಘ ಶ್ಯಾಮ ಮುಸಲಧಾರೆ ಇಳೆಗೆ ಸಿಂಚನ
ಜಲವು ದೊರೆತು ಬೀಜ ಮೊಳೆತು ಬೆಳೆಯು ಕಾಂಚನ
ನಿಮಿರಿ ನಿಂತ ರೋಮ ಕೇಳಿ ವ್ಯಾಘ್ರ ಘರ್ಜನೆ
ಅದುರಿ ಅಧರ ಪಠಿಸುತಿಹುದು ರಾಮ ನಾಮ ಅರ್ಚನೆ॥

ಶುಭ್ರ ಜಲದಿ ನಿನ್ನ ಬಿಂಬ ಎನ್ನ ಮನದೊಳ್ ಮೂಡಿದೆ
ವರ್ಷಧಾರೆಗೆ ವದನವೊಡ್ಡಲು ನಿನ್ನ ಸನಿಹ ಬೇಡಿದೆ
ಬಾಲೆ ನಿನ್ನ ನಲಿವ ಕಂಡು ಸುಪ್ತಸ್ವರವು ಹೊರಟಿದೆ
ಹಸಿರ ಸಿರಿಯೊಳು ಆತ್ಮ ವಿಹರಿಸೆ ಮನದ ಬೇಸರ ನೀಗಿದೆ॥

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ