ಪುಟಗಳು

ಬುಧವಾರ, ಜೂನ್ 20, 2012

ಮನದ ಕಾತುರ.....!

ನಿನ್ನ ಕಣ್ಣೊಳ್ ಎನ್ನ ಬಿಂಬವ ಹುಡುಕುತಿಹೆನು
ನಿನ್ನ ಮನದೊಳ್ ಎನ್ನ ಭಾವವ ಅರಸುತಿಹೆನು॥
ನಿನ್ನ ನಗೆಯೊಳಡಕವಾಗಿಹುದೆನ್ನ ಮಂದಹಾಸವೋ
ನಿನ್ನ ಉಸಿರೊಳ್ ನನ್ನ ಉಸಿರು ಮಿಳಿತವಿರುವುದೋ॥

ನಿನ್ನ ವಾಣಿಯ ಕೇಳಿ ಶುಕವು ಮೌನವಾಂತಿಹುದೋ
ನಿನ್ನ ನಾಟ್ಯಕೆ ಮಯೂರ ತಾ ನಾಚಿ ನೀರಾಯ್ತೋ॥
ಕೋಗಿಲೆ ಹಾಡಿತು ನಿನ್ನ ಗಾನದ ಸಿರಿಗೆ ಬೆರಗಾಗಿ
ನಿನ್ನ ಬಳುಕಿಗೆ ಜಲಧಿ ತಾ ಲಾಸ್ಯವಾಡಿತೋ॥

ಹಸಿರ ಸಿರಿಯು ನವೀನ ಶಕೆಯು ಎನ್ನ ಬಾಳ ಪುಟದಲಿ
ಧರ್ಮ ಸಂಸ್ಕೃತಿ ಮೆರೆದು ಮರೆತಿಹ ಪುಣ್ಯ ಭರತ ನೆಲದಲಿ॥
ಸಿಂಧು ಬಿಂದುವು ಸೋಕಲೆನ್ನುವ ಎನ್ನ ದೇಹದ ಕಾತರ
ವಂದೇ ಮಾತರಂ ಎನ್ನಲೋಸುಗ ಎನ್ನ ಹೃದಯದ ಆತುರ॥

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ