ಪುಟಗಳು

ಬುಧವಾರ, ಜೂನ್ 20, 2012

ಅಗ್ನಿಕಿಡಿ....

ತಿನ್ನವೆಲ್ಲಿ!
ಸ್ವಾತಂತ್ರ್ಯಧೀರ ವೀರಪಾಂಡ್ಯಕಟ್ಟಬೊಮ್ಮನನ ಸ್ವರಾಜ್ಯ:
೧೮೭೨ ಸೆಪ್ಟೆಂಬರ್ ೫ರಂದು ವೀರ ಚಿದಂಬರನ ಜನನ.
ಮುಂದೆ ವಕೀಲ ಚಿದಂಬರಂ ಪಿಳ್ಳೆ. ನ್ಯಾಯಪರತೆ, ಬ್ರಿಟಿಷರ ದ್ವೇಷ!
ರಾಷ್ಟ್ರೀಯ ಕಾಂಗ್ರೆಸ್ನ ಮದರಾಸು ಪ್ರಾಂತೀಯ ಕಾರ್ಯದರ್ಶಿ!ವೀರ ಸನ್ಯಾಸಿ ವಿವೇಕಾನಂದರ ಪ್ರಭಾವ. ರಾಮಕೃಷ್ಣಾನಂದರ ಆಶಿರ್ವಾದ.ತಿಲಕ್,ಸಾವರ್ಕರ್,ಅರವಿಂದ, ಮೂಂಜೆ ಸಂಪರ್ಕ.ಸುಬ್ರಹ್ಮಣ್ಯ ಭಾರತಿ, ಸುಬ್ರಹ್ಮಣ್ಯ ಶಿವಂ ಜೊತೆಗೂಡಿ ಸ್ವದೇಶಿ ಆಂದೋಲನ.
ಬ್ರಿಟಿಷರಿಗೆ ಸಡ್ಡು ಹೊಡೆದು "ಸ್ವದೇಶಿ ಸ್ಟೀಮ್ ನೇವಿಗೇಷನ್ ಕಂಪೆನಿ" ಸ್ಥಾಪನೆ!
ತೂತ್ತಕುಡಿಯಲ್ಲಿ ಬ್ರಿಟಿಷರ ಕಂಪೆದನಿಗೆ ನಷ್ಟ.
ಟ್ಯುಟಿಕಾರಿನ್ ಕಾರ್ಮಿಕ ಹೋರಾಟದ ನಾಯಕತ್ವ.
ಸೆರೆಮನೆವಾಸ. ತಿನ್ನವೆಲ್ಲಿಯ ಪ್ರಳಯಾಗ್ನಿ ಸ್ಫೋಟ!
ಸ್ವದೇಶಿ ಕಂಪೆನಿಯ ನಿರ್ದೇಶಕರಿಗೆ ಲಂಚದಾಸೆ ತೋರಿಸಿ ಬ್ರಿಟಿಷ್ ವಶಮಾಡಿಸಿದ ಕಲೆಕ್ಟರ್ ಆಷ್!
ಜೀವಾವಧಿ ಕಾರಾಗೃಹ ಶಿಕ್ಷೆ. ಗಾಣ ಎಳೆಯುವ ಶಿಕ್ಷೆ!
ಜೈಲಿನಲ್ಲೇ ತಿರುಕ್ಕುರಳ್ ನ ಸರಳೀಕರಣ.ತೋಲ್ಕಾಪ್ಪಿಯ ಅರ್ಥವಿವರಣೆ।
ರುಧಿರಾಭಿಷೇಕ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ